ಪೀಕ್‌ ಅವರ್‌ನಲ್ಲಿ ಸಿಂಗಲ್‌ ಆಗಿ ಕಾರ್‌ ಓಡಿಸ್ತೀರಾ? – ಇನ್ಮುಂದೆ ಟಾಕ್ಸ್‌ ಕಟ್ಟಲು ರೆಡಿ ಆಗಿ!

ಪೀಕ್‌ ಅವರ್‌ನಲ್ಲಿ ಸಿಂಗಲ್‌ ಆಗಿ ಕಾರ್‌ ಓಡಿಸ್ತೀರಾ? – ಇನ್ಮುಂದೆ ಟಾಕ್ಸ್‌ ಕಟ್ಟಲು ರೆಡಿ ಆಗಿ!

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಎಲ್ಲಿ ನೋಡಿದ್ರೂ ಟಾಫಿಕ್‌.. ಪೀಕ್‌ ಅವರ್‌ ನಲ್ಲಿ ಗಂಟೆಗಟ್ಟಲೇ ರಸ್ತೆಯಲ್ಲೇ ಕಾಲಕಳೆಯಬೇಕಾಗುತ್ತೆ. ಇದೀಗ ರಾಜ್ಯ ಸರ್ಕಾರ ಹೊಸ ನಿಯಮವೊಂದನ್ನ ಜಾರಿ ತರಲು ಸಿದ್ಧವಾಗಿದೆ. ಒಂದ್ವೇಳೆ ಈ ನಿಯಮ ಜಾರಿಗೆ ಬಂದ್ರೆ ಬೆಂಗಳೂರಿನಲ್ಲಿ ಪೀಕ್‌ ಅವರ್‌ ವೇಳೆ ನೀವು ಸಿಂಗಲ್‌ ಆಗಿ ಕಾರ್‌ ಓಡಿಸಿದ್ರೆ ಟ್ಯಾಕ್ಸ್‌ ಕಟ್ಟಲೇಬೇಕು. ಈ ನಿಯಮ ಶ್ರೀಘ್ರದಲ್ಲೇ ಜಾರಿಗೆ ಬರಲಿದೆ.

ಇದನ್ನೂ ಓದಿ: ಸ್ವಿಗ್ಗಿಯಲ್ಲಿ ಆರ್ಡರ್‌ ಮಾಡಿದ್ದು ಬೆಳ್ಳಿ ನಾಣ್ಯ! – ಗ್ರಾಹಕನ ಕೈಸೇರಿದ್ದು ಏನು ಗೊತ್ತಾ?

ಸೆಪ್ಟೆಂಬರ್ 24 ರಂದು ಸಂಚಾರ ದಟ್ಟಣೆ, ಗುಂಡಿ ಸಮಸ್ಯೆ ಬಗ್ಗೆ ವಿವಿಧ ಇಲಾಖೆಗಳ ಕೋ ಆರ್ಡಿನೇಶನ್ ಮತ್ತು ಕೆಲ ಉದ್ಯಮಿಗಳ ಮಹತ್ವದ ಸಭೆ ನಡೆದಿದೆ. ಮುಖ್ಯಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ‌ನಡೆದಿದ್ದ ಸಭೆಯಲ್ಲಿ ತಜ್ಞರು ಸಂಚಾರ ದಟ್ಟಣೆ ಟ್ಯಾಕ್ಸ್ ಪ್ರಸ್ತಾಪ ಇಟ್ಟಿದ್ದಾರೆ. ಫಾಸ್ಟ್ ಟ್ಯಾಗ್ ಸಿಸ್ಟಮ್ ಮೂಲಕ ಸಂಚಾರ ದಟ್ಟಣೆ ಇರುವ ನಿರ್ದಿಷ್ಟ ರಸ್ತೆಗಳಲ್ಲಿ ಟ್ಯಾಕ್ಸ್ ಪ್ರಸ್ತಾಪ ಇಟ್ಟಿದ್ದಾರೆ. ಅಲ್ಲದೆ ಕಾರ್ ಪೂಲಿಂಗ್ ಬಗ್ಗೆಯೂ ಪ್ರಸ್ತಾಪ ಮಾಡಿದ್ದಾರೆ.

ಮುಖ್ಯ ಕಾರ್ಯದರ್ಶಿಗಳ ಸಭೆಯಲ್ಲಿ ನಡೆದ ತಜ್ಞರ ಸಮಿತಿ ಈ ಪ್ರಸ್ತಾಪಕ್ಕೆ ಸರ್ಕಾರದಿಂದ ಗ್ರೀನ್ ಸಿಗ್ನಲ್ ನೀಡಿಲ್ಲ. ಸಂಚಾರ ದಟ್ಟಣೆ ಟ್ಯಾಕ್ಸ್ ಹಾಕಿರೆ ಸಾರ್ವಜನಿಕವಾಗಿ ವ್ಯಾಪಕವಾಗಿ ಆಕ್ರೋಶ ಸಾಧ್ಯತೆ ಅರಿತು ಆ ಪ್ರಸ್ತಾಪ ರಿಜೆಕ್ಟ್ ಆಗಬಹುದು. ಹಾಗಾಗಿ ಸರ್ಕಾರ ಮಟ್ಟದಲ್ಲಿ ಇನ್ನೂ ಅಂತಿಮ ತೀರ್ಮಾನ ಆಗಿಲ್ಲ.‌

ಲಂಡನ್, ಸಿಂಗಾಪುರ್, ನ್ಯೂಯಾರ್ಕ್ ನಗರಗಳಲ್ಲಿ ಸಂಚಾರಣ ದಟ್ಟಣೆ ಟ್ಯಾಕ್ಸ್ ಬಗ್ಗೆ ಉಲ್ಲೇಖಿಸಲಾಗಿದ್ದು, ಬೆಂಗಳೂರು ನಗರದ ಟ್ರಾಫಿಕ್ ವ್ಯವಸ್ಥೆಯನ್ನು ಅಲ್ಲಿಗೆ ಹೋಲಿಸಿ ಟ್ಯಾಕ್ಸ್ ಹಾಕುವ ಪ್ರಸ್ತಾಪಕ್ಕೆ ಬಿಜೆಪಿ ತೀವ್ರವಾಗಿ ವಿರೋಧಿಸಿದೆ.

ಏನಿದು ಸಂಚಾರ ದಟ್ಟಣೆ ತೆರಿಗೆ?

ಪೀಕ್ ಅವರ್ ನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿರುವ ನಿರ್ದಿಷ್ಟ ರಸ್ತೆಗಳಲ್ಲಿ ಜಾರಿ. ಒಬ್ಬರೇ ಕಾರು ಓಡಿಸಿದರೆ ಸಂಚಾರ ದಟ್ಟಣೆ ತೆರಿಗೆ ಕಟ್ಟಬೇಕು. ಫಾಸ್ಟ್ ಟ್ಯಾಗ್ ಮೂಲಕ ಸಂಚಾರ ದಟ್ಟಣೆ ತೆರಿಗೆ ಕಡಿತ ಮಾಡಲು ಪ್ರಸ್ತಾಪ ಇಡಲಾಗಿದೆ.

Shwetha M