ಪಾಕ್ ಹೊತ್ತೊಯ್ದ ಟ್ರೋಫಿ ಭಾರತಕ್ಕೆ – BCCI ಮುಂದೆ ತಲೆ ಬಾಗುತ್ತಾ ACC?

ಏಷ್ಯಾಕಪ್ ಫೈನಲ್ನಲ್ಲಿ ಭಾರತ ಗೆದ್ರೂ ಕೂಡ ಕಪ್ ಪಡೀಲಿಲ್ಲ. ಎಸಿಸಿ ಅಧ್ಯಕ್ಷರೇ ಟ್ರೋಫಿನಾ ವಾಪಸ್ ತಗೊಂಡ್ ಹೋದ್ರು. ಬಟ್ ಈಗ ಇರೋ ಪ್ರಶ್ನೆ ಏನಂದ್ರೆ ಆ ಟ್ರೋಫಿ ಭಾರತಕ್ಕೆ ಸಿಗೋದೇ ಇಲ್ವಾ ಅನ್ನೋದು. ಖಂಡಿತ ಸಿಗುತ್ತೆ. ಅದಕ್ಕೆ ಒಂದಷ್ಟು ಪ್ರೊಸೀಜರ್ಸ್ ನಡೀಬೇಕಾಗುತ್ತೆ. ಆಲ್ರೆಡಿ ಬಿಸಿಸಿಐ ಟ್ರೋಫಿ ಕೊಡುವಂತೆ ಎಸಿಸಿಗೆ ಕಂಪ್ಲೇಂಟ್ ಲಾಡ್ಜ್ ಮಾಡಿದೆ. ಮತ್ತೊಂದೆಡೆ ಎಸಿಸಿ ಅಧ್ಯಕ್ಷ ಆಗಿರೋ ಮೊಹ್ಸಿನ್ ನಖ್ವಿ ಕಂಡೀಷನ್ಸ್ ಅಪ್ಲೈ ಅಂದಿದ್ದಾನೆ.
ಇದನ್ನೂ ಓದಿ : ರಾಜಕೀಯ ನಾಯಕರು ತಮ್ಮ ಅಭಿಮಾನಿಗಳು ಸಾಯಬೇಕೆಂದು ಬಯಸುವುದಿಲ್ಲ – ಎಂ.ಕೆ. ಸ್ಟಾಲಿನ್
ಭಾರತ ವರ್ಸಸ್ ಪಾಕಿಸ್ತಾನ ನಡುವಿನ ಏಷ್ಯಾಕಪ್ ಫೈನಲ್ನಲ್ಲಿ ಏನೆಲ್ಲಾ ಆಯ್ತು ಅನ್ನೋದನ್ನ ನೀವೆಲ್ಲಾ ನೊಡೇ ಇರ್ತೀರಿ. ಲಾಸ್ಟ್ ಮೂಮೆಂಟ್ವರೆಗೂ ನೆಕ್ ಟು ನೆಕ್ ಫೈಟ್ ನಡೀತು. ಫೈನಲಿ ಭಾರತ ಮ್ಯಾಚ್ ವಿನ್ ಆಯ್ತು. ಕೋಟ್ಯಂತರ ಭಾರತೀಯರು ಖುಷಿಯಲ್ಲಿ ತೇಲಾಡಿದ್ರು.. ಬಟ್ ಟ್ರೋಫಿ ಹಸ್ತಾಂತರದ ವೇಳೆ ಮೈದಾನದಲ್ಲಿ ದೊಡ್ಡ ಡ್ರಾಮಾವೇ ನಡೆದು ಕೊನೆಗೆ ಟ್ರೋಫಿ ಭಾರತಕ್ಕೆ ಸಿಗ್ಲೇ ಇಲ್ಲ. ಆದ್ರೆ ಈಗ ಆ ಟ್ರೋಫಿಯನ್ನ ಪಡ್ಕೊಳ್ಳೋಕೆ ಬಿಸಿಸಿಐ ಸಮರ ಶುರು ಮಾಡಿದೆ. ಅತ್ತ ಎಸಿಸಿ ಅಧ್ಯಕ್ಷನ ಹೊಸ ನಾಟಕ ಶುರುವಾಗಿದೆ,.
ಟ್ರೋಫಿ ಮತ್ತು ಪದಕಗಳನ್ನ ನೀಡದಿದ್ದರೆ ಹೋರಾಟದ ಎಚ್ಚರಿಕೆ!
ಏಷ್ಯಾಕಪ್ನಲ್ಲಿ ಭಾರತ ವಿನ್ ಆಗಿದ್ದರಿಂದ ಭಾರತಕ್ಕೆ ಟ್ರೋಫಿ ಸೇರಬೇಕಾದ್ದು ರೂಲ್ಸ್. ಹಾಗೇ ತಂಡದ ಪ್ರತಿಯೊಬ್ಬ ಆಟಗಾರರಿಗೂ ಮೆಡಲ್ಗಳನ್ನ ಕೊಡ್ಬೇಕು. ಆದ್ರೆ ಭಾರತದ ಆಟಗಾರರು ಮೊಹ್ಸಿನ್ ನಖ್ವಿಯಿಂದ ಟ್ರೋಫಿಯನ್ನ ಪಡೆಯಲ್ಲ ಅಂತಷ್ಟೇ ಹೇಳಿದ್ದು. ಸೋ ಬೇರೆಯವ್ರಿಂದ ಹಸ್ತಾಂತರ ಮಾಡಿಸಬಹುದಿತ್ತು. ಅದನ್ನ ಬಿಟ್ಟು ಟ್ರೋಫಿ ಮತ್ತು ಪದಕಗಳನ್ನ ಮೈದಾನದಿಂದ ತಗೊಂಡು ಹೋಗಿದ್ದಾರೆ. ಇದ್ರಿಂದ ಕೆರಳಿರುವ ಬಿಸಿಸಿಐ ಹೋರಾಟದ ಎಚ್ಚರಿಕೆ ನೀಡಿದೆ. ಕೂಡಲೇ ಟ್ರೋಫಿ, ಪದಕಗಳನ್ನು ಕಳುಹಿಸಿಕೊಡುವಂತೆ ಬಿಸಿಸಿಐ ಕಾರ್ಯದರ್ಶಿ ದೇವ್ಜಿತ್ ಸೈಕಿಯಾ ಎಸಿಸಿ ಹಾಗೂ ಅದರ ಮುಖ್ಯಸ್ಥ ನಖ್ವಿಗೆ ಆಗ್ರಹಿಸಿದ್ದಾರೆ. ಜೊತೆಗೆ ನವೆಂಬರ್ನಲ್ಲಿ ನಡೆಯಲಿರುವ ಐಸಿಸಿ ಸಭೆಯಲ್ಲಿ ಈ ಸಂಬಂಧ ಪ್ರಬಲ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಅವಮಾನಕ್ಕೊಳಗಾಗಿ ಟ್ರೋಫಿ ಹೊತ್ತೊಯ್ದಿದ್ದ ನಖ್ವಿ ಸಿಬ್ಬಂದಿ!
ಅಷ್ಟಕ್ಕೂ ಈ ಟ್ರೋಫಿ ಹಸ್ತಾಂತದ ವಿವಾದವನ್ನ ಎಸಿಸಿ ಅಧ್ಯಕ್ಷ ಆಗಿರೋ ಮೊಹ್ಸಿನ್ ನಖ್ವಿ ಈಸಿಯಾಗಿ ಹ್ಯಾಂಡಲ್ ಮಾಡ್ಬೋದಿತ್ತು. ಭಾರತೀಯರು ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಸೋ ಕಪ್ ಗೆದ್ದಿದ್ದಾರೆ. ಅವ್ರ ಟ್ರೋಫಿ ನಮಗ್ಯಾಕೆ. ಅವ್ರೇ ನಿಮ್ಮಿಂದ ಟ್ರೋಫಿ ತಗೊಳಲ್ಲ ಅನ್ನೋವಾಗ ನಾನ್ಯಾಕೆ ಮೇಲ್ ಬಿದ್ದು ಇಲ್ಲ ನೀವ್ ನನ್ ಕೈಯಲ್ಲೇ ತಗೊಳ್ಬೇಕು ಅಂತಾ ಕೇಳಿ ಚೀಪ್ ಆಗ್ಬೇಕು. ಯಾರಿಂದನಾದ್ರೂ ತಗೊಳ್ಳಿ ಅಂತಾ ಅಲ್ಲಿಂದ ಜಾಗ ಖಾಲಿ ಮಾಡ್ಬೋದಿತ್ತು. ಸೋತಿರೋ ತಮ್ಮ ಟೀಮ್ ಆಟಗಾರರಿಗೆ ಹೋಗಿ ಸಮಾಧಾನ ಮಾಡ್ಬೋದಿತ್ತು. ಅದನ್ನ ಬಿಟ್ಟು ನೋ ನೋ ನಾನೇ ನನ್ನ ಕೈಯ್ಯಾರೆನೇ ಕೊಡ್ಬೇಕು ಅಂತಾ ಗಂಟೆಗಟ್ಟಲೆ ಪೋಡಿಯಂ ಮೇಲೆ ನಿಂತು ಅವಮಾನ ಅನುಭವಿಸಿದ್ರು. ಌಕ್ಚುಲಿ ಇಲ್ಲಿ ಭಾರತೀಯರು ನಮ್ಗೆ ಟ್ರೋಫಿ ಬೇಡ್ವೇ ಬೇಡ ಅಂತಾ ಎಲ್ಲೂ ಹೇಳಿರಲಿಲ್ಲ. ಟ್ರೋಫಿ ಸ್ವೀಕರಿಸಲು ಬದಲಿ ಆಯ್ಕೆಯನ್ನು ಸೂಚಿಸಿದ್ರು. ಮೊಹ್ಸಿನ್ ನಖ್ವಿ ಬದಲಿಗೆ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಉಪಾಧ್ಯಕ್ಷರು ಭಾರತೀಯ ತಂಡಕ್ಕೆ ಟ್ರೋಫಿಯನ್ನು ಹಸ್ತಾಂತರಿಸಬೇಕೆಂದು ಕೇಳಿದ್ರು. ಇದಕ್ಕೆ ಒಪ್ಪದ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಟ್ರೋಫಿಯನ್ನು ತೆಗೆದುಕೊಂಡು ತಮ್ಮ ಹೋಟೆಲ್ಗೆ ಕಾಲ್ಕಿತ್ತಿದ್ರು.. ಹೀಗಾಗಿ ಟೀಂ ಇಂಡಿಯಾ ಟ್ರೋಫಿ ಇಲ್ಲದೆಯೇ ಮೈದಾನದಲ್ಲಿ ಸಂಭ್ರಮಿಸಿತ್ತು. ಇದಾದ ಮೇಲೆ ಟ್ರೋಫಿ ಚೋರ್ ಅಂತೆಲ್ಲಾ ಮೊಹ್ಸಿನ್ ನಖ್ವಿಯನ್ನ ಟ್ರೋಲ್ ಮಾಡಲಾಗ್ತಿದೆ. ಕೆಟ್ಟ ಮೇಲೆ ಬುದ್ಧಿ ಬಂತು ಅನ್ನೋ ಹಾಗೇ ಈಗ ನಾವು ಭಾರತಕ್ಕೆ ಟ್ರೋಫಿಯನ್ನ ಹಸ್ತಾಂತರ ಮಾಡ್ತೇವೆ ಅಂತಾ ನಖ್ವಿ ಒಪ್ಕೊಂಡಿದ್ದಾರೆ. ಬಟ್ ಅಲ್ಲಿ ಕಂಡೀಷನ್ಸ್ ಅಪ್ಲೈ ಅಂತಾ ಟ್ವಿಸ್ಟ್ ಕೊಟ್ಟಿದ್ದಾರೆ.
ಔಪಚಾರಿಕ ಸಮಾರಂಭ ಮಾಡಿದ್ರಷ್ಟೇ ಟ್ರೋಫಿ ಹಸ್ತಾಂತರ!
ದುಬೈನಲ್ಲಿ ಏಷ್ಯಾಕಪ್ ಫೈನಲ್ ಗೆದ್ದ ಭಾರತೀಯ ಆಟಗಾರರು ಆಲ್ರೆಡಿ ತವರಿಗೆ ವಾಪಸ್ ಆಗ್ತಿದ್ದಾರೆ. ಇತ್ತ ಬಿಸಿಸಿಐ ಟ್ರೋಫಿಗಾಗಿ ಸಮರ ಶುರು ಮಾಡಿದೆ. ಯಾಕೋ ವಿಷ್ಯ ತನ್ನ ಕುತ್ತಿಗೆಗೆ ಬರೋ ಥರ ಕಾಣ್ತಿದ್ದಂತೆ ಮೊಹ್ಸಿನ್ ನಖ್ವಿ ಹೊಸ ಆಟ ಶುರು ಮಾಡಿದ್ದಾರೆ. ಏಷ್ಯಾ ಕಪ್ ವಿಜೇತ ತಂಡದ ಪದಕಗಳನ್ನು ಭಾರತ ತಂಡಕ್ಕೆ ವಾಪಾಸ್ ಮಾಡೋಕೆ ಒಪ್ಪಿದ್ದಾರೆ. ಆದರೆ ಒಂದು ಷರತ್ತನ್ನು ವಿಧಿಸಿದ್ದಾರೆ. ಔಪಚಾರಿಕ ಸಮಾರಂಭ ನಡೆದ ನಂತರವೇ ಟ್ರೋಫಿಯನ್ನು ಭಾರತಕ್ಕೆ ಹಸ್ತಾಂತರಿಸುವುದಾಗಿ ನಖ್ವಿ ಹೇಳಿದ್ದಾರೆ. ಅಂದ್ರೆ ಈ ಸಮಾರಂಭದಲ್ಲಿ ನಾನೇ ಟ್ರೋಫಿ ಮತ್ತು ಪದಕಗಳನ್ನ ಹಸ್ತಾಂತರ ಮಾಡ್ತೀನಿ ಅನ್ನೋದು ನಖ್ವಿ ಮಾತಿನ ಅರ್ಥ. ಯಾಕಂದ್ರೆ ನಾರ್ಮಲ್ ಆಗಿ ಏಷ್ಯಾಕಪ್ನಲ್ಲಿ ಕಪ್ ಗೆದ್ದವ್ರಿಗೆ ಎಸಿಸಿ ಅಧ್ಯಕ್ಷರೇ ಪ್ರಶಸ್ತಿ ಪ್ರದಾನ ಮಾಡ್ತಾರೆ. ಸೋ ಈ ಅಧಿಕಾರ ನಂಗೇ ಇರೋದು. ನಾನೇ ಕೊಡ್ಬೇಕು ಅನ್ನೋದು ನಖ್ವಿಯ ಮೊಂಡು ವಾದ. ಭಾರತೀಯರೇ ಒಪ್ಪದ ಮೇಲೆ ನಾನ್ಯಾಕೆ ಕೊಡ್ಬೇಕು ಅನ್ನೋ ಕನಿಷ್ಠ ಪ್ರಜ್ಞೆಯಾದ್ರೂ ನಖ್ವಿಗೆ ಇರ್ಬೇಕಿತ್ತು. ಆದ್ರೆ ಈತನ ಕಂಡೀಷನ್ಸ್ ನೋಡಿದ್ರೆಈ ಔಪಚಾರಿಕ ಸಮಾರಂಭ ನಡೆಯೋದು ಕಷ್ಟ ಸಾಧ್ಯ. ಫೈನಲ್ನಲ್ಲಿ ಮ್ಯಾಚ್ ವಿನ್ ಆದಾಗ್ಲೇ ಅವ್ರ ಕೈಯಿಂದ ಟ್ರೋಫಿ ತಗೊಳ್ದೇ ಇರೋದು ಇನ್ನೊಂದು ದಿನ ಫಂಕ್ಷನ್ ಮಾಡಿ ತಗೊಳ್ಳೋಕೆ ಒಪ್ಕೊಳ್ತಾರಾ ಚಾನ್ಸೇ ಇಲ್ಲ. ಹೀಗಾಗಿ ಬಿಸಿಸಿಐ ಬೇರೆಯದ್ದೇ ದಾರಿ ಹಿಡಿಯಲಿದೆ. ನವೆಂಬರ್ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಬಿಸಿಸಿಐ ಹೇಳಿದೆ. ಇವತ್ತು ದುಬೈನಲ್ಲಿ ನಡೆಯಲಿರುವ ಎಸಿಸಿ ಸಭೆಯಲ್ಲೂ ಏಷ್ಯಾಕಪ್ ಟ್ರೋಫಿ ಮತ್ತು ಮೆಡೆಲ್ಗಳನ್ನು ಹಸ್ತಾಂತರಿಸುವಂತೆ ಬಿಸಿಸಿಐ ಪ್ರಸ್ತಾಪ ಮಾಡಲಿದೆ. ಆದ್ರೆ ಟ್ರೋಫಿ ಸದ್ಯಕ್ಕೆ ಭಾರತದ ಕೈ ಸೇರೋದು ಅಷ್ಟು ಈಸಿ ಇಲ್ಲ. ಯಾಕಂದ್ರೆ ಎಸಿಸಿ ಅಧ್ಯಕ್ಷ ಆಗಿರೋದು ಮೊಹ್ಸಿನ್ ನಖ್ವಿ. ಈಗ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಹಾಗೇ ಪಾಕಿಸ್ತಾನದ ಗೃಹಸಚಿವ ಕೂಡ ಆಗಿದ್ದಾರೆ. ಸೋ ಭಾರತದವ್ರ ಕಪ್ ನಮಗ್ಯಾಕೆ ಅಂತಾ ಉದಾರತೆಯಿಂದ ನೀಡುವಷ್ಟು ಒಳ್ಳೆ ಬುದ್ಧಿಯಂತೂ ಇರಲ್ಲ. ಮೊಸರಲ್ಲೂ ಕಲ್ಲು ಹುಡುಕೋದು ಅಂತಾರಲ್ಲ ಹಂಗೆ ಏನಾದ್ರೂ ಅಡ್ಡದಾರಿ ಪ್ಲ್ಯಾನ್ ಮಾಡ್ತಿರ್ತಾರೆ.

ನೋಡಿರಿ

