ರೌಫ್ ಸೊಕ್ಕಿಳಿಸಿದ ಬುಮ್ರಾ – ಕೆಣಕಿದ ಅಬ್ರಾರ್ ಫುಲ್ ರೋಸ್ಟ್
ಚೆಕ್ ಎಸೆದ ಸಲ್ಮಾನ್ ಶೇಪ್ ಔಟ್

ರೌಫ್ ಸೊಕ್ಕಿಳಿಸಿದ ಬುಮ್ರಾ – ಕೆಣಕಿದ ಅಬ್ರಾರ್ ಫುಲ್ ರೋಸ್ಟ್ಚೆಕ್ ಎಸೆದ ಸಲ್ಮಾನ್ ಶೇಪ್ ಔಟ್

ಏಷ್ಯಾಕಪ್ ಟೂರ್ನಿಯಲ್ಲಿ ಪಾಕಿಸ್ತಾನಿ ಪ್ಲೇಯರ್​ಗಳು ಆಟ ಆಡಿದ್ದಕ್ಕಿಂತ ಜಾಸ್ತಿ ಹುಚ್ಚಾಟ ಮಾಡಿದ್ದೇ ಹೆಚ್ಚು. ಯಾಕಂದ್ರೆ ಬಾಲ್ ಮತ್ತು ಬ್ಯಾಟ್​ ಮೇಲೆ ಫೋಕಸ್ ಮಾಡೋದು ಬಿಟ್ಟು ಭಾರತೀಯರನ್ನ ಹೇಗೆ ಟ್ರಿಗರ್ ಮಾಡೋದು ಅನ್ನೋದ್ರಲ್ಲೇ ಮುಳುಗಿದ್ರು. ಆದ್ರೆ ನಮ್ಮ ಭಾರತೀಯರು ಹಂಗಲ್ಲ. ನಮ್ಗೆ ಆಡೋಕೂ ಬರುತ್ತೆ, ಅಟ್ಟಾಡಿಸಿ ಹೊಡೆಯೋಕೂ ಬರುತ್ತೆ ಅಂತಾ ಪಿನ್ ಟು ಪಿನ್ ಲೆಕ್ಕಾ ಹಾಗಿ ಒಂದೊಂದಾಗೇ ಚುಕ್ತಾ ಮಾಡಿದ್ದಾರೆ. ಫೈನಲ್ ಮ್ಯಾಚ್​ನಲ್ಲೂ ಮಂಗಾಟ ಆಡಿದಂತ ಪಾಕಿಗಳು ಕೊನೆಗೆ ಹ್ಯಾಪ್ ಮೋರೆ ಹಾಕ್ಕೊಂಡು ಮನೆ ಸೇರಿದ್ದಾರೆ.

ಇದನ್ನೂ ಓದಿ : ಸೂರ್ಯನಿಗೆ NO LOSS ಚಾಲೆಂಜ್ – ರೋಹಿತ್ ಸ್ಟ್ಯಾಂಡರ್ಡ್ ಉಳಿಸಿಕೊಳ್ತಾರಾ?

 ಸೆಂಡ್ ಆಫ್ ಸಿಗ್ನಲ್ ಕೊಟ್ಟಿದ್ದ ಅಬ್ರಾರ್ ಫುಲ್ ರೋಸ್ಟ್!

ಅಬ್ರಾರ್ ಅಹ್ಮದ್.. ಪಾಕಿಸ್ತಾನದ ಸ್ಪಿನ್ ಬೌಲರ್. ಈತನ ಕಪಿಚೇಷ್ಟೆಯನ್ನ ನೀವು ಮೊದ್ಲೇ ನೋಡಿರ್ತೀರಿ ಬಿಡಿ.  ಚಾಂಪಿಯನ್ಸ್ ಟ್ರೋಫಿ ಟೈಮಲ್ಲಿ ಶುಭ್​ಮನ್ ಗಿಲ್​ರನ್ನ ಔಟ್ ಮಾಡಿ ಕುತ್ತಿಗೆಯಲ್ಲೇ ನಡಿ ನಡಿ ಎನ್ನುವಂತೆ ಸಹ್ನೆ ಮಾಡಿದ್ದ. ಇದೇ ಅಬ್ರಾಬ್ ಏಷ್ಯಾಕಪ್​ನ ಫೈನಲ್ ಮ್ಯಾಚಲ್ಲೂ ಮತ್ತೊಮ್ಮೆ ಅದನ್ನೇ ಅಣಕ ಮಾಡಿದ್ದಾನೆ. ಟಾಪ್ ಆರ್ಡರ್ ಕೊಲ್ಯಾಪ್ಸ್ ಆದ್ಮೇಲೆ ತಿಲಕ್ ವರ್ಮಾ ಮತ್ತು ಸಂಜು ಸ್ಯಾಮ್ಸನ್ ಜೋಡಿ ಸೆಟಲ್ ಆಗಿ ಬ್ಯಾಟ್ ಬೀಸ್ತಿತ್ತು. ಇಂಥಾ ಟೈಮಲ್ಲಿ ಅಬ್ರಾರ್ ಬೌಲಿಂಗ್​ನಲ್ಲಿ ಸಂಜು ಕ್ಯಾಚ್ ನೀಡಿದ್ರು. ಈ ಟೈಮಲ್ಲಿ ಅಬ್ರಾರ್ ಮನೆಗೆ ಹೋಗು ಅನ್ನೋ ಹಾಗೇ ತಮ್ಮ ಸಿಗ್ನೇಚರ್ ಸ್ಟೈಲ್​ನಲ್ಲಿ ಸೆಲೆಬ್ರೇಟ್ ಮಾಡಿದ್ದ. ಆದ್ರೆ ಕ್ಲೈಮ್ಯಾಕ್ಸ್​ನಲ್ಲಿ ಸೋತು ಪಾಕಿಸ್ತಾನನೇ ಮನೆಗೆ ಹೋಯ್ತು. ಹೀಗಾಗಿ ಭಾರತೀಯ ಆಟಗಾರರಾದ ಹರ್ಷಿತ್ ರಾಣಾ, ಅರ್ಶದೀಪ್ ಸಿಂಗ್ ಹಾಗೂ ಜಿತೇಶ್ ಶರ್ಮಾ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸಂಜು ಸ್ಯಾಮ್ಸನ್ ಎದುರುಗಡೆ ಅಬ್ರಾರ್ ರೀತಿ ಸೆಲಿಬ್ರೇಷನ್ ಮಾಡಿದ್ದಾರೆ.

ಹ್ಯಾರಿಸ್ ರೌಫ್ ಗೆ ಬುಮ್ರಾ ಕೌಂಟರ್!

ಮತ್ತೊಂದೆಡೆ ಸೂಪರ್ 4 ಹಂತದ ಮ್ಯಾಚಲ್ಲಿ 6 ರಫೇಲ್ ಯುದ್ಧ ವಿಮಾನಗಳನ್ನ ಹೊಡೆದುರುಳಿಸೋದಾಗಿ ಹ್ಯಾರಿಸ್ ರೌಫ್ ಬಿಲ್ಡಪ್ ಕೊಟ್ಟಿದ್ದ. ಬಟ್ ಆವತ್ತೇ ಅರ್ಶದೀಪ್ ಸಿಂಗ್ ಬ್ಯಾಕ್ ಫೈರ್ ಆಗೋ ಥರ ರಿವೇಂಜ್ ತೀರಿಸಿಕೊಂಡಿದ್ರು. ಇಷ್ಟಕ್ಕೇ ಬಿಡೋಕಾಗುತ್ತಾ. ಜಸ್ಪ್ರೀತ್ ಬುಮ್ರಾ ಫೈನಲ್ ಮ್ಯಾಚಲ್ಲಿ ಫೈನ್ ಆಗೇ ಟಾಂಟ್ ಕೊಟ್ಟಿದ್ದಾರೆ. ಬುಮ್ರಾ ಬೌಲಿಂಗ್​ನಲ್ಲಿ ರೌಫ್ ಔಟ್ ಆಗ್ತಾ ಇದ್ದಂತೆ ಜೆಟ್ ಪತನದ ಆಕ್ಷನ್ ಮಾಡುವ ಮೂಲಕ ಪಾಕ್ ವೇಗಿಗೆ ಬಿಸಿ ಮುಟ್ಟಿಸಿದ್ದಾರೆ.

ಭಾರತೀಯರ ಹಠಕ್ಕೆ ಬೆಪ್ಪಾದ ಪಿಸಿಬಿ ಅಧ್ಯಕ್ಷ!

ಇನ್ನು ಇದೆಲ್ಲದ್ರ ನಡುವೆ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಬಾರೀ ಮುಖಭಂಗ ಅನುಭವಿಸಿದ್ದಾರೆ. ಎಸಿಸಿ ಅಧ್ಯಕ್ಷನೂ ಆಗಿರೋದ್ರಿಂದ ಏಷ್ಯಾಕಪ್ ವಿನ್ ಆದ ತಂಡಕ್ಕೆ ಅವ್ರೇ ಟ್ರೋಫಿ ಹಸ್ತಾಂತರ ಮಾಡ್ಬೇಕಿತ್ತು. ಸೋ ಪೋಡಿಯಂ ಮೇಲೆ ಬಂದು ಸ್ಟೈಲಾಗಿ ನಿಂತಿದ್ರು. ಅಲ್ಲಿನ ಆಟಗಾರರಿಗೆ ಕೈಕುಲುಕೋಕೇ ಒಪ್ಪದ ನಮ್ಮ ಭಾರತೀಯರು ಇನ್ನು ಅವ್ರ ಕೈಯಿಂದ ಟ್ರೋಫಿ ತಗೊಳ್ತಾರಾ. ಚಾನ್ಸೇ ಇಲ್ಲ. ನಖ್ವಿ ಕಪ್ ಕೊಡೋದೇ ಬೇಡ ಅಂತಾ ಪೋಡಿಯಮ್​ನಿಂದ 20 ಅಡಿ ದೂರದಲ್ಲಿ ಕುಳಿತು ಮಾತಾಡ್ತಿದ್ರು. ಕೆಲವ್ರು ಮೊಬೈಲ್ ನೋಡ್ತಾ ಬ್ಯುಸಿಯಾಗಿದ್ರು. ಈಗ ಬರ್ತಾರೆ ಆಗ ಬರ್ತಾರೆ ಅಂತಾ ನೋಡಿ ನೋಡಿ ಸುಸ್ತಾದ ನಖ್ವಿ ಟ್ರೋಫಿ ಜೊತೆ ಅಲ್ಲಿಂದ ವಾಪಸ್ ಹೋದ್ರು. ಕೊನೆಗೆ ಭಾರತೀಯ ಆಟಗಾರರು ಕೈಯಲ್ಲಿ ಟ್ರೋಫಿ ಇದೆ ಅನ್ನೋ ಥರನೇ ಫೀಲ್ ಮಾಡ್ಕೊಳ್ತಾ ಸೆಲೆಬ್ರೇಟ್ ಮಾಡಿದ್ರು. ಕುಣಿದು ಕುಪ್ಪಳಿಸಿದ್ರು.

ಹೀಗೆ ಹೆಜ್ಜೆ ಹೆಜ್ಜೆಗೂ ಭಾರತೀಯರು ಝೇಂಕರಿಸ್ತಾ ಇದ್ರೆ ಅತ್ತ ಪಾಕಿಸ್ತಾನಿಯರಿಗೆ ಉರ್ಕೊಳ್ಳೋದಷ್ಟೇ ದಾರಿ. ಮೊದ್ಲೇ ಮ್ಯಾಚ್ ಸೋತು ಮುಖನೋ ತೋರ್ಸೋಕೆ ಆಗ್ದೇ ಇರೋ ಸ್ಟೇಜ್​ನಲ್ಲಿದ್ದ ನಾಯಕ ಸಲ್ಮಾನ್ ಅಲಿ ಅಘಾ ಒಳ್ಳೆ ಚೈಲ್ಡಿಶ್ ಆಗಿ ಬಿಹೇವ್ ಮಾಡಿದ್ದಾನೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪ್ರತಿನಿಧಿ ಅಮೀನುಲ್ ಇಸ್ಲಾಂ ಅವರಿಂದ ರನ್ನರ್ ಅಪ್ ಚೆಕ್ ಪಡೆದಿದ್ದ. ಬಟ್ ಆಮೇಲೆ ಅದೇನಾಯ್ತೋ ಏನೋ ಹಿಂದಕ್ಕೆ ಹೋಗಿ ಆ ಚೆಕ್​ನ ವಾಪಸ್ ಎಸೆದಿದ್ದಾನೆ.

ಹೀಗೆ ಫೈನಲ್ ಮ್ಯಾಚಲ್ಲಿ ಪಾಕಿಸ್ತಾನಿಯರು ಮ್ಯಾಚ್ ಜೊತೆ ಮರ್ಯಾದೆನೂ ಕಳ್ಕೊಂಡಿದ್ದಾರೆ. ಅಷ್ಟೇ ಅಲ್ದೇ ಭಾರತದ ವಿರುದ್ಧ ವಿವಾದಾತ್ಮಕ ಟ್ವೀಟ್ ಮಾಡಿದ್ದ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿಯವರ ಎಕ್ಸ್ ಖಾತೆಯನ್ನ ಭಾರತದಲ್ಲಿ ಬ್ಯಾನ್ ಮಾಡಲಾಗಿದೆ. ಏಷ್ಯಾಕಪ್ ಗೆದ್ದ ಬೆನ್ನಲೇ ಪ್ರಧಾನಿ ಮೋದಿ, ಮೈದಾನದಲ್ಲೂ ಆಪರೇಷನ್ ಸಿಂಧೂರ್. ಫಲಿತಾಂಶ ಒಂದೇ. ಭಾರತ ಗೆದ್ದಿದೆ ಅಂತಾ ಎಕ್ಸ್ ಖಾತೆಯಲ್ಲಿ ಟೀಮ್ ಇಂಡಿಯಾವನ್ನು ಅಭಿನಂದಿಸಿದ್ದರು. ಇದಕ್ಕೆ ರಿಯಾಕ್ಟ್ ಮಾಡಿದ್ದ ನಖ್ವಿ, ಯುದ್ಧವು ನಿಮಗೆ ಹೆಮ್ಮೆಯಾಗಿದ್ದರೆ, ಪಾಕಿಸ್ತಾನದ ಕೈಯಲ್ಲಿ ನೀವು ಅವಮಾನಕರ ಸೋಲುಗಳನ್ನು ಇತಿಹಾಸವನ್ನು ಹೊಂದಿದ್ದೀರಿ. ಯಾವುದೇ ಕ್ರಿಕೆಟ್ ಪಂದ್ಯವು ಆ ಸತ್ಯವನ್ನು ಪುನಃ ಬರೆಯಲು ಸಾಧ್ಯವಿಲ್ಲ. ಯುದ್ಧವನ್ನು ಕ್ರೀಡೆಗೆ ಎಳೆದು ತರುವುದು ಹತಾಶೆಯನ್ನು ಬಹಿರಂಗಪಡಿಸುತ್ತದೆ ಮತ್ತು ಆಟದ ಉತ್ಸಾಹವನ್ನೇ ಅವಮಾನಿಸುತ್ತದೆ ಎಂದು ನಖ್ವಿ ಟ್ವೀಟ್ ಮಾಡಿದ್ದರು. ಇದಕ್ಕೂ ಮುನ್ನ ಫೈಟರ್ ಜೆಟ್ ಕ್ರಾಶ್ ಮಾಡಿದ್ದೇವೆ ಅನ್ನೋ ಥರ ಪೋಸ್ಟ್ ಹಾಕಿದ್ರು. ಹೀಗಾಗಿ ಭಾರತದಲ್ಲಿ ನಖ್ವಿ ಅಕೌಂಟ್​ನ ಬ್ಯಾನ್ ಮಾಡಲಾಗಿದೆ.

Shantha Kumari