ನನ್ನ ಬಾಳ ಸಂಗಾತಿ ಹೀಗಿರ್ಬೇಕು… ಮದುವೆ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇನ್ನೂ ಅವಿವಾಹಿತರು. ಹಾಗಾಗಿಯೇ ರಾಹುಲ್ ಗಾಂಧಿ ಮದುವೆ ಯಾವಾಗ ಎಂಬ ಪ್ರಶ್ನೆ ಆಗಾಗ ಕೇಳಿ ಬರುತ್ತಿದೆ. ಇದೀಗ ರಾಹುಲ್ ಗಾಂಧಿ ತಮ್ಮ ಮದುವೆಗೆ ಸಂಬಂಧಿಸಿದ ಪ್ರಶ್ನೆಗೆ ಮನದಾಳದ ಉತ್ತರ ನೀಡಿದ್ದಾರೆ.
ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ತನ್ನ ಬಾಳ ಸಂಗಾತಿಯ ಬಗ್ಗೆ ಮಾತನಾಡಿದ್ದಾರೆ. ತಾಯಿ ಸೋನಿಯಾ ಗಾಂಧಿ ಮತ್ತು ಅಜ್ಜಿ ಇಂದಿರಾ ಗಾಂಧಿ ಇಬ್ಬರ ಗುಣಗಳನ್ನು ಹೊಂದಿರುವ ಯುವತಿಯನ್ನು ಬಾಳ ಸಂಗಾತಿಯಾಗಿ ಕೈ ಹಿಡಿಯಲು ನಾನು ಬಯಸುತ್ತೇನೆ ಎಂದು ರಾಹುಲ್ ಹೇಳಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶ ಎರಡು ಸ್ಥಳಗಳಿಗೆ ಮರುನಾಮಕರಣ – ಒಪ್ಪಿಗೆ ನೀಡಿದ ಕೇಂದ್ರ
‘ಭಾರತ್ ಜೋಡೋ ಯಾತ್ರೆ’ ಸಂದರ್ಭದಲ್ಲಿ ಮದುವೆ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಹುಲ್ ಗಾಂಧಿ, “ಇದೊಂದು ಆಸಕ್ತಿದಾಯಕ ಪ್ರಶ್ನೆ. ನಾನು ಮಹಿಳೆಗೆ ಆದ್ಯತೆ ನೀಡುತ್ತೇನೆ. ನನ್ನ ತಾಯಿ ಮತ್ತು ಅಜ್ಜಿಯ ಗುಣಗಳ ಮಿಶ್ರಣದ ಗುಣ ಹೊಂದಿರುವ ಹುಡುಗಿ ಸಿಕ್ಕಿದರೆ ಒಳ್ಳೆಯದು”ತಮ್ಮ ಅಜ್ಜಿ ಮತ್ತು ಮಾಜಿ ಪ್ರಧಾನಿ ಇಂದಿರಾ ಗಾಂಧಿಯನ್ನು “ನನ್ನ ಜೀವನದ ಪ್ರೀತಿ ಮತ್ತು ನನ್ನ ಎರಡನೇ ತಾಯಿ” ಎಂದು ಕರೆದಿದ್ದಾರೆ.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಸುತ್ತಿರುವ ರಾಹುಲ್ ತನ್ನ ಮೋಟರ್ ಸೈಕಲ್ ಮತ್ತು ಸೈಕಲ್ಗಳನ್ನು ಓಡಿಸುವ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. “ನಾನು ಎಲೆಕ್ಟ್ರಿಕ್ ಸ್ಕೂಟರ್ ಓಡಿಸಿದ್ದೇನೆ. ಆದರೆ ಎಂದಿಗೂ ಎಲೆಕ್ಟ್ರಿಕ್ ಬೈಕ್ ಓಡಿಸಿಲ್ಲ. ನೀವು ಈ ಚೈನೀಸ್ ಕಂಪನಿಯನ್ನು ನೋಡಿದ್ದೀರಾ, ಎಲೆಕ್ಟ್ರಿಕ್ ಮೋಟಾರ್ ಗಳ ಸೈಕಲ್ಗಳು ಮತ್ತು ಮೌಂಟೈನ್ ಬೈಕುಗಳಿವೆ. ಬಹಳ ಆಸಕ್ತಿದಾಯಕ ಪರಿಕಲ್ಪನೆ” ಎಂದು ಅವರು ಹೇಳಿದರು.