ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ – ರಾಷ್ಟ್ರಪತಿ ಮುರ್ಮು, ಪ್ರಧಾನಿ ಮೋದಿ ಗೌರವಾರ್ಪಣೆ

ಇಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನ. ಈ ಅಂಗವಾಗಿ ರಾಷ್ಟ್ರಪತಿ ದ್ರೌಪತಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಗೌರವ ನಮನ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಕಾಂತಾರ ಚಾಪ್ಪರ್ -1 FIRST REVIEW – ರಾಕೇಶ್ ಪೂಜಾರಿ ಇರಬೇಕಿತ್ತು
ಇಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪತಿ ಮುರ್ಮು ಗುರುವಾರ ರಾಜ್‌ಘಾಟ್‌ನಲ್ಲಿರು ಗಾಂಧೀಜಿ ಮತ್ತು ವಿಜಯ್ ಘಾಟ್‌ನಲ್ಲಿರುವ ಬಹದ್ದೂರ್ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪಾ ನಮನ ಸಲ್ಲಿಸಿದರು.
ಇನ್ನು ಪ್ರಧಾನಿ ಮೋದಿ ಗಾಂಧಿ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಗಾಂಧಿ ಜಯಂತಿಯು ಪ್ರೀತಿಯ ಬಾಪು ಅವರ ಅಸಾಧಾರಣ ಜೀವನಕ್ಕೆ ಗೌರವ ಸಲ್ಲಿಸುವ ಬಗ್ಗೆ, ಅವರ ಆದರ್ಶಗಳು ಮಾನವ ಇತಿಹಾಸದ ಹಾದಿಯನ್ನು ಪರಿವರ್ತಿಸಿದವು. ಧೈರ್ಯ ಮತ್ತು ಸರಳತೆ ಹೇಗೆ ದೊಡ್ಡ ಬದಲಾವಣೆಯ ಸಾಧನಗಳಾಗಬಹುದು ಎಂಬುದನ್ನು ಅವರು ಪ್ರದರ್ಶಿಸಿದರು ಎಂದು ಸ್ಮರಿಸಿದ್ದಾರೆ.
ಜನರನ್ನು ಸಬಲೀಕರಣಗೊಳಿಸುವ ಅಗತ್ಯ ಸಾಧನವಾಗಿ ಸೇವೆ ಮತ್ತು ಕರುಣೆಯ ಶಕ್ತಿಯನ್ನು ಅವರು ನಂಬಿದ್ದರು. ವಿಕಸಿತ ಭಾರತವನ್ನು ನಿರ್ಮಿಸುವ ನಮ್ಮ ಅನ್ವೇಷಣೆಯಲ್ಲಿ ನಾವು ಅವರ ಮಾರ್ಗವನ್ನು ಅನುಸರಿಸುತ್ತೇವೆ ಎಂದು ಮೋದಿ ತಿಳಿಸಿದ್ದಾರೆ.
ಇನ್ನು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಬಗ್ಗೆ ಕೂಡ ಪೋಸ್ಟ್ ಹಂಚಿಕೊಂಡಿದ್ದಾರೆ. ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಅಸಾಧಾರಣ ರಾಜಕಾರಣಿಯಾಗಿದ್ದು, ಅವರ ಸಮಗ್ರತೆ, ನಮ್ರತೆ ಮತ್ತು ದೃಢಸಂಕಲ್ಪವು ಸವಾಲಿನ ಸಮಯದಲ್ಲೂ ಭಾರತವನ್ನು ಬಲಪಡಿಸಿತು. ಅವರು ಅನುಕರಣೀಯ ನಾಯಕತ್ವ, ಶಕ್ತಿ ಮತ್ತು ನಿರ್ಣಾಯಕ ಕ್ರಿಯೆಯ ವ್ಯಕ್ತಿತ್ವವನ್ನು ಹೊಂದಿದ್ದರು. ‘ಜೈ ಜವಾನ್ ಜೈ ಕಿಸಾನ್’ ಎಂಬ ಅವರ ಸ್ಪಷ್ಟ ಕರೆ ನಮ್ಮ ಜನರಲ್ಲಿ ದೇಶಭಕ್ತಿಯ ಮನೋಭಾವವನ್ನು ಹುಟ್ಟುಹಾಕಿತು. ಬಲಿಷ್ಠ ಮತ್ತು ಸ್ವಾವಲಂಬಿ ಭಾರತವನ್ನು ನಿರ್ಮಿಸುವ ಪ್ರಯತ್ನದಲ್ಲಿ ಅವರು ನಮ್ಮನ್ನು ಪ್ರೇರೇಪಿಸುತ್ತಲೇ ಇದ್ದಾರೆ ಎಂದು ಮೋದಿ ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ನೋಡಿರಿ

