ಬದರಿನಾಥನ ದರ್ಶನ ಪಡೆದ ಸೂಪರ್‌ಸ್ಟಾರ್ ರಜನಿಕಾಂತ್!

ಬದರಿನಾಥನ ದರ್ಶನ ಪಡೆದ ಸೂಪರ್‌ಸ್ಟಾರ್ ರಜನಿಕಾಂತ್!

ಬಹುಭಾಷಾ ಹಿರಿಯ ನಟ, ಸೂಪರ್‌ಸ್ಟಾರ್ ರಜನಿಕಾಂತ್  ಬದರಿನಾಥ ಧಾಮಕ್ಕೆ ಭೇಟಿ ನೀಡಿದ್ದಾರೆ. ನಿನ್ನೆ ಬದರಿನಾಥ ದರ್ಶನ ಪಡೆದ ರಜನಿಕಾಂತ್‌ ದೇವರ ಬಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಇದನ್ನೂ ಓದಿ: ತನ್ನದೇ ಯುದ್ಧ ವಿಮಾನಗಳ ಅವಶೇಷಗಳಡಿ ಭಾರತವನ್ನು ಹೂತುಹಾಕುತ್ತೇವೆ- ಭಾರತದ ವಿರುದ್ಧ ನಾಲಿಗೆ ಹರಿಬಿಟ್ಟ ಪಾಕ್

ಚಳಿಗಾಲ ಆರಂಭದ ಹಿನ್ನೆಲೆಯಲ್ಲಿ ಅಕ್ಟೋಬರ್ 23 ರಂದು ಕೇದಾರನಾಥ ಧಾಮದ ದ್ವಾರಗಳನ್ನು ಮುಚ್ಚಲಾಗುವುದು. ನವೆಂಬರ್ 25 ರಂದು ಮಧ್ಯಾಹ್ನ 2:56 ಕ್ಕೆ ಬದರಿನಾಥ ಧಾಮದ ದ್ವಾರಗಳನ್ನೂ ಮುಚ್ಚಲಾಗುತ್ತಿದೆ. ಇದಕ್ಕೂ ಮುನ್ನ ರಜನಿಕಾಂತ್‌ ಬದರಿನಾಥ ದರ್ಶನ ಪಡೆದಿದ್ದಾರೆ.

ರಜನಿಕಾಂತ್‌ ದೇಗುಲಕ್ಕೆ ಆಗಮಿಸುತ್ತಿದ್ದಂತೆ ಶ್ರೀ ಬದರಿನಾಥ-ಕೇದಾರನಾಥ ದೇವಾಲಯ ಸಮಿತಿಯ ಸದಸ್ಯರು ಆದರದಿಂದ ಬರ ಮಾಡಿಕೊಂಡರು. ಜೊತೆಗೆ ತುಳಸಿ ಮಾಲೆ ಹಾಗೂ ದೇವರ ಪ್ರಸಾದವನ್ನು ರಜನಿಕಾಂತ್‌ಗೆ ನೀಡಿದರು.

ಇನ್ನು ಇದಕ್ಕೂ ಮೊದಲು ನಟ ರಜನಿಕಾಂತ್​ ಅವರು ಕೇದಾರನಾಥ ಧಾಮಕ್ಕೂ ಭೇಟಿ ನೀಡಿ ಶಿವನಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ದಾರಿ ಮಧ್ಯೆ ರಸ್ತೆ ಪಕ್ಕದಲ್ಲಿ ನಿಂತುಕೊಂಡು ಊಟ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದ್ದವು. ಹಿರಿಯ ನಟನ ಸರಳತೆಯನ್ನು ಅಭಿಮಾನಿಗಳು, ನೆಟ್ಟಿಗರು ಕೊಂಡಾಡಿದ್ದರು.

Shwetha M