ರಾಹುಲ್‌ ಗಾಂಧಿ ಎದೆಗೆ ಗುಂಡು ಹೊಡೆಯುತ್ತೇವೆ – ಟಿವಿ ಲೈವ್‌ನಲ್ಲೇ ಬಿಜೆಪಿ ನಾಯಕನ ಧಮ್ಕಿ

ರಾಹುಲ್‌ ಗಾಂಧಿ ಎದೆಗೆ ಗುಂಡು ಹೊಡೆಯುತ್ತೇವೆ – ಟಿವಿ ಲೈವ್‌ನಲ್ಲೇ ಬಿಜೆಪಿ ನಾಯಕನ ಧಮ್ಕಿ

ಟಿವಿ ನೇರಪ್ರಸಾರದ ವೇಳೆಯೇ ಎದೆಗೆ ಗುಂಡು ಹೊಡೆಯುತ್ತೇವೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಗೆ ಬಿಜೆಪಿ ವಕ್ತಾರನೊಬ್ಬ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಈ ಬಗ್ಗೆ ಕಾಂಗ್ರೆಸ್‌ ಪಕ್ಷವು ಕೇಂದ್ರ ಗೃಹ ಸಚಿವ ಅಮಿತ್‌ ಶಾರಿಗೆ ಪತ್ರ ಬರೆದಿದೆ. ಕೇರಳದ ಖಾಸಗಿ ಟಿವಿ ವಾಹಿನಿಯೊಂದರಲ್ಲಿ ನಡೆಯುತ್ತಿದ್ದ ಚರ್ಚೆಯ ವೇಳೆ ಬಿಜೆಪಿ ಮಾಧ್ಯಮ ವಕ್ತಾರ ಪಿಂಟು ಮಹಾದೇವನ್‌, ರಾಹುಲ್‌ ಗಾಂಧಿ ಎದೆಗೆ ಗುಂಡು ಹೊಡೆಯುತ್ತೇವೆ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ.

ಇದನ್ನೂ ಓದಿ: ಅಮ್ಮ ಪ್ಲೀಸ್ ಬಿಟ್ಟು ಬಿಡು – ಚಿಕನ್ ಕೇಳಿದ್ದಕ್ಕೆ ಮಗನನ್ನೇ ಕೊಂದ ಪಾಪಿ ತಾಯಿ

ಪಿಂಟು ಮಹಾದೇವನ್ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ. ರಾಹುಲ್ ಗಾಂಧಿಗೆ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿರುವ ಪಿಂಟು ಮಹಾದೇವನ್ ವಿರುದ್ದ ತ್ವರಿತ ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ಮಾಡಿದರೆ ಪ್ರತಿಭಟನೆ ನಡೆಸಿ ಬಿಸಿ ಮುಟ್ಟಿಸಲಾಗುತ್ತದೆ ಅಂತಾ ಎಚ್ಚರಿಕೆ ನೀಡಿದ್ದಾರೆ. ʼನ್ಯಾಯದ ಹೋರಾಟದಲ್ಲಿ ಪ್ರತಿಯೊಬ್ಬ ಭಾರತೀಯರೊಂದಿಗೆ ನಿಲ್ಲುವ ನಾಯಕನಿಗೆ ಕೊಲೆ ಬೆದರಿಕೆ ಹಾಕಲಾಗಿದೆʼ ಎಂದು ಅಮಿತ್ ಶಾಗೆ ಕಳುಹಿಸಿರುವ ಪತ್ರವನ್ನ ಕಾಂಗ್ರೆಸ್‌ ಪಕ್ಷವು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

ಆಡಳಿತ ಪಕ್ಷದ ಅಧಿಕೃತ ವಕ್ತಾರರು ಇಂತಹ ವಿಷಕಾರಿ ಮಾತುಗಳನ್ನ ಆಡಿರುವುದು ರಾಹುಲ್ ಗಾಂಧಿಯವರ ಜೀವಕ್ಕೆ ತಕ್ಷಣದ ಅಪಾಯ ತಂದೊಡ್ಡುವುದಲ್ಲದೇ, ಸಂವಿಧಾನ, ಕಾನೂನಿನ ನಿಯಮ ಮತ್ತು ಪ್ರತಿಯೊಬ್ಬ ನಾಗರಿಕನಿಗೆ ನೀಡಬೇಕಾದ ಮೂಲಭೂತ ಭದ್ರತಾ ಭರವಸೆಗಳನ್ನ ದುರ್ಬಲಗೊಳಿಸುತ್ತದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ರಾಹುಲ್ ಗಾಂಧಿಯವರ ಭದ್ರತೆ ವಹಿಸಿಕೊಂಡಿರುವ ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಅವರ ಸುರಕ್ಷತೆಗೆ ಬೆದರಿಕೆ ಇರುವ ಬಗ್ಗೆ ಪದೇ ಪದೇ ಪತ್ರಗಳನ್ನ ಬರೆದಿದೆ ಎಂದು ಹೇಳಿದೆ. ಆಘಾತಕಾರಿ ಸಂಗತಿಯೆಂದರೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆರಿಗೆ ಬರೆದ ಅಂತಹ ಒಂದು ಪತ್ರವು ಮಾಧ್ಯಮಗಳಿಗೆ ಸೋರಿಕೆಯಾಗಿತ್ತು. ಹೀಗೆ ಮಾಡುವುದರ ಹಿಂದಿನ ಉದ್ದೇಶದ ಬಗ್ಗೆ  ಗಂಭೀರ ಪ್ರಶ್ನೆಗಳನ್ನ ಹುಟ್ಟು ಹಾಕಿದೆ ಎಂದು ಕಾಂಗ್ರೆಸ್‌ ಹೇಳಿದೆ.

Kishor KV