ವಿಂಡೀಸ್ ವಿರುದ್ಧ ಒಂದೇ ದಿನ ಮೂವರ ಶತಕ – ರಾಹುಲ್, ಜುರೇಲ್ & ಜಡೇಜಾ ಪವರ್ ಫುಲ್ ಬ್ಯಾಟಿಂಗ್!

ವಿಂಡೀಸ್ ವಿರುದ್ಧ ಒಂದೇ ದಿನ ಮೂವರ ಶತಕ – ರಾಹುಲ್, ಜುರೇಲ್ & ಜಡೇಜಾ ಪವರ್ ಫುಲ್ ಬ್ಯಾಟಿಂಗ್!

ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಅತ್ಯದ್ಭುತ ಪ್ರದರ್ಶನ ನೀಡ್ತಿದೆ. ಮೊದಲ ದಿನದಾಟದಲ್ಲಿ ಬೌಲಿಂಗ್​ನಲ್ಲಿ ಮೊಮಹ್ಹದ್ ಸಿರಾಜ್ ಮತ್ತು ಜಸ್ಪ್ರೀತ್ ಬುಮ್ರಾ ಕೆರೆಬಿಯನ್ ಬ್ಯಾಟರ್​ಗಳ ಪೆವಿಲಿಯನ್ ಪರೇಡ್ ನಡ್ಸಿದ್ರು. ಜಸ್ಟಿನ್ ಗ್ರೀವ್ಸ್ 32 ರನ್ ಗಳಿಸಿದ್ದೇ ಇಂಡಿವಿಶ್ಯುಯಲ್ ಹೈಯೆಸ್ಟ್ ಸ್ಕೋರ್ ಆಗಿತ್ತು. ಜಸ್ಟ್ 162 ರನ್​ಗಳಿಗೆ ಆಲೌಟ್ ಆಗಿದ್ರು. ಮೊದಲ ದಿನವೇ ಜೈಸ್ವಾಲ್ ಮತ್ತು ರಾಹುಲ್ ಒಂದೊಳ್ಳೆ ಪಾಟ್ನರ್​ಶಿಪ್ ಕೊಟ್ಟಿದ್ರು. ಬಟ್ ಸೆಕೆಂಡ್ ಡೇ ಬ್ಯಾಟಿಂಗ್​ ಅಂತೂ ಅತ್ಯದ್ಭುತ.

ಇದನ್ನೂ ಓದಿ : ಮೋದಿ ನನ್ನ ಸ್ನೇಹಿತ, ಅವಮಾನಕ್ಕೆ ತಲೆ ಬಗ್ಗಿಸೋಲ್ಲ- ರಷ್ಯಾ ಅಧ್ಯಕ್ಷ ಪುಟಿನ್

ಒಂದೇ ದಿನ ರಾಹುಲ್, ಜುರೇಲ್ ಮತ್ತು ಜಡೇಜಾ ಶತಕ!

ವಿಂಡೀಸ್ ವಿರುದ್ಧ ಎರಡನೇ ದಿನದಾಟದಲ್ಲಿ ಶುಭ್​ಮನ್ ಗಿಲ್ ಮತ್ತು ಕೆಎಲ್ ರಾಹುಲ್ ಬ್ಯಾಟಿಂಗ್ ಕಂಟಿನ್ಯೂ ಮಾಡಿದ್ರು. ಬಟ್ ಶುಭ್​ಮನ್ ಗಿಲ್ 50 ರನ್​ ಗಳಿಸಿ ವಿಕೆಟ್ ಒಪ್ಪಿಸಿದ್ರು. ರಾಹುಲ್ ಮಾತ್ರ ತುಂಬಾನೇ ಪೇಷನ್ಸ್ ಇಂದ ಬ್ಯಾಟ್ ಬೀಸಿ 100 ರನ್ ಕಂಪ್ಲೀಟ್ ಮಾಡಿದ್ರು. ಆನಂತ್ರ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೇಲ್ ಬ್ಯಾಟಿಂಗ್ ಅಬ್ಬರ ಶುರು ಮಾಡಿದ್ರು. ರವೀಂದ್ರ ಜಡೇಜಾ ಜೊತೆಗೂಡಿ ಅತ್ಯದ್ಭುತ ಇನ್ನಿಂಗ್ಸ್ ಕಟ್ಟಿದ್ರು. ತಮ್ಮ ಟೆಸ್ಟ್ ವೃತ್ತಿ ಜೀವನದ ಚೊಚ್ಚಲ ಶತಕ ಬಾರಿಸಿದ್ರು. ರಿಷಭ್ ಪಂತ್ ಅನುಪಸ್ಥಿತಿಯಲ್ಲಿ ಭಾರತ ತಂಡದ ಮೇನ್ ವಿಕೆಟ್ ಕೀಪರ್ ಆಗಿರುವ ಜುರೆಲ್ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದು ಚೊಚ್ಚಲ ಶತಕ ಸಿಡಿಸಿದರು. ಜುರೆಲ್ ಭಾರತದ ಪರ ಟೆಸ್ಟ್ ಕ್ರಿಕೆಟ್​ನಲ್ಲಿ ಶತಕ ಸಿಡಿಸಿದ 12ನೇ ವಿಕೆಟ್ ಕೀಪರ್ ಆಗಿದ್ದಾರೆ. ಈ 12 ವಿಕೆಟ್ ಕೀಪರ್​ಗಳಲ್ಲಿ 5 ವಿಕೆಟ್ ಕೀಪರ್ಸ್ ವೆಸ್ಟ್ ಇಂಡೀಸ್ ವಿರುದ್ಧವೇ ತಮ್ಮ ಚೊಚ್ಚಲ ಶತಕ ಸಿಡಿಸಿದಂತಾಗಿದೆ. ಇನ್ನು ಈ ಮ್ಯಾಚಲ್ಲಿ 210 ಬಾಲ್​ಗಳನ್ನ ಫೇಸ್ ಮಾಡಿದ್ದ ಡಿಜೆ 15 ಬೌಂಡರಿ, 3 ಸಿಕ್ಸರ್​ಗಳ ಸಹಿತ 125 ರನ್​ಗಳಿಸಿ ಖಾರಿ ಪಿಯರ್​ಗೆ ವಿಕೆಟ್ ಒಪ್ಪಿಸಿದರು. ಇನ್ನು ಜುರೇಲ್ ಪೆವಿಲಿಯನ್ ಸೇರ್ತಿದ್ದಂತೆ ಇತ್ತ ರವೀಂದ್ರ ಜಡೇಜಾ ಕೂಡ ಸೆಂಚುರಿ ಸಾಧನೆ ಮಾಡಿದ್ರು.

ಟೆಸ್ಟ್ ಕ್ರಿಕೆಟ್ ನಲ್ಲಿ 6ನೇ ಶತಕ ಸಿಡಿಸಿದ ಜಡೇಜಾ!

ಧೃವ್ ಜುರೆಲ್ ಬೆನ್ನಲ್ಲೇ ಟೀಂ ಇಂಡಿಯಾದ ಸ್ಟಾರ್ ಆಲ್​ರೌಂಡರ್​ ರವೀಂದ್ರ ಜಡೇಜಾ ಕೂಡ ವೆಸ್ಟ್​ ಇಂಡೀಸ್​ ವಿರುದ್ಧ ಸಿಡಿಲಬ್ಬರದ ಶತಕ ಬಾರಿಸಿದ್ರು. 168 ಎಸೆತಗಳನ್ನು ಎದುರಿಸಿ 6 ಬೌಂಡರಿ ಹಾಗೂ 5 ಬಿಗ್​ ಸಿಕ್ಸರ್​ಗಳಿಂದ 100 ರನ್​ಗಳನ್ನು ಚಚ್ಚಿದರು. ಇದು ಜಡೇಜಾ ಅವರ 6ನೇ ಟೆಸ್ಟ್​ ಶತಕವಾಗಿದೆ. ಇನ್ನು ಅರ್ಧಶತಕದ ಬಳಿಕ ತಮ್ಮ ಐಕಾನಿಕ್ ಕತ್ತಿವರಸೆ ಸೆಲೆಬ್ರೇಷನ್ ಮಾಡಿದ್ದ ಜಡ್ಡು 100 ಕಂಪ್ಲೀಟ್ ಆದ್ಮೇಲೂ ಅದೇ ಸ್ಟೈಲ್​ನಲ್ಲೇ ಸಂಭ್ರಮಾಚರಣೆ ಮಾಡಿದ್ರು. ಐದನೇ ವಿಕೆಟ್ ವೇಳೆಗೆ ಜುರೇಲ್ ಮತ್ತು ಜಡೇಜಾ ಇಬ್ಬರು 200+ ರನ್ಸ್ ಪಾರ್ಟ್ನರ್ ಶಿಪ್ ನೀಡಿದ್ದು ವಿಶೇಷವಾಗಿತ್ತು. ಸದ್ಯ ಮೊದಲ ದಿನದಾಟದಲ್ಲಿ 2 ವಿಕೆಟ್ ನಷ್ಟಕ್ಕೆ 121 ರನ್ಸ್ ಕಲೆ ಹಾಕಿತ್ತು. ಇದೀಗ ಎರಡನೇ ದಿನದಾಟದಲ್ಲಿ ಮೂವರು ಶತಕ ಕಂಪ್ಲೀಟ್ ಮಾಡಿದ್ರು. ಇಡೀ ದಿನ ಭಾರತ ಮೂರು ವಿಕೆಟ್​ಗಳನ್ನಷ್ಟೇ ತೆಗೆಯೋಕೆ ವಿಂಡೀಸ್ ಬೌಲರ್​ಗಳಿಗೆ ಸಾಧ್ಯವಾಯ್ತು. ಈ ಮೂಲಕ ಭಾರತ ಎರಡನೇ ದಿನದಾಟದ ಅಂತ್ಯಕ್ಕೆ 5 ವಿಕೆಟ್ ಕಳ್ಕೊಂಡು 448 ರನ್​ಗಳನ್ನ ಕಲೆ ಹಾಕಿದೆ. ಹಾಗೇ ಫಸ್ಟ್ ಇನ್ನಿಂಗ್ಸ್​ನಲ್ಲೇ 286 ರನ್​ಗಳ ಮುನ್ನಡೆ ಸಾಧಿಸಿದೆ. 104 ರನ್ ಗಳಿಸಿ ಜಡೇಜಾ ಮತ್ತು 9 ರನ್ ಗಳಿಸಿ ವಾಷಿಂಗ್ಟನ್ ಸುಂದರ್ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಸದ್ಯ ಟೀಮ್ ಇಂಡಿಯಾ 5 ವಿಕೆಟ್​ಗೆ 448 ರನ್​ಗಳನ್ನ ಕಲೆ ಹಾಕಿದ್ದು ವಿಂಡೀಸ್​ಗಿಂತ 286 ರನ್​ಗಳ ಮುನ್ನಡೆ ಕಾಯ್ದುಕೊಂಡಿದೆ.

Shantha Kumari