ಟಿ-20ಐ, ಟೆಸ್ಟ್, ಏಕದಿನ.. ಎಲ್ಲೆಲ್ಲೂ ರಾಣಾ – ಪ್ರದರ್ಶನಕ್ಕಿಂತ ಬಕೆಟ್ ಮುಖ್ಯನಾ?
11 ತಿಂಗಳು.. 3 ಫಾರ್ಮೆಟ್ ಪರ್ಮನೆಂಟ್

ಭಕ್ತ ಪ್ರಹ್ಲಾದ ಮೂವಿನಲ್ಲಿ ಡಾ.ರಾಜ್ ಕುಮಾರ್ ಒಂದು ಡೈಲಾಗ್ ಹೇಳ್ತಾರೆ. ಎಲ್ಲಿದ್ದಾನೆ ಆ ನಿನ್ನ ಹರಿ.. ಆ ಕಂಬದಲ್ಲಿರುವನೇ.. ಈ ಕಂಬದಲ್ಲಿರುವೇ ಅಂತಾ. ಆಗ ಪ್ರಹ್ಲಾದ ಹೇಳ್ತಾನೆ. ಎಲ್ಲೆಲ್ಲಿಯೂ ಇದ್ದಾನೆ ತಂದೆ ಅಂತಾ. ಈ ಡೈಲಾಗ್ ಸದ್ಯ ಟೀಂ ಇಂಡಿಯಾದಲ್ಲಿ ಹರ್ಷಿತ್ ರಾಣಾಗೆ ಕರೆಕ್ಟ್ ಆಗೇ ಸೂಟ್ ಆಗ್ತಿದೆ. ಟಿ-20ಐನಲ್ಲೂ ಇದ್ದಾನೆ. ಟೆಸ್ಟ್ನಲ್ಲೂ ಆಡ್ತಾನೆ. ಏಕದಿನ ತಂಡಕ್ಕೂ ಬಂದಿದ್ದಾನೆ ಅಂತಾ. ಕೋಚ್ ಗೌತಮ್ ಗಂಭೀರ್ ಅವ್ರ ಕೃಪಾಕಟಾಕ್ಷದಿಂದ ಹರ್ಷಿತ್ ರಾಣಾ ಈಗ ಟೀಂ ಇಂಡಿಯಾದ ಆಲ್ ಫಾರ್ಮೆಟ್ ಪ್ಲೇಯರ್ ಆಗಿ ಬಿಟ್ಟಿದ್ದಾನೆ. ಬಟ್ ಬೇಸರದ ವಿಚಾರ ಏನ್ ಗೊತ್ತಾ? ರಾಣಾಗಾಗಿ ಸ್ಟಾರ್ ಆಟಗಾರರೇ ಸೈಡ್ಲೈನ್ ಆಗಿದ್ದಾರೆ. ಗಂಭೀರ್ರ ಇದೇ ಧೃತರಾಷ್ಟ್ರ ಪ್ರೇಮ ಮಾಜಿ ಕ್ರಿಕೆಟಿಗರ ಕಣ್ಣು ಕೆಂಪಾಗಿಸಿದೆ.
ಇದನ್ನೂ ಓದಿ : ಡಿಕೆಶಿ CM ಕನಸಿಗೆ HDK ಕೊಳ್ಳಿ!? – ಸೇಡಿಗೆ ಸೇಡು!
2024ರಲ್ಲಿ ಟಿ-20 ವಿಶ್ವಕಪ್ ಗೆಲ್ಲಿಸಿ ರಾಹುಲ್ ದ್ರಾವಿಡ್ ಹೆಡ್ಕೋಚ್ ಹುದ್ದೆಯಿಂದ ಕೆಳಗಿಳೀತಾರೆ. ಆಗ ಕೋಚ್ ಹುದ್ದೆಗೇರಿದ್ದೇ ಗೌತಮ್ ಗಂಭೀರ್. ಗಂಭೀರ್ ಕೋಚ್ ಆದ್ಮೇಲೆ ಕಳೆದ ಒಂದೂವರೆ ವರ್ಷದಲ್ಲಿ ಟೀಂ ಇಂಡಿಯಾದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಈಗ್ಲೂ ಆಗ್ತಿವೆ. ಏನೇನೋ ಎಕ್ಸ್ಪೆರಿಮೆಂಟ್ಸ್ ಕೂಡ ಮಾಡ್ತಿರ್ತಾರೆ ಸದ್ಯ ಅದನ್ನೆಲ್ಲಾ ಪಕ್ಕಕ್ಕಿಡೋಣ. ಅದ್ರಲ್ಲೂ ಮೇಜರ್ ಡವಲಪ್ಮೆಂಟ್ ಅಂದ್ರೆ ಹರ್ಷಿತ್ ರಾಣಾ ಸೆಲೆಕ್ಷನ್. ಟೀಂ ಇಂಡಿಯಾಗೆ ಮೂರೂ ಮಾದರಿಗೂ ಒಂಥರಾ ಪರ್ಮನೆಂಟ್ ಪ್ಲೇಯರ್ ಆಗಿಬಿಟ್ಟಿದ್ದಾರೆ ರಾಣಾ. ಇದೀಗ ಆಸ್ಟ್ರೇಲಿಯಾ ವಿರುದ್ಧ ಸರಣಿಗೂ ರಾಣಾ ಸೆಲೆಕ್ಷನ್ ಆಗಿರೋದೇ ಮಾಜಿ ಕ್ರಿಕೆಟಿಗರ ತಾಳ್ಮೆಯನ್ನ ಕೆಡಿಸಿದೆ. ಭಾರತದ ಮಾಜಿ ಕ್ರಿಕೆಟಿಗ ಕೆ.ಶ್ರೀಕಾಂತ್ ನೇರವಾಗೇ ಪ್ರಶ್ನಿಸಿದ್ದಾರೆ.
ಗಿಲ್ ಬಳಿಕ ಎರಡನೇ ಹೆಸರೇ ರಾಣಾ ಎಂದು ವ್ಯಂಗ್ಯವಾಡಿದ ಶ್ರೀಕಾಂತ್!
ಆಸ್ಟ್ರೇಲಿಯಾ ವಿರುದ್ಧದ ವೈಟ್ಬಾಲ್ ಸರಣಿಗೆ ಟೀಂ ಇಂಡಿಯಾವನ್ನ ಅನೌನ್ಸ್ ಮಾಡಿದ್ದು ಟಿ-20ಐ ಹಾಗೇ ಏಕದಿನ ಎರಡೂ ಮಾದರಿಯ ತಂಡಗಳಲ್ಲೂ ಹರ್ಷಿತ್ ರಾಣಾಗೆ ಚಾನ್ಸ್ ಕೊಟ್ಟಿದ್ದಾರೆ. ಈ ಬಗ್ಗೆ ಮಾತನಾಡಿರೋ ಶ್ರೀಕಾಂತ್, ಹರ್ಷಿತ್ ರಾಣಾ ಅವರು ಗೌತಮ್ ಗಂಭೀರ್ ಅವರ ನೆಚ್ಚಿನ ಆಟಗಾರನಾಗಿದ್ದಾರೆ. ಹೀಗಾಗಿ ನಾಯಕ ಶುಭಮನ್ ಗಿಲ್ ನಂತರ ತಂಡದ ಪಟ್ಟಿಯಲ್ಲಿ ರಾಣಾ ಅವರ ಹೆಸರು ಮೊದಲು ಇರುತ್ತೆ ಎಂದಿದ್ದಾರೆ. ಈ ಮೂಲಕ ಹರ್ಷಿತ್ ರಾಣಾ ಆಡಲಿ, ಬಿಡಲಿ ಭಾರತ ತಂಡಕ್ಕೆ ನಿರಂತರವಾಗಿ ಆಯ್ಕೆ ಆಗುತ್ತಿರುವ ಬಗ್ಗೆ ವ್ಯಂಗ್ಯವಾಡಿದ್ದಾರೆ. 2024ರ ಐಪಿಎಲ್ನಲ್ಲಿ ರಾಣಾ ಕೆಕೆಆರ್ ಪರ ಆಡ್ತಿದ್ರು. ಆಗ ಗಂಭೀರ್ ಮೆಂಟರ್ ಆಗಿದ್ರು. ಅಲ್ಲಿಂದ ಗಂಭೀರ್ಗೆ ರಾಣಾ ಪಟ್ಟಾ ಶಿಷ್ಯ ಆಗಿದ್ದು ಟೀಂ ಇಂಡಿಯಾ ಕೋಚ್ ಆದ್ಮೇಲೆ ಪ್ರತೀ ಸರಣಿ, ಟೂರ್ನಿಗೂ ಫಸ್ಟ್ ಪ್ರಿಯಾರಿಟಿ ಕೊಡ್ತಾನೇ ಬಂದಿದ್ದಾರೆ. ಹಂಗಾದ್ರೆ ರಾಣಾ ಆ ಮಟ್ಟಿಗಿನ ಪರ್ಫಾಮೆನ್ಸ್ ಕೊಡ್ತಿದ್ದಾರಾ ಅಂದ್ರೆ ಚಾನ್ಸೇ ಇಲ್ಲ.
ಮೊದ್ಲಿಗೆ ಹರ್ಷಿತ್ ರಾಣಾನನ್ನ 2024-25ರ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾಗಿತ್ತು. ಹಾಗೇ ಪ್ಲೇಯಿಂಗ್ 11ನಲ್ಲೂ ಚಾನ್ಸ್ ನೀಡಿದ್ರು. 2 ಪಂದ್ಯಗಳ ಮೂರು ಇನ್ನಿಂಗ್ಸ್ನಲ್ಲಿ ಬೌಲ್ ಮಾಡಿದ್ದ ರಾಣಾ 218 ಎಸೆತಗಳಲ್ಲಿ 207 ರನ್ ಬಿಟ್ಟುಕೊಟ್ಟಿದ್ರು. 4 ವಿಕೆಟ್ ತೆಗೆದಿದ್ದಾರೆ. ಎಕಾನಮಿ ರೇಟ್ 5.7 ಇದೆ. ಟೆಸ್ಟ್ ಫಾರ್ಮೆಟ್ನಲ್ಲಿ ಇಷ್ಟೊಂದು ರನ್ಸ್ ಕೊಡೋದು ದುಬಾರಿಯಾಗುತ್ತೆ. ಆಲ್ಮೋಸ್ಟ್ ಬಾಲ್ಗೊಂದು ರನ್ಸ್ ನೀಡಿದ್ದಾರೆ. ಇನ್ನು ಈ ವರ್ಷದ ಆರಂಭದಲ್ಲಿ ಟಿ20ಐಗೂ ಕಾಲಿಡೋ ಚಾನ್ಸ್ ಸಿಕ್ಕಿತ್ತು. ಕಳೆದ ಜನವರಿಯಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಯಲ್ಲಿ ಡೆಬ್ಯೂ ಮಾಡಿದ್ರು. ಇತ್ತೀಚೆಗೆ ಏಷ್ಯಾಕಪ್ನಲ್ಲೂ ಟಿ-20 ಮಾದರಿಯಲ್ಲಿ ಸ್ಥಾನ ಪಡೆದು ಪ್ಲೇಯಿಂಗ್ 11ನಲ್ಲೂ ಆಡಿದ್ರು. ಈ 9 ತಿಂಗಳ ಅವಧಿಯಲ್ಲಿ 3 ಟಿ-20ಐ ಪಂದ್ಯಗಳನ್ನ ಆಡಿದ್ದು 5 ವಿಕೆಟ್ ತಗೊಂಡಿದ್ದಾರೆ. ಬಟ್ ರನ್ಸ್ ಅಂತೂ ದಾರಾಳವಾಗಿ ಬಿಟ್ಕೊಟ್ಟಿದ್ದಾರೆ. 10ಪ್ಲಸ್ ಎಕಾನಮಿ ರೇಟ್ ಇದೆ. ಇನ್ನು ಕಳೆದ ಚಾಂಪಿಯನ್ಸ್ ಟ್ರೋಫಿ ಟೈಮಲ್ಲಿ ಏಕದಿನ ಮಾದರಿಗೂ ಅವಕಾಶ ಗಿಟ್ಟಿಸಿಕೊಂಡಿದ್ರು. 5 ಪಂದ್ಯಗಳಿಂದ 10 ವಿಕೆಟ್ ತಗೊಂಡಿದ್ದಾರೆ. 5.7 ಎಕಾನಮಿ ಇದೆ. ಏಕದಿನ ಮಾದರಿಯಲ್ಲಿ ಬೆಟರ್ ಪರ್ಫಾಮೆನ್ಸ್ ಇದೆ. ಇಲ್ಲಿ ರಾಣಾ ಆಯ್ಕೆ ಬಗ್ಗೆ ಆಕ್ರೋಶ ವ್ಯಕ್ತವಾಗೋಕೆ ಕಾರಣವೂ ಇದೆ. ರಾಣಾಗಿಂತ ಉತ್ತಮ ಸಾಮರ್ಥ್ಯ ಇರೋ ಸಾಕಷ್ಟು ಆಟಗಾರರಿದ್ದಾರೆ. ಅದ್ರಲ್ಲೂ ಮೊಹಮ್ಮದ್ ಶಮಿ ಪೇಸ್ ವಿಭಾಗದಲ್ಲಿ ಲೀಡ್ನಲ್ಲಿದ್ದ ಬೌಲರ್. ಬಟ್ ರಾಣಾಗಾಗಿಯೇ ಶಮಿಯನ್ನ ಸೈಡ್ಲೈನ್ ಮಾಡಿದ್ರು.
ಟೀಂ ಇಂಡಿಯಾದಲ್ಲಿ ಶಮಿ ಮುಗಿದ ಅಧ್ಯಾಯನಾ?
ಒಂದು ಕಾಲದಲ್ಲಿ ಮೊಹಮ್ಮದ್ ಶಮಿ ಟೀಂ ಇಂಡಿಯಾದ ಮೇನ್ ಪೇಸ್ ಬೌಲರ್. ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಬರ್ತಿತ್ತು. ಬಟ್ ಇತ್ತೀಚಿನ ತಿಂಗಳುಗಳಲ್ಲಿ ಶಮಿಗೆ ಅವಕಾಶನೇ ಸಿಗ್ತಿಲ್ಲ. ಸದ್ಯದ ಬೆಳವಣಿಗೆಗಳನ್ನ ನೋಡಿದ್ರೆ ಮೊಹಮ್ಮದ್ ಶಮಿ ಅವರ ಅಂತರರಾಷ್ಟ್ರೀಯ ವೃತ್ತಿಜೀವನ ಅಂತ್ಯಗೊಂಡಂತೆ ಕಾಣುತ್ತಿದೆ. ಭಾರತ ವರ್ಸಸ್ ಆಸ್ಟ್ರೇಲಿಯಾ ಏಕದಿನ ಸರಣಿಯಲ್ಲಿ ಕೈಬಿಟ್ಟಿದ್ದಾರೆ. ಶಮಿ 50 ಓವರ್‌ಗಳ ಸ್ವರೂಪದಲ್ಲಿ ಪ್ರಮುಖ ಬೌಲರ್ ಆಗಿದ್ರೂ ಕೂಡ 2027 ರ ವಿಶ್ವಕಪ್ ಮೇಲೆ ಕಣ್ಣಿಟ್ಟು ತಂಡವು 36 ವರ್ಷದ ಶಮಿಯನ್ನ ದೂರ ಇಡಲಾಗಿದೆ. ಇನ್ನು ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ ಇದ್ದಾರಾದ್ರೂ ರಾಣಾ ಥರ ಎಲ್ಲಾ ಪಂದ್ಯಗಳನ್ನ ಅವಕಾಶ ಗಿಟ್ಟಿಸಿಕೊಳ್ಳೋಕೆ ಸಾಧ್ಯವಾಗ್ತಿಲ್ಲ. ಫಸ್ಟ್ ಪ್ರಿಯಾರಿಟಿ ಕೂಡ ಸಿಗ್ತಿಲ್ಲ.
ಇಷ್ಟೆಲ್ಲಾ ನೋಡಿದ್ಮೇಲೆ ನಿಮ್ಗೂ ಕೂಡ ಕ್ಲಿಯರ್ ಆಗೇ ಗೊತ್ತಾಗಿರುತ್ತೆ. ರಾಣಾ ಸೆಲೆಕ್ಟ್ ಆಗ್ತಿರೋದು ತನ್ನ ಇಂಡಿವಿಶ್ಯೂಯಲ್ ಪರ್ಫಾಮೆನ್ಸ್ ನಿಂದ ಅಲ್ಲ. ಗಂಭೀರ್ ಕೋಟಾದಡಿ ಅನ್ನೋದು. 2026ರ ಟಿ-20 ವಿಶ್ವಕಪ್ ಹಾಗೇ 2027ರ ಏಕದಿನ ವಿಶ್ವಕಪ್ನಲ್ಲಿ ಟೀಂ ಇಂಡಿಯಾಗೆ ಇಬ್ರಂತೂ ಸೆಲೆಕ್ಟ್ ಆಗ್ತಾರೆ. ಫಸ್ಟ್ ನೇಮ್ ಶುಭ್ಮನ್ ಗಿಲ್ ಲಾಸ್ಟ್ ನೇಮ್ ಹರ್ಷಿತ್ ರಾಣಾ. ಸೋ ಮಿಡಲ್ನಲ್ಲಿ ಯಾವ್ಯಾವ ಆಟಗಾರರು ಅನ್ನೋದನ್ನ ಆ ನಂತ್ರ ಫೈನಲ್ ಮಾಡಿಕೊಳ್ತಾರೆ ಅಂತೆಲ್ಲಾ ಟ್ರೋಲ್ ಮಾಡಲಾಗ್ತಿದೆ. ಬಟ್ ಇಲ್ಲಿ ಗಂಭೀರ್ ಧೃತರಾಷ್ಟ್ರ ಪ್ರೇಮದಿಂದ ಪ್ರತಿಭಾವಂತ ಆಟಗಾರರು ಅವಕಾಶ ಕಳ್ಕೊಳ್ತಿದ್ದಾರೆ ಅನ್ನೋದೇ ಬೇಸರದ ಸಂಗತಿ.

ನೋಡಿರಿ

