ಭೂಮಿಕಾಗೆ MLA ಕಾಟ.. ಹೆಂಡ್ತಿ ತಂಟೆಗೆ ಬಂದವರಿಗೆ ಪವನ್ ಕಲ್ಯಾಣ್ ಸ್ಟೈಲ್​ನಲ್ಲಿ ಉತ್ತರಿಸಿದ ದಿವಾನ್!‌

ಭೂಮಿಕಾಗೆ MLA ಕಾಟ.. ಹೆಂಡ್ತಿ ತಂಟೆಗೆ ಬಂದವರಿಗೆ ಪವನ್ ಕಲ್ಯಾಣ್ ಸ್ಟೈಲ್​ನಲ್ಲಿ ಉತ್ತರಿಸಿದ ದಿವಾನ್!‌

ಅಮೃತಧಾರೆ ಸೀರಿಯಲ್‌ ಈಗ ರೋಚಕ ತಿರುವು ಪಡೆದುಕೊಂಡಿದೆ. ಮನೆ ಬಿಟ್ಟು ಬಂದಿದ್ದ ಭೂಮಿಕಾ, ಮಗ, ಮಲ್ಲಿ ಜೊತೆ ಮಡಿಕೇರಿಯಲ್ಲಿ ಸೆಟಲ್‌ ಆಗಿದ್ಲು. ಮುದ್ದಿನ ಹೆಂಡ್ತಿ ಮನೆ ಬಿಟ್ಟು ಬರ್ತಿದ್ದಂತೆ, ಗೌತಮ್‌ ಕೂಡ ಆಸ್ತಿಯನ್ನ ಕೇಡಿಗಳಿಗೆ ದಾನ ಮಾಡಿ ಬಂದಿದ್ದ. ಡೈವರ್‌ ಆಗಿ ಹೆಂಡ್ತಿ, ಮಗನನ್ನ ಹುಡುಕಲು ಊರೂರು ಸುತ್ತಾಡ್ತಿದ್ದ. ಕಡೆಗೂ ಐದು ವರ್ಷಗಳ ಬಳಿಕ ಭೂಮಿಕಾ ಗೌತಮ್‌ ಗೆ ಸಿಕ್ಕಿದ್ದಾಳೆ. ಆದ್ರೆ ಭೂಮಿಕಾ ಗೌತಮ್‌ ಜೊತೆ ಇರಲು ಒಪ್ತಿಲ್ಲ. ಮಗನಿಂದ ಕೂಡ ದೂರ ಇರ್ಬೇಕು ಅಂತ ವಾರ್ನ್‌ ಮಾಡಿದ್ಲು. ಆದ್ರೆ ಗೌತಮ್‌ ಮಾತ್ರ ಇದಕ್ಕೆ ರೆಡಿ ಇರ್ಲಿಲ್ಲ. ಇದೀಗ ಭೂಮಿಕಾ ಮತ್ತೆ ಗೌತಮ್‌ ನಿಂದ ದೂರ ಆಗಿದ್ದಾಳೆ.

ಇದನ್ನೂ ಓದಿ: ವಿಂಡೀಸ್ ವಿರುದ್ಧ ಶತಕ ಸಿಡಿಸಿ ಅಬ್ಬರಿಸಿದ ಕೆ.ಎಲ್ ರಾಹುಲ್

ಐದು ವರ್ಷದ ಹಿಂದೆ ಮನೆ ಬಿಟ್ಟು ಬಂದಿದ್ದ ಭೂಮಿಕಾಳನ್ನ ಗೌತಮ್‌ ಹುಡುಕಿದ್ದಾನೆ. ಭೂಮಿಕಾ ಸಿಗ್ತಿದ್ದಂತೆ ಗೌತಮ್‌ ಒಲವಿನ ಪತ್ರ ಕೂಡ ಬರೆದಿದ್ದ.  ಆದರೆ, ಭೂಮಿಕಾ ಇವಳನ್ನು ಒಪ್ಪಿಕೊಳ್ಳಲು ರೆಡಿ ಇಲ್ಲ. ಹೀಗಿರುವಾಗಲೇ ಎಂಎಲ್​ಎ ಒಬ್ಬವನು ಭೂಮಿಕಾ ಜೊತೆ ಕಿರಿಕ್ ಮಾಡಿಕೊಂಡಿದ್ದ. ಬಳಿಕ ಭೂಮಿಕಾ ಹೆಡ್‌ ಮಾಸ್ಟರ್‌ ಗೆ ಹೇಳಿದ್ಲು. ಪೇರೆಂಟ್ಸ್‌ ಕರೆಸುವಂತೆ ಮಾಡಿದ್ಲು. ಇದ್ರಿಂದಾಗಿ ಭೂಮಿಕಾಗೆ ಎಂಎಲ್‌ಎ  ತೊಂದರೆ ಕೊಟ್ಟಿದ್ದಾನೆ. ಅಪ್ಪುನ ಕಿಡ್ನ್ಯಾಪ್‌ ಕೂಡ ಮಾಡಿಸಿದ್ದಾನೆ. ಆಗ ಗೌತಮ್‌, ಪವನ್ ಕಲ್ಯಾಣ್ ಸ್ಟೈಲ್​ನಲ್ಲಿ ಉತ್ತರಿಸಿದ್ದಾನೆ.

ಪವನ್ ಕಲ್ಯಾಣ್ ಅವರು ‘ಅತ್ತಾರೆಂಟಿಕಿ ದಾರೀದಿ’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಪವನ್ ಕಲ್ಯಾಣ್ ಶ್ರೀಮಂತನಾದರೂ ಕ್ಯಾಬ್ ಡ್ರೈವರ್ ಪಾತ್ರದಲ್ಲಿಯೇ ಕಾಣಿಸಿಕೊಂಡಿದ್ದರು. ಅವರ ಅತ್ತೆಗೆ ತೊಂದರೆ ಮಾಡುವ ವ್ಯಕ್ತಿಗೆ ಕ್ಯಾಬ್ ಡ್ರೈವರ್ ಆಗಿ ಬಂದು ಪವನ್ ಕಲ್ಯಾಣ್ ಪಾಠ ಕಲಿಸುತ್ತಾರೆ. ತಾವು ಎಂತಹ ಪ್ರಭಾವಿ ಎಂಬುದನ್ನು ದೂರುವಾಣಿ ಕರೆ ಮೂಲಕವೇ ತೋರಿಸಿದ್ರು ಇದೀಗ ಗೌತಮ್‌ ಕೂಡ ಇದೇ ಸ್ಟೈಲ್‌ನಲ್ಲಿ ಎಂಎಲ್‌ಎ ಗೆ ಉತ್ತರಿಸಿದ್ದಾನೆ.  ಭೂಮಿಕಾಳಿಗೆ ತೊಂದರೆ ಕೊಡಲು ಬಂದ ಎಂಎಲ್​ಎಗೆ ಗೌತಮ್ ದೀವಾನ್ ಬಂದು ಪಾಠ ಕಲಿಸಿದ್ದಾನೆ. ಕಮಿಷನರ್​ಗೆ ಕರೆ ಮಾಡುವಂತೆ ಎಂಎಲ್​ಎ ಗೌತಮ್​​ಗೆ ಹೇಳುತ್ತಾನೆ. ಅವರು ಗೌತಮ್ ಪರ ಮಾತನಾಡುತ್ತಾರೆ. ಆ ಬಳಿಕ ಹೈ ಕಮಿಷನರ್​ಗೆ ಕರೆ ಮಾಡುತ್ತಾನೆ. ಅಲ್ಲಿಯೂ ಹಾಗೆಯೇ ಆಗುತ್ತದೆ. ನಂತರ ಬೇರೆ ದಾರಿ ಇಲ್ಲದೆ, ಹೈ ಕಮಾಂಡ್​ಗೆ ಕರೆ ಹೋಗುತ್ತದೆ. ಎಲ್ಲ ಕಡೆಗಳಲ್ಲೂ ಎಂಎಲ್​ಎಗೆ ಹಿನ್ನಡೆ ಆಗಿದೆ. ಕರೆ ಮಾಡಿದವರೆಲ್ಲರೂ ‘ಗೌತಮ್ ಸರ್’ ಎಂದು ಮಾತನಾಡಿಸುತ್ತಾರೆ. ಇದನ್ನು ನೋಡಿ ಎಂಎಲ್​ಎ ಶಾಕ್ ಆಗುತ್ತಾನೆ. ಆ ಬಳಿಕ ಎಂಎಲ್​ಎಯನ್ನು ಹುದ್ದೆಯಿಂದಲೇ ತೆಗೆದು ಹಾಕುವ ನಿರ್ಧಾರವನ್ನು ಹೈಕಮಾಂಡ್ ಮಾಡಿದೆ.

ಮಗನಿಗೆ ತೊಂದರೆ ಆಗ್ತಿದ್ದಂತೆ ಭೂಮಿಕಾ ಕುಶಾಲನಗರವನ್ನೇ ಬಿಟ್ಟು ಹೋಗಿದ್ದಾಳೆ. ಈಗ ಆಕೆ ಎಲ್ಲಿ ಹೋಗಿದ್ದಾಳೆ ಎಂಬ ಗೊಂದಲದಲ್ಲಿ ಗೌತಮ್ ಇದ್ದಾನೆ. ಇವರು ಮತ್ತೆ ಮುಖಾಮುಖಿ ಆಗೋದು ಯಾವಾಗ ಎನ್ನುವ ಪ್ರಶ್ನೆ ಮೂಡಿದೆ. ಇವರು ಆದಷ್ಟು ಬೇಗ ಒಂದಾಗಬೇಕು ಎಂಬುದು ಅಭಿಮಾನಿಗಳ ಕೋರಿಕೆಯಾಗಿದೆ. ಆಕೆ ಮರಳಿ ಬೆಂಗಳೂರಿಗೆ ಬಂದಿದ್ದಾಳೆ. ಹೀಗಾಗಿ, ಮುಂದಿನ ದಿನಗಳಲ್ಲಿ ಬೆಂಗಳೂರಲ್ಲೇ ಕಥೆ ನಡೆಯಲಿದೆ.

Shwetha M