ನಿಧಿ ಜೊತೆ ಕರ್ಣನ ಮದುವೆ ನಡೆಯಲ್ವಾ? – ವಾರ ಪೂರ್ತಿ ಪ್ರಸಾರವಾಗಲಿದೆ ಮದುವೆ ಸಂಭ್ರಮ

ಕರ್ಣ ಸೀರಿಯಲ್ನಲ್ಲಿ ಅತಿ ದೊಡ್ಡ ತಿರುವು ಸಧ್ಯದಲ್ಲೇ ಪ್ರಸಾರವಾಗಲಿದೆ. ಕರ್ಣ ಮದುವೆಯಾಗುವ ಹುಡುಗಿ ನಿತ್ಯಾ ಇಲ್ಲ ನಿಧಿ ಎಂದು ಇಷ್ಟು ದಿನ ತಲೆಕೆಡಿಸಿಕೊಂಡಿದ್ದ ವೀಕ್ಷಕರಿಗೆ ಈ ರಹಸ್ಯ ಗೊತ್ತಾಗುವ ಸಮಯ ಬಂದಿದೆ.
ಇದನ್ನೂ ಓದಿ: ಧ್ರುವ ಸರ್ಜಾ ಹುಟ್ಟುಹಬ್ಬಕ್ಕೆ ಕೆಡಿ ಪೋಸ್ಟರ್ ರಿಲೀಸ್ – ರಗಡ್ ಲುಕ್ನಲ್ಲಿ ಕಾಣಿಸಿಕೊಂಡ ಆ್ಯಕ್ಷನ್ ಪ್ರಿನ್ಸ್
ಕರ್ಣ ಧಾರಾವಾಹಿಯಲ್ಲಿ ಒಂದೊಂದೇ ಸತ್ಯ ಬಯಲಾಗುತ್ತಿದೆ. ಕರ್ಣನ ತಂದೆ ರಮೇಶ್ನ ಅಸಲಿ ಬಣ್ಣ ಬಯಲಾಗಿದೆ. ಮೊದಲು ಒಳ್ಳೆಯವನಾಗಿ ನಾಟಕವಾಡಿದ ರಮೇಶ್, ಈಗ ಕರ್ಣನಿಗೆ ಮೋಸ ಮಾಡಲು ಮುಂದಾಗಿದ್ದಾನೆ. ನಿಧಿ ಜೊತೆ ಮದುವೆ ಮಾಡಿಸುವುದಾಗಿ ಹೇಳಿರುವ ತಂದೆ ರಮೇಶ್, ನಿತ್ಯಾ ಜೊತೆ ಮದುವೆಗೆ ಒಳಗೊಳಗೆ ತಯಾರಿ ಮಾಡಿದ್ದಾನೆ. ಈ ಹಿಂದಿನ ಎಪಿಸೋಡ್ಗಳಲ್ಲಿ ಕರ್ಣನ ತಂದೆ ರಮೇಶ್ ತುಂಬಾನೇ ಒಳ್ಳೆಯವನಾಗಿ ಬದಲಾಗಿದ್ದ. ಈಗ ಮತ್ತದೇ ದ್ವೇಷ ಕಾರುವ ತಂದೆಯಾಗಿ ಬದಲಾಗಿದ್ದಾನೆ.
ಇಷ್ಟು ದಿನ ಬಣ್ಣ ಹಾಕಿಕೊಂಡು ಓಡಾಡುತ್ತಿದ್ದ ರಮೇಶ್ ಅಸಲಿ ಬಣ್ಣ ಬಯಲಾಗಿದೆ. ಈ ಟ್ವಿಸ್ಟ್ನ ಯಾರೂ ಕೂಡ ಊಹಿಸಿರಲಿಲ್ಲ. ಮೊದಲು ಕೆಟ್ಟವನಾಗಿದ್ದ ಆತ, ನಂತರ ಒಳ್ಳೆಯವನಾಗಿ ಕಾಣಿಸಿಕೊಂಡಿದ್ದ. ಈ ವಿಚಾರ ಕರ್ಣನಿಗೆ ಸಾಕಷ್ಟು ಖುಷಿ ನೀಡಿತ್ತು. ನಿತ್ಯಾ ಮದುವೆ ತನ್ನದೇ ಮನೆಯಲ್ಲಿ ಆಗುತ್ತದೆ ಎಂದಾಗ ಆತ ನೋ ಎಂದು ಹೇಳಲೇ ಇಲ್ಲ. ಈಗ ಕರ್ಣನಿಗೆ ಆತ ಖೆಡ್ಡ ತೋಡಿದ್ದಾನೆ.
ಕರ್ಣ ಧಾರಾವಾಹಿಯಲ್ಲಿ ನಿಧಿ ಹಾಗೂ ಕರ್ಣ ಪ್ರೀತಿ ಮಾಡುತ್ತಿದ್ದಾರೆ. ಈ ವಿಚಾರ ರಮೇಶ್ಗೂ ತಿಳಿದಿದೆ. ಇಬ್ಬರ ಮದುವೆಯನ್ನು ನಾನೇ ಮಾಡಿಸುತ್ತೇನೆ ಎಂದು ಆತ ಪ್ರಾಮಿಸ್ ಕೂಡ ಮಾಡಿದ್ದ. ಆದರೆ, ಈಗ ಆತ ಕರ್ಣನಿಗೆ ಮೋಸ ಮಾಡಲು ಮುಂದಾಗಿದ್ದಾನೆ. ಮಗ ಸಂಜಯ್ ಬಳಿ ಈ ವಿಚಾರವನ್ನು ರಮೇಶ್ ರಿವೀಲ್ ಮಾಡಿದ್ದಾನೆ. ಇದನ್ನು ಕರ್ಣನ ತಾಯಿ ಕದ್ದು ಕೇಳಿದ್ದಾಳೆ. ಕರ್ಣನ ಬಳಿ ಈ ವಿಚಾರವನ್ನು ಅವಳು ಹೇಳಿಕೊಂಡಿದ್ದಾಳೆ. ಈ ಮೊದಲು ರಿಲೀಸ್ ಆಗಿರುವ ಪ್ರೋಮೋದಲ್ಲಿ ಕರ್ಣ ಹಾಗೂ ನಿತ್ಯಾ ಮದುವೆ ನಡೆಯುವಂತೆ ತೋರಿಸಲಾಗಿದೆ. ಈ ವಿಚಾರ ಅನೇಕ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಈ ತಿರುವನ್ನು ಯಾರೆಂದರೆ ಯಾರೂ ನಿರೀಕ್ಷೆ ಮಾಡಿರಲಿಲ್ಲ. ಮುಂದೆ ಧಾರಾವಾಹಿ ಯಾವ ರೀತಿಯಲ್ಲಿ ಸಾಗುತ್ತದೆ ಎಂಬ ಕುತೂಹಲ ಮೂಡಿದೆ. ನಿತ್ಯಾ ಹಾಗೂ ನಿಧಿ ಇಬ್ಬರೂ ಕರ್ಣ ಮದುವೆ ಆಗಬಹುದೇ ಎನ್ನುವ ಪ್ರಶ್ನೆ ಕೂಡ ಮೂಡುವಂತೆ ಆಗಿದೆ. ಈ ವಾರ ಪೂರ್ತಿ ‘ಕರ್ಣ’ ಧಾರಾವಾಹಿಯಲ್ಲಿ ಮದುವೆ ಸಂಭ್ರಮ ನಡೆಯಲಿದೆ.

ನೋಡಿರಿ

