ಡಿಕೆಶಿ CM ಅಂದ್ರೆ ನೋಟಿಸ್ – ಸಿದ್ದು ಪಟ್ಟುಗೆ ಬೆದರಿತಾ ‘ಕೈ’?

ಇಲ್ಲ ಇಲ್ಲ.. ಈ ಸಲ ಮಿಸ್ಸ್ ಆಗೋದೇ ಇಲ್ಲ.. ಡಿಕೆ ಶಿವಕುಮಾರ್ ಸಿಎಂ ಆಗೇ ಆಗ್ತಾರೆ.. ಜಾಸ್ತಿ ದಿನ ಇಲ್ಲ ಇದೇ ನವೆಂಬರ್ಗೆ ಡಿಕೆಶಿ ಸಿಎಂ ಆಗ್ತಾರೆ ಅಂತ ಡಿಕೆಶಿ ಬಣ ಹೇಳಿದ್ರೆ.. ನೋ ವೇ ಚಾನ್ಸ್ ಇಲ್ಲ.. ಐದು ವರ್ಷ ಸಿದ್ದರಾಮಯ್ಯನೇ ಸಿಎಂ ಆಗಿ ಇರ್ತಾರೆ, ಯಾರಿಂದಲೂ ಸಿದ್ದರಾಮಯ್ಯ ಖರ್ಚಿ ಅಲ್ಲಾಡಿಸೋಕೆ ಆಗಲ್ಲ ಅಂತ ಸಿದ್ದು ಬಣ ಹೇಳ್ತಿದೆ.. ನೆಕ್ಟ್ ಸಿಎಂ ಡಿಕೆಶಿನಾ ಅಥವಾ ಸಿದ್ದರಾಮಯ್ಯನೇ ಕಂಟಿನ್ಯೂ ಆಗ್ತಾರಾ ಅನ್ನೋ ಕನ್ಫೂಸ್ನಲ್ಲಿ ನಮ್ಮ ಕರ್ನಾಟಕದ ಜನ ಇದ್ದಾರೆ..
ಇದೇ ನವೆಂಬರ್ನಲ್ಲಿ ಡಿಕೆಶಿ ಸಿಎಂ ಆಗ್ತಾರೆ ಅನ್ನೋ ಸುದ್ದಿ ಡಿಕೆಶಿ ಬಣದಲ್ಲೇ ಕೇಳಿ ಬರ್ತಿರೋ ಸುದ್ದಿ. ಇದೇ ನವೆಂಬರ್ನಲ್ಲಿ ಡಿಕೆಶಿ ಸಿಎಂ ಆಗ್ತಾರೆ ಅನ್ನೋದ್ದನ್ನ ಎಲ್. ಆರ್. ಶಿವರಾಮೇಗೌಡ ಅವರು ಮಾತನಾಡಿದ್ದರು. ಡಿ ಕೆ ಶಿವಕುಮಾರ್ ಅವರು ಶೀಘ್ರದಲ್ಲಿಯೇ ಮುಖ್ಯಮಂತ್ರಿಯಾಗುತ್ತಾರೆ ಎಂದು ಹೇಳಿದ್ದರು. ಇನ್ನೂ ಡಿ ಕೆ ಶಿವಕುಮಾರ್ ಆಪ್ತ ಹಾಗೂ ಕಣಿಗಲ್ ಕಾಂಗ್ರೆಸ್ ಶಾಸಕ ಡಾ. ರಂಗನಾಥ್ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ 140 ಸ್ಥಾನಗಳನ್ನು ಪಡೆದಿರುವುದರ ಹಿಂದೆ ಶಿವಕುಮಾರ್ ಅವರು ಶಕ್ತಿ ಹಾಗೂ ಶ್ರಮವಿದೆ ಎಂದು ಅನೇಕ ನಾಯಕರು ಹೇಳುತ್ತಾರೆ. ಇದನ್ನು ಪಕ್ಷದ ಹೈಕಮಾಂಡ್ ಪರಿಗಣಿಸಿ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದ್ದರು. ನವೆಂಬರ್ನಲ್ಲೇ ಡಿಕೆಶಿ ಸಿಎಂ ಆಗ್ತಾರೆ ಅನ್ನೋದ್ದನ್ನ ಹೇಳಿದ್ರು.. ಇವರ ಹೇಳಿದ ಮೇಲೆ ಸಿಎಂ ಬದಲಾವಣೆ ಚರ್ಚೆ ಸಖತ್ ಸೌಂಡ್ ಮಾಡ್ತಾ ಇದೆ. ಇದು ಸಿದ್ದು ಬಣ ಮತ್ತು ಡಿಕೆಶಿ ಬಣದ ನಡುವೆ ದೊಡ್ಡ ಚರ್ಚೆಯನ್ನ ಹುಟ್ಟು ಹಾಕಿದೆ. ಹಾಗೇ ರಾಜ್ಯದ ಜನರಲ್ಲಿ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದೆ. ಕೋಲು ಮುರಿಬಾರ್ದು ಹಾಲು ಸಾಯು ಬಾರ್ದು ಅಂತ.. ತಮ್ಮದೇ ಬಣದ ನಾಯಕರಿಗೆ ಡಿಕೆಶಿ ನೋಟಿಸ್ ಕೊಟ್ಟಿದ್ದಾರೆ. ಕುಣಿಗಲ್ ಶಾಸಕ ಡಾ. ಹೆಚ್ಡಿ ರಂಗನಾಥ್ ಹಾಗೂ ಹಿರಿಯ ನಾಯಕ ಎಲ್.ಆರ್. ಶಿವರಾಮೇಗೌಡಗೆ ಕೆಪಿಸಿಸಿ ನೋಟಿಸ್ ನೀಡಿದೆ. ಕೆಪಿಸಿಸಿ ಶಿಸ್ತುಪಾಲನಾ ಸಮೀತಿಯಿಂದ ನೋಟಿಸ್ ನೀಡಲಾಗಿದ್ದು, ಈ ನೋಟಿಸ್ ತಲುಪಿದ 7 ದಿನಗಳ ಒಳಗೆ ಉತ್ತರಿಸುವಂತೆ ಸೂಚನೆ ನೀಡಲಾಗಿದೆ. ಇದ್ದನ್ನ ನೋಡಿದ್ರೆ ಡಿಕೆಶಿ ಸಿಎಂ ಅಂದೊರಿಗೆ ನೋಟಿಸ್ ಕೊಡ್ತಾ ಇದ್ದಾರೆ ಅನ್ಸುತ್ತೆ. ಬಟ್ ಇದೆಲ್ಲಾ ಬಾಯಿ ಮುಚ್ಚಿಸೋ ತಂತ್ರ ಅನ್ನೋದ್ದನ್ನ ಬಿಡಿಸಿ ಹೇಳೋದ್ ಬೇಕಾಗಿಲ್ಲ. ಇದೇ ದೊಡ್ಡ ಮ್ಯಾಟ್ರೋ ಆಗೋದ್ ಬೇಡ.. ನಮ್ಮ ಬಣದವರ ಬಾಯಿ ಮುಚ್ಚಿಕೊಂಡು ಇರಲಿ.. ಆಗ ಅವರೇ ನನ್ನ ಸಿಎಂ ಕುರ್ಚಿ ಮೇಲೆ ಕುರಿಸಬಹುದು ಅನ್ನೋ ಪ್ಲ್ಯಾನ್ ಡಿಕೆಶಿಯದ್ದು..
ಇದನ್ನೂ ಓದಿ: ಗಿಲ್ಲಿನಟಗೆ ಮಲ್ಲಮ್ಮ ಶಾಕ್ – ಮನೆಗೆ ಕಳಿಸ್ತಾರೆಂದು ಕಾಮಿಡಿ ಸ್ಟಾರ್ ಕಣ್ಣೀರು!
ಇನ್ನೂ ಸಿಎಂ ಬದಲಾವಣೆ ಕುರಿತು ಈಗ ಚರ್ಚೆಗೆ ಬರೋಕೆ ಕಾರಣ ಕೂಡ ಉಂಟು.. ನವೆಂಬರ್ 20ಕ್ಕೆ ಕರ್ನಾಟದಲ್ಲಿ ಕಾಂಗ್ರೆಸ್ ಸರ್ಕಾರ ಬಂದು 2.5 ವರ್ಷ ಕಂಪ್ಲೀಟ್ ಆಗುತ್ತೆ.. ಹೀಗಾಗಿ ಎರಡೂವರೆ ವರ್ಷದ ನಂತ್ರ ಸಿಎಂ ಬದಲಾವಣೆ ಆಗುತ್ತೆ ಅನ್ನೋದು ಡಿಕೆಶಿ ಬಣದ ನಂಬಿಕೆ.. ಯಾಕಂದ್ರೆ ಕಾಂಗ್ರೆಸ್ ಹೈ ಕಮಾಂಡ್ ಮುಂದೆ ಡಿಕೆಶಿ ಮತ್ತು ಸಿದ್ದು ನಡುವೆ ಈ ಬಗ್ಗೆ ಏನ್ ಒಪ್ಪಂದ ಆಗಿದ್ಯೋ ಗೊತ್ತಿಲ್ಲ. ಫಸ್ಟ್ ಎರಡೂವರೆ ವರ್ಷ ಸಿದ್ದರಾಮಯ್ಯ ಸಿಎಂ, ಎರಡೂವರೆ ವರ್ಷದ ನಂತ್ರ ಡಿಕೆಶಿ ಸಿಎಂ ಅನ್ನೋ ಒಪ್ಪಂದ ಆಗಿದ್ಯೋ ಬಿಟ್ಟಿದ್ಯೋ ಗೊತ್ತಿಲ್ಲ. ಹಾಗಂತ ಹೈಕಮಾಂಡ್ ಮುಂದೆ ಒಪ್ಪಂದ ಆಗಿರೋದು ಕಾರ್ಯಾ ರೂಪಕ್ಕೆ ಬರೋದು ಬಹಳ ಕಮ್ಮಿ.. ಯಾಕಂದ್ರೆ ಆ ಸಮಯದ ಒತ್ತಡಕ್ಕೆ ಅನುಗುಣವಾಗಿ ರಾಜಕೀಯ ಒಪ್ಪಂದ ಆಗಿರುತ್ತೆ.. ಪರಿಸ್ಥಿತಿ ಚೇಂಜ್ ಆಗುತ್ತೆ.. ಯಾಕಂದ್ರೆ ರಾಜಕೀಯದಲ್ಲಿ 5 ವರ್ಷದ ನಂತ್ರ ಏನ್ ಆಗುತ್ತೆ ಅನ್ನೋದ್ದನ್ನ ಹೇಳುವುದ್ದಕ್ಕೆ ಆಗಲ್ಲ. ಅದು ಕಾಲ ಕಾಲಕ್ಕೆ ಬದಲಾವಣೆ ಆಗುತ್ತಾ ಹೋಗುತ್ತೆ. ಈ ಹಿಂದೆ ಇದೇ ರೀತಿಯಾಗಿ ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಸಿಎಂ ಸ್ಥಾನ ಬಿಟ್ಟು ಕೊಡಬೇಕು ಅನ್ನೋ ಒಪ್ಪಂದ ಆಗಿತ್ತು. ಬಟ್ ಅವರು ಬಿಟ್ಟು ಕೊಟ್ಟಿಲ್ಲ. ಹಾಗೇ ಛತ್ತೀಸ್ಗಢನಲ್ಲಿ ಭೂಪೇಶ್ ವಕೀಲ್ ಸಿಎಂ ಆಗಿದ್ದಾಗ, 2.5 ವರ್ಷದ ನಂತ್ರ ಬಿಟ್ಟು ಕೊಡುವ ಬಗ್ಗೆ ಲಿಖೀತ ಒಪ್ಪಂದವೇ ಆಗಿತ್ತು. ಆಗಲೂ ಅವರು ಬಿಟ್ಟು ಕೊಟ್ಟಿಲ್ಲ. ಹಾಗೇ ನಮ್ಮ ಕರ್ನಾಟಕದಲ್ಲೂ ಅದೇ ತರ ಆಗುತ್ತೆ. ಸಿಎಂ ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಡೋದು ಕಷ್ಟ ಅನ್ಸುತ್ತೆ..
ಯಾಕಂದ್ರೆ ಎರಡೂವರೆ ವರ್ಷ ತುಂಬಾ ಮುಂಚೆಯೇ ಸಿದ್ದರಾಮಯ್ಯ ಕೈಗೆ ಜಾತಿ ಗಣತಿ ವರದಿ ಬಂದು ಸೇರಿ ರುತ್ತೆ. ಈ ಜಾತಿ ಗಣತಿ ವರದಿ ಒಮ್ಮೆ ಕೈ ಸೇರಿದ್ರೆ, ಇಡೀ ರಾಜಕೀಯದ ಅಂಕ ಗಣಿತವನ್ನೇ ಬದಲಾವಣೆ ಆಗುತ್ತೆ. ಹೊಸ ಸಮೀಕರಣ ಹುಟ್ಟುಕೊಳ್ಳುತ್ತೆ. ಅಹಿಂದದ ಬಲದ ಅಧಿಕೃತ ಆಗುತ್ತೆ. ಕರ್ನಾಟದಲ್ಲಿ ಅಹಿಂದ ಇರೋದು ನಂಬರ್ನಲ್ಲೇ, ಅದ್ದಕ್ಕೆ ಯಾವುದೇ ಅನುಮಾನ ಇಲ್ಲ. ಬಟ್ ಜಾತಿಗಣತಿಯ ವರದಿಯಿಂದ ಮುದ್ರೆ ಬೀಳುತ್ತೆ.. ಇದ್ದನ್ನ ಇಡ್ಕೊಂಡು ಸಿದ್ದರಾಮಯ್ಯ ರಾಜಕೀಯ ತಂತ್ರವನ್ನ ಹೆಣೆಯುತ್ತಾರೆ. ರಾಜಕೀಯ ದಾಳ ಉರುಳಿಸುವುದರಲ್ಲಿ ಸಿದ್ದರಾಮಯ್ಯ ಅತ್ಯಂತ ಚತುರ. ಇವರಿಗೆ ಕರ್ನಾಟಕದ ರಾಜಕೀಯದ ಆಗೋ ಹೋಗೋಗಳ ಬಗ್ಗೆ ಚೆನ್ನಾಗಿ ಗೊತ್ತು. ಎಲ್ಲದ್ದಕ್ಕಿಂತ ಹೆಚ್ಚಾಗಿ ದೇವರಾಜ್ ಅರಸು ಅವರನ್ನ ಬಿಟ್ರೆ ಅಂತ್ಯಂತ ಸುದೀರ್ಘ ಕಾಲದ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಲಿದ್ದಾರೆ. ದೇವರಾಜ್ ಅರಸು ಅವರು 7 ವರ್ಷ 7 ತಿಂಗಳು ಸಿಎಂ ಆಗಿದ್ರು. ಅವರನ್ನ ಬಿಟ್ರೆ ಸಿದ್ದುನೇ, ಜನವರಿ ವೇಳೆಗೆ ಅರಸು ಅವರ ದಾಖಲೆಯನ್ನ ಸಿದ್ದರಾಮಯ್ಯ ಮುರಿಯುತ್ತಾರೆ. ಜನವರಿ ತನಕ ಕಾಯ ಬಹುದು. ಜನವರಿ ನಂತ್ರ ಬಜೆಟ್ ಬರುತ್ತೆ. .ಬಜೆಟ್ ಟೈಂನಲ್ಲಿ ಸಿಎಂ ಬದಲಾವಣೆ ಬೇಡ ಅಂತ ಹೇಳಬಹುದು.. ಸಿದ್ದರಾಮಯ್ಯನೇ ಕಂಟಿನ್ಯೂ ಮಾಡ್ತಾರೆ.. ಬಜೆಟ್ ಮುಗಿಯುತ್ತಿದ್ದಂತೆ ಸ್ಥಳೀಯ ಚುನಾವಣೆ ಬರುತ್ತೆ. ZP, TP ಎಲೆಕ್ಷನ್ ಬರುತ್ತೆ.. ಆಗಲೂ ಸಿಎಂ ಬದಲಾವಣೆ ಮುಂದೂಡಿಕೆ ಆಗಬಹುದ.. ಕೈಯಲ್ಲಿರೋ ಅಧಿಕಾರವನ್ನ ಬಿಟ್ಟು ಕೊಡದೇ ಇರವಂತಹ ರಣತಂತ್ರ ರೂಪಿಸುವುದು ರಾಜಕಾರಣಿಗಳಿಗೆ ಹೊಸದೇನು ಅಲ್ಲ.. ಹಾಗೇ ಸಿದ್ದರಾಮಯ್ಯ ತಮ್ಮ ಅಧಿಕಾರವನ್ನ ಬಿಟ್ಟು ಕೊಡದೇ ಇರಲು ಬೇಕಾದ ಎಲ್ಲಾ ತಂತ್ರಗಾರಿಕೆಯನ್ನ ಮಾಡ್ತಾರೆ.. ಹಾಗಂತ ಡಿಕೆಶಿ ಕೂಡ ಸುಮ್ಮನೆ ಇರಲ್ಲ.. ಡಿಕೆಶಿ ಮುಂದಿರೋ ದೊಡ್ಡ ಟಾರ್ಗೆಟ್ ಕೂಡ ಸಿಎಂ ಆಗೋದು. ಯಾಕಂದ್ರೆ ಈ ಸಲದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರೋಕೆ ಡಿಕೆ ಶಿವಕುಮಾರ್ ಅವರ ಕೂಡುಗೆ ಕೂಡ ದೊಡ್ಡದಿದೆ. ಅವರಗ ಸಂಘಟನೆ ಸಾಮರ್ಥ್ಯ, ಎಲ್ಲರನ್ನೂ ಜೊತೆಗೆ ತೆಗೆದುಕೊಂಡು ಹೋಗಿದ್ರು. ಬಿಜೆಪಿ ಸರ್ಕಾರದ ವಿರುದ್ಧದ ಕ್ಯಾಂಪೇನ್ ಯಶಸ್ಸಿಯಾಗಿ ತೆಗೆದುಕೊಂಡು ಹೋದ್ರು. ಕಳೆದ ಎಲೆಕ್ಷನ್ನಲ್ಲಿ ಡಿಕೆಶಿಗೆ ಗೊತ್ತಾಗಿರುವುದು ಏನಂದ್ರೆ, ಸಿದ್ದರಾಮಯ್ಯಗೆ ಇರೋ ಜನ ಬಲ. ವಿಶೇಷವಾಗಿ ಕರ್ನಾಟಕದ ಉತ್ತರ ಭಾಗದಲ್ಲಿ ಅಹಿಂದ ಮತಗಳು ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ವು. ಆದ್ರೂ ಡಿಕೆಶಿ ಸಿಎಂ ಆಗೇ ಆಗೋ ಕನಸು ಹೊತ್ತಿದ್ದಾರೆ. ಇಲ್ಲಿ ಡಿಕೆ ಶಿವಕುಮಾರ ಸಿಎಂ ಸ್ಥಾನವನ್ನ ಕಸಿದುಕೊಳ್ಳುವುದ್ದಕ್ಕಿಂತ ಅವರೇ ಬಿಟ್ಟು ಕೊಡಲಿ ಅನ್ನೋ ರೀತಿಯಲ್ಲಿ ಯೋಚನೆ ಮಾಡುತ್ತಿದ್ದಾರೆ. ಅದ್ದಕ್ಕೆ ಈಗ ತಮ್ಮ ಬೆಂಬಲಿಗರಿಗೆ ನೋಟಿಸ್ ಕೊಟ್ಟಿರೋದು.. ನಾನು ಹೊಡೆದಂಗೆ ಆಗಬೇಕು, ನೀನು ಅತ್ತಂಗೆ ಆಗಬೇಕು ಅನ್ನೋದು. ಈಗ ನೋಟಸ್ ಕೊಟ್ಟಿಲ್ಲ ಅಂದ್ರೆ ಕಾಂಗ್ರಸ್ನಲ್ಲಿ ಇರಿಸುಮುರಿಸು ಜೋರಾಗುತ್ತೆ.. ಸಿದ್ದು ಬಣವನ್ನ ಬಾಯಿ ಮುಚ್ಚಿಸೋಕೆ ಈ ತಂತ್ರವನ್ನ ಹೆಣದಿದ್ದಾರೆ ಅಷ್ಟೇ.. ಬಟ್ ಡಿಕೆಶಿ ಈ ಟರ್ಮ್ನಲ್ಲಿ ಸಿಎಂ ಆಗಬೇಕು ಅಂತ ಕನಸು ಹೊಂದಿದ್ದಾರೆ. ಬಟ್ ಸದ್ಯಕ್ಕಂತೂ ಅದು ಸಾಧ್ಯವಿಲ್ಲ ಅನ್ನೋ ಮಾತು ಕೂಡ ಕೇಳಿ ಬರ್ತಿದೆ.

ನೋಡಿರಿ

