ಹೊಸ ವರ್ಷಾಚರಣೆಗೆ ನಮ್ಮ ಮೆಟ್ರೋ ಸಂಚಾರ ವಿಸ್ತರಣೆ – ಡಿ. 31 ರಂದು ರಾತ್ರಿ 3 ಗಂಟೆವರೆಗೆ ಮೆಟ್ರೋ ಸಂಚಾರ
ಸಿಲಿಕಾನ್ ಸಿಟಿ ಪೊಲೀಸರಿಂದ ಹೊಸವರ್ಷಾಚರಣೆಗೆ ಬಿಗಿ ಬಂದೋಬಸ್ತ್

ಹೊಸ ವರ್ಷಾಚರಣೆಗೆ ನಮ್ಮ ಮೆಟ್ರೋ ಸಂಚಾರ ವಿಸ್ತರಣೆ – ಡಿ. 31 ರಂದು ರಾತ್ರಿ 3 ಗಂಟೆವರೆಗೆ ಮೆಟ್ರೋ ಸಂಚಾರಸಿಲಿಕಾನ್ ಸಿಟಿ ಪೊಲೀಸರಿಂದ ಹೊಸವರ್ಷಾಚರಣೆಗೆ ಬಿಗಿ ಬಂದೋಬಸ್ತ್

ಬೆಂಗಳೂರು: ರಾಜಧಾನಿ ಬೆಂಗಳೂರು 2023ನ್ನು ವೆಲ್‌ಕಮ್ ಮಾಡಲು ಸಕಲ ರೀತಿಯಲ್ಲಿ ಸಜ್ಜಾಗಿದೆ. ನ್ಯೂ ಇಯರ್‌ಗಾಗಿ ನಮ್ಮ ಮೆಟ್ರೋ ಸಂಚಾರ ವಿಸ್ತರಣೆ ಮಾಡಿದೆ. ಜನವರಿ 1ರ ನಸುಕಿನ ಜಾವ 2 ಗಂಟೆವರೆಗೂ ನಮ್ಮ ಮೆಟ್ರೋ ಸಂಚಾರ ಮಾಡಲಿದೆ. ನಸುಕಿನ ಜಾವ 2 ಗಂಟೆಗೆ ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ ನಾಲ್ಕು ದಿಕ್ಕಿಗೂ ಮೆಟ್ರೋ ಸಂಚಾರ ಹೊರಡಲಿದೆ ಎಂದು ಬಿಎಂಆರ್ ಸಿಎಲ್ ಎಂ.ಡಿ ಅಂಜುಂ ಪರ್ವೇಜ್ ಮಾಹಿತಿ ನೀಡಿದ್ದಾರೆ. ಡಿಸೆಂಬರ್ 31 ರಂದು ರಾತ್ರಿ 3 ಗಂಟೆವರೆಗೆ ಮೆಟ್ರೋ ಸಂಚಾರ ಅವಧಿಯನ್ನ ವಿಸ್ತರಿಸಲಾಗಿದೆ. ಜನವರಿ 1ರಂದು ಎಂದಿನಂತೆ 5.30ಕ್ಕೆ ಮೆಟ್ರೋ ಸಂಚಾರ ಆರಂಭವಾಗಲಿದೆ. ಎಂ.ಜಿ ರೋಡ್, ಬೈಯಪ್ಪನಹಳ್ಳಿ ಕಡೆಯಿಂದ ಸಂಚಾರ ಮಾಡುವ ಪ್ರಯಾಣಿಕರು ಮೆಟ್ರೋದಲ್ಲಿ ಸಂಚಾರ ಮಾಡಬಹುದಾಗಿದೆ.

ಇದನ್ನೂ ಓದಿ:  ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಲಸಿಕೆ ಸಿಗುತ್ತಿಲ್ಲ – ಇದೇನಾ ಸರ್ಕಾರದ ಮುಂಜಾಗ್ರತಾ ಕ್ರಮ..?

ಇನ್ನು ಸಿಲಿಕಾನ್ ಸಿಟಿ ಪೊಲೀಸರು ಕೂಡಾ ಹೊಸವರ್ಷಾಚರಣೆಗೆ ಬಿಗಿ ಬಂದೋಬಸ್ತ್ ಏರ್ಪಡಿಸಲಿದ್ದಾರೆ. ಇಯರ್ ಎಂಡ್ ಜೊತೆಗೆ ವೀಕೆಂಡ್ ಬಂದಿರುವುದರಿಂದ ಸಿಲಿಕಾನ್ ಸಿಟಿ ಮಂದಿ ಭರ್ಜರಿಯಾಗಿಯೇ ಪಾರ್ಟಿ ಮಾಡಲಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ನ್ಯೂಇಯರ್ ಸೆಲೆಬ್ರೇಷನ್ ಜೋರಾಗಿಯೇ ಇದೆ. ಜೊತೆಗೆ ಬೆಂಗಳೂರಿನ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಹೈಅಲರ್ಟ್ ಆಗಿರಲು ಸಜ್ಜಾಗಿದ್ದಾರೆ. ಈಗಾಗಲೇ ಪಾರ್ಟಿಗಳಿರುವ ಪ್ರದೇಶಗಳನ್ನು ಗುರುತಿಸಿದ್ದು, 5,000 ಸಿಸಿಟಿವಿಗಳನ್ನು ಅಳವಡಿಸಿದ್ದಾರೆ. ಬೆಂಗಳೂರಿನಲ್ಲಿ ಪಾರ್ಟಿಗಳ ಮೇಲೆ ಹದ್ದಿನ ಕಣ್ಣಿಡಲು 20 ಡ್ರೋನ್ ಕ್ಯಾಮರಾಗಳು ಹಾರಾಡಲಿವೆ. ಒಟ್ನಲ್ಲಿ ಹೇಳುವುದಾದರೆ ಹೊಸವರ್ಷದ ಆಚರಣೆಗೆ ಎಲ್ಲಾ ರೀತಿಯ ಭದ್ರತೆ ಒದಗಿಸಲು ಪೊಲೀಸ್ ಇಲಾಖೆ ಸಜ್ಜಾಗಿದೆ.

suddiyaana