ಬಿಗ್ ಬಾಸ್ ಮನೆಯಲ್ಲಿ ಮೊದಲ ದಿನವೇ ಮಲ್ಲಮ್ಮ ಎಡವಟ್ಟು! – ಮನೆಯವರ ಹೊಟ್ಟೆಗೆ ತಣ್ಣೀರು ಬಟ್ಟೆನಾ?

ಬಿಗ್ ಬಾಸ್ ಕನ್ನಡ ಸೀಸನ್ 12 ಶುರುವಾಗಿದೆ. ಮೊದಲ ದಿನವೇ ಬಿಗ್ ಬಾಸ್ ಸ್ಪರ್ಧಿಗಳಿಗೆ ಶಾಕ್ ನೀಡಿದೆ. ಈಗಾಗಲೇ ಬಿಗ್ ಬಾಸ್ ಮನೆಯಲ್ಲಿ ಒಂಟಿ-ಜಂಟಿ ಎಂದು ಎರಡು ಗ್ರೂಪ್ ಮಾಡಲಾಗಿದ್ದು, ಮೊದಲ ದಿನವೇ ಟಾಸ್ಕ್ ಆರಂಭವಾಗಿದೆ. ಇದೀಗ ಹಳ್ಳಿ ಪ್ರತಿಭೆ ಮಲ್ಲಮ್ಮ ದೊಡ್ಡ ಎಡವಟ್ಟು ಮಾಡಿದ್ದಾರೆ. ಇದ್ರಿಂದಾಗಿ ಮನೆಮಂದಿ ದಿನಸಿ ಕಳೆದುಕೊಂಡಿದ್ದಾರೆ.
ಇದನ್ನೂ ಓದಿ: ಯಾವುದೇ ಕ್ಷಣದಲ್ಲಿ ಸಚಿವ ಸಂಪುಟ ವಿಸ್ತರಣೆ – ನಾಗೇಂದ್ರ ಮತ್ತೇ ಸಚಿವರಾಗ್ತಾರೆ ಎಂದ ಜಮೀರ್!
ಬಿಗ್ ಬಾಸ್ ಕನ್ನಡ ಸೀಸನ್ 12ರ ಮೊದಲ ದಿನವೇ ರೋಚಕತೆ ಸೃಷ್ಟಿಸಿದೆ. ಮೊದಲ ದಿನ ದೊಡ್ಮನೆಯಲ್ಲಿ ಆರಾಮವಾಗಿ ಸಮಯ ಕಳೆಯೋಣ ಎಂದು ಅಂದುಕೊಂಡಿದ್ದ ಸ್ಪರ್ಧಿಗಳಿಗೆ ಬಿಗ್ ಬಾಸ್ ಒಂದರ ಹಿಂದೆ ಒಂದರಂತೆ ಶಾಕ್ ಕೊಡುತ್ತಿದ್ದಾರೆ. ಈಗಾಗೇ ಬಿಡುಗಡೆ ಆಗಿರುವ ಮೊದಲ ಪ್ರೋಮೋದಲ್ಲಿ ಇಂದು ಮೊದಲ ದಿನ ಒಂದು ಎಲಿಮಿನೇಷನ್ ನಡೆಯಲಿದೆ ಎಂದು ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದು ಪ್ರೋಮೋ ಔಟ್ ಆಗಿದ್ದು, ಇದರಲ್ಲಿ ಹಳ್ಳಿ ಪ್ರತಿಭೆ ಮಲ್ಲಮ್ಮ ಮಹಾ ಎಡವಟ್ಟು ಮಾಡಿದ್ದಾರೆ.
ಸದ್ಯ ಬಿಗ್ ಬಾಸ್ ಮನೆಯಲ್ಲಿ ಅಡುಗೆ ಮಾಡಲು ಒಂಟಿ ತಂಡದವರಿಗೆ ಗ್ರೋಸರಿ ತೆಗೆದುಕೊಳ್ಳಲು ಹೇಳಿದ್ದಾರೆ. ಸುಮ್ಮನೆ ಹೋಗಿ ಬೇಕಾದ ಗ್ರೋಸರಿ ತೆಗೆದುಕೊಳ್ಳುವುದಲ್ಲ. ಇದಕ್ಕೆಂದು ಒಂದು ನಿಯಮ ಇರುತ್ತದೆ. ಬಿಗ್ ಬಾಸ್, ಒಂಟಿ ತಂಡದಲ್ಲಿರುವ ಸದಸ್ಯರು ಮಾತ್ರ ಮನೆಯ ದಿನಸಿ ಸಾಮಗ್ರಿಗಳ ಆಯ್ಕೆ ಮಾಡಬೇಕು ಎಂದಿದ್ದಾರೆ. ಮನೆ ಪಡೆಯುವ ದಿನಸಿ ಸಾಮಗ್ರಿಗಳ ನಿರ್ಧಾರ ಒಂಟಿಗಳದ್ದೇ ಆಗಿರುತ್ತದೆ ಎಂದು ಬಿಗ್ ಬಾಸ್ ಹೇಳಿದ್ದಾರೆ. ಬಳಿಕ ನೆಲದ ಮೇಲೆ ಒಂದು ಗುರುತು ಹಾಕಲಾಗಿದೆ ಅದರ ಮೇಲೆ ನಿಲ್ಲಿ ಎಂದು ಬಿಗ್ ಬಾಸ್ ಮಲ್ಲಮ್ಮ ಅವರಿಗೆ ಹೇಳಿದ್ದಾರೆ. ಆದರೆ, ಮಲ್ಲಮ್ಮ ಅವರಿಗೆ ಏನು ಮಾಡಬೇಕೆಂದು ತಿಳಿಯುವುದಿಲ್ಲ.. ಬಿಗ್ ಬಾಸ್ ಪದೇ ಪದೇ ಗುರುತಿನ ಮೇಲೆ ನಿಲ್ಲಿ ಎಂದು ಹೇಳಿದ್ರೂ ಮಲ್ಲಮ್ಮಗೆ ಅದು ಅರ್ಥವಾಗಿಲ್ಲ. ಬಳಿಕ ಬಿಗ್ ಬಾಸ್, ನಿಮ್ಮ ಆಯ್ಕೆಯ ಇಡೀ ಬುಟ್ಟಿಯನ್ನು ಟೇಬಲ್ ಮೇಲೆ ಇಡತಕ್ಕದ್ದು.. ಮನೆ ಯಾವುದೇ ದಿನಸಿ ಸಾಮಗ್ರಿಗಳನ್ನು ಪಡೆಯುವುದಿಲ್ಲ ಎಂದು ಬಿಗ್ ಬಾಸ್ ಹೇಳಿದ್ದಾರೆ. ಇದರಿಂದ ಮನೆಯವರಿಗೆ ಬೇಸರ ಮೂಡಿದೆ. ಊಟಕ್ಕೆ ಏನು ಮಾಡುವುದು ಎಂದು ಟೆನ್ಶನ್ ಮಾಡಿಕೊಂಡಿದ್ದಾರೆ. ಸದ್ಯ ಮಲ್ಲಮ್ಮನ ಮೇಲೆ ಮನೆಯವರಿಗೆ ಕೋಪಬಂದಿದೆ. ಊಟಕ್ಕೆ ಇನ್ನೇನು ಮಾಡುತ್ತಾರೆ ಎಂಬುದು ನೋಡಬೇಕಿದೆ.

ನೋಡಿರಿ

