ರಾತ್ರಿಯಾದ್ರೆ ನನ್ನ ಹೆಂಡ್ತಿ ನಾಗಿಣಿಯಾಗಿ ಬದಲಾಗ್ತಾಳೆ.. ಭಯ ಆಗುತ್ತೆ! – ಮಡದಿ ವಿರುದ್ಧ ಡಿಸಿಗೆ ದೂರು ಕೊಟ್ಟ ಪತಿರಾಯ!

ಗಂಡ ಹೊಡೆಯುತ್ತಾನೆ.. ಕಿರುಕುಳ ನೀಡುತ್ತಾನೆ ಅಂತ ಮಹಿಳೆಯರು ದೂರು ನೀಡುವುದನ್ನ ನಾವು ನೋಡಿದ್ದೇವೆ. ಇನ್ನು ಹೆಂಡ್ತಿ ಕಾಟ ಎಂದು ಗಂಡ ಪೊಲೀಸ್ ಠಾಣೆಗೆ ದೂರು ನೀಡಿರುವುದನ್ನ ನಾವು ಕೇಳಿದ್ದೇವೆ. ಆದ್ರೆ ಇಲ್ಲೊಬ್ಬ ರಾತ್ರಿಯಾದ್ರೆ ಹೆಂಡ್ತಿ ನಾಗಿಣಿ ಆಗಿ ಬದಲಾಗ್ತಾಳೆ ಎಂದು ದೂರು ನೀಡಿರುವ ವಿಚಿತ್ರ ಸನ್ನಿವೇಶ ನಡೆದಿದೆ.
ಇದನ್ನೂ ಓದಿ: ಅಶ್ವಿನಿ ಗೌಡ Vs ಅಶ್ವಿನಿ ಎಸ್ಎನ್ ಬಿಗ್ ಫೈಟ್! – ರಣರಂಗವಾಯ್ತು ಬಿಗ್ಬಾಸ್ ಮನೆ
ಈ ಘಟನೆ ಉತ್ತರ ಪ್ರದೇಶದ ಮಹ್ಮದಾಬಾದ್ ತಹಸಿಲ್‌ನ ಲೋಧಾಸಾ ಗ್ರಾಮದಲ್ಲಿ ನಡೆದಿದೆ. ಮೆರಾಜ್ ಎಂಬಾತ ಹೆಂಡ್ತಿ ನಾಸಿಮುನ್ ವಿರುದ್ಧ ಜಿಲ್ಲಾಧಿಕಾರಿಗೆ ದೂರು ದಾಖಲಿಸಿದ್ದು, ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾನೆ.
ಏನಿದು ಘಟನೆ?
ರಾತ್ರಿಯಾದ್ರೆ ಸಾಕು.. ತನ್ನ ಹೆಂಡತಿ ನಾಗಿಣಿಯಾಗಿ ಬದಲಾಗ್ತಾಳೆ. ಇದರಿಂದ ನಾನು ನಿದ್ದೆ ಮಾಡಲು ಸಾಧ್ಯವಾಗುತ್ತಿಲ್ಲ.. ರಾತ್ರಿ ಸಮಯದಲ್ಲಿ ನಾಗಿಣಿ (ಹೆಣ್ಣು ಸರ್ಪ) ನಂತೆ ನಟಿಸುತ್ತಾ, ಸಿಳ್ಳೆ ಹೊಡೆಯುತ್ತಾ ಮತ್ತು ಹೆದರಿಸುತ್ತಾ ಕಳೆಯುತ್ತಾಳೆ.. ನಾಸಿಮುನ್ ಮಾನಸಿಕವಾಗಿ ಅಸ್ಥಿರಳಾಗಿದ್ದಾಳೆ ಎಂದು ಮೆರಾಜ್ ಜಿಲ್ಲಾಧಿಕಾರಿಗೆ ದೂರು ನೀಡಿದ್ದಾನೆ. ಈ ವಿಚಿತ್ರ ಕೇಸ್ ಬಗ್ಗೆ ಅಧಿಕಾರಿಗಳು ಶಾಕ್ ಆಗಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟ್ ಪೊಲೀಸರಿಗೆ ಈ ವಿಷಯವನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ.

ನೋಡಿರಿ

