ಕಾಂತಾರ ಚಾಪ್ಟರ್ 1 ಸಿನಿಮಾ ನೋಡಿದ ರಶ್ಮಿಕಾ ಮಂದಣ್ಣ – ರಿಷಭ್ ಶೆಟ್ಟಿಗೆ ಕಳಿಸದ ಮೆಸೇಜ್ನಲ್ಲಿ ಏನಿದೆ?

ಕಾಂತಾರ ಚಾಪ್ಟರ್ 1 ಸಿನಿಮಾ ನೋಡಿ ಎಲ್ಲಾ ಚಿತ್ರರಂಗದ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತೆಲುಗಿನ ಸ್ಟಾರ್ ನಟರು ಕೂಡಾ ಕಾಂತಾರ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ. ಇದೀಗ ಕೊಡಗಿನ ಕುವರಿ, ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಸಿನಿಮಾ ನೋಡಿ ರಿಷಬ್ ಶೆಟ್ಟಿ ತಂಡಕ್ಕೆ ಮೆಸೇಜ್ ಕಳುಹಿಸಿದ್ದಾರೆ.
ಇದನ್ನೂ ಓದಿ:ಬಿಗ್ ಬಾಸ್ ಮನೆ ರಾತ್ರೋರಾತ್ರಿ ಓಪನ್ – ವೈಲ್ಡ್ ಕಾರ್ಡ್ಎಂಟ್ರಿ ಕೊಟ್ಟ ಡಿಕೆಶಿ
ಕಾಂತಾರ ಚಾಪ್ಟರ್ 1 ಸಿನಿಮಾ ಬಿಡುಗಡೆ ಆಗಿ ವಾರ ಕಳೆದಿದೆ. ಬಾಕ್ಸ್ ಆಫೀಸ್ನಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಪ್ರಭಾಸ್, ಜೂ ಎನ್ಟಿಆರ್, ರಾಮ್ ಗೋಪಾಲ್ ವರ್ಮಾ, ಸಂದೀಪ್ ರೆಡ್ಡಿ ವಂಗಾ ಇನ್ನೂ ಹಲವಾರು ಮಂದಿ ಖ್ಯಾತ ತಾರೆಯರು ಸಿನಿಮಾ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಿಷಬ್ ಶೆಟ್ಟಿ ತಂಡದಿಂದಲೇ ಚಿತ್ರರಂಗಕ್ಕೆ ಪರಿಚಯಗೊಂಡು ಈಗ ಬಾಲಿವುಡ್ನಲ್ಲಿ ಸ್ಟಾರ್ ಆಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಇತ್ತೀಚೆಗೆ ಸಿನಿಮಾ ನೋಡಿದ್ದಾಗಿ ಹೇಳಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಪ್ರಸ್ತುತ ‘ಥಮ’ ಸಿನಿಮಾದ ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ಸಂದರ್ಭದಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಸಂದರ್ಶಕರು, ‘ಕಾಂತಾರ: ಚಾಪ್ಟರ್ 1’ ಸಿನಿಮಾ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ರಶ್ಮಿಕಾ, ‘ಸಿನಿಮಾ ಬಿಡುಗಡೆ ಆದ ಎರಡು ಮೂರು ದಿನಗಳಲ್ಲಿಯೇ ನನಗೆ ನೋಡಲು ಸಾಧ್ಯವಿಲ್ಲ. ಹಾಗಾಗಿ ಸಿನಿಮಾ ರಿಲೀಸ್ ಆದ ಕೂಡಲೇ ನಾನು ಸಿನಿಮಾ ವೀಕ್ಷಿಸಲಿಲ್ಲ. ಆದರೆ ಇತ್ತೀಚೆಗಷ್ಟೆ ಸಿನಿಮಾ ನೋಡಿದೆ. ನನಗೆ ಇಷ್ಟವಾಯ್ತು, ಚಿತ್ರತಂಡಕ್ಕೆ ಮೆಸೇಜ್ ಮಾಡಿದ್ದೆ, ಅವರು ಧನ್ಯವಾದ ಎಂದು ಪ್ರತಿಕ್ರಿಯೆ ನೀಡಿದ್ದಾರೆ’ ಎಂದಿದ್ದಾರೆ. ‘ಒಳಗೆ ಏನು ನಡೆಯುತ್ತಿದೆ ಎಂಬುದು ಸಮಾಜಕ್ಕೆ ಗೊತ್ತಿರುವುದಿಲ್ಲ. ನಮ್ಮ ಸುತ್ತಲೂ ನಡೆಯುತ್ತಿರುವ ಎಲ್ಲವನ್ನೂ ಕ್ಯಾಮೆರಾನಲ್ಲಿ ಸೆರೆ ಹಿಡಿದು ತೋರಿಸಲು ಆಗುವುದಿಲ್ಲ. ಏನು ನಡೆಯುತ್ತಿದೆ ಎಂಬುದು ದೇವರಿಗೆ ಮಾತ್ರವೇ ಗೊತ್ತಿರುತ್ತದೆ. ಅಲ್ಲದೆ, ನಡೆದ ಪ್ರತಿಯೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ವ್ಯಕ್ತಿತ್ವವೂ ನನ್ನದಲ್ಲ. ಏನು ಕಾಣುತ್ತಿದೆಯೋ ಅದಕ್ಕಿಂತಲೂ ಭಿನ್ನವಾದ ಕತೆ ಇರುತ್ತದೆ’ ಎಂದು ಹೇಳಿದ್ದಾರೆ.

ನೋಡಿರಿ

