ಹಸಿರು ಪಟಾಕಿಗಷ್ಟೇ ಅನುಮತಿ.. ಬೇರೆ ಪಟಾಕಿ ಮಾರಿದ್ರೆ ಲೈಸನ್ಸ್‌ ಕ್ಯಾನ್ಸಲ್! – ಈಶ್ವರ್ ಖಂಡ್ರೆ‌

ಹಸಿರು ಪಟಾಕಿಗಷ್ಟೇ ಅನುಮತಿ.. ಬೇರೆ ಪಟಾಕಿ ಮಾರಿದ್ರೆ ಲೈಸನ್ಸ್‌ ಕ್ಯಾನ್ಸಲ್! – ಈಶ್ವರ್ ಖಂಡ್ರೆ‌

ದೀಪಾವಳಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದೆ. ಹಬ್ಬದ ಆಚರಣೆಗೆ ಈಗಿನಿಂದಲೇ ದೇಶದಲ್ಲಿ ತಯಾರಿ ನಡೆಯುತ್ತಿದೆ. ಜನರು ಪಟಾಕಿ ಖರೀದಿಸಲು ಮುಂದಾಗಿದ್ದಾರೆ. ಆದ್ರೆ ಈ ಬಾರಿ ಪಟಾಕಿ ಮಾರಾಟದ ಬಗ್ಗೆ ಕೆಲವೊಂದು ನಿಯಮಗಳನ್ನು ಸರ್ಕಾರ ಈಗಿನಿಂದಲ್ಲೇ ಜಾರಿಗೊಳಿಸಲಾಗಿದೆ. ಇದೀಗ ಕರ್ನಾಟಕದಲ್ಲೂ ಪಟಾಕಿ ಮಾರಾಟಕ್ಕೆ ರೂಲ್ಸ್‌ ಜಾರಿಗೊಳಿಸಲಾಗಿದೆ. ಅಂಗಡಿ ಮಾಲೀಕರು ನಿಯಮ ಉಲ್ಲಂಘನೆ ಮಾಡಿದ್ರೆ ಲೈಸನ್ಸ್‌ ರದ್ದು ಮಾಡಲಾಗುವುದು ಎಂದು ಸಚಿವ ಈಶ್ವರ್ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಬಿಗ್‌ ಬಾಸ್‌ ಅಸುರಾಧಿಪತಿ ಕಾಕ್ರೋಚ್.. ರಕ್ಷಿತಾ ಶೆಟ್ಟಿಗೆ ಪನಿಶ್ಮೆಂಟ್‌! – ಇಬ್ಬರು OUT..‌ ಹೊಸ ಎಂಟ್ರಿ ಇವ್ರೇ?  

ಮಾಲಿನ್ಯರಹಿತ ದೀಪಾವಳಿ ಆಚರಣೆಯನ್ನು ಮಾಡಬೇಕು ಎಂಬುದು ಸರ್ಕಾರ ಪ್ರತಿವರ್ಷ ಒಂದು ಮಾನದಂಡವನ್ನು ಹಾಕಿಕೊಳ್ಳುತ್ತಿತ್ತು. ಈ ಬಾರಿ ಅದನ್ನು ಕಟ್ಟುನಿಟ್ಟಾಗಿ ತರಲು ಮುಂದಾಗಿದೆ. ಬೆಂಗಳೂರು ಮತ್ತು ಅದರ ಹೊರವಲಯಗಳಲ್ಲಿ ಬೆಳಕಿನ ಹಬ್ಬಕ್ಕೆ ಈಗಲೇ ತಯಾರಿ ನಡೆಯುತ್ತಿದೆ. ಈಗಾಗಲೇ ಪಟಾಕಿ ಮಾರಾಟಕ್ಕೆ ಕ್ಷಣಗಣನೆ ಶುರುವಾಗಿದೆ. ಅದರಲ್ಲೂ ಹೊಸೂರಿನಂತಹ ಗಡಿ ಪ್ರದೇಶಗಳಲ್ಲಿ ಇದರ ಬೇಡಿಕೆ ಈಗಿನಿಂದಲ್ಲೇ ಶುರುವಾಗಿದೆ. ಆದ್ರೆ ರಾಜ್ಯ ಸರ್ಕಾರ ದೀಪಾವಳಿ  ಹಬ್ಬಕ್ಕೆ ಹಸಿರು ಪಟಾಕಿ ಮಾತ್ರ ಬಳಕೆ ಮಾಡಬೇಕು. ಹಸಿರು ಪಟಾಕಿ ಬಿಟ್ಟು ಬೇರೆ ಪಟಾಕಿ ಮಾರಾಟ ಮಾಡಿದರೆ ಅಂತಹ ಅಂಗಡಿ ಲೈಸೆನ್ಸ್ ಕ್ಯಾನ್ಸಲ್ ಮಾಡುವುದಾಗಿ ಎಚ್ಚರಿಕೆ ನೀಡಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಈಶ್ವರ್ ಖಂಡ್ರೆ , ದೀಪಾವಳಿಯಲ್ಲಿ ಹಸಿರು ಪಟಾಕಿ ಮಾತ್ರ ಹಚ್ಚಬೇಕು. ಈ ಸಂಬಂಧ ಸುಪ್ರೀಂ ಕೋರ್ಟ್ ಆದೇಶ ಇದೆ. ಸುಪ್ರೀಂ ಕೋರ್ಟ್ ಆದೇಶ ಇದ್ದರೂ, ಭಾರ ಇರುವ, ಲೋಹ ಭರಿತ ಪಟಾಕಿ ಬಳಕೆ ಆಗುತ್ತಿದೆ. ಅಧಿಕಾರಿಗಳಿಗೆ ಸೂಚನೆ ಕೊಡುತ್ತಿದ್ದೇನೆ. ಯಾವುದೇ ಹಸಿರು ಪಟಾಕಿ ಬಿಟ್ಟು ಬೇರೆಯದಕ್ಕೆ ಅವಕಾಶ ಕೊಡಬಾರದು. ಮಳಿಗೆಗಳಿಗೆ ಹೋಗಿ ಪರಿಶೀಲನೆ ಮಾಡಬೇಕು. ಪರಿಸರ ಸ್ನೇಹಿ ಪಟಾಕಿ ಮಾಡುತ್ತೇವೆ ಅಂತ ಮುಚ್ಚಿಳಿಕೆ ಬರೆದು ಕೊಟ್ಟಿದ್ದಾರೆ. ಯಾರಾದರೂ ನಿಯಮ ಉಲ್ಲಂಘನೆ ಮಾಡಿ ಪಟಾಕಿ ಮಾರಿದರೆ ಅವರ ಲೈಸೆನ್ಸ್ ರದ್ದು ಮಾಡಲು ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಲಾಗಿದೆ ಎಂದರು.

ಮಾಲಿನ್ಯ ನಿಯಂತ್ರಣ ಮಂಡಳಿಯವರು ಒಟ್ಟಾಗಿ ಸರ್ಕಾರದ ಎಲ್ಲಾ ನಿಯಮಗಳನ್ನು ಪಾಲಿಸಲು ಮನವಿ ಮಾಡುತ್ತೇನೆ. ಅಧಿಕಾರಿಗಳು ಪರಿಸರ, ಪ್ರಕೃತಿಯನ್ನ ಕಟ್ಟುನಿಟ್ಟಾಗಿ ಸಂರಕ್ಷಣೆ ಮಾಡಬೇಕು. ಆಗ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣ, ಪರಿಸರ ಕೊಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

Shwetha M