ಪಾಕ್‌ ದಿವಾಳಿಯತ್ತ ಸಾಗುತ್ತಿದೆ – ವಿಶ್ವ ಹಣಕಾಸು ಸಂಸ್ಥೆಯಿಂದ ಶಾಕಿಂಗ್ ವರದಿ

ಪಾಕ್‌ ದಿವಾಳಿಯತ್ತ ಸಾಗುತ್ತಿದೆ – ವಿಶ್ವ ಹಣಕಾಸು ಸಂಸ್ಥೆಯಿಂದ ಶಾಕಿಂಗ್ ವರದಿ

ಪಾಕಿಸ್ತಾನದ ಆರ್ಥಿಕ ಸ್ಥಿತಿ ನಿಧಾನವಾಗಿ ಉತ್ತಮಗೊಳ್ಳುತ್ತಿದೆ ಎಂದು ಹೇಳುತ್ತಿದ್ದವರಿಗೆ ಶಾಕಿಂಗ್ ವರದಿಯೊಂದನ್ನು ವಿಶ್ವ ಹಣಕಾಸು ಸಂಸ್ಥೆ (ಐಎಂಎಫ್) ನೀಡಿದೆ. ಆ ಸಂಸ್ಥೆಯು ತಯಾರಿಸಿರುವ ಪಾವರ್ಟಿ ಆ್ಯಂಡ್ ರೆಸಿಲೆನ್ಸ್ ಎಂಬ ವರದಿಯಲ್ಲಿ ಪಾಕಿಸ್ತಾನದ ಅರ್ಧಕ್ಕಿಂತ ಹೆಚ್ಚು ಜನಸಂಖ್ಯೆಯು ಬಡತನದ ರೇಖೆಯಡಿ ಜೀವನ ಸಾಗಿಸುತ್ತಿದೆ ಎಂದಿದೆ. ಇದರಿಂದ ಆ ದೇಶವು ದಿವಾಳಿಯತ್ತ ಸಾಗುತ್ತಿರುವುದು ಖಚಿತವಾಗಿದೆ.

ವಿಶ್ವಸಂಸ್ಥೆ: ಪಾಕಿಸ್ತಾನದಲ್ಲಿ ಚಿನ್ನದ ನಿಧಿ ಸಿಕ್ತಂತೆ ಇನ್ನೇನು ಪಾಕಿಸ್ತಾನದ ಅದೃಷ್ಟ ಖುಲಾಯಿಸಿತು ಎಂಬ ಮಾಹಿತಿ ಕೆಲವು ತಿಂಗಳುಗಳ ಹಿಂದೆ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು. ತೀರಾ ಇತ್ತೀಚೆಗೆ, ತಮ್ಮಲ್ಲಿನ ಅಪರೂಪದ ಖನಿಜಗಳನ್ನು ಗಣಿಗಾರಿಕೆ ಮಾಡಲು ಪಾಕಿಸ್ತಾನ ಅಮೆರಿಕ ಅಧ್ಯಕ್ಷರಿಗೆ ನೇರವಾಗಿ ಆಹ್ವಾನ ನೀಡಿದೆ. ಅಲ್ಲಿಗೆ ಪಾಕಿಸ್ತಾನಕ್ಕಿನ್ನು ಆದಾಯವೋ ಆದಾಯ ಎಂದೆಲ್ಲಾ ಹೇಳಲಾಯಿತು.

ಇದನ್ನೂ ಓದಿ: ಬಿಹಾರದಲ್ಲಿ ಡಿಲಿಟ್ ಮಾಡಿದ ಮಾಹಿತಿ ಕೊಡಿ ಎಂದ ಸುಪ್ರೀಂ – ಆಗಲ್ಲ ಎಂದ ಚುನಾವಣಾ ಆಯೋಗ

ಆದರೆ, ವಿಶ್ವ ಹಣಕಾಸು ಸಂಸ್ಥೆಯ (ಐಎಂಎಫ್) ಅ. 7ರಂದು ಬಿಡುಗಡೆ ಮಾಡಿರುವ ಮಾಹಿತಿಯೊಂದು ಆ ದೇಶದ ಬಗ್ಗೆ ಕನಿಕರವನ್ನು ಹುಟ್ಟಿಸುತ್ತಿದೆ. ವಿಶ್ವಸಂಸ್ಥೆಯ ಬಡತನ ಹಾಗೂ ಸ್ಥಿತಿಸ್ಥಾಪಕತ್ವ ವರದಿಯಲ್ಲಿ 2001ರಲ್ಲಿ ಶೇ. 60ರಷ್ಟು ಬಡವರು ಆ ದೇಶದಲ್ಲಿದ್ದರು. 2018ರ ಹೊತ್ತಿಗೆ ಬಡತನದ ಪ್ರಮಾಣ ಶೇ. 21ಕ್ಕೆ ಇಳಿದಿತ್ತು. ಆದರೆ, ಈಗ ಆ ಬಡತನ ಹೆಚ್ಚಾಗಿದೆ. 2023-24ರಲ್ಲಿ ಶೇ. 27ರಷ್ಟು ಹೆಚ್ಚಾಗಿದೆ. ಈಗ 2025ರಲ್ಲಿ ಏನಾಗಿದೆಯೆಂದರೆ, ಆ ದೇಶದ ಜನಸಂಖ್ಯೆಯಲ್ಲಿ ಶೇ. 50ರಷ್ಟು ಜನಸಂಖ್ಯೆಯು ಈಗ ಬಡತನದ ರೇಖೆಯ ಕೆಳಗೆ ಬದುಕುತ್ತಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಪಾಕಿಸ್ತಾನದ ನಗರಗಳಾದ ಇಸ್ಲಾಮಾಬಾದ್, ಲಾಹೋರ್ ಮುಂತಾದ ಪ್ರದೇಶಗಳಲ್ಲಿ ಜನಜೀವನ ಸ್ವಲ್ಪ ಪರವಾಗಿಲ್ಲ. ಆದರೆ, ಪಾಕಿಸ್ತಾನದ ಗ್ರಾಮೀಣ ಪ್ರದೇಶಗಳಲ್ಲಿ ಜನಜೀವನ ಕಷ್ಟಕರವಾಗಿದೆ. ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಇವ್ಯಾವುದೂ ಅಲ್ಲಿ ಇಲ್ಲ. ಐದು ವರ್ಷಕ್ಕಿಂತ ಕಡಿಮೆಯಿರುವ ಮಕ್ಕಳಲ್ಲಿ ಶೇ. 40 ಮಕ್ಕಳಲ್ಲಿ ಅಪೌಷ್ಠಿಕತೆಯ ಸಮಸ್ಯೆ ಕಾಡುತ್ತಿದೆ. ಸರಿಯಾಗಿ ಶಿಕ್ಷಣವಿಲ್ಲದೆ ಅಲ್ಲಿನ ಅನೇಕ ಯುವಕರು ಓದು ಬರಹ ಮರೆತಿದ್ದಾರೆ. ಅದರಿಂದ ಅವರಿಗೆ ಕೆಲಸಗಳೂ ಸಿಗುತ್ತಿಲ್ಲ. ಬಲೂಚಿಸ್ತಾನ ಹಾಗೂ ಸಿಂಧ್ ಪ್ರಾಂತ್ಯಗಳಂತೂ ತೀರಾ ಹಿಂದುಳಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

 

Kishor KV