ಗಿಲ್ಲಿ, ಮಾಳುಗೆ ಮಲ್ಲಮ್ಮ ಕ್ಲಾಸ್.. ಮರ್ಯಾದೆಗಾಗಿ ಅಶ್ವಿನಿ ರಾಂಗ್ – BBKಗೆ ಮತ್ತೆ ಎಂಟ್ರಿ ಕೊಟ್ಟ ರಕ್ಷಿತಾ?

ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾದ ದಿನದಿಂದಲೇ ಸ್ಪರ್ಧಿಗಳಿಗೆ ಒಂದಾದಮೇಲೊಂದು ಟ್ವಿಸ್ಟ್ ಕೊಟ್ಟು ಶಾಕ್ ನೀಡಲಾಗ್ತಿದೆ. ಮನೆಯೊಳಗೆ ಕಾಲಿಟ್ಟ ಕೆಲವೇ ಗಂಟೆಗಳಲ್ಲಿ ರಕ್ಷಿತಾ ಶೆಟ್ಟಿ ಎಲಿಮಿನೇಟ್ ಆಗಿದ್ರು.. ಎರಡನೇ ದಿನ ಬಿಗ್ ಬಾಸ್ ಮೂರನೇ ವಾರದಲ್ಲೇ ಒಂದು ಫಿನಾಲೆ ನಡೆಯಲಿದೆ ಎಂದು ಹೇಳಿದರು. ಇದೀಗ ದೊಡ್ಮನೆಯಲ್ಲಿ ಟಾಸ್ಕ್ ಆರಂಭದ ಜೊತೆಗೆ ಮನೆ ಮಂದಿ ಮಧ್ಯೆ ಕಿರಿಕ್ ಕೂಡ ಶುರುವಾಗಿದೆ. ಗಿಲ್ಲಿ ಕಾಟ್ಲೆಗೆ ಅಶ್ವಿನಿ ಗೌಡ ರಾಂಗ್ ಆದ್ರೆ, ಇತ್ತ ಮಲ್ಲಮ್ಮ ಕೂಡ ಗಿಲ್ಲಿ ಮಾಳುಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ದೊಡ್ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಕೂಡ ಶುರುವಾಗಿದ್ರೆ, ಹೊರಡೆ ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಗೆ ಮತೆ ಬರ್ತಿದ್ದಾರೆ ಅನ್ನೋ ಟಾಕ್ ಶುರುವಾಗಿದೆ.
ಇದನ್ನೂ ಓದಿ: ಹಬ್ಬದ ದಿನವೇ ಗ್ರಾಹಕರಿಗೆ ಶಾಕ್! – LPG ಸಿಲಿಂಡರ್ ಬೆಲೆ 16 ರೂ. ಏರಿಕೆ!
ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗಿ ಮೂರು ದಿನ ಕಳೆದಿದೆ. 18 ಮಂದಿ ಸ್ಪರ್ಧಿಗಳು ಈಗೀಗ ಬಿಗ್ ಬಾಸ್ ಮನೆಗೆ ಹೊಂದಿಕೊಳ್ಳುತ್ತಿದ್ದಾರೆ. ಹಾಗೇ ನಿಧಾನವಾಗಿ ಮನೆಯೊಳಗೆ ಕಿತ್ತಾಟಗಳು ಶುರುವಾಗಿದೆ. ಒಂಟಿ ಹಾಗೂ ಜಂಟಿ ಸದಸ್ಯರ ನಡುವೆ ವೈಮನಸ್ಸು ಶುರುವಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಇದು ತಾರಕಕ್ಕೇರುವ ಸಾಧ್ಯತೆಯಿದೆ. ಮೊದಲೆರಡು ದಿನ ಜಾಲಿ ಜಾಲಿಯಾಗಿದ್ದ ಸದಸ್ಯರು ವೈಲೆಂಟ್ ಆಗುವುದಕ್ಕೆ ಶುರುವಾಗಿದ್ದಾರೆ. ಇದೀಗ ದೊಡ್ಮನೆಯಲ್ಲಿ ಗಿಲ್ಲಿ ಕಾಟ್ಲೆಗೆ ಮನೆಮಂದಿ ಸುಸ್ತಾಗಿದ್ದಾರೆ. ಒಂದಾದ ಮೇಲೊಂದು ರೂಲ್ಸ್ ಬ್ರೇಕ್ ಮಾಡಿ, ಮನೆ ಮಂದಿ ಕೆಂಗಣ್ಣಿಗೆ ಗುರಿಯಾಗ್ತಿದ್ದಾರೆ.
ಸೀಸನ್ 12 ರಲ್ಲಿ ಒಂಟಿ, ಜಂಟಿ ಕಾನ್ಸೆಪ್ಟ್ ಇಡಲಾಗಿದೆ. ಜಂಟಿಗಳು ಒಂಟಿಗಳು ಹೇಳಿದ ಕೆಲಸ ಮಾಡ್ಬೇಕಾಗುತ್ತೆ. ನಿನ್ನೆಯ ಎಲಿಸೋಡ್ನಲ್ಲಿ ಜಂಟಿಗಳು ಒಂಟಿಗಳು ಹೇಳಿದ ಕೆಲ್ಸ ಮಾಡಿದ್ರೆ ಗಿಲ್ಲಿ ಮಾತ್ರ ಬಿಗ್ ಬಾಸ್ ರೂಲ್ಸ್ ಗಳನ್ನೇ ಬ್ರೇಕ್ ಮಾಡ್ತಾ ಬಂದಿದ್ದಾರೆ. ಇದನ್ನ ನೋಡಿ ಒಂಟಿಗಳು ಸುಮ್ನಿದ್ರು. ಇದಕ್ಕೆ ಬಿಗ್ ಬಾಸ್ ವಾರ್ನ್ ಮಾಡಿ ಒಂಟಿಗಳಿಗೆ ಶಿಕ್ಷೆ ನೀಡಿದ್ರು. ಬಳಿಕ ಬಿಗ್ ಬಾಸ್ ಈ ಸೀಸನ್ ನಲ್ಲಿ ಮೂರೇ ವಾರಕ್ಕೆ ಫಿನಾಲೆ ನಡೆಯಲಿದೆ. ಬ್ಯಾಕ್ ಟು ಬ್ಯಾಕ್ ಎಲಿಮಿನೇಷನ್ ನಡೆಯಲಿದೆ ಎಂದು ಹೇಳಿದ್ದಾರೆ. ಬಳಿಕ ನಾಮಿನೇಷನ್ ಪ್ರಕ್ರಿಯೆ ಕೂಡ ದೊಡ್ಮನೆಯಲ್ಲಿ ನಡೆದಿದೆ. ಈ ವೇಳೆ ಮಾಳು ಸ್ಪಂದನಾ ಎಲ್ಲರ ಜೊತೆ ಬೆರೆತಿಲ್ಲ ಅನ್ನೋ ರೀಸನ್ ಕೊಟ್ಟು ನಾಮಿನೇಟ್ ಮಾಡಿದ್ದಾರೆ. ಇನ್ನು ಗಿಲ್ಲಿ ಕಾವ್ಯ ಶೈವ ಕೂಡ ನಾಮಿನೇಟ್ ಆಗಿದ್ದಾರೆ. ಗಿಲ್ಲಿ ಸೀರಿಯಲ್ ಆಗಿಲ್ಲ.. ಮನೆ ರೂಲ್ಸ್ ಬ್ರೇಕ್ ಮಾಡ್ತಿದ್ದಾರೆ ಅಂತಾ ಹೇಳಿದ್ದಾರೆ. ಇನ್ನು ದೊಡ್ಮನೆಯಲ್ಲಿ ನಟಿ ಅಶ್ವಿನಿ ಗೌಡ ತನ್ನ ಪ್ರಾಬಲ್ಯ ಸಾಧಿಸಲು ಮುಂದಾಗಿದ್ದಾರೆ. ನಾಮಿನೇಷನ್ ಪ್ರಕ್ರಿಯೆ ವೇಳೆ, ನಾವು ಏನಾದ್ರೂ ಹೇಳಿದ್ರೆ ನೀವು ತುಂಬಾ ಅದನ್ನ ಪರ್ಸನಲ್ ಆಗಿ ತೆಗೆದುಕೊಳ್ತೀರಾ ಅಂತಾ ಹೇಳಿದ್ದಾರೆ. ಇದಕ್ಕೆ ಗಿಲ್ಲಿ ಪ್ರತಿಕ್ರಿಯೆ ಕೊಡಲು ಮುಂದಾದಗ ಅಶ್ವಿನಿ ಫುಲ್ ವಾಯ್ಸ್ ರೈಸ್ ಮಾಡಿದ್ದಾರೆ.. ಗೌರವ ಕೊಟ್ಟು ಮಾತಾನಾಡು.. ಮರ್ಯಾದೆ ಕೊಡು ಅಂತಾ ವಾದ ಮಾಡಿದ್ದಾರೆ. ಇದೇ ಅಶ್ವಿನಿ ಕಾವ್ಯ ಹಾಗೂ ಗಿಲ್ಲಿ ನಟನ ಮೇಲೆ ಸಿಡಿದೆದ್ದಿದ್ದಾರೆ. ಇಬ್ಬರೂ ಅವಾಜ್ ಹಾಕಿ ಗದರಿಸಿದ್ದಾರೆ. ಈ ಮೂವರ ನಡುವೆ ವಾದ-ವಿವಾದ ನಡೆದಿದೆ. ತನ್ನ ತಪ್ಪಿಲ್ಲ ಅಂದ್ರೂ ಗಿಲ್ಲಿ ಕಾವ್ಯ ಸಾರಿ ಕೇಳಿದ್ದಾರೆ.
ಮತ್ತೊಂದ್ಕಡೆ ಮಲ್ಲಮ್ಮ ದೊಡ್ಮನೆಯಲ್ಲಿ ಎಲ್ಲರ ಜೊತೆ ಬೆರಿತಾ ಇದ್ದಾರೆ. ದೊಡ್ಮನೆ ರೂಲ್ಸ ಗಳನ್ನ ಅರ್ಥ ಮಾಡಿಕೊಳ್ತಿದ್ದಾರೆ. ಜಂಟಿಗಳ ಕೈಯಲ್ಲಿ ಕೆಲಸ ಮಾಡಿಸಿಕೊಳ್ತಿದ್ದಾರೆ. ನಾಮಿನೇಷನ್ ಪ್ರಕ್ರಿಯೆ ವೇಳೆ ಗಿಲ್ಲಿ ಮಾಳು ಇನ್ನೂ ಮಾತನಾಡ್ಬೇಕು.. ಎಲ್ಲರ ಜೊತೆ ಬೆರಿಬೇಕು ಅಂದಿದ್ದಾರೆ. ಇನ್ನು ಗಿಲ್ಲಿ, ಕಾವ್ಯರನ್ನ ಕೂಡ ಮಲ್ಲಮ್ಮ ನಾಮಿನೇಟ್ ಮಾಡಿದ್ದಾರೆ. ನಾನು ಹಳ್ಳಿಯಿಂದ ಬಂದಿದ್ದೀನಿ.. ನಾನು ಮೂರು ಸಲ ನೀರು ಕೇಳಿದೆ ಕೊಟ್ಟಿಲ್ಲ ಅಂತಾ ರೀಸನ್ ಕೊಟ್ಟಿದ್ದಾರೆ. ಬಳಿಕ ಫಿನಾಲೆಗೆ ಎಂಟ್ರಿ ಕೊಡಲು ಬಿಗ್ ಬಾಸ್ ಟಾಸ್ಕ್ ವೊಂದನ್ನ ಕೊಟ್ಟಿದ್ರು. ನಾಮಿನೇಟ್ ಆದ ಸ್ಪರ್ಧಿಗಳನ್ನ ಬಿಟ್ಟು ಉಳಿದ ಸ್ಪರ್ಧಿಗಳು ಟಾಸ್ಕ್ ನಲ್ಲಿ ಭಾಗಿಯಾಗಿದ್ದಾರೆ.
ಮತ್ತೊಂದ್ಕಡೆ ಮೊದಲ ದಿನವೇ ಎಲಿಮಿನೇಟ್ ಆದ ರಕ್ಷಿತಾ ಶೆಟ್ಟಿ ಮತ್ತೆ ಬಿಗ್ ಬಾಸ್ ಗೆ ಬರ್ಬೇಕು ಅಂತಾ ವೀಕ್ಷಕರು ಒತ್ತಾಯಿಸ್ತಿದ್ರೆ, ಇನ್ನೂ ಕೆಲವರು ರಕ್ಷಿತಾ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬರ್ತಾರೆ ಅಂತಾ ಹೇಳ್ತಿದ್ದಾರೆ. ಕಳೆದ ವರ್ಷ ನಡೆದ ‘ಬಿಗ್ ಬಾಸ್ ತಮಿಳು ಸೀಸನ್ 8ರಲ್ಲೂ ಇದೇ ರೀತಿ ಒಂದು ಟ್ವಿಸ್ಟ್ ನೀಡಲಾಗಿತ್ತು. ವಿಜಯ್ ಸೇತುಪತಿ ನಿರೂಪಣೆ ಮಾಡುತ್ತಿದ್ದ ಆ ಶೋನಲ್ಲಿ ಒಟ್ಟು 19 ಮಂದಿ ಸ್ಪರ್ಧಿಗಳು ಬಿಗ್ ಬಾಸ್ ತಮಿಳು ಶೋಗೆ ಕಾಲಿಟ್ಟಿದ್ದರು. ಅದರಲ್ಲಿ ನಟಿ ಸಚನಾ ನಮಿದಾಸ್ ಅವರನ್ನು ಕೂಡ ಬಿಗ್ ಬಾಸ್ ಮನೆಗೆ ಕಳುಹಿಸಲಾಗಿತ್ತು. ಬಳಿಕ ಮೂರ್ನಾಲ್ಕು ದಿನಗಳಲ್ಲಿ ಪುನಃ ಅವರನ್ನು ಮನೆಯೊಳಗೆ ಕರೆಸಿಕೊಳ್ಳಲಾಗಿತ್ತು. ಇದೀಗ ರಕ್ಷಿತಾ ಕೂಡ ದೊಡ್ಮನೆಗೆ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗ್ತಿದೆ. ಇನ್ನು ಬಿಗ್ ಬಾಸ್ ಮನೆಯಿಂದ ಆಚೆ ಬರ್ತಿದ್ರೆ ಆಕೆ ಸೋಶೀಯಲ್ ಮೀಡಿಯಾದಲ್ಲೂ ಆಕ್ಟಿವ್ ಇರ್ತಿದ್ರು. ಆದ್ರೆ ಸದ್ಯಕ್ಕೆ ರಕ್ಷಿತಾ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಇಲ್ಲ. ಹೀಗಾಗಿ ಆಕೆ ಮತ್ತೆ ದೊಡ್ಮನೆಗೆ ಎಂಟ್ರಿ ಕೊಡೋದು ಪಕ್ಕಾ ಅಂತಾ ಹೇಳಲಾಗ್ತಿದೆ.
ಒಟ್ಟಾರೆ ಬಿಗ್ ಬಾಸ್ ಸೀಸನ್ 12 ಸಾಕಷ್ಟು ಕ್ಯೂರಿಯಾಸಿಟಿ ಮೂಡಿದೆ. ಮೂರನೇ ವಾರ ನಡೆಯಲಿರೋ ಫಿನಾಲೆಯಲ್ಲಿ ಯಾರು ವಿನ್ ಆಗ್ಬೋದು ಅನ್ನೋ ಕ್ಯೂರಿಯಾಸಿಟಿ ಒಂದ್ಕಡೆಯಾದ್ರೆ, ರಕ್ಷಿತಾ ಮತ್ತೆ ಬಿಗ್ ಬಾಸ್ ಮನೆಯಲ್ಲಿ ಕಾಣಿಸಿಕೊಳ್ತಾರಾ ಅನ್ನೋ ಪ್ರಶ್ನೆ ವೀಕ್ಷಕರನ್ನ ಕಾಡ್ತಿದೆ.

ನೋಡಿರಿ

