35ರ ಮಹಿಳೆಯನ್ನ ಮದುವೆಯಾದ 75ರ ವೃದ್ಧ.. ಹನಿಮೂನ್ಗೂ ಮೊದಲೇ ಪ್ರಾಣ ಬಿಟ್ಟ ಅಜ್ಜ!

ಕಾಲಕ್ಕೆ ತಕ್ಕಂತೆ ಬದಲಾಗ್ತಿದ್ದಂತೆ ಜನ. ಇತ್ತೀಚೆಗೆ ಯುವತಿಯರು ವಯಸ್ಸಾದ ವ್ಯಕ್ತಿಯನ್ನ ಮದುವೆಯಾಗುತ್ತಿರುವ ಪ್ರಕರಣಗಳು ವರದಿಯಾಗುತ್ತಿದೆ. ಇದೀಗ ಇಲ್ಲೊಂದು ಕಡೆ ಮೊದಲ ಪತ್ನಿಯನ್ನು ಕಳೆದುಕೊಂಡು ಒಂಟಿತನ ಅನುಭವಿಸುತ್ತಿದ್ದ 75 ವರ್ಷದ ಸಂಗ್ರರಾಮ್ ಎಂಬುವವರು 35 ವರ್ಷದ ಮಹಿಳೆಯನ್ನು ಮದುವೆಯಾಗಿದ್ದಾರೆ. ಆದ್ರೆ ಮದುವೆಯಾಗ ಮರುದಿನವೇ ವೃದ್ಧ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಗಿಲ್ಲಿ, ಮಾಳುಗೆ ಮಲ್ಲಮ್ಮ ಕ್ಲಾಸ್.. ಮರ್ಯಾದೆಗಾಗಿ ಅಶ್ವಿನಿ ರಾಂಗ್ – BBKಗೆ ಮತ್ತೆ ಎಂಟ್ರಿ ಕೊಟ್ಟ ರಕ್ಷಿತಾ?
ಈ ಘಟನೆ ಉತ್ತರ ಪ್ರದೇಶದ ಜೌನ್ಪುರ ಜಿಲ್ಲೆಯ ಕುಚ್ಮುಚ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವೃದ್ಧರೊಬ್ಬರು ಒಂದು ವರ್ಷದ ಹಿಂದೆ ತನ್ನ ಮೊದಲ ಪತ್ನಿಯನ್ನು ಕಳೆದುಕೊಂಡಿದ್ದರು. ಅಂದಿನಿಂದ ಒಂಟಿಯಾಗಿ ವಾಸಿಸುತ್ತಿದ್ದರು. ಹೀಗಾಗಿ ಆ ವೃದ್ಧ ಎರಡನೇ ಮದುವೆಯಾಗಲು ನಿರ್ಧರಿಸಿದ್ರು, ಅವರ ಕುಟುಂಬದವರು ಎರಡನೇ ಮದುವೆಯಾಗುವುದು ಬೇಡ ಎಂದು ಹೇಳಿದ್ರೂ ಸೆಪ್ಟೆಂಬರ್ 29, ಸೋಮವಾರ, ಅವರು ಜಲಾಲ್ಪುರ ಪ್ರದೇಶದ ನಿವಾಸಿ 35 ವರ್ಷದ ಮನ್ಭವತಿ ಅವರನ್ನು ವಿವಾಹವಾದರು. ಕೋರ್ಟ್ ನಲ್ಲಿ ರಿಜಿಸ್ಟ್ರೇಷನ್ ಮಾಡಿಕೊಂಡು ಬಳಿಕ ದೇವಸ್ಥಾನದಲ್ಲಿ ಮದುವೆಯಾಗಿದ್ರು.
ಮದುವೆ ಬಳಿಕ ಮಹಿಳೆ ಮನ್ಭವತಿ ಮಾತನಾಡಿ, ನನ್ನ ಪತಿ ನನ್ನ ಪಕ್ಕಳನ್ನು ನೋಡಿಕೊಳ್ಳುತ್ತೇನೆ, ಮನೆಯ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದ್ದರು ಎಂಬುದಾಗಿ ಹೇಳಿದ್ದಾಳೆ. ಮದುವೆಯ ಮರುದಿನವೇ ಆ ವ್ಯಕ್ತಿ ಸಾವನ್ನಪ್ಪಿದ್ದಾರೆ. ಬೆಳಗ್ಗೆ ಹೊತ್ತಿಗೆ ಸಂಗ್ರರಾಮ್ ಅವರ ಆರೋಗ್ಯ ಹದಗೆಟ್ಟಿತ್ತು. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು. ಈ ಹಠಾತ್ ಸಾವು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕೆಲವು ನಿವಾಸಿಗಳು ಇದನ್ನು ಸಹಜ ಸಾವೆಂದು ಕರೆದರೆ, ಇನ್ನು ಕೆಲವರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿ ವಾಸಿಸುವ ಸೋದರಳಿಯರು ಸೇರಿದಂತೆ ಮೃತರ ಸಂಬಂಧಿಕರು ಅಂತ್ಯಕ್ರಿಯೆಯ ವಿಧಿಗಳನ್ನು ಸ್ಥಗಿತಗೊಳಿಸಿದ್ದಾರೆ. ಪೊಲೀಸ್ ವಿಚಾರಣೆ ಅಥವಾ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುತ್ತದೆಯೇ ಎಂಬ ಬಗ್ಗೆ ಸ್ಥಳೀಯವಾಗಿ ಪ್ರಶ್ನೆಗಳು ಎದ್ದಿವೆ.

ನೋಡಿರಿ

