ರೋಹಿತ್ ಔಟ್.. ಗಿಲ್ ODI ಕ್ಯಾಪ್ಟನ್ – RO-KO ಯುಗಾಂತ್ಯಕ್ಕೆ ಮುನ್ನುಡಿನಾ?
AUS ಸರಣಿಯೇ ಹೇಳುತ್ತಾ ಭವಿಷ್ಯ?

ಟೀಂ ಇಂಡಿಯಾ ಫ್ಯಾನ್ಸ್ ಯಾವುದು ಆಗ್ಬಾರ್ದು ಅನ್ಕೊಂಡಿದ್ರೋ ಅದೇ ಆಗಿದೆ. ಆಸ್ಟ್ರೇಲಿಯಾ ವಿರುದ್ಧದ ಟಿ-20 ಹಾಗೇ ಏಕದಿನ ಸರಣಿಗೆ ಟೀಂ ಅನೌನ್ಸ್ ಆಗಿದ್ದು ಮೇಜರ್ ಸರ್ಜರಿ ಮಾಡ್ಲಾಗಿದೆ. ರೋಹಿತ್ ಶರ್ಮಾರನ್ನ ಏಕದಿನ ಮಾದರಿ ಕ್ಯಾಪ್ಟನ್ಸಿಯಿಂದ ಕೆಳಗಿಳಿಸಿ ಶುಭ್ಮನ್ ಗಿಲ್ಗೆ ಕ್ಯಾಪ್ಟನ್ ಪಟ್ಟ ಕಟ್ಟಲಾಗಿದೆ. ಸೋ ಅಲ್ಲಿಗೆ ಗಿಲ್ರನ್ನ ಆಲ್ ಫಾರ್ಮೆಟ್ ಕ್ಯಾಪ್ಟನ್ ಮಾಡೋಕೆ ವೇದಿಕೆ ಸಿದ್ಧವಾಗ್ತಿದೆ. ಅಟ್ ದಿ ಸೇಮ್ ಟೈಂ ರೋಹಿತ್ ಮತ್ತು ಕೊಹ್ಲಿ ಯುಗಾಂತ್ಯಕ್ಕೂ ಮುಹೂರ್ತ ಫಿಕ್ಸ್ ಆದಂತಿದೆ.
ಇದನ್ನೂ ಓದಿ : ಟೀಮ್ ಇಂಡಿಯಾ ಏಕದಿನ ತಂಡಕ್ಕೆ ಗಿಲ್ ಕ್ಯಾಪ್ಟನ್ – ರೋಹಿತ್ ಶರ್ಮಾ ಇದ್ದರೂ ನಾಯಕನ ಸ್ಥಾನವಿಲ್ಲ..!
ವೆಸ್ಟ್ ಇಂಡೀಸ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿ ಬೆನ್ನಲ್ಲೇ ಟೀಂ ಇಂಡಿಯಾ ಆಟಗಾರರು ಆಸ್ಟ್ರೇಲಿಯಾಗೆ ಹಾರಲಿದ್ದಾರೆ. ಮೂರು ಏಕದಿನ ಮತ್ತು ಐದು ಟಿ20ಐ ಪಂದ್ಯಗಳಿಗೆ ಶೆಡ್ಯೂಲ್ ಫಿಕ್ಸ್ ಆಗಿದೆ. ಇದೀಗ ಈ ಎರಡೂ ಸರಣಿಗಳಿಗೆ ಬಿಸಿಸಿಐ ಪ್ರತ್ಯೇಕ ತಂಡಗಳನ್ನ ಘೋಷಣೆ ಮಾಡಿದೆ. ಇಂಟ್ರೆಸ್ಟಿಂಗ್ ಅಂದ್ರೆ ಭಾರತಕ್ಕೆ ಎರಡು ಐಸಿಸಿ ಕಪ್ಗಳನ್ನ ಗೆಲ್ಲಿಸಿಕೊಟ್ಟ ಕ್ಯಾಪ್ಟನ್ ರೋಹಿತ್ ಶರ್ಮಾಗೆ ಬಿಸಿಸಿಐ ಬಿಗ್ಶಾಕ್ ನೀಡಿದೆ. ಶುಭಮನ್ ಗಿಲ್ ಅವರನ್ನು ಏಕದಿನ ತಂಡದ ನಾಯಕನನ್ನಾಗಿ ನೇಮಿಸಿದೆ.
ರೋಹಿತ್ ನಾಯಕತ್ವ ಯುಗಾಂತ್ಯ.. ಗಿಲ್ ಗೆ ಪಟ್ಟಾಭಿಷೇಕ!
ಶುಭ್ಮನ್ ಗಿಲ್ರನ್ನ ಮೊದ್ಲಿಂದಲೂ ಭಾರತದ ಪ್ರಿನ್ಸ್ ಅಂತಾನೇ ಬಿಂಬಿಸಲಾಗ್ತಿತ್ತು. ಇದೀಗ ಬಿಸಿಸಿಐ ಅದನ್ನ ಪ್ರೂವ್ ಮಾಡ್ಕೊಂಡು ಹೊರಟಿದೆ. 26 ವರ್ಷದ ಶುಭಮನ್ ಗಿಲ್ ಗೆ ಏಕದಿನ ತಂಡದ ನಾಯಕನ ಹೊಣೆಯನ್ನೂ ನೀಡಲಾಗ್ತಿದೆ. ಇದಕ್ಕೂ ಮುನ್ನ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಗಿಲ್ ನಾಯಕನಾಗಿದ್ರು. ಇದೀಗ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೂ ಮುನ್ನ ಗಿಲ್ಗೆ ಪಟ್ಟಾಭಿಷೇಕವಾಗಿದೆ. ಹಾಗೇ ಟಿ-20ಐ ಫಾರ್ಮೆಟ್ನಲ್ಲಿ ವೈಸ್ ಕ್ಯಾಪ್ಟನ್ಸಿ ನೀಡಲಾಗಿದೆ.
ಭಾರತ ಏಕದಿನ ತಂಡ!
ಶುಭ್ ಮನ್ ಗಿಲ್
ರೋಹಿತ್ ಶರ್ಮಾ
ವಿರಾಟ್ ಕೊಹ್ಲಿ
ಶ್ರೇಯಸ್ ಅಯ್ಯರ್
ಅಕ್ಷರ್ ಪಟೇಲ್
ಕೆಎಲ್ ರಾಹುಲ್
ನಿತೀಶ್ ಕುಮಾರ್ ರೆಡ್ಡಿ
ವಾಷಿಂಗ್ಟನ್ ಸುಂದರ್
ಕುಲ್ದೀಪ್ ಯಾದವ್
ಹರ್ಷಿತ್ ರಾಣಾ
ಮೊಹಮ್ಮದ್ ಸಿರಾಜ್
ಅರ್ಷದೀಪ್ ಸಿಂಗ್
ಪ್ರಸಿದ್ಧ್ ಕೃಷ್ಣ
ಧ್ರುವ್ ಜುರೆಲ್
ಯಶಸ್ವಿ ಜೈಸ್ವಾಲ್
ಹೀಗೆ ತಂಡದಲ್ಲಿ 15 ಆಟಗಾರರಿಗೆ ಅವಕಾಶ ನೀಡಲಾಗಿದೆ. ಜಸ್ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡಲಾಗಿದ್ದು, ಮೊಹಮ್ಮದ್ ಸಿರಾಜ್ ವೇಗದ ಬೌಲಿಂಗ್ ದಾಳಿಯ ಮುಂಚೂಣಿ ವಹಿಸಲಿದ್ದಾರೆ. ಹಾಗೇ ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಮೊದಲ ಆದ್ಯತೆಯ ವಿಕೆಟ್ ಕೀಪರ್ ಆಗಿರ್ತಾರೆ. ಸೋ ಈ ಟೀಮ್ನೊಂದಿಗೆ ಏಕದಿನ ಕ್ರಿಕೆಟ್ನಲ್ಲಿ ರೋಹಿತ್ ಶರ್ಮಾ ಅವರ ನಾಯಕತ್ವದ ಯುಗಾಂತ್ಯವಾದಂತಾಗಿದೆ. ಸೋ ಅಲ್ಲಿಗೆ ಅಕ್ಟೋಬರ್ 19 ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಟಗಾರರಾಗಿ ಮೈದಾನಕ್ಕಿಳಿಯಲಿದ್ದಾರೆ. ಆದ್ರೆ ಈ ಇಬ್ಬರು ಇನ್ನೆಷ್ಟು ದಿನ ಏಕದಿನ ಕ್ರಿಕೆಟ್ನಲ್ಲಿ ಮುಂದುವರೆಯಲಿದ್ದಾರೆ ಎಂಬುದೇ ಈಗ ಪ್ರಶ್ನೆ. ಇಬ್ಬರು ಕೂಡ 2027ರ ಏಕದಿನ ವಿಶ್ವಕಪ್ನಲ್ಲಿ ಆಡ್ಬೇಕು ಅನ್ನೋ ಆಸೆಯಲ್ಲಿದ್ದಾರೆ. ಬಟ್ ಬಿಸಿಸಿಐ ನಡೆ ನೋಡ್ತಿದ್ರೆ ಶೀಘ್ರದಲ್ಲೇ ಹಿರಿಯ ಆಟಗಾರರನ್ನ ಕೈಬಿಡೋ ಎಲ್ಲಾ ಸಾಧ್ಯತೆಗಳೂ ಇದೆ. ಸೋ ಏಕದಿನ ತಂಡದಲ್ಲಿ ಮೇಜರ್ ಸರ್ಜರಿಗಳಾಗಿದ್ರೆ ಟಿ-20ಐ ಟೀಂನಲ್ಲಿ ಹೆಚ್ಚಿನ ಬದಲಾವಣೆಗಳೇನು ಆಗಿಲ್ಲ.
ಟಿ-20ಐ ತಂಡಕ್ಕೆ ಸೂರ್ಯ ಕ್ಯಾಪ್ಟನ್!
ಸೂರ್ಯಕುಮಾರ್ ಯಾದವ್
ಶುಭ್ ಮನ್ ಗಿಲ್
ಅಭಿಷೇಕ್ ಶರ್ಮಾ
ತಿಲಕ್ ವರ್ಮಾ
ನಿತೀಶ್ ಕುಮಾರ್ ರೆಡ್ಡಿ
ಶಿವಂ ದುಬೆ
ಅಕ್ಷರ್ ಪಟೇಲ್
ಜಿತೇಶ್ ಶರ್ಮಾ
ಸಂಜು ಸ್ಯಾಮ್ಸನ್
ವರುಣ್ ಚಕ್ರವರ್ತಿ
ಜಸ್ಪ್ರೀತ್ ಬುಮ್ರಾ
ಅರ್ಶದೀಪ್ ಸಿಂಗ್
ಕುಲ್ದೀಪ್ ಯಾದವ್
ಹರ್ಷಿತ್ ರಾಣಾ
ರಿಂಕು ಸಿಂಗ್
ವಾಷಿಂಗ್ಟನ್ ಸುಂದರ್
ಏಷ್ಯಾಕಪ್ಗೆ ಸೆಲೆಕ್ಟ್ ಆಗಿದ್ದ ಬಹುತೇಕ ಆಟಗಾರರೇ ಇಲ್ಲೂ ಇದ್ದಾರೆ. ಬಟ್ ಹಾರ್ದಿಕ್ ಪಾಂಡ್ಯಗೆ ಇಂಜುರಿ ಕಾರಣದಿಂದಾಗಿ ಆಸೀಸ್ ಸರಣಿಗೆ ರೆಸ್ಟ್ ನೀಡಲಾಗಿದೆ. ಪಾಂಡ್ಯ ಬದ್ಲಿಗೆ ನಿತೀಶ್ ಕುಮಾರ್ ರೆಡ್ಡಿ ಬಂದಿದ್ದಾರೆ. ಬಟ್ ಏಷ್ಯಾಕಪ್ಗೆ 15 ಜನರನ್ನ ಆಯ್ಕೆ ಮಾಡಲಾಗಿತ್ತು. ಈಗ ವಾಷಿಂಗ್ಟನ್ ಸುಂದರ್ಗೂ ಚಾನ್ಸ್ ನೀಡಿದ್ದು ಒಟ್ಟು 16 ಆಟಗಾರರನ್ನ ಸೆಲೆಕ್ಟ್ ಮಾಡಿದ್ದಾರೆ. ಹೀಗಾಗಿ ಅಂಥಾದ್ದೇನು ಬದಲಾವಣೆ ಇಲ್ಲ.

ನೋಡಿರಿ

