ಕೊಳಲು ವಾದನಕ್ಕೆ ಬೆರಗಾದ ಪುಟ್ಟ ಕಂದ – ಅಮ್ಮನ ಮಡಿಲಿನಿಂದ ಅಂಬೆಗಾಲಿಡುತ್ತಾ ಸಂಗೀತಗಾರನ ಬಳಿ ಬಂದ ಮಗು!

ಕೊಳಲು ವಾದನಕ್ಕೆ ಬೆರಗಾದ ಪುಟ್ಟ ಕಂದ – ಅಮ್ಮನ ಮಡಿಲಿನಿಂದ ಅಂಬೆಗಾಲಿಡುತ್ತಾ ಸಂಗೀತಗಾರನ ಬಳಿ ಬಂದ ಮಗು!

ಸಂಗೀತ ಅನ್ನೋದೇ ಹಾಗೆ.. ಎಂತವರನ್ನ ಕೂಡ ಸೆಳೆಯುತ್ತದೆ. ಖುಷಿ ಇರ್ಲಿ.. ದುಖಃ ಇರ್ಲಿ.. ಸಂಗೀತವನ್ನ ಆಲಿಸಿದ್ರೆ ಮನಸ್ಸು ನಿರಾಳ ಅನ್ನಿಸುತ್ತದೆ. ಇನ್ನು ಕೊಳಲು ವಾದನ ಅಂದ್ರೆ ಕೇಳ್ಬೇಕ.. ನಮ್ಮನ್ನ ಬೇರೆಯದ್ದೇ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ. ಇದೀಗ ಇಲ್ಲೊಂದು ಪುಟ್ಟ ಮಗು ಕೊಳಲು ವಾದನಕ್ಕೆ ಮನಸೋತಿದೆ. ಅಮ್ಮನ ಮಡಿಲಿನಿಂದ ಎದ್ದು ಅಂಬೆಗಾಲಿಡುತ್ತಾ ಸಂಗೀತಗಾರನ ಬಳಿ ಬಂದಿದೆ. ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: ಗಂಭೀರ್ ಶಿಷ್ಯನಿಂದಾಗಿ ಸೂಪರ್ ಓವರ್ – ಫೈನಲ್ ಗೂ ಮುಂಚೆ ಪ್ರಯೋಗ ಬೇಕಿತ್ತಾ?

ಮೆಟ್ರೋದಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ಒಮ್ಮೆ ಸೀಟ್‌ ಸಿಕ್ಕಿದ್ರೆ ಸಾಕು ಅಂತಾ ಬಯಸುತ್ತಾರೆ. ಸೀಟ್‌ ಸಿಕ್ಕಿದ್ರೆ ತಮ್ಮದೇ ಲೋಕದಲ್ಲಿ ಕಳೆದುಹೋಗ್ತಾರೆ.  ಪಕ್ಕದಲ್ಲಿ ಕುಳಿತವರು ಯಾರು ಅನ್ನೋದನ್ನ ಕೂಡ ಯೋಚನೆ ಮಾಡಲ್ಲ. ಇದೀಗ ಇಲ್ಲೊಂದು ಕಡೆ ಮೆಟ್ರೋದಲ್ಲಿ ವ್ಯಕ್ಯಿಯೊಬ್ಬ ಕೊಳಲು ನುಡಿಸಿದ್ದಾರೆ. ಆತನ ಮುಂದೆ ಕುಳಿತಿದ್ದ ಪುಟ್ಟ ಮಗುವೊಂದು ಕೊಳಲು ನಾದಕ್ಕೆ ಮನಸೋತಿದೆ. ಮಗುವೊಂದು ಅಂಬೆಗಾಲಿಡುತ್ತಲೇ ಆತನ ಬಳಿ ಬಂದು ಪಕ್ಕದಲ್ಲಿದ್ದ ಹಾರ್ಮೋನಿಯಂ ಅನ್ನು ಮುಟ್ಟಿ ನೋಡಿ ಅದನ್ನು ತಟ್ಟುತ್ತಾ ಕುಳಿತಿದೆ. ಇದ್ರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

ಲಿಂಕ್ಡಿನ್‌ನಲ್ಲಿ The Logical Indianನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ವೀಡಿಯೋ ನೋಡಿದ ಜನ ಮಗುವಿನ ಆ ಕುತೂಹಲ ಆಸಕ್ತಿಗೆ ಬೆರಗಾಗಿದ್ದಾರೆ. ಅಂದಹಾಗೆ ಇಲ್ಲಿ ಮೆಟ್ರೋ ರೈಲಿನಲ್ಲಿ ಕೊಳಲು ನುಡಿಸುತ್ತಿರುವರು ಸೋಶಿಯಲ್ ಮೀಡಿಯಾದಲ್ಲಿ ಕೊಳಲು ವಾದನದ ವೀಡಿಯೋಗಳಿಂದಲೇ ಪ್ರಸಿದ್ಧಿ ಪಡೆದಿರುವ ಸಂಗೀತಗಾರ ತನಿಷ್ಕ್ ಗೋಡ್ಕೆ. ಇದೀಗ ತನಿಷ್ಕ್‌ ಕೊಳಲು ನುಡಿಸುವುದನ್ನು ನೋಡಿದ ಮಗು ಅಪ್ಪ ಅಮ್ಮನ ಕೈಯಿಂದ ಕೆಳಗಿಳಿದು ಬಂದು ಅಂಬೆಗಾಲಿಡುತ್ತಲೇ ಈ ಗಾಯಕನ ಬಳಿ ಬಂದಿದೆ. ಈ ವಿಡಿಯೋ ನೋಡಿ ಅನೇಕರು ಮೆಚ್ಚಿಕೊಂಡಿದ್ದಾರೆ.

Shwetha M