ನಾಳೆ ಇಂಡೋ-ಪಾಕ್ WAR – ಸೇಡು ತೀರಿಸಿಕೊಳ್ತಾರಾ ಸಿಂಹಿಣಿಯರು?

ನಾಳೆ ಇಂಡೋ-ಪಾಕ್ WAR – ಸೇಡು ತೀರಿಸಿಕೊಳ್ತಾರಾ ಸಿಂಹಿಣಿಯರು?

ಭಾರತ ಮತ್ತು ಪಾಕ್ ನಡುವಿನ ಫೈಟ್ ಅಂತಾ ಬಂದಾಗ ಅಲ್ಲಿ ಭಾರತವೇ ಬಾಸ್. ಅದು ಆನ್ ಫೀಲ್ಡ್ ಆದ್ರೂ ಅಷ್ಟೇ. ಆಫ್ ದಿ ಫೀಲ್ಡ್ ಆದ್ರೂ ಅಷ್ಟೇ. ಈಗ ಆಲ್ರೆಡಿ ಏಷ್ಯಾಕಪ್​ನಲ್ಲಿ ಆಪರೇಷನ್ ಸಕ್ಸಸ್ ಆಗಿದ್ದು ಈಗ ವಿಶ್ವಕಪ್​ನಲ್ಲೂ ಅದನ್ನ ಸಾಧಿಸಿ ತೋರಿಸೋ ಟೈಂ ಬಂದಿದೆ. ಇಷ್ಟು ದಿನ ಜಸ್ಟ್ ಎದುರಾಳಿ ಟೀಂ ಅಂತಾ ಭಾರತದ ಆಟಗಾರ್ತಿಯರು ಕಣಕ್ಕಿಳೀತಿದ್ರು. ಬಟ್ ದಿಸ್ ಟೈಂ ಸೇಡಿನೊಂದಿಗೆ ಕಣಕ್ಕಿಳಿಯಲಿದ್ದಾರೆ. ಒನ್ ಮೋರ್ ಥಿಂಗ್ ಈ ಪಂದ್ಯದಲ್ಲೂ ಭಾರತೀಯರು ಪಾಕಿಸ್ತಾನಿಗಳ ಕೈಕುಲುಕೋದಿಲ್ಲ.

ಇದನ್ನೂ ಓದಿ : 3211 ದಿನಗಳ ಬಳಿಕ ಕೆಎಲ್ ರಾಹುಲ್ ಶತಕ – ಬೆರಳು ಚೀಪುತ್ತಾ ಮಗಳಿಗೆ ಶತಕ ಅರ್ಪಿಸಿದ ಕನ್ನಡಿಗ

ಗೆದ್ದಿರುವ ಭಾರತ.. ಸೋತಿರುವ ಪಾಕಿಸ್ತಾನ!

ಸೆಪ್ಟೆಂಬರ್ 30ರಿಂದ ಮಹಿಳಾ ಏಕದಿನ ವಿಶ್ವಕಪ್‌ ಆರಂಭವಾಗಿದ್ದು ಟೋಟಲ್ ಆಗಿ 8 ತಂಡಗಳು ಭಾಗವಹಿಸಿವೆ. ಎಲ್ಲಾ ತಂಡಗಳು ಒಂದೊಂದು ಪಂದ್ಯವನ್ನ ಆಡಿವೆ. ಭಾರತ ಈಗಾಗ್ಲೇ ಶ್ರೀಲಂಕಾ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಆದ್ರೆ ಪಾಕಿಸ್ತಾನ ತಂಡ ಬಾಂಗ್ಲಾದೇಶದ ವಿರುದ್ಧ ಹೀನಾಯ ಸೋಲು ಕಂಡಿದ್ದಾರೆ. ಶ್ರೀಲಂಕಾ ತಂಡವನ್ನು 59 ರನ್‌ಗಳಿಂದ ಮಣಿಸಿರು ಟೀಮ್ ಇಂಡಿಯಾ ಎರಡನೇ ಗೆಲುವಿನ ಕನಸು ಕಾಣುತ್ತಿದೆ. ಇನ್ನು ಪಾಕ್‌ 7 ವಿಕೆಟ್‌ಗಳಿಂದ ಬಾಂಗ್ಲಾ ವಿರುದ್ಧ ಸೋಲು ಕಂಡಿದೆ. ಇದೀಗ ಟೂರ್ನಿಯಲ್ಲಿ ಎರಡನೇ ಪಂದ್ಯಕ್ಕೆ ರೆಡಿಯಾಗಿರೋ ಉಭಯ ತಂಡಗಳ ಆಟಗಾರ್ತಿಯರು ಅಕ್ಟೋಬರ್ 5 ಅಂದ್ರೆ ಭಾನುವಾರ ಮುಖಾಮುಖಿಯಾಗಲಿದ್ದಾರೆ. ಕೊಲೊಂಬೋದಲ್ಲಿ ಈ ಮ್ಯಾಚ್ ನಡೆಯಲಿದ್ದು ಭಾರತವೇ ಗೆಲ್ಲುವಂಥ ಫೇವರೆಟ್ ಟೀಂ ಆಗಿದೆ. ಯಾಕಂದ್ರೆ ಏಕದಿನ ಮಾದರಿಯಲ್ಲಿ ಉಭಯ ತಂಡಗಳು ಟೋಟಲ್ಲಾಗಿ 11 ಸಲ ಎದುರು ಬದುರಾಗಿದ್ದು ಭಾರತವೇ ಹನ್ನೊಂದೂ ಮ್ಯಾಚ್​ಗಳನ್ನೂ ಗೆದ್ದಿದೆ. ಸೋ ಈ ಸಲ ಕೂಡ ಭಾರತವೇ ಗೆಲ್ಲೋದು ಅನ್ನೋದನ್ನ ಅಂಕಿ ಅಂಶಗಳೇ ಹೇಳ್ತಿವೆ. ಇಲ್ಲಿ ಭಾರತಕ್ಕೆ ಮ್ಯಾಚ್ ಗೆಲ್ಲೋದಕ್ಕಿಂಯ ಪಾಕಿಸ್ತಾನಿ ಆಟಗಾರ್ತಿಯರಿಗೆ ಚಳಿ ಬಿಡಿಸ್ಬೇಕಿದೆ. ಭಾರತವನ್ನ ಅಣಕಿಸಿದ್ದಕ್ಕೆ ಸೇಡು ತೀರಿಸಿಕೊಳ್ಳೋಕೆ ನಮ್ಮ ಸಿಂಹಿಣಿಯರು ಶಪಥ ಮಾಡಿದ್ದಾರೆ.

ರೌಫ್ ರೀತಿ ರಫೇಲ್ ಕ್ರಾಶ್ ಅಣಕ ಮಾಡಿದ್ದ ಪಾಕ್ ಆಟಗಾರ್ತಿಯರು!

ಇಷ್ಟು ದಿನ ಪಾಕಿಸ್ತಾನವನ್ನ ಒಂದು ಟೀಂ ಅಂತಾನೇ ನಮ್ಮ ಆಟಗಾರ್ತಿಯರು ಟ್ರೀಟ್ ಮಾಡ್ತಿದ್ರು. ಬಟ್ ಈ ಸಲ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ಅದಕ್ಕೆ ಕಾರಣವೂ ಇದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾಕಪ್ ಪಂದ್ಯದ ವೇಳೆ ಪಾಕಿಸ್ತಾನದ ಆಟಗಾರ ಹ್ಯಾರಿಸ್ ರೌಫ್ ಭಾರತದ ಆರು ರಫೇಲ್ ಯುದ್ಧ ವಿಮಾನಗಳನ್ನ ಪತನ ಮಾಡಿದ್ದೇವೆ ಅಂತಾ ಸಹ್ನೆ ಮಾಡಿದ್ದ. ಪಾಕಿಸ್ತಾನದ ಮಹಿಳಾ ಆಟಗಾರ್ತಿಯರು ಕೂಡ 6-0 ಅನ್ನೋ ರೀತಿಯಲ್ಲಿ ಸಿಂಬಲ್ ತೋರಿಸಿ ಗಾಂಚಾಲಿ ತೋರಿಸಿದ್ರು. ವಿಂಡೀಸ್ ವಿರುದ್ಧದ ಪಂದ್ಯದ ವೇಳೆ ಅಣಕಿಸಿದ್ರು. ಸೋ ಅವ್ರ ಕಿರಿಕ್​ಗಳಿಗೆ ಮ್ಯಾಚ್ ಗೆಲ್ಲೋ ಮೂಲಕವೇ ಉತ್ತರ ಕೊಡ್ಬೇಕು ಅಂತಾ ನಮ್ಮ ಸಿಂಹಿಣಿಯರು ಪಣ ತೊಟ್ಟಿದ್ದಾರೆ. ಹಾಗೇ ಐಸಿಸಿ ವಿಶ್ವಕಪ್​ನಲ್ಲೂ ಕೂಡ ಪಾಕ್ ಆಟಗಾರ್ತಿಯರ ಜೊತೆ ಕೈಲುಕದೆ ಇರಲು ನಿರ್ಧಾರ ಮಾಡಿದ್ದಾರೆ. ನೋ ಹ್ಯಾಂಡ್​ಶೇಕ್ ಬಗ್ಗೆ ಮಾತ್ನಾಡಿದ್ದ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಕೈಕುಲುಕೋ ಬಗ್ಗೆ ಯಾವುದನ್ನೂ ಮೊದಲೇ ಹೇಳೋಕೆ ಆಗಲ್ಲ ಎಂದಿದ್ರು.

Shantha Kumari