ಕಾರ್ಟೂನ್ ನಖ್ವಿ ಹೊಸ ನೌಟಂಕಿ – ಕಪ್ ಬೇಕಿದ್ರೆ ಸೂರ್ಯನೇ ಹೋಗ್ಬೇಕಾ?
ಇಷ್ಟೆಲ್ಲಾ ರಾದ್ಧಾಂತದ ಏಷ್ಯಾಕಪ್ ಬೇಕಾ?

ನಾನೇ ಎಸಿಸಿ ಅಧ್ಯಕ್ಷ.. ನಾನೇ ಟ್ರೋಫಿ ಕೊಡ್ಬೇಕು ಅಂತಾ ಮೊಹ್ಸಿನ್ ನಖ್ವಿ. ನೀನು ಪಾಕಿಸ್ತಾನದ ಗೃಹಸಚಿವ, ಪಿಸಿಬಿ ಅಧ್ಯಕ್ಷ.. ನಮ್ಗೂ ಪಾಕ್ಗೂ ಆಗಿಬರಲ್ಲ. ನಿನ್ನಿಂದ ನಾವ್ ಟ್ರೋಫಿ ತಗೊಳ್ಳಲ್ಲ ಅಂತಾ ಭಾರತ. ಸೋ ಇಬ್ಬರ ಜಟಾಪಟಿ ನಡುವೆ ಟ್ರೋಫಿ ಕಾಳಗ ಮಾತ್ರ ದಿನಕ್ಕೊಂದು ತಿರುವು ಪಡ್ಕೊಳ್ತಿದೆ. ಮಂಗಳವಾರ ಈ ಬಗ್ಗೆ ಸಭೆ ನಡೆದಿದೆ. ಸಭೆಯಲ್ಲಿ ಕಪ್ ಕೊಡದೆ ಹೊತ್ತೊಯ್ದಿದ್ದ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿಗೆ ಬಿಸಿಸಿಐ ಸರಿಯಾಗೇ ಬಿಸಿ ಮುಟ್ಟಿಸಿದೆ.
ಇದನ್ನೂ ಓದಿ : ಗಿಲ್ಲಿ, ಮಾಳುಗೆ ಮಲ್ಲಮ್ಮ ಕ್ಲಾಸ್.. ಮರ್ಯಾದೆಗಾಗಿ ಅಶ್ವಿನಿ ರಾಂಗ್ – BBKಗೆ ಮತ್ತೆ ಎಂಟ್ರಿ ಕೊಟ್ಟ ರಕ್ಷಿತಾ?
ಟ್ರೋಫಿ ನಿಮ್ಮ ಸ್ವಂತದ್ದಲ್ಲ ಭಾರತಕ್ಕೆ ಹಸ್ತಾಂತರಿಸಿ!
ಮಂಗಳವಾರ ದುಬೈನಲ್ಲಿ ನಡೆದ ಎಸಿಸಿ ಸಭೆಯಲ್ಲಿ ಕೋಲಾಹಲವೇ ನಡೆದಿದೆ. ಬಿಸಿಸಿಐ ಪ್ರತಿನಿಧಿಗಳಾಗಿ ರಾಜೀವ್ ಶುಕ್ಲಾ ಮತ್ತು ಆಶಿಶ್ ಶೇಲರ್ ಪಾಲ್ಗೊಂಡಿದ್ರು. ಸಭೆಯಲ್ಲಿ ಮಾತನಾಡಿದ ಮೊಹ್ಸಿನ್ ನಖ್ವಿ, ಏಷ್ಯಾಕಪ್ ಗೆದ್ದ ಭಾರತದ ಬಗ್ಗೆ ತುಟಿ ಬಿಚ್ಚಲಿಲ್ಲ. ಇದಕ್ಕೆ ಆಶಿಶ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕೊನೆಗೆ ಶೇಪ್ ಔಟ್ ಆದ್ಮೇಲೆ ಮೊಹ್ಸಿನ್ ನಖ್ವಿ ಭಾರತಕ್ಕೆ ಅಭಿನಂದನೆ ಸಲ್ಲಿಸಿದ್ರು. ಇನ್ನು ಇದೇ ವೇಳೆ ಟ್ರೋಫಿ ಕೊಡದಿರುವ ನಖ್ವಿ ನಡೆಯನ್ನು ಬಿಸಿಸಿಐ ತೀವ್ರವಾಗಿ ಖಂಡಿಸಿದೆ. ಟ್ರೋಫಿ ನಿಮ್ಮ ಸ್ವಂತದಲ್ಲ. ಅದು ತಂಡಕ್ಕೆ ಕೊಡಬೇಕು. ಟ್ರೋಫಿಯನ್ನು ಕಚೇರಿಯಲ್ಲಿ ಇಡಬೇಕು ಮತ್ತು ಅದನ್ನು ಬಿಸಿಸಿಐ ಪಡೆದು ಕೊಳ್ಳಲಿದೆ ಎಂದಿದೆ. ಈ ವೇಳೆ ಮಾತನಾಡಿದ ನಖ್ವಿ, ಸಮಾರಂಭದಲ್ಲಿ ನಾನು ಕಾರ್ಟೂನ್ ಥರ ನಿಂತಿದ್ದೆ. ಒಂದು ಗಂಟೆವರೆಗೆ ವೇದಿಕೆ ಮೇಲೆಯೇ ಕಾದಿದ್ದೆ ಎಂದಿದ್ದಾರೆ. ಸುಮಾರು ಹೊತ್ತು ವಾದ, ವಾಗ್ವಾದ ನಡೆದಿದ್ದು ಕೊನೆಗೆ ಟ್ರೋಫಿ ಹಸ್ತಾಂತರಿಸಲು ನಖ್ವಿ ಒಪ್ಪಿಕೊಂಡಿದ್ದಾರೆ. ಆದ್ರೆ ಇದಕ್ಕೂ ಒಂದು ಕಂಡೀಷನ್ ಹಾಕಿದ್ದಾರೆ. ಟೀಮ್ ಇಂಡಿಯಾಗೆ ಟ್ರೋಫಿ ಬೇಕಿದ್ದರೆ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಬಂದು ನನ್ನ ಕೈಯಿಂದ ಸ್ವೀಕರಿಸಲಿ ಎಂದಿದ್ದಾರೆ. ನಖ್ವಿ ಅವರ ಈ ಬೇಡಿಕೆಗೂ ಬಿಸಿಸಿಐ ಆಕ್ರೋಶ ವ್ಯಕ್ತಪಡಿಸಿದೆ. ಆದ್ರೂ ನಖ್ವಿ ತನ್ನ ಹುಚ್ಚಾಟ ಮಾತ್ರ ಬಿಟ್ಟಿಲ್ಲ. ತನ್ನ ಪಟ್ಟನ್ನು ಸಡಿಲಿಸಿಲ್ಲ. ಹೀಗಾಗಿ ಸದ್ಯಕ್ಕಂತೂ ಟ್ರೋಫಿ ವಿವಾದ ಬಗೆಹರಿಯಲ್ಲ. ಆದ್ರೆ ಇಲ್ಲಿರುವಂತ ಪ್ರಶ್ನೆ ಏನಂದ್ರೆ ಇಷ್ಟೆಲ್ಲಾ ರಾದ್ಧಾಂತ ಆದ್ಮೇಲೆ ಭಾರತ ಏಷ್ಯಾಕಪ್ ಆಡ್ಬೇಕಾ ಅನ್ನೋದು.
ಭಾರತ ಏಷ್ಯಾಕಪ್ ಟೂರ್ನಿ ಆಡದಿದ್ರೆ ಪಿಸಿಬಿಗೇ ನಷ್ಟ!
ಏಷ್ಯಾಕಪ್ ಅಂದ್ರೇನೆ ಜಸ್ಟ್ ಏಷ್ಯನ್ ರಾಷ್ಟ್ರಗಳಷ್ಟೇ ಆಡುವ ಕ್ರೀಡಾಕೂಟ. ಕ್ರಿಕೆಟ್ನಲ್ಲಿ 8 ಟೀಮ್ಗಳು ಮಾತ್ರವೇ ಭಾಗವಹಿಸುತ್ತವೆ. ಈ ತಂಡಗಳ ಪೈಕಿ ಭಾರತ ಮಾತ್ರವೇ ಸೂಪರ್ ಸ್ಟ್ರಾಂಗ್ ಟೀಂ. ಉಳಿದಂತೆ ಆಫ್ಘನ್, ಲಂಕಾ, ಬಾಂಗ್ಲಾ ಹಾಗೇ ಪಾಕಿಸ್ತಾನ ಮೀಡಿಯಂ ರೇಂಜ್ನಲ್ಲಿವೆ. ಇನ್ನು ಹಾಂಗ್ ಕಾಂಗ್, ಯುಎಇ, ಓಮನ್ ತಂಡಗಳು ಕ್ರಿಕೆಟ್ ಶಿಶುಗಳು. ಹೀಗಾಗಿ ಭಾರತ ಏಷ್ಯಾಕಪ್ ಆಡದೇ ಇದ್ರೂ ಏನು ಲಾಸ್ ಆಗಲ್ಲ. ಯಾಕಂದ್ರೆ ಇಲ್ಲಿ ಆಡೋದೇ ಓಡಿಐ ಮತ್ತು ಟಿ-20ಐ ಮಾದರಿ. ಇಲ್ಲಿ ಸ್ಕಿಪ್ ಮಾಡಿ ಬೇರೆ ಟೀಮ್ಗಳ ಜೊತೆ ದ್ವಿಪಕ್ಷೀಯ ಸರಣಿ ಶೆಡ್ಯೂಲ್ ಮಾಡಿಕೊಳ್ಬೋದು. ಹಾಗೇ ಐಸಿಸಿಯಂತ ಟೂರ್ನಮೆಂಟ್ಗಳಲ್ಲಿ ಮಾತ್ರ ಪಾಕಿಸ್ತಾನ ವಿರುದ್ಧ ಪಂದ್ಯಗಳನ್ನ ಆಡ್ಬೇಕು. 1996ರಲ್ಲಿ ವಿಶ್ವಕಪ್ ನಡೆದಾಗ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ತಂಡಗಳು ಪಂದ್ಯಕ್ಕಾಗಿ ಶ್ರೀಲಂಕಾಗೆ ಟ್ರಾವೆಲ್ ಮಾಡೋಕೆ ಒಪ್ಪಿರಲಿಲ್ಲ. ಹೋಗ್ಲೂ ಇಲ್ಲ. ಕೆಲವು ಸಲ ದೃಢ ನಿರ್ಧಾರಗಳು ಅನಿವಾರ್ಯ ಅನ್ಸುತ್ತೆ. ಏಷ್ಯಾಕಪ್ನಲ್ಲಿ ಆಡಿಯೇ ಭಾರತ ತಾನು ಸ್ಟ್ರಾಂಗ್ ಅಂತಾ ಪ್ರೂವ್ ಮಾಡಿಕೊಳ್ಳಬೇಕಾದ ಅವಶ್ಯಕತೆ ಏನೂ ಇಲ್ಲ. ಬಟ್ ಏಷ್ಯಾಕಪ್ ಆಡಿದ್ರೆ ಬಿಸಿಸಿಐಗೆ ದುಡ್ಡು ಬರುತ್ತೆ. ಜನರ ಎಮೋಷನ್ಸ್ ಜೊತೆ ಆಡೋದು ಅಷ್ಟೇ. ಅದಕ್ಕೆನೋ ಏನೋ ಪಾಕ್ ವಿರುದ್ಧದ ಪಂದ್ಯಗಳೂ ಈ ಸಲ ಕ್ರೇಜ್ ಬರ್ಲಿಲ್ಲ. ಜನ ಈಗ್ಲೂ ಪಾಕ್ ವಿರುದ್ಧ ಮ್ಯಾಚ್ ಆಡೋದು ಬೇಡ ಅನ್ನೋ ಧೋರಣೆಯಲ್ಲಿ ಇದ್ದಾರೆ. ದೇಶದ ಬಗ್ಗೆ ನಿಜಕ್ಕೂ ಗೌರವ ಇದ್ರೆ ಮ್ಯಾಚ್ನೇ ಬಿಡ್ಬೇಕು. ಯಾಕಂದ್ರೆ ಕ್ರಿಕೆಟ್ ಜಗತ್ತಿನ ಬಾಸ್ ಟೀಂ ಇಂಡಿಯಾ. ಭಾರತೀಯ ಕ್ರಿಕೆಟ್ ಮಂಡಳಿ ಬ್ಯಾಂಕ್ ಬ್ಯಾಲೆನ್ಸೇ 20ಸಾವಿರ ಕೋಟಿಗೂ ಹೆಚ್ಚಿದೆ. ಭಾರತದ ಬ್ಯಾಲೆನ್ಸ್ ಹತ್ತಿರಕ್ಕೆ ಬರೋಕೂ ಕೂಡ ಯಾರಿಂದಲೂ ಸಾಧ್ಯ ಇಲ್ಲ. ಅದ್ರಲ್ಲೂ ಪಾಕಿಸ್ತಾನದ ಅಮೌಂಟ್ ಕೇಳಿದ್ರೆ ನೀವೇ ಶಾಕ್ ಆಗಿ ಬಿಡ್ತೀರಿ. ಇಂಡಿಯನ್ ಕರೆನ್ಸಿ ಪ್ರಕಾರ ಹೇಳೋದಾದ್ರೆ ಜಸ್ಟ್ 458 ಕೋಟಿ ರೂಪಾಯಿಗಳು ಮಾತ್ರ. ಸೋ ಏಷ್ಯಾಕಪ್ ಆಡದೇ ಇದ್ರೆ ಭಾರತಕ್ಕಿಂತ ಜಾಸ್ತಿ ನಷ್ಟವಾಗೋದು ಪಿಸಿಬಿಗೆ. ಸೋ. ಹಿಂಗೂ ತಿರುಗೇಟು ಕೊಡ್ಬೋದು.
ಭಾರತ ಮತ್ತು ಪಾಕಿಸ್ತಾನ ನಡುವೆ ಸಾಕಷ್ಟು ವಿಚಾರಗಳಲ್ಲಿ ವೈರುದ್ಯಗಳಿವೆ. ಆ ಸೇಡು ಈಗ ಕ್ರೀಡೆಗೂ ತಿರುಗಿದೆ. ಬೆಟರ್ ಆಪ್ಶನ್ ಅಂದ್ರೆ ಮುಂದಿನ ದಿನಗಳಲ್ಲಿ ಐಸಿಸಿಯಂತ ದೊಡ್ಡ ಇವೆಂಟ್ಗಳಲ್ಲಷ್ಟೇ ಪಾಕ್ ವಿರುದ್ಧ ಭಾರತ ಕಣಕ್ಕಿಳಿಬೇಕು. ಏಷ್ಯಾಕಪ್ನಲ್ಲಿ ಆಡದೇ ಇದ್ರೂ ನಷ್ಟವೇನೂ ಇಲ್ಲ.

ನೋಡಿರಿ

