ಕಿರಿಕ್ ನಲ್ಲೇ ಮುಗಿದ ASIA CUP – ಪಾಕಿಗಳ ದೌಲತ್ತಿನ ಆಟ
ಅಜೇಯ ಟೀಂ ಇಂಡಿಯಾಗೆ ಸಲಾಂ

2025ರ ಏಷ್ಯಾಕಪ್ ಟೂರ್ನಿ ಮ್ಯಾಚ್ಗಿಂತ ಜಾಸ್ತಿ ಕಾಂಟ್ರವರ್ಸಿಗಳಲ್ಲಿ ಸದ್ದು ಮಾಡಿತ್ತು. 8 ಟೀಮ್ಗಳ ನಡುವೆ ಫೈಟ್ ನಡೆದ್ರೂ ಕೂಡ ಟೀಂ ಇಂಡಿಯಾನೇ ಅಲ್ಲಿ ಬಾಸ್. ಹೀಗಾಗಿ ಭಾರತದ ಪಂದ್ಯಗಳನ್ನ ಬಿಟ್ರೆ ಉಳಿದ್ಯಾವ ಪಂದ್ಯಗಳೂ ಇಂಟ್ರೆಸ್ಟಿಂಗ್ ಅನ್ನಿಸ್ಲಿಲ್ಲ. ಇನ್ನೇನು ಟೂರ್ನಿ ಮುಗ್ಯೋ ಟೈಮಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ಒಂದ್ ರೇಂಜ್ ಫೈಟ್ ಕೊಟ್ರೂ ಕೂಡ ಗೆಲುವು ದಕ್ಕಿಸಿಕೊಳ್ಳೋಕೆ ಸಾಧ್ಯ ಆಗ್ಲಿಲ್ಲ. ಹೀಗಿದ್ರೂ ಟೂರ್ನಿಯಲ್ಲಿ ಒಂದಷ್ಟು ಕಿರಿಕ್ಗಳು ಸಿಕ್ಕಾಪಟ್ಟೆ ಸದ್ದು ಮಾಡಿವೆ. ಸೆಪ್ಟೆಂಬರ್ 9 ರಿಂದ ಆರಂಭವಾದ ಏಷ್ಯಾಕಪ್ ಟೂರ್ನಿ ಸೆಪ್ಟೆಂಬರ್ 28 ರಂದು ದುಬೈನಲ್ಲಿ ಮುಕ್ತಾಯಗೊಂಡಿದೆ. ಭಾರತ ತಂಡ ದಾಖಲೆಯ 9 ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ಈ ಟೂರ್ನಿ ಪಂದ್ಯಗಳಿಗಿಂತಲೂ ಜಾಸ್ತಿ ಬೇರೆಯದ್ದೇ ವಿಚಾರಗಳಲ್ಲಿ ಜಾಸ್ತಿ ಸುದ್ದಿಯಾಗಿದೆ. ಮೈದಾನದಲ್ಲಿನ ಜಗಳ, ವಿವಾದ, ಏಟು ಎದಿರೇಟು, ಸೆಂಡ್ ಆಫ್ ರಿವೇಂಜ್ ಹೀಗೆ ಹತ್ತಾರು ವಿವಾದಗಳನ್ನ ಸೃಷ್ಟಿಸಿದೆ. ಭಾರತ ವರ್ಸಸ್ ಪಾಕಿಸ್ತಾನ ಪಂದ್ಯಗಳೇ ವಿವಾದದ ಕೇಂದ್ರಬಿಂದುಗಳಾಗಿವೆ.
ಇದನ್ನೂ ಓದಿ : ರಾಹುಲ್ ಗಾಂಧಿ ಎದೆಗೆ ಗುಂಡು ಹೇಳಿಕೆ – ಬಿಜೆಪಿ ನಾಯಕನ ಮೇಲೆ FIR!
ಲೀಗ್ ಹಂತದ ಪಂದ್ಯದಲ್ಲಿ ನೋ ಶೇಕ್ ಹ್ಯಾಂಡ್ ವಿವಾದ!
ಈ ಬಾರಿಯ ಟೂರ್ನಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ವಿಚಾರ ಅಂದ್ರೆ ನೋ ಶೇಕ್ ಹ್ಯಾಂಡ್ ನಿಲುವು. ಭಾರತ ಮತ್ತು ಪಾಕಿಸ್ತಾನ ತಂಡಗಳು ಲೀಗ್ ಹಂತದಲ್ಲಿ ಸೆಪ್ಟೆಂಬರ್ 14ರಂದು ಮುಖಾಮುಖಿಯಾಗಿದ್ವು. ಆದ್ರೆ ಟಾಸ್ ಟೈಮಲ್ಲಿ ಭಾರತೀಯ ಕ್ಯಾಪ್ಟನ್ ಸೂರ್ಯಕುಮಾರ್ ಪಾಕಿಸ್ತಾನಿ ನಾಯಕನ ಜೊತೆ ಕೈಕುಲುಕಿರಲಿಲ್ಲ. ಮ್ಯಾಚ್ ಮುಗಿದ್ಮೇಲೂ ಕೂಡ ಪಾಕ್ ಆಟಗಾರರೊಂದಿಗೆ ಯಾರೂ ಕೂಡ ಹ್ಯಾಂಡ್‌ಶೇಕ್ ಮಾಡಲಿಲ್ಲ. ಌಂಡ್ ನೆಕ್ಸ್ಟ್ ಸೂಪರ್ 4 ಮತ್ತು ಫೈನಲ್ ಪಂದ್ಯದಲ್ಲೂ ನೋ ಶೇಕ್ ಹ್ಯಾಂಡ್ ಪಾಲಿಸಿ ಹಾಗೇ ಕಂಟಿನ್ಯೂ ಆಗಿತ್ತು.
ಶೇಕ್ ಹ್ಯಾಂಡ್ ವಿವಾದದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶೇಪ್ ಔಟ್ ಆದ ಪಾಕಿಸ್ತಾನ ಇದನ್ನ ಪ್ಯಾಚ್ ಅಪ್ ಮಾಡೋಕೆ ಹೊಸ ಐಡಿಯಾ ಮಾಡಿತ್ತು. ಮ್ಯಾಚ್ ರೆಫರಿ ಆಗಿದ್ದ ಆಂಡಿ ಪೈಕ್ರಾಫ್ಟ್ ವಿರುದ್ಧ ICC ಗೆ ದೂರು ನೀಡಿತ್ತು. ಪಂದ್ಯಾವಳಿಯಿಂದ ವಜಾಗೊಳಿಸುವಂತೆ ಆಗ್ರಹಿಸಿತ್ತು. ಯುಎಇ ವಿರುದ್ಧ ಪಂದ್ಯ ಬಹಿಷ್ಕರಿಸುವ ಎಚ್ಚರಿಕೆಯನ್ನೂ ನೀಡಿತ್ತು. ಆದ್ರೆ ಐಸಿಸಿ ಕೇರೇ ಮಾಡಿರಲಿಲ್ಲ. ಕೊನೆಗೆ ಯುಎಇ ವಿರುದ್ಧ ಒಂದು ಗಂಟೆ ತಡವಾಗಿ ಮ್ಯಾಚ್ ಆರಂಭಿಸಿದ್ರು.
ರೌಫ್ ಗೆ ಬ್ಯಾಕ್ ಫೈರ್ ಆದ ಪ್ಲೇನ್ ಕ್ರಾಶ್ ಅಣಕ!
ಇನ್ನು ಟೂರ್ನಿಯಲ್ಲಿ ಪಾಕಿಸ್ತಾನಿ ಆಟಗಾರರು ಸಾಕಷ್ಟು ಕಿರಿಕ್ಗಳನ್ನ ಮಾಡಿದ್ರು. ಸೂಪರ್ 4 ಪಂದ್ಯದ ವೇಳೆ ಪಾಕಿಸ್ತಾನದ ಬೌಲರ್ ಹ್ಯಾರಿಸ್ ರೌಫ್ ಭಾರತೀಯ ಫೈಟರ್ ಜೆಟ್ ಕ್ರಾಶ್ ಹಾಗೇ 6-0 ಎನ್ನುವಂತೆ ಸನ್ನೆ ಮೂಲಕ ಅಣಕಿಸಿದ್ದ. ಇದಕ್ಕೆ ಐಸಿಸಿ ಫೈನ್ ಕೂಡ ಹಾಕಿತ್ತು. ರೌಫ್ ಮಾಡಿದ್ದ ಈ ಕುಚೇಷ್ಠೆಗೆ ಟೀಂ ಇಂಡಿಯಾ ಆಟಗಾರರಾದ ಅರ್ಶದೀಪ್ ಸಿಂಗ್ ಮತ್ತು ಜಸ್ಪ್ರೀತ್ ಬುಮ್ರಾ ಸರಿಯಾಗೇ ತಿರುಗೇಟು ಕೊಟ್ಟಿದ್ರು.
ಹಸರಂಗಾ & ಅಬ್ರಾರ್ ಸೆಂಡ್ ಆಫ್ ಮಿಮಿಕ್!
ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಪಂದ್ಯದಲ್ಲೂ ವನಿಂದು ಹಸರಂಗ ಮತ್ತು ಅಬ್ರಾರ್ ಅಹ್ಮದ್ ಒಬ್ಬರನ್ನ ಒಬ್ಬರು ಇಮಿಟೇಟ್ ಮಾಡಿದ್ರು. ಮೊದ್ಲಿಗೆ ಲಂಕಾ ಬ್ಯಾಟಿಂಗ್ ಟೈಮಲ್ಲಿ ಹಸರಂಗ ಔಟ್ ಆದಾಗ ಅಬ್ರಾರ್ ಅಹ್ಮದ್ ಹಸರಂಗ ಸ್ಟೈಲ್ನಲ್ಲಿ ಸೆಂಡ್ ಆಫ್ ಕೊಟ್ಟಿದ್ದ. ಈ ಟೈಮಲ್ಲಿ ಸುಮ್ಮನಿದ್ದ ಹಸರಂಗ ತಮ್ಮ ಟರ್ಮ್ ಬಂದಾಗ ರಿವೇಂಜ್ ತಗೊಳ್ಳೋದನ್ನ ಮರೀಲಿಲ್ಲ. ಫಖರ್ ಜಮಾನ್ ಅವರ ಅದ್ಭುತ ಕ್ಯಾಚ್ ಹಿಡಿದು ಪೆವಿಲಿಯನ್ಗೆ ಕಳುಹಿಸಿದರು. ಜೊತೆಗೆ ಸೈಮ್ ಅಯೂಬ್ ಮತ್ತು ಸಲ್ಮಾನ್ ಅಲಿ ಅಘಾ ವಿಕೆಟ್ ಪಡೆದರು. ಈ ಮೂರು ಬಾರಿಯೂ ಅಬ್ರಾರ್ ಅಹ್ಮದ್ ವಿಕೆಟ್ ತೆಗೆದು ಸಂಭ್ರಮಿಸೋ ರೀತಿಯಲ್ಲೇ ಮಿಮಿಕ್ ಮಾಡಿ ತಿರುಗೇಟು ಕೊಟ್ಟಿದ್ರು.
ಭಾರತ ವಿರುದ್ಧದ ಮ್ಯಾಚಲ್ಲೂ ಅಬ್ರಾರ್ ಅತಿರೇಕ!
ಇನ್ನು ಅಬ್ರಾರ್ ಅಹ್ಮದ್ ಫೈನಲ್ ಮ್ಯಾಚಲ್ಲೂ ಮಂಗಾಟ ಮಾಡಿದ್ದ. ಸಂಜು ಸ್ಯಾಮ್ಸನ್ರನ್ನ ಔಟ್ ಮಾಡಿ ಕುತ್ತಿಗೆ ಮತ್ತು ಕಣ್ಸನ್ನೆಯಲ್ಲಿ ಪೆವಿಲಿಯನ್ಗೆ ನಡಿ ಎನ್ನುವಂತೆ ಟಾಂಟ್ ಕೊಟ್ಟಿದ್ದ. ಮೊದ್ಲೇ ನಮ್ಮ ಭಾರತೀಯರಿಗೆ ಕೊಟ್ಟಿದ್ದನ್ನ ವಾಪಸ್ ಕೊಡ್ದೇ ಇದ್ರೆ ಸಮಾಧಾನನೇ ಇರಲ್ಲ. ಸೋ ಮ್ಯಾಚ್ ವಿನ್ ಆದ್ಮೇಲೆ ಅರ್ಶದೀಪ್ ಸಿಂಗ್, ಜಿತೇಶ್ ಶರ್ಮಾ, ಹರ್ಷಿತ್ ರಾಣಾ ಮೂರೂ ಜನ ಸೇರ್ಕೊಂಡು ಸರಿಯಾಗೇ ರೋಸ್ಟ್ ಮಾಡಿದ್ದಾರೆ. ಅಬ್ರಾರ್ ಅಹ್ಮದ್ ಶೇಪ್ ಔಟ್ ಆಗುವಂತೆ ಟಾಂಟ್ ಕೊಟ್ಟಿದ್ರು.
ರನ್ನರ್ ಅಪ್ ಚೆಕ್ ಬಿಸಾಕಿದ್ದ ಸಲ್ಮಾನ್ ಅಲಿ ಅಘಾ!
ಭಾರತದ ವಿರುದ್ಧ ಫೈನಲ್ನಲ್ಲಿ ಸೋತ ಮೇಲೆ ಪಾಕಿಸ್ತಾನಿ ನಾಯಕ ಸಲ್ಮಾನ್ ಅಲಿ ಅಘಾ ಸಿಡಿಸಿಡಿ ಅಂತಿದ್ದ. ಸೋತ್ವಿ ಅನ್ನೋ ಸಿಟ್ಟಿಗೋ ಇಲ್ಲ ಭಾರತದ ಮುಂದೆ ಬೆತ್ತಲಾಗಿದ್ದಕ್ಕೋ ಏನೋ ರನ್ನರ್ ಅಪ್ ಚೆಕ್ ಪಡೆದು ಅಲ್ಲೇ ಬಿಸಾಕಿದ್ದ. ಸೈಲೆಂಟಾಗಿ ಪೋಡಿಯಂ ಮೇಲೆ ಹೋಗಿ ಚೆಕ್ ಪಡೆದವ್ನು ಆಮೇಲೆ ತನ್ನ ರೋಷಾವೇಶ ತೋರಿಸಿದ್ದ.
ಟ್ರೋಫಿ ಇಲ್ಲದೇ ಸಂಭ್ರಮಿಸಿದ ಟೀಂ ಇಂಡಿಯಾ!
ಇನ್ನು ಇದೆಲ್ಲದ್ರ ನಡುವೆ ಟೂರ್ನಿಯ ಮೇನ್ ಹೈಲೆಟ್ ಅಂದ್ರೆ ಭಾರತ ಟ್ರೋಫಿ ಇಲ್ಲದೇ ಸೆಲೆಬ್ರೇಟ್ ಮಾಡಿದ್ದು. ಫಾರ್ ದಿ ಫಸ್ಟ್ ಟೈಂ ಆಫ್ ಹಿಸ್ಟರಿ. ಚಾಂಪಿಯನ್ ಪಟ್ಟಕ್ಕೇರಿದ್ರೂ ಭಾರತ ಏಷ್ಯಾಕಪ್ ಟ್ರೋಫಿ ಸ್ವೀಕಾರ ಮಾಡಿರಲಿಲ್ಲ. ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಪಡೆಯೋಕೆ ಒಪ್ಪದ ಭಾರತೀಯ ಆಟಗಾರರು ಕಪ್ ಇಲ್ಲದೆಯೇ ಕುಣಿದು ಕುಪ್ಪಳಿಸಿದ್ರು. ಅಜೇಯವಾಗಿ ಗೆದ್ದು ಅಭಿಮಾನಿಗಳ ಕೈಯಲ್ಲಿ ಸಲಾಂ ಎನಿಸಿಕೊಂಡ್ರು.
ಇಷ್ಟೇ ಅಲ್ದೇ ಭಾರತ ವರ್ಸಸ್ ಪಾಕ್ ಫಸ್ಟ್ ಮ್ಯಾಚಲ್ಲೇ ಪಾಕಿಸ್ತಾನದ ರಾಷ್ಟ್ರಗೀತೆ ಬದ್ಲಿಗೆ ಡಿಜೆ ಪ್ಲೇ ಆಗಿದ್ದು, ಸಾಹಿಬ್ಜಾದಾ ಫರ್ಹಾನ್ ಗನ್ ಫೈರ್ ರೀತಿ ಬ್ಯಾಟ್ ಹಿಡಿದು ಸೆಲೆಬ್ರೇಟ್ ಮಾಡಿದ್ದು, ಅಭಿಷೇಕ್ ಶರ್ಮಾ ಜೊತೆ ಹ್ಯಾರಿಸ್ ರೌಫ್ ಆನ್ ಫೀಲ್ಡ್ನಲ್ಲೇ ಕ್ಯಾತೆ ತೆಗೆದಿದ್ದು, ಪಿಸಿಬಿ ಌಂಡ್ ಬಿಸಿಸಿಐ ಪರಸ್ಪರ ಆಟಗಾರರ ವಿರುದ್ಧ ಕಂಪ್ಲೇಂಟ್ ಲಾಡ್ಜ್ ಮಾಡಿದ್ದು, ಫೈನಲ್ ಮ್ಯಾಚ್ಗೂ ಮುನ್ನ ಕ್ಯಾಪ್ಟನ್ಸ್ ಫೋಟೋಶೂಟ್ ನಿರಾಕರಿಸಿ ಸೋಲೋ ಫೋಟ್ಶೂಟ್ ಮಾಡಿಸಿಕೊಂಡಿದ್ದು, ಫೈನಲ್ ಮ್ಯಾಚ್ ಟಾಸ್ ಟೈಮಲ್ಲಿ ಇಬ್ಬರು ಕ್ಯಾಪ್ಟನ್ಗಳನ್ನ ಮಾತಾಡಿಸೋಕೆ ಇಬ್ಬರು ಪ್ರೆಸೆಂಟೇಟರ್ಸ್ ಇದ್ದದ್ದು, ಟ್ರೋಫಿ ಜೊತೆ ನಖ್ವಿ ಎಸ್ಕೇಪ್ ಆಗಿದ್ದು ಹೀಗೆ ಹೇಳ್ತಾ ಹೋದ್ರೆ ಕಂಟಿನ್ಯೂ ಆಗ್ತಾನೇ ಇರುತ್ತೆ.

ನೋಡಿರಿ

