CJI ಬಿ.ಆರ್‌.ಗವಾಯಿ ಮೇಲೆ ಶೂ ಎಸೆಯೋಕೆ ಯತ್ನ – ಬೆಚ್ಚಿ ಬಿದ್ದ ಸುಪ್ರೀಂ ಕೋರ್ಟ್

CJI ಬಿ.ಆರ್‌.ಗವಾಯಿ  ಮೇಲೆ ಶೂ ಎಸೆಯೋಕೆ ಯತ್ನ – ಬೆಚ್ಚಿ ಬಿದ್ದ ಸುಪ್ರೀಂ ಕೋರ್ಟ್

ಸುಪ್ರೀಂಕೋರ್ಟ್ ನಲ್ಲಿ ಬೆಚ್ಚಿ ಬೀಳಿಸೋ  ಘಟನೆಯೊಂದು ನಡೆದಿದೆ. ಸುಪ್ರೀಂಕೋರ್ಟ್‌  ಮುಖ್ಯ ನ್ಯಾಯಮೂರ್ತಿ ಬಿ.ಆರ್‌.ಗವಾಯಿ ಅವರ ಮೇಲೆ ಶೂ ಎಸೆಯಲು ವಕೀಲನೊಬ್ಬ ಯತ್ನಿಸಿದ್ದಾನೆ. ವಕೀಲ ಕಿಶೋರ್ ರಾಕೇಶ್ ಎಂಬುವವರು ಸಿಜೆಐ ಬಿ.ಆರ್‌.ಗವಾಯಿ ಮೇಲೆ ಶೂ ಎಸೆದಿದ್ದಾರೆ. ಇಂದು ಬೆಳಿಗ್ಗೆ  ಮೊದಲ ಕೇಸ್ ನ ವಿಚಾರಣೆಯನ್ನು ಸಿಜೆಐ ಆರಂಭಿಸುತ್ತಿದ್ದಂತೆ, ವಕೀಲ ಕಿಶೋರ್ ರಾಕೇಶ್ ಸಿಜೆಐ ಮೇಲೆ ಶೂ ಎಸೆದಿದ್ದಾರೆ. ಆದರೇ, ಶೂ ಸಿಜೆಐ ಮೇಲೆ ಬಿದ್ದಿಲ್ಲ.  ಶೂ, ಸಿಜೆಐ ಅವರ  ಬೆಂಚ್ ಮೇಲೆ ಬಿದ್ದಿದೆ.  ತಕ್ಷಣವೇ  ಎಚ್ಚೆತ್ತ ಕೋರ್ಟ್ ಹಾಲ್ ನಲ್ಲಿದ್ದ ಸುಪ್ರೀಂಕೋರ್ಟ್ ನ ಭದ್ರತಾ ಸಿಬ್ಬಂದಿ. ಶೂ ಎಸೆದ ಕಿಶೋರ್ ರಾಕೇಶ್ ನನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಭಾರತೀಯ ಸೇನೆಯ ಭರ್ಜರಿ ಭೇಟೆ – 16 ಉಗ್ರರು ಅರೆಸ್ಟ್‌, ಶಸ್ತ್ರಾಸ್ತ್ರ ವಶ

ಶೂ ಎಸೆದ ಕಿಶೋರ್ ರಾಕೇಶ್, ಸನಾತನ ಧರ್ಮಕ್ಕೆ ಅಪಮಾನ ಆಗುವುದನ್ನು ಸಹಿಸಲ್ಲ ಎಂದು ಘೋಷಣೆ  ಕೂಗಿದ್ದಾರೆ ಎಂದು ಕೋರ್ಟ್ ಹಾಲ್ ನಲ್ಲಿದ್ದ ವಕೀಲರು ಹೇಳಿದ್ದಾರೆ.
ಇನ್ನೂ ಈ ಘಟನೆಯಿಂದ ತಾವು ವಿಚಲಿತರಾಗಿಲ್ಲ. ಇಂಥ ಕೃತ್ಯಗಳಿಂದ ಚಿಂತೆ ಮಾಡುವ ಕೊನೆಯ ವ್ಯಕ್ತಿ ನಾನು. ವಕೀಲರು ತಮ್ಮ ವಾದ ಮಂಡನೆಯನ್ನು ಮುಂದುವರಿಸಿ ಎಂದು ಸಿಜೆಐ ಬಿ.ಆರ್.ಗವಾಯಿ ಕೋರ್ಟ್ ಹಾಲ್ ನಲ್ಲಿದ್ದ ವಕೀಲರಿಗೆ ಹೇಳಿದ್ದಾರೆ. ತಮ್ಮ ಎಂದಿನ ಕೋರ್ಟ್ ಕೇಸ್ ವಿಚಾರಣೆಯನ್ನು ಮುಂದುವರಿಸಿದ್ದಾರೆ.

ಇನ್ನೂ ಈ ಘಟನೆಯ ಬಗ್ಗೆ ಟ್ವೀಟರ್ ನಲ್ಲಿ ಟ್ವೀಟ್ ಮಾಡಿರುವ ಹಿರಿಯ ವಕೀಲೆ ಇಂದಿರಾ ಜೈಸಿಂಗ್, ಈ ಘಟನೆಯನ್ನು ಎಲ್ಲರೂ ಖಂಡಿಸಬೇಕು. ಇದರ ಬಗ್ಗೆ ಸರಿಯಾದ ತನಿಖೆಯಾಗಬೇಕು. ಶೂ ಎಸೆದ ವಕೀಲರ ಹೆಸರು ಬಹಿರಂಗಪಡಿಸಬೇಕು. ಆ ವಕೀಲರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸುಪ್ರೀಂಕೋರ್ಟ್‌ನ ಎಲ್ಲ ಜಡ್ಜ್ ಗಳು ಸುಪ್ರೀಂಕೋರ್ಟ್ ಮೇಲೆ ನಡೆದ ಸೈದ್ದಾಂತಿಕ ದಾಳಿಯನ್ನು ಪತ್ರಿಕಾ ಹೇಳಿಕೆಯ ಮೂಲಕ ಖಂಡಿಸಬೇಕು. ಈ ದಾಳಿಯನ್ನು ಸಹಿಸಲ್ಲ ಎಂದು ಹೇಳಬೇಕು. ಸುಪ್ರೀಂಕೋರ್ಟ್ ಘನತೆಗೆ ತಕ್ಕಂತೆ ಸಿಜೆಐ ಈ ಘಟನೆಯಿಂದ ಡಿಸ್ಟರ್ಬ್ ಆಗದೇ ನ್ಯಾಯಾಂಗ ಕೆಲಸ ಮುಂದುವರಿಸಿದ್ದಾರೆ ಎಂದು ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಟ್ವೀಟ್ ಮಾಡಿದ್ದಾರೆ.

Kishor KV