ಮನೆಯಲ್ಲಿ ಯಾರೂ ಇಲ್ಲ ಶೋ ನಿಲ್ಲಲ್ಲ – ರಾತ್ರಿ 9.30ಕ್ಕೆ ಖಾಲಿ ಖಾಲಿ ಮನೆ ತೋರಿಸಿದ ಬಿಗ್‌ಬಾಸ್

ಮನೆಯಲ್ಲಿ ಯಾರೂ ಇಲ್ಲ ಶೋ ನಿಲ್ಲಲ್ಲ – ರಾತ್ರಿ 9.30ಕ್ಕೆ ಖಾಲಿ ಖಾಲಿ ಮನೆ ತೋರಿಸಿದ ಬಿಗ್‌ಬಾಸ್

ಬಿಗ್‌ಬಾಸ್ ರಿಯಾಲಿಟಿ ಶೋ ನಡೆಯುತ್ತಾ ಇಲ್ವಾ ಅನ್ನೋ ಗೊಂದಲಕ್ಕೆ ಸ್ವತಃ ಬಿಗ್‌ಬಾಸ್ ಉತ್ತರ ನೀಡಿದ್ದಾರೆ. ಯಾರು ಇರಲಿ ಬಿಡಲಿ, ಶೋ ನಡೆಯುತ್ತೆ ಅಂತಾ ಬಿಗ್‌ಬಾಸ್ ಗುಡುಗಿದ್ದಾರೆ. ಇದರ ಮಧ್ಯೆ, ಬಿಗ್‌ಬಾಸ್ ಸ್ಪರ್ಧಿಗಳು ಮರಳಿ ಬಂದಿದ್ದಾರೆ. ಆದರೆ, ಆಟ ಮಾತ್ರ ಇನ್ನೂ ಶುರುವಾಗಿಲ್ಲ.

ಇದನ್ನೂ ಓದಿ:ಬಿಗ್ ಬಾಸ್ ಮನೆ ರಾತ್ರೋರಾತ್ರಿ ಓಪನ್ – ವೈಲ್ಡ್‌ ಕಾರ್ಡ್‌ಎಂಟ್ರಿ ಕೊಟ್ಟ ಡಿಕೆಶಿ

ಬಿಗ್​​ಬಾಸ್ ಕನ್ನಡ ಸ್ಪರ್ಧಿಗಳು ಈಗ ಮತ್ತೆ ಬಿಗ್​​ಬಾಸ್ ಮನೆಗೆ ಮರಳಿದ್ದಾರೆ. ಇದೀಗ ಬಿಗ್​​ಬಾಸ್ ಎಪಿಸೋಡ್​ನ ಪ್ರೋಮೊ ಬಿಡುಗಡೆ ಆಗಿದ್ದು, ಬಿಗ್​​ಬಾಸ್​​ ಮನೆಯಲ್ಲಿ ಜನರು ಇರದೇ ಇರುವ ಖಾಲಿ ಮನೆಯ ಪ್ರೋಮೊ ಬಿಡುಗಡೆ ಮಾಡಲಾಗಿದೆ. ಬಿಗ್​​ಬಾಸ್ ಶೋ ತಾತ್ಕಾಲಿಕವಾಗಿ ಬಂದ್ ಆಗಿತ್ತು. ಜಾಲಿವುಡ್​​ ಸ್ಟುಡಿಯೋ ನಿಯಮ ಉಲ್ಲಂಘಿಸಿದ ಕಾರಣಕ್ಕೆ ಜಾಲಿವುಡ್ ಸ್ಟುಡಿಯೋ ಬಂದ್ ಮಾಡಲಾಗಿತ್ತು. ಸ್ಟುಡಿಯೋದ ಒಳಗೆ ಇರುವ ಬಿಗ್​​ಬಾಸ್ ಮನೆಗೂ ಬೀಗ ಬಿದ್ದಿತ್ತು. ಸ್ಪರ್ಧಿಗಳನ್ನು ಮನೆಯಿಂದ ಈಗಲ್​​ಟನ್ ರೆಸಾರ್ಟ್​​ಗೆ ಸ್ಥಳಾಂತರ ಮಾಡಲಾಗಿತ್ತು.

ಇದೀಗ ಬಿಗ್​​ಬಾಸ್ ಸ್ಪರ್ಧಿಗಳು ಮತ್ತೆ ಬಿಗ್​​ಬಾಸ್ ಮನೆಗೆ ಮರಳಿದ್ದಾರೆ. ಆದರೆ ಸ್ಪರ್ಧಿಗಳು ಸುಮಾರು 24 ಗಂಟೆಗೂ ಹೆಚ್ಚು ಸಮಯ ಸ್ಪರ್ಧಿಗಳು ಮನೆಯಲ್ಲಿ ಇರಲಿಲ್ಲ. ಹಾಗಾಗಿ ಒಂದು ದಿನದ ಎಪಿಸೋಡ್​​ ವ್ಯರ್ಥವಾಗಿದೆ. ಇಂದು (ಅಕ್ಟೋಬರ್ 09) ಕಲರ್ಸ್ ವಾಹಿನಿಯು ಬಿಗ್​​ಬಾಸ್ ಇಂದಿನ ಎಪಿಸೋಡ್​​ನ ಮೊದಲ ಪ್ರೋಮೊ ಬಿಡುಗಡೆ ಮಾಡಿದೆ. ಈ ಪ್ರೋಮೊ ಬಹಳ ವಿಶಿಷ್ಟವಾಗಿಯೂ, ವಿಶೇಷವಾಗಿಯೂ ಇದೆ. ನಿನ್ನೆ ಮನೆಯಲ್ಲಿ ನಡೆದುದ್ದನ್ನು ಇಂದಿನ ಎಪಿಸೋಡ್​​ನಲ್ಲಿ ತೋರಿಸಲಾಗುತ್ತದೆ. ಆದರೆ ನಿನ್ನೆ ಮನೆ ಎಲ್ಲ ಖಾಲಿ ಇತ್ತು, ಹಾಗಾಗಿ ಬಿಗ್​​ಬಾಸ್​​ ಇಂದು ಬಿಡುಗಡೆ ಮಾಡಿರುವ ಪ್ರೋಮೋನಲ್ಲೂ ಸಹ ಮನೆಯೆಲ್ಲ ಖಾಲಿ ಇದೆ! ಪ್ರೋಮೊನಲ್ಲಿ ಖಾಲಿ ಇರುವ ಬೆಡ್ ರೂಂ, ಕಿಚನ್, ಲಿವಿಂಗ್ ರೂಂ, ಹೊರಗಡೆಯ ಏರಿಯಾಗಳನ್ನು ತೋರಿಸಲಾಗಿದೆ. ಪ್ರೋಮೊದ ಕೊನೆಯಲ್ಲಿ ‘ಎಂದಿನಂತೆ ಅದೇ ಸಮಯದಲ್ಲಿ, ಬಿಗ್​​ಬಾಸ್ ಕನ್ನಡ ರಾತ್ರಿ 9:30ಕ್ಕೆ ಪ್ರಸಾರ’ ಎಂದು ಬಿಗ್​​ಬಾಸ್​ ಖಡಕ್ ಧ್ವನಿಯಲ್ಲಿ ಹೇಳಿದೆ. ಆ ಮೂಲಕ, ಮನೆಯಲ್ಲಿ ಜನ ಇರಲಿ, ಇಲ್ಲದೇ ಇರಲಿ, ಬಿಗ್​​ಬಾಸ್ ಶೋ ಪ್ರಸಾರ ಆಗಿಯೇ ತೀರುತ್ತದೆ ಎಂದು ಸಾರಿ ಹೇಳಿದೆ ಬಿಗ್​​ಬಾಸ್.

Sulekha