ವಿಂಡೀಸ್ ಬೇಟೆಗೆ ಇಂಡಿಯಾ ರೆಡಿ – ಕನ್ನಡಿಗರಿಗೆ ಸಿಗುತ್ತಾ ಪ್ಲೇಯಿಂಗ್ 11?
WTC ಫೈನಲ್.. ಎಷ್ಟು ಇಂಪಾರ್ಟೆಂಟ್?

ವಿಂಡೀಸ್ ಬೇಟೆಗೆ ಇಂಡಿಯಾ ರೆಡಿ – ಕನ್ನಡಿಗರಿಗೆ ಸಿಗುತ್ತಾ ಪ್ಲೇಯಿಂಗ್ 11?WTC ಫೈನಲ್.. ಎಷ್ಟು ಇಂಪಾರ್ಟೆಂಟ್?

ಕಳೆದೊಂದು ತಿಂಗಳಿಂದ ವೈಟ್ ಬಾಲ್ ಫಾರ್ಮೆಟ್​ನಲ್ಲಿ ಬ್ಯುಸಿಯಾಗಿದ್ದ ಟೀಂ ಇಂಡಿಯಾ ನಾಳೆಯಿಂದ ಮತ್ತೆ ರೆಡ್ ಬಾಲ್ ಕಾಳಗಕ್ಕೆ ಸಜ್ಜಾಗಿದೆ. ಅಕ್ಟೋಬರ್ 2ರಿಂದ ವೆಸ್ಟ್ ಇಂಡೀಸ್ ವಿರುದ್ಧದದ ಎರಡು ಟೆಸ್ಟ್‌ ಪಂದ್ಯಗಳ ಸರಣಿ ಆರಂಭವಾಗಲಿದೆ. ಏಷ್ಯಾಕಪ್​ ಮುಗಿಸಿ ಕ್ಯಾಪ್ಟನ್ ಶುಭ್​ಮನ್ ಗಿಲ್ ಮತ್ತು ಕೋಚ್ ಗೌತಮ್ ಗಂಭೀರ್ ಸೀದಾ ಅಹಮದಾಬಾದ್ ತಲುಪಿದ್ದಾರೆ. ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ಮೊದಲ ಪಂದ್ಯ ನಡೆಯಲಿದ್ದು, ಪ್ಲೇಯಿಂಗ್ 11 ಬಗ್ಗೆ ಚರ್ಚೆ ನಡೆಸಿದ್ದಾರೆ. ಹಾಗೇ ವೇಗಿ ಜಸ್‌ಪ್ರೀತ್ ಬೂಮ್ರಾ, ಎಡಗೈ ಸ್ಪಿನ್ನರ್‌ಗಳಾದ ಕುಲದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಮಂಗಳವಾರ ರೆಸ್ಟ್ ಮೂಡ್​ನಲ್ಲಿದ್ದು ಬುಧವಾರ ಅಭ್ಯಾಸ ಶುರು ಮಾಡಿದ್ದಾರೆ.

ಇದನ್ನೂ ಓದಿ : 200 ರೂ. ಸಿನಿಮಾ ಟಿಕೆಟ್ ದರಕ್ಕೆ ತಡೆಯಾಜ್ಞೆ ಬೆನ್ನಲ್ಲೇ ಟಿಕೆಟ್ ದರ ಏರಿಕೆ! – ಹೊಂಬಾಳೆ ಫಿಲ್ಮ್ಸ್ ಗೆ ಹೈಕೋರ್ಟ್​ ಶಾಕ್!‌

ಬ್ಯಾಟಿಂಗ್ & ಬೌಲಿಂಗ್ ಪ್ರಾಕ್ಟೀಸ್ ನಲ್ಲಿ ಆಟಗಾರರು!

ಇನ್ನು ಸರಣಿಗೆ ಸೆಲೆಕ್ಟ್ ಆಗಿರೋ ಉಳಿದ ಆಟಗಾರರು ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರಾಕ್ಟೀಸ್ ನಡೆಸಿದ್ದಾರೆ. ಮೊಹಮ್ಮದ್ ಸಿರಾಜ್, ಕನ್ನಡಿಗ ಪ್ರಸಿದ್ಧ ಕೃಷ್ಣ ಅವರಿಬ್ಬರೂ ಇತ್ತೀಚೆಗೆ ಆಸ್ಟ್ರೇಲಿಯಾ ಎ ತಂಡದ ಎದುರಿನ ‘ಟೆಸ್ಟ್’ನಲ್ಲಿ ಆಡಿದ್ದರು. ಹಾಗೆ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಮತ್ತು ಕೆ.ಎಲ್. ರಾಹುಲ್  ಬ್ಯಾಟಿಂಗ್ ಅಭ್ಯಾಸ ಮಾಡಿದರು. ವಿಕೆಟ್‌ಕೀಪರ್-ಬ್ಯಾಟರ್ ಧ್ರುವ ಜುರೇಲ್, ಬಿ. ಸಾಯಿ ಸುದರ್ಶನ್ ಮತ್ತು ದೇವದತ್ತ ಪಡಿಕ್ಕಲ್ ಅವರೂ ಅಭ್ಯಾಡ ನಡೆಸಿದ್ದಾರೆ. ಇದೆಲ್ಲಕ್ಕಿಂತ ಮುಖ್ಯವಾಗಿ ಶುಭ್​ಮನ್ ಗಿಲ್ ನಾಯಕತ್ವದಲ್ಲಿ ಭಾರತ ತಂಡವು ತವರಿನಲ್ಲಿ ಆಡುತ್ತಿರುವ ಮೊದಲ ಸರಣಿ ಇದಾಗಿದೆ. ಇಂಗ್ಲೆಂಡ್‌ನಲ್ಲಿ ಈಚೆಗೆ ನಡೆದಿದ್ದ ಸರಣಿಯಲ್ಲಿ ಭಾರತವು 2-2ರಿಂದ ಸಮಬಲ ಸಾಧಿಸಿತ್ತು.  ಇದೀಗ ಈ ಸರಣಿಯನ್ನ ಗೆಲ್ಲುವಂತ ಯೋಜನೆಯಲ್ಲಿದೆ. ಹಾಗಂತ ವಿಂಡೀಸ್ ತಂಡವನ್ನ ಅಷ್ಟು ಸುಲಭಕ್ಕೆ ತಿಳಿಯೋಕೆ ಸಾಧ್ಯವಿಲ್ಲ

ಭಾರತದ ವಿರುದ್ಧ ವಿಂಡೀಸ್ ಮೇಲುಗೈ!

ಇತ್ತೀಚಿನ ದಿನಗಳಲ್ಲಿ ವಿಂಡೀಸ್ ತಂಡ ಸೀಮಿತ ಓವರ್‌ಗಳಲ್ಲಿ ಡಲ್ ಅನ್ಸಿದ್ರೂ ಕೂಡ ಟೆಸ್ಟ್‌ನಲ್ಲಿ ಉತ್ತಮ ಆಟವಾಡುತ್ತಿದೆ. ರೋಸ್ಟನ್ ಚೇಸ್ ತಂಡದ ನಾಯಕತ್ವ ವಹಿಸಲಿದ್ದು, ಶಾಯ್ ಹೋಪ್ 2021ರ ಬಳಿಕ ಇದೇ ಮೊದಲ ಬಾರಿ ಟೆಸ್ಟ್ ಆಡಲಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ಹಾಗೂ ವೆಸ್ಟ್‌ ಇಂಡೀಸ್ ತಂಡಗಳು ಒಟ್ಟು 100 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ವೆಸ್ಟ್ ಇಂಡೀಸ್‌ ತಂಡವೇ ಸ್ಪಷ್ಟ ಮೇಲುಗೈ ಸಾಧಿಸಿದೆ. 100 ಟೆಸ್ಟ್ ಪಂದ್ಯಗಳ ಪೈಕಿ ವೆಸ್ಟ್ ಇಂಡೀಸ್ ತಂಡವು 30 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದ್ದರೇ, ಭಾರತ ತಂಡವು 23 ಪಂದ್ಯಗಳಲ್ಲಿ ಜಯದ ಸಿಹಿಯುಂಡಿದೆ. ಇನ್ನು 47 ಪಂದ್ಯಗಳು ಡ್ರಾನಲ್ಲಿ ಅಂತ್ಯವಾಗಿವೆ. ಈ ಸಲ ಹೊಸಬರೇ ತಂಡದಲ್ಲಿ ಇರೋದ್ರಿಂದ ತವರಿನಲ್ಲಿ ಭಾರತ ಗೆಲ್ಲುವ ಲೆಕ್ಕಾಚಾರದಲ್ಲಿದೆ. ಅದೂ ಅಲ್ದೇ ಈ ಸರಣಿ ಟೀಮ್ ಇಂಡಿಯಾಗೆ ಮಹತ್ವದಾಗಿದೆ. ಈ ಸರಣಿ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಅಡಿಯಲ್ಲಿ ನಡೆಯುತ್ತಿದ್ದು, ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯೋಕೆ ಈ ಸರಣಿ ಮಹತ್ವದಾಗಿದೆ. ಭಾರತ ಈಗಾಗಲೇ ಈ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಸರ್ಕಲ್‌ನಲ್ಲಿ 5 ಪಂದ್ಯಗಳನ್ನು ಆಡಿದ್ದು, 2 ಜಯ ಸಾಧಿಸಿದ್ದು, ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಇನ್ನು ವೆಸ್ಟ್‌ ಇಂಡೀಸ್ ಆಡಿದ 2 ಪಂದ್ಯಗಳಲ್ಲಿ 1 ಸೋಲು, 1 ಡ್ರಾ ಕಂಡಿದ್ದು, ಅಂಕ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಅಂಕ ಪಟ್ಟಿಯಲ್ಲಿ ಬಡ್ತಿ ಪಡೆಯಲು ಉಭಯ ತಂಡಗಳಿಗೆ ಈ ಸರಣಿ ಮಹತ್ವದಾಗಿದೆ.

ಸಂಭಾವ್ಯ ಪ್ಲೇಯಿಂಗ್ 11

ಯಶಸ್ವಿ ಜೈಸ್ವಾಲ್

ಕೆಎಲ್ ರಾಹುಲ್

ಸಾಯಿ ಸುದರ್ಶನ್

ಶುಭ್ ಮನ್ ಗಿಲ್

ದೇವದತ್ ಪಡಿಕ್ಕಲ್

ಧ್ರುವ್ ಜುರೇಲ್

ರವೀಂದ್ರ ಜಡೇಜಾ

ಅಕ್ಷರ್ ಪಟೇಲ್

ಕುಲ್ದೀಪ್ ಯಾದವ್

ಜಸ್ಪ್ರೀತ್ ಬುಮ್ರಾ

ಮೊಹಮ್ಮದ್ ಸಿರಾಜ್

Shantha Kumari