ಮೈಸೂರಿನಲ್ಲಿ ಮೊದಲ ಬಾರಿಗೆ ಜಿಯೋ ಟ್ರೂ 5ಜಿ ಸೇವೆ
ಬೆಂಗಳೂರು: ಮೈಸೂರು ಸೇರಿ ದೇಶದ 11 ನಗರಗಳಲ್ಲಿ ರಿಲಯನ್ಸ್ ಜಿಯೋ ತನ್ನ ಟ್ರೂ 5ಜಿ ಸೇವೆಗಳಿಗೆ ಚಾಲನೆ ನೀಡಿದೆ. ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ 5ಜಿ ಸೇವೆಗಳನ್ನು ಪ್ರಾರಂಭಿಸುವ ಮೊದಲ ಮತ್ತು ಏಕೈಕ ಆಪರೇಟರ್ ಎಂಬ ಹೆಗ್ಗಳಿಕೆಗೆ ಜಿಯೋ ಪಾತ್ರವಾಗಿದೆ.
ಮೈಸೂರು ಸೇರಿ ದೇಶದ 11 ನಗರಗಳಲ್ಲಿ ರಿಲಯನ್ಸ್ ಜಿಯೋ ತನ್ನ ಟ್ರೂ 5ಜಿ ಸೇವೆಗಳಿಗೆ ಚಾಲನೆ ನೀಡಿದೆ. ಲಖನೌ, ತಿರುವನಂತಪುರಂ, ನಾಸಿಕ್, ಔರಂಗಾಬಾದ್, ಚಂಡೀಗಢ, ಮೊಹಾಲಿ, ಪಂಚಕುಲ, ಜಿರಾಕ್‌ಪುರ, ಖರಾರ್ ಮತ್ತು ದೇರಾಬಸ್ಸಿ ನಗರಗಳಲ್ಲಿ ಟ್ರೂ 5ಜಿ ಸೇವೆಗಳಿಗೆ ಚಾಲನೆ ನೀಡಲಾಗಿದೆ.
ಇದನ್ನೂ ಓದಿ: ಹೊಸ ವರ್ಷಾಚರಣೆಗೆ ನಮ್ಮ ಮೆಟ್ರೋ ಸಂಚಾರ ವಿಸ್ತರಣೆ – ಡಿ. 31 ರಂದು ರಾತ್ರಿ 3 ಗಂಟೆವರೆಗೆ ಮೆಟ್ರೋ ಸಂಚಾರ
ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಅನುಭವಿಸಲು ಮೈಸೂರಿನಲ್ಲಿರುವ ಜಿಯೋ ಬಳಕೆದಾರರನ್ನು ಜಿಯೋ ವೆಲ್‌ಕಮ್ ಆಫರ್‌ಗೆ ಆಹ್ವಾನಿಸಲಾಗುತ್ತದೆ. ಸದ್ಯ ಇದು ಸಂಪೂರ್ಣವಾಗಿ ಆಹ್ವಾನಿತ ಸೇವೆಯಾಗಿದ್ದು ಅಂದರೆ Invite Only Basisನಲ್ಲಿ ಬಳಕೆದಾರರಿಗೆ ಲಭ್ಯವಿದೆ.
ಟ್ರೂ 5ಜಿ ಸೇವೆ ಬಗ್ಗೆ ಮಾತನಾಡಿದ ಜಿಯೋ ವಕ್ತಾರರು, ‘ಮೈಸೂರು ನಗರದಲ್ಲಿ 5ಜಿ ಆರಂಭಿಸುವುದಕ್ಕೆ ನಾವು ಹೆಮ್ಮೆಪಡುತ್ತೇವೆ. ಜಿಯೋ ಟ್ರೂ 5ಜಿ ತಂತ್ರಜ್ಞಾನದ ವೇರಿಯಂಟ್ ಪ್ರಯೋಜನಗಳನ್ನು ಆನಂದಿಸುವ ಮೂಲಕ ಈಗ 2023ರಿಂದ ಪ್ರಾರಂಭ ಆಗುವುದರೊಂದಿಗೆ ಲಕ್ಷಾಂತರ ಜಿಯೋ ಬಳಕೆದಾರರಿಗೆ ಇದು ಗೌರವವಾಗಿದೆ. ಮೈಸೂರು ನಮ್ಮ ದೇಶದ ಪ್ರಮುಖ ಪ್ರವಾಸೋದ್ಯಮ ಕೇಂದ್ರ ಮತ್ತು ಪ್ರಮುಖ ಶಿಕ್ಷಣ ಕೇಂದ್ರ. ಈ ಪ್ರದೇಶವನ್ನು ಡಿಜಿಟಲೈಸ್ ಮಾಡುವ ನಮ್ಮ ಪ್ರಯತ್ನದಲ್ಲಿ ನಿರಂತರ ಬೆಂಬಲ ನೀಡುತ್ತಿರುವ ಕರ್ನಾಟಕ ಸರ್ಕಾರಕ್ಕೆ ನಾವು ಆಭಾರಿಯಾಗಿದ್ದೇವೆ’ ಎಂದಿದ್ದಾರೆ.
5ಜಿಯಲ್ಲಿ 100MHz ಅತೀ ಕಡಿಮೆ ಬ್ಯಾಂಡ್ ಆಗಿದ್ದು, 2.3GHz ಮಧ್ಯಮ ಬ್ಯಾಂಡ್ ಆಗಿದೆ. ಅದಕ್ಕಿಂತ ಅಧಿಕ ಬ್ಯಾಂಡ್‌ಗಳು ಕೂಡಾ ಇದೆ. ಮಧ್ಯಮ ಬ್ಯಾಂಡ್‌ನಲ್ಲಿಯೇ ಉತ್ತಮ ನೆಟ್‌ವರ್ಕ್ ಲಭ್ಯವಾಗಲಿದೆ. 5ಜಿ ನೆಟ್‌ವರ್ಕ್ 4ಜಿ ನೆಟ್‌ವರ್ಕ್‌ಗಿಂತಲೂ ಸ್ಪೀಡ್ ಆಗಿರುತ್ತದೆ. ನೀವು ಯಾವುದೇ ಸಿನಿಮಾ, ವಿಡಿಯೋ, ಆಪ್ ಡೌನ್‌ಲೋಡ್ ಅನ್ನು ಶೀಘ್ರವಾಗಿ ಮಾಡಲು ಸಾಧ್ಯವಾಗಲಿದೆ. ಇದು ಪ್ರತಿ ಸೆಕೆಂಡಿಗೆ 10 ಜಿಬಿ ವೇಗದಲ್ಲಿ ಕಾರ್ಯನಿರ್ವಹಣೆ ಮಾಡಲಿದೆ. ಭಾರತದಲ್ಲಿ ಪ್ರಸ್ತುತವಿರುವ 4ಜಿ ಡೌನ್‌ಲೋಡ್ ಸ್ಪೀಡ್‌ಗಿಂತ ನೂರು ಪಟ್ಟು ಅಧಿಕ ವೇಗವನ್ನು 5ಜಿ ನೆಟ್‌ವರ್ಕ್ ಹೊಂದಿರಲಿದೆ. 5G ನೆಟ್‌ವರ್ಕ್‌ಗೆ ಸಂಪರ್ಕಿಸಲು ಹೊಸ 5G ಸಿಮ್ ಖರೀದಿಸಬೇಕಾಗಿಲ್ಲ ಎಂದು ಜಿಯೋ ಈ ಹಿಂದೆ ತನ್ನ ಬಳಕೆದಾರರಿಗೆ ಭರವಸೆ ನೀಡಿದೆ.
ಸದ್ಯ ಬಳಕೆಯಲ್ಲಿರುವ ಜಿಯೋ 4G ಸಿಮ್, ನೂತನ 5G ಸಂಪರ್ಕವನ್ನು ಸಪೋರ್ಟ್ ಮಾಡಲಿದೆ. ಜಿಯೋ ಮೈ ಜಿಯೋ ಅಪ್ಲಿಕೇಶನ್‌ನಲ್ಲಿ ವೆಲ್‌ಕಮ್ ಆಫರ್‌ನ ಆಹ್ವಾನವನ್ನು ಕಳುಹಿಸುತ್ತದೆ. ಈ ನಿಟ್ಟಿನಲ್ಲಿ ನೀವೇನಾದರೂ ಜಿಯೋ 5G ಸಪೋರ್ಟ್ ಇರುವ ನಗರಗಳಲ್ಲಿ ಇದ್ದರೆ, ಮೈ ಜಿಯೋ ಅಪ್ಲಿಕೇಶನ್‌ನಲ್ಲಿ ವೆಲ್‌ಕಮ್ ಆಫರ್ ಪಡೆಯಬಹುದು.