ಕಾಂತಾರ ಚಾಪ್ಟರ್ 1 ನೋಡಿದ KL ರಾಹುಲ್ – ರಿಷಭ್ ಶೆಟ್ಟಿ ಮ್ಯಾಜಿಕ್ ಸೂಪರ್ ಎಂದ ಕನ್ನಡಿಗ ಕ್ರಿಕೆಟರ್

ಕಾಂತಾರ ಚಾಪ್ಟರ್ 1 ನೋಡಿದ KL ರಾಹುಲ್ – ರಿಷಭ್ ಶೆಟ್ಟಿ ಮ್ಯಾಜಿಕ್ ಸೂಪರ್ ಎಂದ ಕನ್ನಡಿಗ ಕ್ರಿಕೆಟರ್

ಕಾಂತಾರ ಚಾಪ್ಟರ್ 1 ಸಿನಿಮಾ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಕರ್ನಾಟಕ ಸೇರಿದಂತೆ ದೇಶಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇದೀಗ ಕನ್ನಡದ ಹೆಮ್ಮೆಯ ಕ್ರಿಕೆಟರ್ ಕೆಎಲ್ ರಾಹುಲ್ ಅವರು ಕಾಂತಾರ ಚಾಪ್ಟರ್ 1 ಸಿನಿಮಾ ನೋಡಿದ್ದಾರೆ. ಈ ಸಿನಿಮಾ ನೋಡಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಜಾಹ್ನವಿ ಬಳಸಿದ ಗಾಂಚಲಿ ಪದದಿಂದ ದೊಡ್ಮನೆ ರಣರಂಗ – ಇದು ಜಾಹ್ನವಿ ಪ್ರಕಾರ ಒಳ್ಳೇ ಪದವಂತೆ!

ಕಾಂತಾರ ಚಾಪ್ಟರ್ 1 ಸಿನಿಮಾ ದಾಖಲೆಯ ಗಳಿಕೆ ಕಾಣುತ್ತಿದೆ. ಸಿನಿಮಾ ಗಣ್ಯರು, ಸೆಲೆಬ್ರಿಟಿಗಳು, ರಾಜಕಾರಣಿಗಳು ಕೂಡಾ ಸಿನಿಮಾ ನೋಡಿ ಉತ್ತಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಕ್ರಿಕೆಟರ್ ಕೆಎಲ್ ರಾಹುಲ್ (KL Rahul) ಅವರು ಸಿನಿಮಾ ನೋಡಿ ಪ್ರತಿಕ್ರಿಯಿಸಿದ್ದಾರೆ. ಇನ್​ಸ್ಟಾಗ್ರಾಮ್ ಸ್ಟೋರಿಯಲ್ಲಿ ಕಾಂತಾರ 1 ಬಗ್ಗೆ ಮಾತನಾಡಿದ್ದಾರೆ. ಕಾಂತಾರವನ್ನು ಈಗಷ್ಟೇ ನೋಡಿದೆ. ರಿಷಬ್ ಶೆಟ್ಟಿ ಸೃಷ್ಟಿಸಿರುವ ಈ ಮ್ಯಾಜಿಕ್​​ಗೆ ತಲೆಬಾಗುತ್ತೇನೆ. ಮಂಗಳೂರಿನ ಜನರು, ಮನಸು ಎಲ್ಲವನ್ನೂ ತುಂಬಾ ಸುಂದರವಾಗಿ ಪ್ರಸ್ತುತಪಡಿಸಿದ್ದೀರಿ ಎಂದು ಅವರು ಬರೆದಿದ್ದಾರೆ.

ಇತ್ತೀಚೆಗೆ ಬಿಜೆಪಿ ಮುಖಂಡ ಅಣ್ಣಾಮಲೈ ಕೂಡಾ ಸಿನಿಮಾ ನೋಡಿ ರಿಯಾಕ್ಟ್ ಮಾಡಿದ್ದಾರೆ. ಟ್ವಿಟರ್​​ನಲ್ಲಿ ಸಿನಿಮಾ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡ ಅಣ್ಣಾಮಲೈ, “ನಂಬಿಕೆ ಮತ್ತು ಜಾನಪದದ ವಿಶೇಷ ಮಿಶ್ರಣವಾದ ಕಾಂತಾರ ಅಧ್ಯಾಯ 1 ಅನ್ನು ವೀಕ್ಷಿಸಿದೆ. ರಿಷಬ್ ಶೆಟ್ಟಿ ಅವರು ನಿರ್ದೇಶಕ ಮತ್ತು ನಾಯಕ ನಟರಾಗಿ ಅದ್ಭುತ ಅಭಿನಯವನ್ನು ನೀಡಿದ್ದಾರೆ ಎಂದಿದ್ದಾರೆ. ಧರ್ಮದ ಸಾರ, ತುಳುನಾಡಿನ ಸಂಸ್ಕೃತಿ ಮತ್ತು ಪಂಜುರ್ಲಿ ದೇವರು ಮತ್ತು ಗುಳಿಗನ ಆರಾಧನೆಯನ್ನು ಅವುಗಳ ವಿವಿಧ ಅಭಿವ್ಯಕ್ತಿಗಳಲ್ಲಿ ಒಟ್ಟುಗೂಡಿಸುತ್ತಾರೆ ಎಂದು ಹೊಗಳಿದ್ದಾರೆ. ತುಳು ಪ್ರದೇಶದಲ್ಲಿ ಐಪಿಎಸ್ ಅಧಿಕಾರಿಯಾಗಿ ಕೆಲಸ ಮಾಡಿದ ತಮ್ಮ ಸ್ವಂತ ಅನುಭವಗಳಿಂದ ಸಿನಿಮಾವನ್ನು ವಿವರಿಸಿದ ಅಣ್ಣಾಮಲೈ, ಈ ಚಿತ್ರವು ಬಲವಾದ ವೈಯಕ್ತಿಕ ನೆನಪುಗಳನ್ನು ಹುಟ್ಟುಹಾಕಿದೆ ಎಂದು ಹೇಳಿದ್ದಾರೆ.

Sulekha