BBKಯಲ್ಲಿ ರಕ್ಷಿತಾ ಶೆಟ್ಟಿಗೆ ಅನ್ಯಾಯ?  – NEXT ELIMINATION ಟಾರ್ಗೆಟ್ ಮಲ್ಲಮ್ಮ?
ಫಸ್ಟ್‌ ಡೇ ಎಲಿಮಿನೇಷನ್‌ ಬೇಕಿತ್ತಾ?

BBKಯಲ್ಲಿ ರಕ್ಷಿತಾ ಶೆಟ್ಟಿಗೆ ಅನ್ಯಾಯ?  – NEXT ELIMINATION ಟಾರ್ಗೆಟ್ ಮಲ್ಲಮ್ಮ?ಫಸ್ಟ್‌ ಡೇ ಎಲಿಮಿನೇಷನ್‌ ಬೇಕಿತ್ತಾ?

ಮೊದಲ ದಿನವೇ ಎಲಿಮಿನೇಷನ್..‌ ಎರಡನೇ ದಿನ ಯಾರೂ ಊಹೆ ಮಾಡಿರದ ಟ್ವಿಸ್ಟ್.. ಮೂರನೇ ವಾರವೇ ಫಿನಾಲೆ.. ಬಿಗ್‌ ಬಾಸ್‌ ಕನ್ನಡ ಸೀಸನ್‌ 12ರಲ್ಲಿ  ರಿಯಲ್‌ ಗೇಮ್‌ ಶುರುವಾಗಿದೆ. ಇದೀಗ ಸ್ಪರ್ಧಿಗಳು ದೊಡ್ಮನೆಯಲ್ಲಿ ತಮ್ಮ ಅಸ್ಥಿತ್ವ ಉಳಿಸಿಕೊಳ್ಳಲು ಆಟ ಶುರುಮಾಡ್ಬೇಕಿದೆ.

ಇದನ್ನೂ ಓದಿ: ಅಕ್ಕನಿಗಾಗಿ ನಿಧಿ ಪ್ರೀತಿ ತ್ಯಾಗ – ನಡೆದೇ ಬಿಡ್ತು ನಿತ್ಯಾ, ಕರ್ಣ ಕಲ್ಯಾಣ!

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ರೋಚಕತೆಯಿಂದ ಕೂಡಿದೆ. ದೊಡ್ಮನೆಗೆ ಒಟ್ಟು 19 ಸ್ವರ್ಧಿಗಳು ಕಾಲಿಟ್ಟಿದ್ದು, ಮೊದಲ ದಿನವೇ ಎಲಿಮಿನೇಷನ್‌ ಪ್ರಕ್ರಿಯೆ ನಡೆದಿದೆ. ಸೆಲೆಬ್ರಿಟಿಗಳ ಗೇಮ್‌ಗೆ ರಕ್ಷಿತಾ ಶೆಟ್ಟಿ ಬಲಿಕಾ ಬಕ್ರಾ ಆಗಿದ್ದಾರೆ. ಇದೀಗ ಎರಡನೇ ದಿನವೂ ಬಿಗ್‌ ಬಾಸ್‌ ಸ್ಪರ್ಧಿಗಳಿಗೆ ಬಿಗ್‌ ಶಾಕ್‌ ನೀಡಿದ್ದಾರೆ.. ಮೂರೇ ವಾರಕ್ಕೆ ಫಿನಾಲೆ ನಡೆಯಲಿದೆ ಎಂದು ಹೇಳಿದ್ದಾರೆ.. ಅಷ್ಟೇ ಅಲ್ಲ ಒಂಟಿಯಾಗಿ, ಗುಂಪು ಗುಂಪಾಗಿ ಎಲಿಮಿನೇಷನ್‌ ನಡೆಯಲಿದೆ ಎಂದು ಹೇಳಿದ್ದಾರೆ. ಇದ್ರ ಪೋಮ್ರೋ ರಿಲೀಸ್‌ ಆಗಿದೆ.

ಬಿಗ್‌ ಬಾಸ್‌ ಮನೆಗೆ ಸ್ಪರ್ಧಿಗಳು ಕಾಲಿಟ್ಟು ಜಸ್ಟ್‌ ಎರಡು ದಿನ ಆಗಿದೆ. ಇನ್ನೂ ಕೆಲ ಸಹ ಸ್ಪರ್ಧಿಗಳ ಪರಿಚಯ ಆಗಿಲ್ಲ. ಯಾರು ಹೇಗೆ ಅಂತಾ ಅರ್ಥ ಮಾಡಿಕೊಂಡಿಲ್ಲ.. ಟಾಸ್ಕ್‌ ಕೂಡ ಸರಿಯಾಗಿ ಶುರುವಾಗಿಲ್ಲ, ನಿನ್ನೆ ಮನೆ ದಿನಸಿ ಪಡೆಯಲು ಒಂದು ಟಾಸ್ಕ್‌ ನೀಡಲಾಗಿತ್ತು ಅಷ್ಟೇ.. ಆದ್ರೆ ಬಿಗ್‌ ಬಾಸ್‌ ಎರಡನೇ ದಿನ ಟಾಸ್ಕ್‌ ಬಗ್ಗೆ ಹೋಳೋ ಬದಲು, ನೇರವಾಗಿ ಎಲಿಮಿನೇಷನ್‌, ಫಿನಾಲೆ ಬಗ್ಗೆ ಮಾತನಾಡಿದ್ದಾರೆ. ಪ್ರೋಮೋದಲ್ಲಿ ಯಾರು ಗೆಲ್ತಾರೆ ಎಂದು ಕಾದು ನೋಡೋದಕ್ಕೆ ನೀವು 100 ದಿನ ಕಾಯಬೇಕಾಗಿಲ್ಲ. ಮೂರನೇ ವಾರಕ್ಕೆ ಒಂದು ಫಿನಾಲೆ ನಡೆಯಲಿದೆ. ನಿಮ್ಮಲ್ಲಿ ಯಾರು, ಯಾವಾಗ, ಹೇಗೆ ಬೇಕಾದರೂ ಎಲಿಮಿನೇಟ್ ಆಗಬಹುದು. ಒಬ್ಬೊಬ್ಬರಾಗಿ ಹೋಗಬಹುದು. ಗುಂಪು ಗುಂಪಾಗಿಯೂ ಎಲಿಮಿನೇಟ್ ಆಗಬಹುದು. ಎಲಿಮಿನೇಷನ್​​ನಿಂದ ಮುಕ್ತರಾಗಬೇಕು ಅಂದರೆ.. ಅದಕ್ಕೆ ಇರೋದು ಒಂದೇ ದಾರಿ.. ಎಂದು ಬಿಗ್​ಬಾಸ್ ಹೇಳಿದ್ದಾರೆ. ಆದ್ರೆ ದೊಡ್ಮನೆಯಲ್ಲಿ ಉಳಿದುಕೊಳ್ಳಲು ಇರೋ ದಾರಿ ಏನು ಅನ್ನೋದನ್ನ ಬಿಗ್‌ ಬಾಸ್‌ ಹೇಳಿಲ್ಲ. ಸ್ಪರ್ಧಿಗಳು ಚೆನ್ನಾಗಿ ಎಂಟರ್ಟೈನ್​ ಮಾಡಿದ್ರೆ, ಗೇಮ್​​ ಜೊತೆ ಮೈಂಡ್‌ ಗೇಮ್‌ ಚೆನ್ನಾಗಿ ಆಡಿದ್ರೆ ಮಾತ್ರ ಉಳಿದುಕೊಳ್ತೀರಿ. ಮಾಡು ಇಲ್ಲವೇ ಮಡಿ ಅನ್ನೋದು ಬಿಗ್​ಬಾಸ್​ನ ಕಿವಿಮಾತಾಗಿದೆ. ಆದ್ರೀಗ ಬಿಗ್‌ ಬಾಸ್‌ ಮನೆಯಲ್ಲಿ ನೆಕ್ಟ್ಸ್‌ ಟಾರ್ಗೆಟ್‌ ಯಾರು ಅಂತಾ ವೀಕ್ಷಕರು ಭವಿಷ್ಯ ನುಡಿದಿದ್ದಾರೆ.

ಬಿಗ್‌ ಬಾಸ್‌ ಮನೆಯಲ್ಲಿ ಮೊದಲ ದಿನ ಸೆಲೆಬ್ರಿಟಿಗಳು ಟಾರ್ಗೆಟ್‌ ಮಾಡಿದ್ದು ರಕ್ಷಿತಾರನ್ನ.. ಸೋಶಿಯಲ್‌ ಮೀಡಿಯಾದಲ್ಲಿ ಫೇಮಸ್‌ ಆಗ್ಬೇಕು ಅಂತಾ ತಪ್ಪು ತಪ್ಪಾಗಿ ಮಾತಾಡ್ತಾರೆ, ಫಾಲೋವರ್ಸ್‌ ಜಾಸ್ತಿ ಮಾಡೋಕೆ ಇಲ್ಲಿಗೆ ಬಂದಿದ್ದಾರೆ.. ನಾವು ಈ ಸ್ಟೇಜ್‌ ಬರೋದಿಕ್ಕೆ ಕಷ್ಟ ಪಟ್ಟು ಬಂದಿದ್ದೀವಿ ಎಂದು ಜಾಹ್ನವಿ ಕಾರ್ತಿಕ್‌ ಸೇರಿದಂತೆ ಉಳಿದ ಸ್ಪರ್ಧಿಗಳು ಹೇಳಿದ್ರು. ಮನೆ ಮಂದಿ ನಿರ್ಧಾರದಂತೆ ರಕ್ಷಿತಾರನ್ನ ಎಲಿಮಿನೇಷನ್‌ ಕೂಡ ಮಾಡಲಾಯ್ತು. ರಕ್ಷಿತಾ ಎಲಿಮಿನೇಷನ್‌ ಆಗಿರೋ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಒಂದೇ ದಿನಕ್ಕೆ ಎಲಿಮಿನೇಟ್‌ ಮಾಡೋದಾದ್ರೆ ಯಾಕೆ ಕರೆಸಬೇಕಿತ್ತು. We Want Rakshitha Shetty back, bring Back  Rakshitha ಅನ್ನೋ ಅಭಿಯಾನ ಕೂಡ ಶುರುವಾಗಿದೆ. ರಕ್ಷಿತಾ ಮುಗ್ದ ಮಾತು ಕೇಳೋಕೆ ಚೆನ್ನಾಗಿತ್ತು. ಸಿಲ್ಲಿ ರೀಸನ್‌ ಕೊಟ್ಟು ಕಳುಹಿಸಬಾರ್ದಿತ್ತು ಅಂತಾ ರಕ್ಷಿತಾ ಫ್ಯಾನ್ಸ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ನೆಕ್ಟ್ಸ್‌ ಎಲಿಮಿನೇಷನ್‌  ಟಾರ್ಗೆಟ್‌ ಹಳ್ಳಿ ಪ್ರತಿಭೆ ಮಲ್ಲಮ್ಮ, ಮಾಳು ಅಂತ ವೀಕ್ಷಕರು ಹೇಳ್ತಿದ್ದಾರೆ. ಮಾಳು, ಮಲ್ಲಮ್ಮ ಸೋಶಿಯಲ್‌ ಮೀಡಿಯಾ ಮೂಲಕ ಫೇಮಸ್‌ ಆದವರು. ಮಲ್ಲಮ್ಮಗೆ ಬಿಗ್‌ ಬಾಸ್‌ ಕೊಡೋ ಟಾಸ್ಕ್‌ಗಳನ್ನ ಅರ್ಥ ಮಾಡಿಕೊಳ್ಲೋಕೆ ಆಗಲ್ಲ. ಎರಡ್ಮೂರು ಬಾರಿ ಬಿಗ್‌ ಬಾಸ್‌ ಎಕ್ಸ್‌ಪ್ಲೈನ್‌ ಮಾಡ್ಬೇಕು.. ಮುಂದಿನ ಟಾಸ್ಕ್‌ಗಳು ತುಂಬಾನೇ ಚಾಲೆಂಜಿಂಗ್‌ ಆಗಿ ಇರುತ್ತೆ.. ಸೋ ಸಹ ಸ್ಪರ್ಧಿಗಳು ಅವರನ್ನೇ ನೆಕ್ಟ್‌ ನಾಮಿನೇಟ್‌ ಮಾಡ್ಬೋದು. ಇವ್ರ ಜೊತೆಗೆ ಸಿಂಗರ್ ಮಾಳು‌ ಅವರನ್ನ ಕೂಡ ಎಲಿಮಿನೇಷನ್‌ ಗೆ ಟಾರ್ಗೆಟ್‌ ಮಾಡ್ಬೋದು. ಯಾಕಂದ್ರೆ ನಿನ್ನೆ ನಾಮಿನೇಟ್‌ ಮಾಡಿದಾಗ ನಾನು ಇಲ್ಲಿಗೆ ಬರ್ತೇನೆ ಅಂತಾ ಅಂದ್ಕೊಂಡಿರ್ಲಿಲ್ಲ. ಇಲ್ಲಿಗೆ ಬಂದಾಗಿದೆ. ಒಂದು ವಾರದ ಆದ್ರೂ ಇರ್ಬೇಕು ಅಂತಾ ಅಂದ್ಕೊಂಡಿದ್ದೀನಿ. ನೀವು ಚಾನ್ಸ್‌ ಕೊಡಿ ಅಂತಾ ಕೇಳಿದ್ರು. ಇದೇ ರೀಸನ್‌ ಕೊಟ್ಟು ಮನೆಮಂದಿ ಇವರನ್ನ ನೆಕ್ಟ್ಸ್‌ ಎಲಿಮಿನೇಷನ್‌ ಗೆ ಟಾರ್ಗೆಟ್‌ ಮಾಡೋ ಸಾಧ್ಯತೆ ಇದೆ..

ಒಟ್ಟಾರೆ, ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಮೊದಲ ವಾರವೇ ಸಾಕಷ್ಟು ಟ್ವಿಸ್ಟ್‌ ನೀಡಲಾಗಿದೆ. ಬಿಗ್ ಬಾಸ್‌ ಈ ಸೀಸನ್‌ ನಲ್ಲಿ ಹೊಸ ಗೇಮ್‌ ಶುರುಮಾಡಿದ್ದು, ಬ್ಯಾಕ್‌ ಟು ಬ್ಯಾಕ್‌ ಎಲಿಮಿನೇಷನ್‌ ನಡೆಯಲಿದೆ. ಇದೀಗ ಸ್ಪರ್ಧಿಗಳು ದೊಡ್ಮನೆಯಲ್ಲಿ ತಮ್ಮ ಅಸ್ಥಿತ್ವ ಉಳಿಸಿಕೊಳ್ಬೇಕು.. ಟ್ರೋಫಿ ಗೆಲ್ಬೇಕು ಅಂದ್ರೆ ಆಟ ಶುರುಮಾಡಲೇಬೇಕು.. ಬಿಗ್‌ ಬಾಸ್‌ ಕೊಡೋ ಟಾಸ್ಕ್‌ ಕಂಪ್ಲೀಟ್‌ ಮಾಡೋದ್ರ ಜೊತೆಗೆ, ತಮ್ಮಮ ಆಟನೂ ಆಡ್ಬೇಕು.. ಬಿಗ್‌ ಬಾಸ್‌ ಕೊಡೋ ಪರೀಕ್ಷೆಯಲ್ಲಿ ಯಾರು ಪಾಸಾಗ್ತಾರೆ ಅಂತಾ ಕಾದುನೋಡ್ಬೇಕು.

Shwetha M