ವಿಂಡೀಸ್ ವೈಟ್ ವಾಶ್ ಗೆ ಭಾರತ ರೆಡಿ – ಪ್ಲೇಯಿಂಗ್ 11 ಟ್ವಿಸ್ಟ್ ಕೊಡುತ್ತಾ BCCI?

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಮ್ಯಾಚಲ್ಲಿ ಕಂಪ್ಲೀಟ್ ಡಾಮಿನೇಷನ್ ಮಾಡಿದ್ದ ಭಾರತ ಜಸ್ಟ್ ಎರಡೂವರೆ ದಿನದಲ್ಲೇ ಮ್ಯಾಚ್ ಮುಗಿಸಿತ್ತು. ಬ್ಯಾಟಿಂಗ್ ಌಂಡ್ ಬೌಲಿಂಗ್ನಲ್ಲಿ ಸೂಪರ್ ಸಾಲಿಡ್ ಪರ್ಫಾಮೆನ್ಸ್ ನೀಡಿದ್ರು. ಇದೀಗ ಎರಡನೇ ಟೆಸ್ಟ್ ಮ್ಯಾಚ್ನೂ ಒನ್ ಸೈಡೆಡ್ ಆಗಿಯೇ ಗೆಲ್ಲೋ ಮೈಂಡ್ಸೆಟ್ನಲ್ಲಿದ್ದಾರೆ. ವಿಂಡೀಸ್ ವಿರುದ್ಧದ ಎರಡನೇ ಮ್ಯಾಚ್ ಯಾವಾಗ? ಪ್ಲೇಯಿಂಗ್ 11ನಲ್ಲಿ ಏನಾದ್ರೂ ಚೇಂಜಸ್ ಆಗುತ್ತಾ ಅನ್ನೋ ಬಗ್ಗೆ ವಿವರ ಇಲ್ಲಿದೆ.
ಇದನ್ನೂ ಓದಿ: ಅಕ್ಟೋಬರ್ 25ಕ್ಕೆ RO-KO ನಿವೃತ್ತಿ? – ಗಿಲ್ ಗೆ ಪಟ್ಟ ಕಟ್ಟಿದ್ದು ಇದಕ್ಕೇನಾ?
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಫಸ್ಟ್ ಮ್ಯಾಚಲ್ಲಿ ಭಾರತ ಇನ್ನಿಂಗ್ಸ್ ಌಂಡ್ 140 ರನ್ಗಳ ಅತ್ಯದ್ಭುತ ಗೆಲುವು ದಾಖಲಿಸಿತ್ತು. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಟಾಸ್ ಗೆದ್ದು ಬ್ಯಾಟಿಂಗ್ಗೆ ಇಳಿದ್ರೂ ಕೂಡ ಬಿಗ್ ಸ್ಕೋರ್ ಬರ್ಲಿಲ್ಲ. ಬಟ್ ಭಾರತದ ಬ್ಯಾಟರ್ಸ್ ಮಾತ್ರ ಸಾಲಿಡ್ ಫಾರ್ಮ್ನಲ್ಲಿದ್ರು. ಅದ್ರಲ್ಲೂ ಒಂದೇ ದಿನ ಕೆಎಲ್ ರಾಹುಲ್, ಧ್ರುವ್ ಜುರೇಲ್ ಹಾಗೇ ರವೀಂದ್ರ ಜಡೇಜಾ ಶತಕ ಸಿಡಿಸಿ ಸಂಭ್ರಮಿಸಿದ್ರು. ಫಾಲೋ ಆನ್ ಗೆ ಒಳಗಾಗಿ ವಿಂಡೀಸ್ ಸೆಕೆಂಡ್ ಇನ್ನಿಂಗ್ಸ್ನಲ್ಲೂ ಮಕಾಡೆ ಮಲ್ಗಿತ್ತು. ಅಂತಿಮವಾಗಿ ಭಾರತ ಭರ್ಜರಿಯಾಗಿ ಈ ಮ್ಯಾಚ್ ಗೆದ್ದಿತ್ತು. ಈ ಗೆಲುವಿನೊಂದಿಗೆ ಭಾರತ ತಂಡವು 2 ಪಂದ್ಯಗಳ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಈಗ ಎರಡನೇ ಪಂದ್ಯದಲ್ಲೂ ಅದೇ ಜೋಶ್ ನಲ್ಲಿದೆ. ಅಕ್ಟೋಬರ್ 10 ರಿಂದ ಎರಡನೇ ಪಂದ್ಯ ಆರಂಭವಾಗಲಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಟೀಮ್ ಇಂಡಿಯಾ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಳ್ಳೋ ಲೆಕ್ಕಾಚಾರದಲ್ಲಿದೆ. ಸೋ ಈ ಪಂದ್ಯಕ್ಕೆ ಪ್ಲೇಯಿಂಗ್ 11ನಲ್ಲಿ ಏನಾದ್ರೂ ಬದಲಾವಣೆ ಆಗ್ಬೋದು ಅಂದ್ರೆ ಖಂಡಿತ ಇಲ್ಲ. ಹಳೇ ತಂಡವನ್ನೇ ಕಣಕ್ಕಿಳಿಸೋ ಸಾಧ್ಯತೆ ಇದೆ.
ಬ್ಯಾಟಿಂಗ್ನಲ್ಲಿ ಭಾರತ ಒಂದು ಇನ್ನಿಂಗ್ಸ್ನಲ್ಲಷ್ಟೇ ಬ್ಯಾಟ್ ಬೀಸಿತ್ತು. ಇಲ್ಲಿ ಸಾಯಿ ಸುದರ್ಶನ್ 7 ರನ್ ಗಳಿಸಿ ಔಟಾಗಿದ್ದು ಬಿಟ್ರೆ ಅವಕಾಶ ಸಿಕ್ಕ ಉಳಿದವ್ರೆಲ್ಲಾ ಒಳ್ಳೆ ಸ್ಕೋರ್ ಮಾಡಿದ್ರು. ಕೆಎಲ್ ರಾಹುಲ್ ಜೊತೆ ಇನ್ನಿಂಗ್ಸ್ ಆರಂಭಿಸಿದ್ದ ಓಪನರ್ ಯಶಸ್ವಿ ಜೈಸ್ವಾಲ್ 36 ರನ್ ಕಲೆ ಹಾಕಿದ್ರು. ಇನ್ನು ರಾಹುಲ್ ತಾಳ್ಮೆಯುತವಾಗಿ ಬ್ಯಾಟ್ ಬೀಸಿ 100 ಕೂಡ ಕಂಪ್ಲೀಟ್ ಮಾಡಿದ್ರು. ಇನ್ನು ಶುಭ್ಮನ್ ಗಿಲ್ ಅರ್ಧಶತಕ ಬಾರಿಸಿದ್ರು. ಆ ಬಳಿಕ ಧ್ರುವ್ ಜುರೇಲ್ ಮತ್ತು ರವೀಂದ್ರ ಜಡೇಜಾ 200+ ಪಾರ್ಟ್ನರ್ ಶಿಪ್ ಜೊತೆ ಸೆಂಚುರಿಗಳನ್ನೂ ಬಾರಿಸಿದ್ರು. ವಾಷಿಂಗ್ಟನ್ ಸುಂದರ್ 9 ರನ್ ಗಳಿಸಿ ನಾಟೌಟ್ ಆಗಿ ಉಳಿದಿದ್ರು. ಸೋ ಭಾರತ 5 ವಿಕೆಟ್ ಅಷ್ಟೇ ಕಳ್ಕೊಂಡಿತ್ತು. ಇನ್ನು ಬೌಲಿಂಗ್ನಲ್ಲೂ ಭಾರತದ ಬೌಲರ್ಸ್ ಧೂಳೆಬ್ಬಿಸಿದ್ರು. ಮೊದಲ ಇನ್ನಿಂಗ್ಸ್ನಲ್ಲಿ ಸಿರಾಜ್ 4 ವಿಕೆಟ್ ಬೇಟೆಯಾಡಿದರೆ ಬುಮ್ರಾ 3 ವಿಕೆಟ್ ತೆಗ್ದಿದ್ರು. ಕುಲ್ದೀಪ್ 2 ಹಾಗೇ ಸುಂದರ್ 1 ವಿಕೆಟ್ ಪಡ್ಕೊಂಡಿದ್ರು. ಇನ್ನು ಸೆಕೆಂಡ್ ಇನ್ನಿಂಗ್ಸ್ನಲ್ಲಿ ರವೀಂದ್ರ ಜಡೇಜಾ 4 ವಿಕೆಟ್ ತಗೊಂಡ್ರೆ ಸಿರಾಜ್ ಮೂರು, ಕುಲ್ದೀಪ್ 2 ಮತ್ತು ಸುಂದರ್ 1 ವಿಕೆಟ್ ಉರುಳಿಸಿದ್ರು. ಹೀಗಾಗಿ ಬ್ಯಾಟಿಂಗ್ ಌಂಡ್ ಬೌಲಿಂಗ್ನಲ್ಲಿ ಬ್ಯಾಲೆನ್ಸ್ಡ್ ಆಗಿರೋದ್ರಿಂದ ಎರಡನೇ ಪಂದ್ಯದಕ್ಕೆ ಇದೇ ಪ್ಲೇಯಿಂಗ್ 11ನ ಕಂಟಿನ್ಯೂ ಮಾಡೋ ಚಾನ್ಸಸ್ ಇದೆ.
ಇನ್ನು ಪಂದ್ಯ ನಡೆಯಲಿರೋ ಅರುಣ್ ಜೇಟ್ಲಿ ಕ್ರೀಡಾಂಗಣದ ಬಗ್ಗೆ ಹೇಳೋದಾದ್ರೆ ಈ ಮೈದಾನವನ್ನ 2019ರವರೆಗೆ ಫಿರೋಜ್ ಶಾ ಕೋಟ್ಲಾ ಸ್ಟೇಡಿಯಂ ಅಂತಾ ಕರೆಯಲಾಗ್ತಿತ್ತು. ಆದ್ರೆ 2019ರಲ್ಲಿ ಡಿಡಿಸಿಎ ಜೇಟ್ಲಿ ಹೆಸರಿಡೋ ನಿರ್ಧಾರ ಮಾಡಿತ್ತು. ಅದೂ ಅಲ್ದೇ ಅರುಣ್ ಜೇಟ್ಲಿ 1999 ರಿಂದ 2013 ರವರೆಗೆ ಡಿಡಿಸಿಎ ಅಧ್ಯಕ್ಷರಾಗಿದ್ದರು ಮತ್ತು ಅವರ ಅಧಿಕಾರಾವಧಿಯಲ್ಲಿ ಕ್ರೀಡಾಂಗಣದ ರಿನೋವೇಷನ್ನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇನ್ನು ಜೇಟ್ಲಿ ಮೈದಾನದಲ್ಲಿ ಇದುವರೆಗೆ 37 ಟೆಸ್ಟ್ ಪಂದ್ಯಗಳನ್ನಾಡಲಾಗಿದೆ. ಇದ್ರಲ್ಲಿ ಫಸ್ಟ್ ಬ್ಯಾಟ್ ಮಾಡಿದ ತಂಡ 6 ಸಲ ಗೆಲುವು ಸಾಧಿಸಿದ್ರೆ ಬೌಲಿಂಗ್ ಮಾಡಿದವ್ರು 14 ಸಲ ವಿನ್ ಆಗಿದ್ದಾರೆ. 15 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ. ಈ ಸಲ ಭಾರತ ಸಾಲಿಡ್ ಫಾರ್ಮ್ನಲ್ಲಿ ಇರೋದ್ರಿಂದ ಎರಡನೇ ಪಂದ್ಯವನ್ನೂ ಗೆದ್ದು ಕೆರೆಬಿಯನ್ ಕಲಿಗಳನ್ನ ವೈಟ್ ವಾಶ್ ಮಾಡೋ ಪ್ಲ್ಯಾನ್ನಲ್ಲಿದ್ದಾರೆ.

ನೋಡಿರಿ

