ಫೈನಲ್ ನಲ್ಲೂ ನೋ ಶೇಕ್ ಹ್ಯಾಂಡ್ – ಹ್ಯಾಟ್ರಿಕ್ ವಿಕ್ಟರಿ.. ಭಾರತಕ್ಕೆ ಟ್ರೋಫಿ?
PAKಗೆ ಸೋಲಿನ ಜತೆ ಅವಮಾನ ಫಿಕ್ಸ್?

ಕೌಂಟ್ಡೌನ್. ಕ್ರಿಕೆಟ್ ಜಗತ್ತಿನ ದಿ ಮೋಸ್ಟ್ ಹೈವೋಲ್ಟೇಜ್ ಮ್ಯಾಚ್ಗೆ ಕೌಂಟ್ಡೌನ್. ಅದೂ ಕೂಡ ಫೈನಲ್ ವಾರ್. ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾಕಪ್ ಫೈನಲ್ ಮ್ಯಾಚ್ಗೆ ಕೆಲವೇ ಗಂಟೆಗಳಷ್ಟೇ ಬಾಕಿ. ಭಾನುವಾರ ಕಳೆಯೋ ಹೊತ್ತಿಗೆ 2025ರ ಏಷ್ಯಾಕಪ್ ಟೂರ್ನಿಯ ಚಾಂಪಿಯನ್ಸ್ ಯಾರು ಅನ್ನೋದು ಜಗಜ್ಜಾಹೀರಾಗಲಿದೆ. ಆದ್ರೆ ಈ ಪಂದ್ಯದ ಆರಂಭಕ್ಕೂ ಮುನ್ನ ಕಾಡ್ತಿರೋ ಪ್ರಶ್ನೆ ಅಂದ್ರೆ ಈ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ಶೇಕ್ ಹ್ಯಾಂಡ್ ಮಾಡ್ತಾರಾ ಅನ್ನೋದು.
ಇದನ್ನೂ ಓದಿ : ಹ್ಯಾರಿಸ್ ರೌಫ್ & ಸಾಹಿಬ್ಜಾದಾ ಫರ್ಹಾನ್ ಬ್ಯಾನ್ – ಭಾರತ ಕೆಣಕಿದ್ದಕ್ಕೆ ತಕ್ಕ ಶಾಸ್ತಿ
ಏಷ್ಯಾಕಪ್ ಶೆಡ್ಯೂಲ್ನ ಸಂಡೇಗಳು ಭಾರತೀಯರ ಪಾಲಿಗೆ ಸೂಪರ್ ಸಂಡೇಗಳೇ ಆಗಿವೆ. ಭಾರತ ವರ್ಸಸ್ ಪಾಕಿಸ್ತಾನ ನಡುವಿನ ಮೂರೂ ಹೈವೋಲ್ಟೇಜ್ ಮ್ಯಾಚ್ಗಳು ಸಂಡೇನೇ ಬಂದಿವೆ. ಮೊದ್ಲಿಗೆ ಸೆಪ್ಟೆಂಬರ್ 14 ಭಾನುವಾರ ಲೀಗ್ ಹಂತದ ಫೈಟ್.. ಸೆಪ್ಟೆಂಬರ್ 21 ಭಾನುವಾರ ಸೂಪರ್ 4 ಹಂತದ ಕ್ಲಾಶ್.. ಸೆಪ್ಟೆಂಬರ್ 28 ಭಾನುವಾರ ಈಗ ಫೈನಲ್ ವಾರ್. ಆಲ್ರೆಡಿ ಎರಡು ಮ್ಯಾಚ್ಗಳಲ್ಲಿ ಭರ್ಜರಿಯಾಗಿ ಗೆದ್ದಿರೋ ಭಾರತ ಕ್ಲೈಮ್ಯಾಕ್ಸ್ನಲ್ಲಿ ಹ್ಯಾಟ್ರಿಕ್ ವಿಕ್ಟರಿ ಜೊತೆ ಟ್ರೋಫಿಯನ್ನೂ ಎತ್ತಿ ಹಿಡಿಯೋ ಜೋಶ್ನಲ್ಲಿದೆ. 99.9 ಪರ್ಸೆಂಟ್ ಟೀಂ ಇಂಡಿಯಾನೇ ಗೆಲ್ಲೋದು ಅಂತಾ ಇಡೀ ಕ್ರಿಕೆಟ್ ಜಗತ್ತಿಗೇ ಗೊತ್ತಿದೆ. ಅದ್ರಲ್ಲಿ ಪಾಯಿಂಟ್ 1 ಪರ್ಸೆಂಟ್ ಅಂದ್ರೆ ಪಾಕಿಸ್ತಾನಿಯರು ಮಾತ್ರ ನಾವು ವಿನ್ ಆಗ್ಬೋದೇನೋ ಅಂತಾ ಕನಸು ಕಾಣ್ತಿದ್ದಾರೆ. ಬಟ್ ಮ್ಯಾಚ್ ಗೆಲ್ಲೋದಿರಲಿ ಅಟ್ಲಿಸ್ಟ್ ಶೇಕ್ ಹ್ಯಾಂಡ್ ಆದ್ರೂ ಕೊಟ್ಟು ಮರ್ಯಾದೆ ಉಳಿಸ್ರಪ್ಪ. ಮತ್ತೆ ಅವಮಾನ ಮಾಡ್ಬೇಡಿ ಅನ್ನೋ ಸ್ಟೇಜ್ಗೆ ಬಂದಿದ್ದಾರೆ.
ಐಸಿಸಿ ಸೂಚನೆ ಬಳಿಕ ಶೇಕ್ ಹ್ಯಾಂಡ್ ಕೊಡುತ್ತಾ ಭಾರತ?
ಏಷ್ಯಾಕಪ್ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಪ್ಟೆಂಬರ್ 14ರಂದು ಲೀಗ್ ಹಂತದಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದ್ವು. ಈ ಪಂದ್ಯದಲ್ಲಿ ನೋ ಶೇಕ್ ಹ್ಯಾಂಡ್ ವಿವಾದ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಟಾಸ್ ಟೈಮಲ್ಲಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ಪಾಕ್ ಕ್ಯಾಪ್ಟನ್ ಸಲ್ಮಾನ್ ಅಲಿ ಅಘಾಗೆ ಶೇಕ್ ಹ್ಯಾಂಡ್ ಕೊಡಲು ನಿರಾಕರಿಸಿದ್ರು. ಜೊತೆಗೆ ಪಂದ್ಯ ಮುಗಿದ ಮೇಲೆಯೂ ಭಾರತೀಯ ಆಟಗಾರರು ಪಾಕ್ ಆಟಗಾರರ ಕೈಕುಲುಕಿರಲಿಲ್ಲ. ಸೀದಾ ಡ್ರೆಸ್ಸಿಂಗ್ ರೂಮ್ಗೆ ಹೋಗಿ ಬಾಗಿಲು ಹಾಕಿಕೊಂಡಿದ್ರು. ಆ ಬಳಿಕ ಸೆಪ್ಟೆಂಬರ್ 21ರಂದು ನಡೆದ ಪಂದ್ಯದಲ್ಲೂ ಉಭಯ ತಂಡಗಳ ನಾಯಕರು ಮತ್ತು ಆಟಗಾರರು ಕೈಕುಲುಕಿರಲಿಲ್ಲ. ಇದ್ರಿಂದ ಪಾಕಿಸ್ತಾನಕ್ಕೆ ತೀವ್ರ ಮುಖಭಂಗ ಆಗಿತ್ತು. ಮ್ಯಾಚ್ ಸೋತಿದ್ದೂ ಅಲ್ಲದೆ ಅವಮಾನಕ್ಕೊಳಗಾಗಿದ್ರು. ಇದೇ ಸಿಟ್ಟಲ್ಲಿ ಐಸಿಸಿಗೆ ದೂರು ಕೂಡ ಕೊಟ್ಟಿದ್ರು. ಕ್ರೀಡಾಸ್ಪೂರ್ತಿಯಂತೆ ಭಾರತೀಯ ಆಟಗಾರರು ಕೈಕುಲುಕಿಲ್ಲ. ಹಾಗೇ ಭಾರತದ ಕ್ಯಾಪ್ಟನ್ ಗೆಲುವನ್ನ ಪೆಹಲ್ಗಾಮ್ ಸಂತ್ರಸ್ತರಿಗೆ ಅರ್ಪಿಸುತ್ತೇವೆಂದು ರಾಷ್ಟ್ರಗಳ ವಿಚಾರವನ್ನ ಪ್ರಸ್ತಾಪ ಮಾಡಿದ್ದಾರೆ. ಶಿಸ್ತು ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ರು. ಅದ್ರಂತೆ ಸೂರ್ಯಕುಮಾರ್ ಯಾದವ್ ಐಸಿಸಿ ವಿಚಾರಣೆ ಎದುರಿಸಿದ್ದಾರೆ. ತಮ್ಮ ಹೇಳಿಕೆಯನ್ನ ಸಮರ್ಥನೆ ಮಾಡಿಕೊಂಡಿದ್ದಾರೆ. ಆದ್ರೆ ಈಗ ಇರುವಂತ ಪ್ರಶ್ನೆ ಅಂದ್ರೆ ಏಷ್ಯಾಕಪ್ನ ಫೈನಲ್ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರು ಕೈಕುಲುಕುತ್ತಾರಾ ಅನ್ನೋದು.
ಕೈಕುಲುಕೋದು ಕ್ರೀಡಾಸ್ಪೂರ್ತಿಗಷ್ಟೇ.. ಕಡ್ಡಾಯವೇನಿಲ್ಲ!
ಹೌದು. ಫೈನಲ್ ಮ್ಯಾಚಲ್ಲೂ ಭಾರತದ ಆಟಗಾರರು ಕೈಕುಲುಕೋದು ಡೌಟಿದೆ. ಯಾಕಂದ್ರೆ ಪಾಕಿಸ್ತಾನ ವಿರುದ್ಧ ಕಳೆದ ಎರಡೂ ಪಂದ್ಯಗಳಲ್ಲೂ ಕಂಪ್ಲೀಟ್ ಡಾಮಿನೇಟ್ ಮಾಡಿ ಗೆದ್ದು ಬೀಗಿದ್ದಾರೆ. ಶೇಕ್ ಹ್ಯಾಂಡ್ ಕೊಡೋದಿರ್ಲಿ ಅವ್ರನ್ನ ಮಾತುಗಳನ್ನೇ ಆಡಿಲ್ಲ. ಅದೂ ಅಲ್ದೇ ಸೂಪರ್ 4 ಹಂತದ ವೇಳೆ ಪಾಕ್ ಆಟಗಾರರು ಗನ್ ಫೈರ್ ಸೆಲೆಬ್ರೇಷನ್, ರಫೇಲ್ ಯುದ್ಧವಿಮಾನಗಳ ಹೊಡೆದುರುಳಿರೋ ಸಿಂಬಲ್ ತೋರಿಸಿ ಮತ್ತಷ್ಟು ಗಾಂಚಾಲಿ ತೋರಿಸಿದ್ದಾರೆ. ಹೀಗಾಗಿ ಭಾರತೀಯರು ನಾವು ಮಾತಲ್ಲಿ ಹೇಳಲ್ಲ ಮಾಡಿ ತೋರಿಸ್ತೀವಿ ಅಂತಾ ಮ್ಯಾಚ್ ಗೆದ್ದು ಟ್ರೋಫಿ ಗೆದ್ದು ರಿವೇಂಜ್ ತೀರಿಸಿಕೊಳ್ಳೋಣ ಅಂತಾ ರೆಡಿ ಆಗಿದ್ದಾರೆ. ಅದೂ ಅಲ್ದೇ ಆಟಗಾರರು ಶೇಕ್ ಹ್ಯಾಂಡ್ ಕೊಡ್ಲೇಬೇಕು ಅಂತಾ ಎಲ್ಲೂ ರೂಲ್ಸ್ ಇಲ್ಲ. ಹೀಗಾಗಿ ಭಾರತ ಮತ್ತೆ ಹ್ಯಾಂಡ್ ಶೇಕ್ ಕೊಡೋದು ಅನುಮಾನ ಎನ್ನಲಾಗಿದೆ.

ನೋಡಿರಿ

