ಹಾವಿಗೂ ಬರ್ತ್ಡೇ ಭಾಗ್ಯ! – ನಾಗಪ್ಪನ ಹುಟ್ಟುಹಬ್ಬಕ್ಕೆ ಕೇಕ್ ಕಟ್ ಮಾಡಿಸಿದ ಯುವಕರು!

ಸಾಮಾನ್ಯವಾಗಿ ನಾವು ನಮ್ಮ ಫ್ರೆಂಡ್ಸ್, ಕುಟುಂಬದವರ ಹುಟ್ಟು ಹಬ್ಬ ಆಚರಿಸುತ್ತೇವೆ. ಈಗೀಗ ಮನೆಯಲ್ಲಿ ಸಾಕಿರೋ ಮುದ್ದಿನ ಶ್ವಾನ, ಬೆಕ್ಕುಗಳ ಹುಟ್ಟು ಹಬ್ಬ ಸೆಲೆಬ್ರೇಟ್ ಮಾಡ್ತಾರೆ. ಈಗೀನ ಕಾಲದಲ್ಲಿ ಅವುಗಳಿಗೂ ಕೇಕ್ ಕಟ್ ಮಾಡಿಸೋದನ್ನ ನಾವು ನೋಡಿದ್ದೇವೆ. ಆದ್ರೀಗ ಇಲ್ಲೊಂದು ಕಡೆ ಯುವಕರ ಗುಂಪು ಹಾವಿನ ಬರ್ತ್ಡೇ ಸೆಲೆಬ್ರೇಟ್ ಮಾಡಿದ್ದಾರೆ. ಇದ್ರ ವಿಡಿಯೋ ಭಾರಿ ವೈರಲ್ ಆಗಿದೆ.
ಇದನ್ನೂ ಓದಿ: ಕರ್ನಾಟಕದ ಜನರಿಗೆ ಗುಡ್ ನ್ಯೂಸ್ – ಬೆಂಗಳೂರಿನಿಂದ ಮುಂಬೈಗೆ ಸೂಪರ್ ಫಾಸ್ಟ್ ರೈಲು ಘೋಷಣೆ
ಇತ್ತೀಚೆಗಿನ ದಿನಗಳಲ್ಲಿ ಸಾಕು ಪ್ರಾಣಿಗಳ ಹುಟ್ಟುಹಬ್ಬ, ಸೀಮಂತ ಮಾಡುವುದನ್ನ ನಾವು ಕೇಳಿದ್ದೇವೆ.. ಇನ್ನು ನಾಗರಪಂಚಮಿಯಂದು ಹಾವುಗಳ ಮೇಲೆ ಹಾಲು ಹಾಕುವುದನ್ನ ಕೂಡ ನೋಡಿದ್ದೇವೆ. ಆದ್ರೆ ಇಲ್ಲೊಂದು ಕಡೆ ಯುವಕರು ಹಾವಿನ ಬರ್ತ್ಡೇ ಸೆಲೆಬ್ರೇಟ್ ಮಾಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಅಗಿದೆ. ವೈರಲ್ ಆದ ವಿಡಿಯೋದಲ್ಲಿ ಯುವಕರು ಒಂದು ನಾಗರಹಾವನ್ನು ಮಧ್ಯದಲ್ಲಿ ಇರಿಸಿ, ಮುಂದೆ ‘ಹಾವು’ ಎಂದು ಬರೆಯಲಾದ ಕೇಕ್ ಇರಿಸಿದ್ದಾರೆ. ನಂತರ, ‘ಹ್ಯಾಪಿ ಬರ್ತ್ಡೇ ಟು ಯೂ’ ಎಂದು ಹಾಡುತ್ತಾ ಹಾವಿಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಾರೆ. ಹಾಡು ಮುಗಿದ ತಕ್ಷಣ, ಹಾವು ಎದ್ದು ಕೇಕ್ನ ಮೇಲೆ ಬಾಯಿ ಇಟ್ಟಿದೆ. ಯುವಕರು ಇದನ್ನು ನೋಡಿ ಸಂತೋಷದಿಂದ ಕೂಗಾಡಿದ್ದಾರೆ.
ಈ ವಿಡಿಯೋ ವೈರಲ್ ಆಗ್ತಿದ್ದಂತೆ ಅನೇಕರು ನಾನಾ ಕಮೆಂಟ್ ಮಾಡ್ತಿದ್ದಾರೆ. ಹಾವು ಕೂಡ ಹುಟ್ಟುಹಬ್ಬ ಆಚರಣೆಯಲ್ಲಿ ಭಾಗವಹಿಸಿರುವುದು ಚಂದ! ಆದರೆ ಇದು ಅಪಾಯಕಾರಿ.. ಹಾವು ವಿಷಕಾರಿಯಾಗಿದ್ದು, ಇದು ಜೀವಕ್ಕೆ ಅಪಾಯ ಎಂದು ಎಚ್ಚರಿಕೆ ನೀಡಿದ್ದಾರೆ. ಒಬ್ಬರು ತಮಾಷೆಯಾಗಿ, ‘ಹಾವು ರಿಟರ್ನ್ ಗಿಫ್ಟ್ ಕೊಟ್ಟರೆ ಈ ಹುಡುಗರಿಗೆ ಏನಾಗುತ್ತೆ?’ ಎಂದು ಬರೆದಿದ್ದಾರೆ. ಮತ್ತೊಬ್ಬರು, ‘ರೀಲ್ಗಳಿಗಾಗಿ ಜನ ಯಾವ ಹಂತಕ್ಕೂ ಹೋಗುತ್ತಾರೆ ನೋಡಿ!’ ಟೀಕಿಸಿದ್ದಾರೆ.

ನೋಡಿರಿ

