ಲವ್ವಲ್ಲಿ ಬಿದ್ದ ಅಭಿಷೇಕ್ ಶರ್ಮಾ.. ಉದ್ಯಮಿಗೆ ಅಭಿ ಕ್ಲೀನ್ ಬೋಲ್ಡ್! – ಲೈಲಾ ಫೈಸಲ್ ಯಾರು ಗೊತ್ತಾ?

ಅಭಿಷೇಕ್ ಶರ್ಮಾ.. ಕಳೆದ ಎರಡು ವರ್ಷಗಳಿಂದ ಕ್ರಿಕೆಟ್ ಲೋಕದಲ್ಲಿ ಸದ್ದು ಮಾಡ್ತಿರೋ ಹೆಸ್ರು.. ಐಪಿಎಲ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಈ ಯಂಗ್ ಪ್ಲೇಯರ್ ಟೀಮ್ ಇಂಡಿಯಾದಲ್ಲೂ ಸ್ಥಾನ ಪಡೆಯುವಲ್ಲೂ ಯಶಸ್ವಿಯಾಗಿದ್ದಾರೆ. ಸದ್ಯ ಅಭಿಷೇಕ್ ಶರ್ಮಾ ಏಷ್ಯಾಕಪ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡ್ತಿದ್ದಾರೆ. ಭಾರತ ಮತ್ತು ಪಾಕ್ ನಡುವಿನ ಪಂದ್ಯದಲ್ಲಂತೂ ಅಭಿಷೇಕ್ ಬ್ಯಾಟಿಂಗ್ ಆರ್ಭಟಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಯುವತಿಯರಂತೂ ಈ ಹ್ಯಾಂಡ್ಸಮ್ ಪ್ಲೇಯರ್ ನ ನೋಡಿ ಕಳೆದುಹೋಗಿದ್ದಾರೆ.. ಮೈದಾನದಲ್ಲಿ ಅಭಿಷೇಕ್ ಶರ್ಮಾ ಜಬರ್ದಸ್ತ್ ಪ್ರದರ್ಶನ ನೀಡ್ತಿದ್ರೆ ಇತ್ತ ಫ್ಯಾನ್ಸ್ ಮಾತ್ರ ಗೂಗಲ್ ನಲ್ಲಿ ಬೇರೆಯದ್ದೇ ಸರ್ಚ್ ಮಾಡ್ತಿದ್ದಾರೆ. ಅಭಿಷೇಕ್ ಸಿಂಗಲಾ? ಗರ್ಲ್ಫ್ರೆಂಡ್ ಇದ್ದಾರಾ? ಅಭಿಷೇಕ್ ಮನಸ್ಸು ಕದ್ದ ಹುಡುಗಿ ಯಾರು ಅಂತ ಸರ್ಚ್ ಮಾಡ್ತಿದ್ದಾರೆ. ಇದೀಗ ಫ್ಯಾನ್ಸ್ ಪ್ರಶ್ನೆಗೆ ಶಾಕಿಂಗ್ ಉತ್ತರ ಸಿಕ್ಕಿದೆ. ಇದೀಗ ಖ್ಯಾತ ಮಾಡೆಲ್, ಉದ್ಯಮಿ ಜೊತೆ ಅಭಿಷೇಕ್ ಹೆಸ್ರು ತಳುಕುಹಾಕಿಕೊಂಡಿದೆ.
ಇದನ್ನೂ ಓದಿ: ಶುಗರ್ ನಿಯಂತ್ರಣಕ್ಕೆ ಈ ತರಕಾರಿ ಬೆಸ್ಟ್! – ರಾತ್ರಿ ಊಟದ ಜೊತೆ ತೊಂಡೆಕಾಯಿ ತಿಂದ್ರೆ ಏನೆಲ್ಲಾ ಪ್ರಯೋಜನ?
ಭಾರತ ಟಿ20 ತಂಡದ ಹೊಸ ಐಕಾನ್ ಅಭಿಷೇಕ್ ಶರ್ಮಾ ಆಧುನಿಕ ಕ್ರಿಕೆಟ್ ಗೆ ಹೇಳಿ ಮಾಡಿಸಿದ ಆಟಗಾರ. ಮೈದಾನದಲ್ಲಿ ಎದುರಾಳಿಗಳು ಯಾರೇ ಇರ್ಲಿ.. ಬ್ಯಾಟಿಂಗ್ ಗೆ ಇಳಿದ್ರು ಅಂದ್ರೆ ರನ್ಗಳ ಸುರಿಮಳೆ ಫಿಕ್ಸ್.. ಏಷ್ಯಾಕಪ್ ಟೂರ್ನಿಯಲ್ಲೂ ಅಭಿಷೇಕ್ ಉತ್ತಮ ಫಾರ್ಮ್ನಲ್ಲಿದ್ದಾರೆ. ಈ ಮೊನ್ನೆಷ್ಟೇ ಪಾಕ್ ವಿರುದ್ಧದ ಮ್ಯಾಚ್ನಲ್ಲಿ ಅಭಿಷೇಕ್ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಪಂಜಾಬ್ ಪುತ್ತರ್ ರಣಾರ್ಭಟ ಕಂಡು ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಈ ಬೆನ್ನಲ್ಲೇ ಅಭಿಷೇಕ್ ಹೆಸ್ರು ಕ್ರಿಕೆಟ್ ಲೋಕ ಮಾತ್ರವಲ್ಲ, ಸೋಶಿಯಲ್ ಮೀಡಿಯಾದಲ್ಲೂ ಸದ್ದು ಮಾಡ್ತಿದೆ. ಈ ಬೆನ್ನಲ್ಲೇ ಅಭಿಷೇಕ್ ಶರ್ಮಾ ಡೇಟಿಂಗ್ ವಿಚಾರ ಕೂಡ ಸುದ್ದಿಯಲ್ಲಿದೆ. ಈ ಹ್ಯಾಂಡ್ಸಮ್ ಬಾಯ್ ಜೊತೆ ಸುಂದರಿಯೊಬ್ಬಳ ಹೆಸ್ರು ತಳುಕು ಹಾಕಿಕೊಂಡಿದೆ.
ಅಭಿಷೇಕ್ ಶರ್ಮಾ ಐಪಿಎಲ್ ಗೆ ಪಾದಾರ್ಪಣೆ ಮಾಡಿದಾಗಿನಿಂದ ಉತ್ತಮ ಫಾರ್ಮ್ನಲ್ಲಿದ್ದಾರೆ. ಈ ಬೆನ್ನಲ್ಲೇ ಅಭಿಷೇಕ್ ಜೊತೆ ಸುಂದರಿಯರ ಹೆಸ್ರು ತಳುಕುಹಾಕಿಕೊಳ್ತಿರೋದು ನಿಮ್ಗೆಲ್ಲಾ ಗೊತ್ತೇ ಇದೆ. ಎಸ್ಆರ್ಹೆಚ್ ತಂಡದ ಮಾಲಕಿ ಕಾವ್ಯಾ ಮಾರನ್ ಜೊತೆ ಅಭಿಷೇಕ್ ಶರ್ಮಾ ಹೆಸ್ರು ಕೂಡ ತಳುಕು ಹಾಕಿಕೊಂಡಿತ್ತು.. ಐಪಿಎಲ್ನಲ್ಲಿ ಅಭಿಷೇಕ್ ಶರ್ಮಾ ಹೆಚ್ಚು ರನ್ ಕಲೆ ಹಾಕ್ತಿದ್ದಂತೆ ಕಾವ್ಯಾ ಮಾರನ್ ಸೆಲೆಬ್ರೇಟ್ ಮಾಡಿದ್ರು. ಈ ಬೆನ್ನಲೇ ಕಾವ್ಯ ಅಭಿಷೇಕ್ ಗೆ ಕ್ಲೀನ್ ಬೋಲ್ಡ್ ಆಗಿದ್ದಾರೆ.. ಇವರಿಬ್ರು ಡೇಟಿಂಗ್ ನಡೆಸ್ತಿದ್ದಾರೆ ಎಂದು ಸುದ್ದಿ ಹಬ್ಬಿಸಲಾಗಿತ್ತು. ಆದಾದ್ಮೇಲೆ ಮಾಡೆಲ್ ದಿಯಾ ಮೆಹ್ತಾ ಜೊತೆಗೆ ಅಭಿಷೇಕ್ ಹೆಸ್ರು ಓಡಾಡಿತ್ತು. 2019ರಲ್ಲಿ ಮಿಸ್ ರಾಜಸ್ತಾನ್ ಆಗಿ ಹೊರಹೊಮ್ಮಿದ್ದ ಈಕೆಯ ಜೊತೆಗೆ ಅಭಿಷೇಕ್ ಡೇಟಿಂಗ್ ನಡೆಸ್ತಿದ್ದಾರೆ ಎಂದು ಹೇಳಲಾಗ್ತಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ಐಪಿಎಲ್ ವೇಳೆ ಸನ್ರೈಸರ್ಸ್ ಹೈದ್ರಾಬಾದ್ ತಂಡದ ಡ್ರೆಸ್ಸಿಂಗ್ ರೂಮ್ಗೆ ದಿಯಾ ಮೆಹ್ತಾ ಎಂಟ್ರಿಕೊಟ್ಟಿದ್ರು. ದಿಯಾ ಮೆಹ್ತಾ ಅಭಿಷೇಕ್ ಶರ್ಮಾ ಕೈ ಹಿಡಿದುಕೊಂಡಿದ್ದ ಒಂದು ಫೋಟೋ ಕೂಡ ವೈರಲ್ ಆಗಿತ್ತು. ಆದ್ರೀಗ ಅಭಿಷೇಕ್ ಶರ್ಮಾ ಜೊತೆ ಹೊಸ ಹೆಸ್ರು ತಳುಕುಹಾಕಿಕೊಂಡಿದೆ. ಮಾಡೆಲ್, ಉದ್ಯಮಿಗೆ ಈ ಯಂಗ್ ಬಾಯ್ ಕ್ಲೀನ್ ಬೋಲ್ಡ್ ಆಗಿದ್ದಾರೆ.. ಆ ಸುಂದ್ರಿ ಬೇರೆ ಯಾರು ಅಲ್ಲ.. ಲೈಲಾ ಫೈಸಲ್..
ಅಭಿಷೇಕ್ ಶರ್ಮಾ ಲೈಲಾ ಫೈಸಲ್ ಪ್ರೀತಿಯಲ್ಲಿ ಬಿದ್ದಿದ್ದಾರೆ. ಮೀಟಿಂಗ್ ಡೇಟಿಂಗ್ ಅಂತಾ ಸುತ್ತಾಡ್ತಿದ್ದಾರೆ ಎಂಬ ಸುದ್ದಿ ಜೋರಾಗಿ ಸದ್ದು ಮಾಡ್ತಿದೆ. ಇವರಿಬ್ಬರು ತುಂಬಾ ಕ್ಲೋಸ್ ಆಗಿ ಕಾಣಿಸಿಕೊಂಡಿರೋ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಈ ಫೋಟೋ ಕಾರಣದಿಂದಲೇ ಇವರಿಬ್ಬರು ರಿಲೇಶನ್ಶಿಪ್ನಲ್ಲಿದ್ದಾರೆ ಎಂಬ ರೂಮರ್ಸ್ ಸ್ಪ್ರೆಡ್ ಆಗಿದೆ.. ಇನ್ನು ಇನ್ಸ್ಸ್ಟಾಗ್ರಾಂನಲ್ಲಿ ಲೈಲಾ ಫೈಸಲ್ ಹಾಗೂ ಅಭಿಷೇಕ್ ಶರ್ಮಾ ಪರಸ್ಪರ ಫಾಲೋ ಮಾಡ್ತಿದ್ದಾರೆ. ಅಭಿಷೇಕ್ ಶರ್ಮಾ ಜೊತೆಗೆ ಅವರು ತಾಯಿ ಹಾಗೂ ತಂಗಿ ಕೋಮಲ್ ಶರ್ಮಾ ಕೂಡ ಲೈಲಾ ಫೈಸಲ್ ಅನ್ನ ಫಾಲೋ ಮಾಡ್ತಿದ್ದಾರೆ. ಜೊತೆಗೆ ಅಭಿಷೇಕ್ ಶರ್ಮಾ ಆನ್ಫೀಲ್ಡ್ನಲ್ಲಿ ಭರ್ಜರಿ ಪರ್ಫಾಮೆನ್ಸ್ ನೀಡಿದಾಗೆಲ್ಲಾ ಲೈಲಾ ಸಂಭ್ರಮಿಸ್ತಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ಶುಭಾಶಯ ಹೇಳ್ತಾರೆ. ಇದ್ರಿಂದಾಗಿಯೇ ಇವರಿಬ್ಬರ ಮಧ್ಯೆ ಸಂಥಿಂಗ್ ಸಂಥಿಂಗ್ ನಡಿತಾ ಇದೆ ಅಂತಾ ಗಾಸಿಪ್ ಹರಿದಾಡಲು ಕಾರಣವಾಗಿದ್ದು..
ಇನ್ನು ಲೈಲಾ ಫೈಸಲ್ ಯಾರು? ಆಕೆಯ ಹಿನ್ನಲೆ ಏನು ಅನ್ನೋದನ್ನ ನೋಡೋದಾದ್ರೆ, ಲೈಲಾ ಮೂಲತಃ ದೆಹಲಿಯವರು.. ಶ್ರೀಮಂತ ಕುಟುಂಬದಲ್ಲಿ ಬೆಳೆದ ಈಕೆ, ವಿದ್ಯಾಭ್ಯಾಸ ಮುಗಿಸಿದ್ದು ದೆಹಲಿಯಲ್ಲೇ. ಆ ಬಳಿಕ ಈಕೆ ಲಂಡನ್ನಲ್ಲಿ ಫ್ಯಾಶನ್ ಡಿಸೈನ್ ಕೋರ್ಸ್ ಕಂಪ್ಲೀಟ್ ಮಾಡಿದ್ದಾರೆ. ಇದೀಗ social media influencer, ಮಾಡೆಲಿಂಗ್ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದಾರೆ. ಜೊತೆಗೆ ಸಹೋದರಿ ಜೊತೆ ಸೇರ್ಕೊಂಡು ಉದ್ಯಮ ಕೂಡ ನಡೆಸ್ತಾ ಇದ್ದಾರೆ. ಲಕ್ಸುರಿ clothing brand ಆದಂತಹ ಲೈಲಾ ರೂಹಿ ಫೈಸಲ್ ಡಿಸೈನ್ಸ್ನ ಸ್ಥಾಪಕಿಯಾಗಿದ್ದಾರೆ. ಸದ್ಯ ಲೈಲಾ ಫ್ಯಾಷನ್ ಉದ್ಯಮದಲ್ಲಿ ತನ್ನದೇ ಆದ ಹೆಸ್ರು ಮಾಡಿದ್ದಾರೆ.
ಇನ್ನು ಲೈಲಾ ಜೊತೆ ಅಭಿಷೇಕ್ ಹೆಸ್ರು ತಳುಕುಹಾಕಿಕೊಳ್ತಿದ್ದಂತೆ ಇವರಿಬ್ಬರ ಮಧ್ಯೆ ಏಜ್ ಗ್ಯಾಪ್ ಎಷ್ಟಿದೆ ಅಂತಾ ಫ್ಯಾನ್ಸ್ ಹುಡುಕಾಟ ನಡೆಸಿದ್ದಾರೆ. ಅಂದ್ಹಾಗೆ ಅಭಿಷೇಕ್ ಶರ್ಮಾ ಸೆಪ್ಟೆಂಬರ್ 4, 2000ನೇ ಇಸವಿ ಜನಿಸಿದರು.. ಅಂದ್ರೆ ಅಭಿಷೇಕ್ಗೆ ಈಗ 24 ವರ್ಷ. ಲೈಲಾ ಫೈಜಲ್ ಕೂಡ 2000 ಇಸವಿಯಲ್ಲಿ ಜನಿಸಿದ್ದು, ಅವರಿಗೂ 24 ವರ್ಷ. ಹೀಗಾಗಿ ಇಬ್ಬರೂ ಸಹ ಒಂದೇ ವಯಸ್ಸಿನವರಾಗಿದ್ದಾರೆ.
ಒಟ್ಟಿನಲ್ಲಿ, ಅಭಿಷೇಕ್ ಮೈದಾನದಲ್ಲಿ ಮಾತ್ರವಲ್ಲದೇ ಅವರ ವೈಯಕ್ತಿಕ ಜೀವನದ ವಿಚಾರವಾಗಿಯೂ ಸದ್ದು ಮಾಡ್ತಿದ್ದಾರೆ. ಸದ್ಯ ಅಭಿಷೇಕ್ ಶರ್ಮಾ ಜೊತೆಗೆ ಲೈಲಾ ಫೈಸಲ್ ಹೆಸ್ರು ಸದ್ದು ಮಾಡ್ತಿದೆ. ಅಭಿಷೇಕ್-ಲೈಲಾ ಮಾತ್ರ ಈ ವಿಚಾರದಲ್ಲಿ ಸೈಲೆಂಟಾಗಿದ್ದಾರೆ. ಮುಂದಿನ ದಿನಗಳಲ್ಲಿ ಇವರಿಬ್ರು ಈ ಬಗ್ಗೆ ಮೌನ ಮುರಿತಾರಾ ಅಂತಾ ಕಾದುನೋಡ್ಬೇಕು.

ನೋಡಿರಿ

