ನವರಾತ್ರಿ 9ನೇ ದಿನ ಸಿದ್ಧಿದಾತ್ರಿ ಆರಾಧನೆ – ಜ್ಞಾನ, ಸಮೃದ್ಧಿ ಅನುಗ್ರಹಿಸುತ್ತಾಳೆ ಜಗನ್ಮಾತೆ!

ನವರಾತ್ರಿ 9ನೇ ದಿನ ಸಿದ್ಧಿದಾತ್ರಿ ಆರಾಧನೆ – ಜ್ಞಾನ, ಸಮೃದ್ಧಿ ಅನುಗ್ರಹಿಸುತ್ತಾಳೆ ಜಗನ್ಮಾತೆ!

ನವರಾತ್ರಿಯ ಒಂಬತ್ತನೇ ದಿನವನ್ನು ಮಹಾಷ್ಟಮಿ ಎಂದು ಕರೆಯಲಾಗುತ್ತದೆ. ಈ ದಿನದಂದು ದುರ್ಗಾ ದೇವಿಯ ಒಂಬತ್ತನೇ ರೂಪವಾದ ಸಿದ್ಧಿದಾತ್ರಿಯನ್ನು ಪೂಜಿಸುವ ಸಂಪ್ರದಾಯವಿದೆ. ಸಿದ್ಧಿದಾತ್ರಿಯನ್ನು ಎಲ್ಲಾ ರೀತಿಯ ಸಾಧನೆಗಳನ್ನು ನೀಡುವ ದೇವತೆ ಎಂದು ಪರಿಗಣಿಸಲಾಗಿದೆ. ಸಿದ್ಧಿದಾತ್ರಿಯು ಭಕ್ತಿಯಿಂದ ಪೂಜಿಸುವ ಭಕ್ತರಿಗೆ ಜ್ಞಾನ, ಸಮೃದ್ಧಿ ಮತ್ತು ಮೋಕ್ಷವನ್ನು ಅನುಗ್ರಹಿಸುತ್ತಾಳೆ ಎಂಬ ನಂಬಿಕೆ ಇದೆ. ಹೀಗಾಗಿ ನವರಾತ್ರಿಯ 9ನೇ ದಿನ ಸಿದ್ಧಿದಾತ್ರಿಯನ್ನ ಪೂಜಿಸಲಾಗುತ್ತದೆ.

ಇದನ್ನೂ ಓದಿ: ಬಿಗ್‌ ಬಾಸ್‌ ಮನೆಯಲ್ಲಿ ಮೊದಲ ದಿನವೇ ಮಲ್ಲಮ್ಮ ಎಡವಟ್ಟು! – ಮನೆಯವರ ಹೊಟ್ಟೆಗೆ ತಣ್ಣೀರು ಬಟ್ಟೆನಾ?

ನವರಾತ್ರಿಯ 9ನೇ ಹಾಗೂ ಕೊನೆಯ ದಿನದಂದು ತಾಯಿ ಸಿದ್ಧಿದಾತ್ರಿ ಯ ಪೂಜೆ ಮಾಡಲಾಗುವುದು. ದುರ್ಗಾದೇವಿಯು ಈಶ್ವರ ದೇವರ ದೇಹವನ್ನು ಪ್ರವೇಶಿಸಿ ಅರ್ಧ ಭಾಗದಲ್ಲಿ ನೆಲೆನಿಂತರು ಎನ್ನಲಾಗುತ್ತದೆ. ತಾಯಿ ಸಿದ್ಧಿದಾರ್ಥಿಯು ಕೆಂಪು ತಾವರೆ ಮೇಲೆ ವಿರಾಜಮಾನರಾಗಿರುವರು. ಅವರು ಸಿಂಹವಾಹಿನಿಯಾಗುವರು. ಅವರ ಕೈಯಲ್ಲಿ ಶಂಖ, ರಾಜದಂಡ ಮತ್ತು ತಾವರೆಯಿರುವುದು. ಸಿದ್ಧಿಧಾತ್ರಿ ದೇವಿಯು ತ್ರಿಮೂರ್ತಿಗಳಾಗಿರುವ ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಆಧ್ಯಾತ್ಮಿಕ ವೈಭವ ಹಾಗೂ ಪರಿಪೂರ್ಣತೆ ನೀಡುವರು. ಆಕೆ ಅಷ್ಟ ಮಹಾಸಿದ್ಧಿಯನ್ನು ನಿರ್ಮಿಸಿ ಅದನ್ನು ತ್ರಿಮೂರ್ತಿಗಳಿಗೆ ನೀಡುವರು. ಇದಕ್ಕೆ ಮೊದಲು ಅವರು ತುಂಬಾ ಆಧ್ಯಾತ್ಮಿಕ ಸಾಧನೆ ಮಾಡಬೇಕಾಯಿತು. ತಾಯಿ ಸಿದ್ಧಿಧಾತ್ರಿಯು ಪರಿಪೂರ್ಣತೆ, ಎಲ್ಲಾ ರೀತಿಯ ಶಕ್ತಿ, ವೈಭವ ಮತ್ತು ಮಹಿಮೆಯ ಮೂಲ.

ತಾಯಿ ಸಿದ್ಧಿಧಾತ್ರಿಯ ಪ್ರಾಮುಖ್ಯತೆ

ತಾಯಿ ಸಿದ್ಧಿಧಾತ್ರಿಯು ಕೇತುವಿನ ಅಧಿಪತಿಯಾಗಿರುವರು. ಆಕೆ ಜನರ ಮನಸ್ಸಿನ ಮೇಲೆ ಆಡಳಿತ ನಡೆಸುವರು ಮತ್ತು ಅವರು ಶಿಸ್ತುಬದ್ಧ ಹಾಗೂ ಆಧ್ಯಾತ್ಮಿಕ ಜೀವನದಲ್ಲಿ ಮುಂದುವರಿಯಲು ಪ್ರೇರೇಪಿಸುವರು. ಸಿದ್ಧಿಧಾತ್ರಿ ದೇವಿಯ ಪೂಜೆ ಮಾಡುವುದರಿಂದ ಹೆಚ್ಚಿನ ಆಧ್ಯಾತ್ಮಿಕ ಜ್ಞಾನ ಮತ್ತು ಸ್ವಯಂ ಪರಿಶೋಧನೆ ಸಿಗುವುದು. ಜನ್ಮಕುಂಡಲಿಯಲ್ಲಿ ಕೇತುವಿನಿಂದ ಆಗಿರುವಂತಹ ಯಾವುದೇ ಕೆಡುಕನ್ನು ಸಿದ್ಧಿಧಾತ್ರಿ ದೇವಿಯು ನಿವಾರಿಸುವರು.

ಸಿದ್ಧಿಧಾತ್ರಿ ದೇವಿಯ ಪೂಜೆ

ತಾಯಿ ಸಿದ್ಧಿಧಾತ್ರಿ ಪೂಜೆಗೆ ಮಲ್ಲಿಗೆ ಹೂವನ್ನು ಬಳಸಬೇಕು. ಸುಗಂಧ ಭರಿತವಾಗಿರುವ ಮಲ್ಲಿಗೆ ಹೂವನ್ನು ದೇವಿಗೆ ಅರ್ಪಿಸಿದ ಬಳಿಕ ಏಕಾಗ್ರತೆ ಹಾಗೂ ಭಕ್ತಿಯಿಂದ ಪೂಜೆ ಮಾಡಬೇಕು. ಷೋಡಸೋಪಚಾರ ಪೂಜೆ ಮಾಡಿದ ಬಳಿಕ ಆರತಿಯೊಂದಿಗೆ ಪೂಜೆ ಕೊನೆಗೊಳಿಸಿ, ಕುಟುಂಬದ ಸಮೃದ್ಧಿ ಹಾಗೂ ಯಶಸ್ಸಿಗೆ ಪ್ರಾರ್ಥಿಸಬೇಕು. ಇದು ನವರಾತ್ರಿಯ ಅಂತಿಮ ದಿನವಾಗಿರುವ ಕಾರಣದಿಂದಾಗಿ ದೈವಿಕ ಶಕ್ತಿಯು ಕಂಡುಬರುವುದು ಮಾತ್ರವಲ್ಲದೆ, ಸಂಭ್ರಮ ಹಾಗೂ ತೃಪ್ತಿ ಇರುವುದು.

ತಾಯಿ ಸಿದ್ಧಿಧಾತ್ರಿಯ ಮಂತ್ರಗಳು

ಓಂ ದೇವಿ ಸಿದ್ಧಿಧಾತ್ರಿಯೈ ನಮಃ

ಓಂ ದೇವಿ ಸಿದ್ಧಿಧಾತ್ರಿಯೈ ನಮಃ

ಸಿದ್ಧ ಗಂಧರ್ವ ಯಕ್ಷದ್ಯರಸುರೈರಮಾರೈರಪಿ ಸೆವ್ಯಾಮಾನಾ

ಸದಾಭುಯಾತ್ ಸಿದ್ಧಿದಾ ಸಿದ್ದಿದಾಯಿನಿ

ತಾಯಿ ಸಿದ್ಧಧಾತ್ರಿ ದೇವಿಯ ಪ್ರಾರ್ಥನೆ

ಸಿದ್ಧ ಗಂಧರ್ವ ಯಕ್ಷದ್ಯರಸುರೈರಮಾರೈರಪಿ

ಸೆವ್ಯಾಮಾನಾ ಸದಾಭುಯಾತ್ ಸಿದ್ಧಿದಾ ಸಿದ್ದಿದಾಯಿನಿ

ಸಿದ್ಧಿಧಾತ್ರಿ ದೇವಿಯ ಸ್ತುತಿ

ಯಾ ದೇವಿ ಸರ್ವಭುತೇಶ್ವರ ಸಿದ್ಧಿಧಾತ್ರಿ ರೂಪನೇ ಸಂಹಿತಾ

ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

ದಿನದ ಪೂಜೆಯ ಪ್ರಾಮುಖ್ಯತೆ

ತಾಯಿ ಸಿದ್ಧಿಧಾತ್ರಿಯ ಎಲ್ಲಾ ದೇವರು, ರಾಕ್ಷಸರು, ಗಂಧರ್ವರು, ಯಕ್ಷರು ಮತ್ತು ಸಿದ್ಧಿಗಳಿಗೆ ಸಿದ್ಧಿಯನ್ನು ದಯಪಾಲಿಸುವರು. ಆಕೆ ಈಶ್ವರ ದೇವರಿಗಿಂತ ಭಿನ್ನವಾಗಿಲ್ಲ. ಯಾಕೆಂದರೆ ಈಶ್ವರದೇವರ ಅರ್ಧಭಾಗದಲ್ಲಿ ದೇವಿಯಿರುವರು. ಇದರಿಂದ ಈಶ್ವರ ದೇವರನ್ನು ಅರ್ಧನಾರೀಶ್ವರ ಎಂದು ಕರೆಯುವರು. ನವರಾತ್ರಿಯ 9ನೇ ದಿನದಂದು ತಾಯಿ ಸಿದ್ಧಿಧಾತ್ರಿಯನ್ನು ಪೂಜಿಸುವುದರಿಂದ ಎಲ್ಲಾ ರೀತಿಯ ಶಕ್ತಿ, ಕೌಶಲ್ಯ ಮತ್ತು ಸಾಮರ್ಥ್ಯವು ಭಕ್ತರಿಗೆ ಸಿಗುವುದು. ಇದರಿಂದ ವೃತ್ತಿ, ಶಿಕ್ಷಣ ಹಾಗೂ ಬೇರೆ ವಿಭಾಗದಲ್ಲಿ ಯಶಸ್ಸು ಪಡೆಯಬಹುದು.9ನೇ ದಿನ ನವರಾತ್ರಿಯ ಕೊನೆಯ ದಿನವಾಗಿದೆ. ಈ ದಿನವನ್ನು ಮಹಾನವಮಿ ಎಂದು ಕರೆಯಲಾಗುವುದು. ಸಪ್ತಮಿಯಂದು ದೇವಿ ಸರಸ್ವತಿಯ ಪೂಜೆಯು ಆರಂಭವಾಗಿ ನವಮಿಯಂದು ಕೊನೆಯಾಗುವುದು.

Shwetha M