ಸೋಂಪು ನೀರು ಕುಡಿಯೋ ಮುನ್ನ ಈ ವಿಚಾರ ತಿಳ್ಕೊಳ್ಳಿ – ಈ ಸಮಸ್ಯೆ ಇದ್ರೆ ಅಪಾಯ ಫಿಕ್ಸ್!

ಊಟ ಆದ್ಮೆಲೆ ಅನೇಕರು ಸೋಂಪು ತಿನ್ನುತ್ತಾರೆ. ಇದು ಹೊಟ್ಟೆಯ ಸಮಸ್ಯೆಯನ್ನ ಪರಿಹರಿಸುತ್ತೆ. ಆಮ್ಲೀಯತೆಯಿಂದ ಪರಿಹಾರ ನೀಡುತ್ತೆ. ಇನ್ನೂ ಕೆಲವರು ತೂಕ ಇಳಿಸಿಕೊಳ್ಳಲು ಕೂಡ ಸೋಂಪು ನೀರನ್ನ ಖಾಲಿ ಹೊಟ್ಟೆಯಲ್ಲಿ ಕುಡಿಯುತ್ತಾರೆ ಆದರೆ ಸೋಂಪು ಎಲ್ಲರಿಗೂ ಪ್ರಯೋಜನಕಾರಿಯಲ್ಲ. ಕೆಲವು ಜನರು ಇದನ್ನ ತಿನ್ನುವುದರಿಂದ ಅಥವಾ ಸೋಂಪು ನೀರು ಕುಡಿಯುವುದರಿಂದ ಅಡ್ಡಪರಿಣಾಮ ಅನುಭವಿಸಬಹುದು.
ಇದನ್ನೂ ಓದಿ: ಗಿಲ್ಲಿ, ಮಾಳುಗೆ ಮಲ್ಲಮ್ಮ ಕ್ಲಾಸ್.. ಮರ್ಯಾದೆಗಾಗಿ ಅಶ್ವಿನಿ ರಾಂಗ್ – BBKಗೆ ಮತ್ತೆ ಎಂಟ್ರಿ ಕೊಟ್ಟ ರಕ್ಷಿತಾ?
ಸೋಂಪು ಭಾರತದಾದ್ಯಂತ ಅಡಿಗೆ ಮನೆಗಳಲ್ಲಿ ಇರುವ ಪದಾರ್ಥಗಳಲ್ಲೊಂದು. ಮಾಂಸಾಹಾರ ಸೇವನೆ ನಂತರ ಸೋಂಪು ತಿನ್ನುವ ಅಭ್ಯಾಸ ಅನೇಕರಿಗೆ ಇದೆ. ಏಕೆಂದರೆ ಸೋಂಪು ಅನೇಕ ಪ್ರಯೋಜನಗಳನ್ನು ಹೊಂದಿದೆ. ಸೋಂಪು ಕಾಳು ತಿನ್ನುವುದರಿಂದ ಆಹಾರ ಬೇಗ ಜೀರ್ಣವಾಗುತ್ತದೆ. ಇದು ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಆದ್ರೆ ದೇಹದಲ್ಲಿ ಶುಷ್ಕತೆ ಇರುವವರು ಸೋಂಪು ನೀರನ್ನು ಕುಡಿಯುವುದನ್ನ ತಪ್ಪಿಸಬೇಕು. ಆಯುರ್ವೇದದ ಪ್ರಕಾರ, ಅತಿಯಾದ ಸೋಂಪು ಸೇವನೆಯು ದೇಹದಲ್ಲಿ ಶುಷ್ಕತೆಯನ್ನ ಹೆಚ್ಚಿಸುತ್ತದೆ ಮತ್ತು ಚರ್ಮದ ತೀವ್ರ ಶುಷ್ಕತೆಗೆ ಕಾರಣವಾಗಬಹುದು.
ನಿಮಗೆ ಹೊಟ್ಟೆ ನೋವು ಇದ್ದರೆ ಸೋಂಪು ನೀರನ್ನ ಕುಡಿಯುವುದನ್ನ ತಪ್ಪಿಸಬೇಕು. ಸೋಂಪು ಹೊಟ್ಟೆ ಮತ್ತು ಕರುಳನ್ನ ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಸೋಂಪು ಸೇವಿಸುವುದರಿಂದ ಸಮಸ್ಯೆ ಇನ್ನಷ್ಟು ಹದಗೆಡಬಹುದು.
ಸೋಂಪು ನೀರನ್ನ ಕುಡಿಯುವುದರಿಂದ ತೂಕ ಇಳಿಸಿಕೊಳ್ಳಲು ಸಹಾಯವಾಗುತ್ತದೆ. ಆದ್ದರಿಂದ ನೀವು ಈಗಾಗಲೇ ತೆಳ್ಳಗಿದ್ದರೆ ಮತ್ತು ದುರ್ಬಲರಾಗಿದ್ದರೆ ಸೋಂಪು ನೀರು ಕುಡಿಯುವುದನ್ನು ತಪ್ಪಿಸಬೇಕು. ಇದು ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದಲ್ಲದೆ ನಿಮಗೆ ಯಾವುದೇ ಆರೋಗ್ಯ ಸಮಸ್ಯೆ ಇದ್ದರೆ ವೈದ್ಯರನ್ನ ಸಂಪರ್ಕಿಸದೆ ಯಾವುದೇ ಕಾರಣಕ್ಕೂ ಸೇವಿಸಬಾರದು.
ವಾತ ಸ್ವಭಾವದವರು ಸೋಂಪು ನೀರು ಸೇವಿಸುವುದನ್ನ ತಪ್ಪಿಸಬೇಕು. ಇದು ದೇಹದಲ್ಲಿ ಗ್ಯಾಸ್ ಸಮಸ್ಯೆಯನ್ನ ಹೆಚ್ಚಿಸುತ್ತದೆ. ವಾತ ಸ್ವಭಾವದವರು ಸೋಂಪು ಅತಿಯಾಗಿ ಸೇವಿಸುವುದರಿಂದ ಜೀರ್ಣಕ್ರಿಯೆಯ ಸಮಸ್ಯೆಗಳು ಉಂಟಾಗಬಹುದು. ಹೀಗಾಗಿ ಸೋಂಪು ನೀರು ಕುಡಿಯಬೇಕಾದರೆ ಬಹಳ ಎಚ್ಚರಿಕೆ ವಹಿಸಬೇಕು…

ನೋಡಿರಿ

