ಗಂಭೀರ್ ಶಿಷ್ಯನಿಂದಾಗಿ ಸೂಪರ್ ಓವರ್ – ಫೈನಲ್ ಗೂ ಮುಂಚೆ ಪ್ರಯೋಗ ಬೇಕಿತ್ತಾ?

ಗಂಭೀರ್ ಶಿಷ್ಯನಿಂದಾಗಿ ಸೂಪರ್ ಓವರ್ – ಫೈನಲ್ ಗೂ ಮುಂಚೆ ಪ್ರಯೋಗ ಬೇಕಿತ್ತಾ?

ಏಷ್ಯಾಕಪ್ ಟೂರ್ನಿ ಆರಂಭದಿಂದಲೂ ಟೀಂ ಇಂಡಿಯಾ ಕಂಪ್ಲೀಟ್ ಡಾಮಿನೇಟ್ ಮಾಡ್ಕೊಂಡೇ ಬಂದಿದೆ. ಅದ್ರಲ್ಲಿ ನೋ ಡೌಟ್. ಈ ಹಿಂದಿನ ಮ್ಯಾಚ್​ಗಳಲ್ಲಿ ಆಲ್ಮೋಸ್ಟ್ ಲಾಸ್ಟ್ ಮೂಮೆಂಟ್​ ವೇಳೆಗೆ ನಾವೇ ಗೆಲ್ಲೋದು ಅನ್ನೋದು ಕನ್ಫರ್ಮ್ ಆಗಿ ಬಿಡ್ತಿತ್ತು. ಲಾಸ್ಟ್​ ಬಾಲ್​ವರೆಗೂ ಯಾವ ಮ್ಯಾಚ್ ಕೂಡ ಹೋಗಿರಲಿಲ್ಲ. ಬಟ್ ಲಂಕಾ ವಿರುದ್ಧದ ಪಂದ್ಯ ಅಂತೂ ಕಂಪ್ಲೀಟ್ ಉಲ್ಟಾ. ಲಾಸ್ಟ್ ಬಾಲ್​ನಲ್ಲೇ ರಣರೋಚಕ ತಿರುವು ಸಿಕ್ಕಿತ್ತು. ಸೂಪರ್ ಓವರ್​ನಲ್ಲಿ ಬ್ಯಾಕ್ ಟು ಬ್ಯಾಕ್ ಎರಡು ಮ್ಯಾಚ್ ಸೋತಿದ್ದ ಲಂಕನ್ನರು ಜಗತ್ತಿನ ನಂಬರ್ 1 ಟಿ-20 ಟೀಂ ಭಾರತಕ್ಕೆ ಅಕ್ಷರಶಃ ಸೋಲಿನ ಭೀತಿ ಹುಟ್ಟಿಸಿದ್ರು. ಲಾಸ್ಟ್ ಬಾಲ್ ವರೆಗೂ ಗೇಮ್ ನ ಕಂಟ್ರೋಲ್​ನಲ್ಲಿ ಇಟ್ಕೊಂಡಿದ್ರು. ಒಂದು ಟೈಮಲ್ಲಿ ನಮಗಿಂತಲೂ ಚೆನ್ನಾಗೇ ಬ್ಯಾಟಿಂಗ್ ಮಾಡಿದ್ರು. ಅವ್ರ ಅಗ್ರೆಶನ್ ನೋಡಿದ್ರೆ ಇನ್ನೂ ಒಂದೆರಡು ಓವರ್ ಇದ್ದಂಗೇ ಗೆಲ್ತಾರೆ ಅನ್ನಿಸಿತ್ತು. ಬಟ್ ಲಾಸ್ಟ್ ಓವರ್​ಗಳಲ್ಲಿ ಭಾರತೀಯ ಬೌಲರ್​ಗಳು ಮ್ಯಾಚ್​ನ ತಮ್ಮ ಕಂಟ್ರೋಲ್​ಗೆ ತಗೊಂಡ್ರು. ಅಲ್ಲಿಂದ ಪಂದ್ಯ ಡೈವರ್ಟ್ ಆಗ್ತಾ ಬಂತು.

ಲಂಕಾ ವಿರುದ್ಧವೂ ಅಭಿಷೇಕ್ ಅಬ್ಬರ.. ಹ್ಯಾಟ್ರಿಕ್ ಫಿಫ್ಫಿ!

ದುಬೈ ಇಂಟರ್​ನ್ಯಾಷನಲ್ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಭಾರತ ವರ್ಸಸ್ ಶ್ರೀಲಂಕಾ ನಡುವಿನ ಸೂಪರ್ 4 ಹಂತದ ಕೊನೇ ಮ್ಯಾಚಲ್ಲಿ ಲಂಕಾ ಟೀಂ ಟಾಸ್ ವಿನ್ ಆಗಿತ್ತು. ಬೌಲಿಂಗ್ ಆಯ್ಕೆ ಮಾಡಿಕೊಂಡ್ರು. ಅದ್ರಂತೆ ಭಾರತದ ಪರ ಌಸ್ ಯೂಶುಯಲ್ ಅಭಿಷೇಕ್ ಶರ್ಮಾ ಮತ್ತು ಶುಭ್​ಮನ್ ಗಿಲ್ ಇನ್ನಿಂಗ್ಸ್ ಆರಂಭಿಸಿದ್ರು. ಒನ್ಸ್ ಅಗೇನ್  ಅಭಿಷೇಕ್ ಬ್ಯಾಟಿಂಗ್ ನಲ್ಲಿ ಧೂಳೆಬ್ಬಿಸಿದ್ರು. 31 ಎಸೆತಗಳಲ್ಲೇ 61 ರನ್ ಬಾರಿಸಿದ್ರು. ಅತ್ತ ಗಿಲ್ 4 ರನ್ ಗಳಿಸಲಷ್ಟೇ ಸಾಧ್ಯವಾಯ್ತು. ಪುಣ್ಯಕ್ಕೆ ಈ ಮ್ಯಾಚಲ್ಲಿ ಗಂಭೀರ್ ಮತ್ತೆ ಬ್ಯಾಟಿಂಗ್ ಆರ್ಡರ್ ಎಕ್ಸ್​ಪೆರಿಮೆಂಟ್ ಮಾಡ್ಲಿಲ್ಲ. ಮೂರನೇ ಕ್ರಮಾಂಕದಲ್ಲಿ ಸೂರ್ಯ ಬ್ಯಾಟಿಂಗ್​ಗೆ ಬಂದ್ರು. ಆದ್ರೆ ಟಿ-20 ಸ್ಪೆಟಲಿಸ್ಟ್ ಅಂತಾ ಕರೆಸಿಕೊಳ್ತಿದ್ದ ಸೂರ್ಯ ಈಗೀಗ ಟೆಸ್ಟ್ ಮ್ಯಾಚ್ ಥರ ಆಡ್ತಿದ್ದಾರೆ. ಈ ಏಷ್ಯಾಕಪ್ ಟೂರ್ನಿಯಲ್ಲಿ ಒಂದು ಅರ್ಧಶತಕ ಕೂಡ ಬಂದಿಲ್ಲ. ಲಂಕಾ ವಿರುದ್ಧ 12 ರನ್ ಗಳಿಸೋಕೆ 13 ಬಾಲ್ ತಿಂದ್ರು. ಆ ಬಳಿಕ ತಿಲಕ್ ಮತ್ತು ಸಂಜು ಪಾರ್ಟ್ನರ್ ಶಿಪ್ ವರ್ಕೌಟ್ ಆಯ್ತು. ಸಂಜು 39 ರನ್ ಸಿಡಿಸಿ ಔಟ್ ಆದ್ರೆ ತಿಲಕ್ 49 ರನ್ಸ್ ಸಿಡಿಸಿ ಅಜೇಯರಾಗಿ ಉಳಿದ್ರು. ಬಟ್ ಹಾರ್ದಿಕ್ ಪಾಂಡ್ಯ ಕಡೆಯಿಂದ ಬಿಗ್ ಸ್ಕೋರ್ ಬರ್ಲಿಲ್ಲ. ಕೊನೆಯಲ್ಲಿ ಅಕ್ಷರ್ ಪಟೇಲ್ ಸಿಕ್ಸ್ ಸಿಡಿಸೋ ಮೂಲಕ 200ರ ಗಡಿ ದಾಟಿಸಿದ್ರು. ಲಂಕಾಗೆ 203 ರನ್​ಗಳ ಟಾರ್ಗೆಟ್ ನೀಡಿದ್ರು. ಈ ಟಾರ್ಗೆಟ್ ನೋಡ್ದಾಗ ಲಂಕಾ ಟೀಂ 150 ರನ್​ಗಳವರೆಗೂ ಬರಲ್ವೇನೋ ಅನ್ಕೊಂಡಿದ್ವಿ. ಬಟ್ ಬ್ಯಾಟಿಂಗ್ ಶುರು ಆದ್ಮೇಲೇ ಸೀನೇ ಉಲ್ಟಾ.

ಭಾರತೀಯ ಬೌಲರ್​ಗಳನ್ನ ಬೆಂಡೆತ್ತಿದ ನಿಸ್ಸಾಂಕಾ ಮತ್ತು ಪೆರೇರಾ!

ಏಷ್ಯಾಕಪ್ ಟೂರ್ನಿಯಲ್ಲಿ ಲಂಕಾ ಪಡೆ ಲೀಗ್ ಹಂತದಲ್ಲಿ ಮೂರಕ್ಕೆ ಮೂರೂ ಮ್ಯಾಚ್ ಗೆದ್ದಿದ್ರು. ಬಟ್ ಸೂಪರ್ 4ನಲ್ಲಿ ಬಾಂಗ್ಲಾ ಮತ್ತು ಪಾಕ್ ವಿರುದ್ಧ ಬ್ಯಾಕ್ ಟು ಬ್ಯಾಕ್ ಸೋತಿದ್ರು. ಅದೂ ಅಲ್ದೇ ಈ ಟೂರ್ನಿಯಲ್ಲಿ ಅವ್ರ ಹೈಯೆಸ್ಟ್ ಸ್ಕೋರ್ ಅಫ್ಘಾನಿಸ್ತಾನ ವಿರುದ್ಧ 170 ರನ್ಸ್ ಚೇಸ್ ಮಾಡಿರೋದು. ಬಟ್ ಸೂಪರ್ 4 ನಲ್ಲಿ ಪಾಕಿಸ್ತಾನ ನೀಡಿದ್ದ 139 ರನ್​ಗಳ ಟಾರ್ಗೆಟ್​ನೂ ಬೆನ್ನೆತ್ತೋಕೆ ಸಾಧ್ಯವಾಗಿರಲಿಲ್ಲ. ಸೋ ಭಾರತ ನೀಡಿರೋ 200+ ಸ್ಕೋರ್ ಚಾನ್ಸೇ ಇಲ್ಲ ಅನ್ಕೊಂಡ್ರೆ ಹೊಡುದ್ರು ಹೊಡುದ್ರು ಹೊಡುದ್ರು ನಾವು ಸೋತೇ ಹೋದ್ವಿ ಅನ್ಕೊಂಡು ಟಿವಿ ಆಫ್ ಮಾಡೋ ರೇಂಜ್​ಗೆ ಹೊಡೆದ್ರು. ಮಿಡಲ್ ಓವರ್​ಗಳಲ್ಲಿ ನಮ್ಗಿಂತ ಮುಂದೇನೇ ಇದ್ರು. ಲಂಕಾ ಪರ ಪಥುಮ್ ನಿಸ್ಸಾಂಕಾ ಮತ್ತು ಕುಸಾಲ್ ಮೆಂಡಿಸ್ ಇನ್ನಿಂಗ್ಸ್ ಶುರು ಮಾಡಿದ್ರು. ಫಸ್ಟ್ ಓವರ್ ಫಸ್ಟ್ ಬಾಲ್​ನಲ್ಲೇ ಪಾಂಡ್ಯ ಬೌಲಿಂಗ್​ನಲ್ಲಿ ಫೋರ್ ಹೊಡೆದು ನಿಸ್ಸಾಂಕಾ ವೆಲ್ಕಂ ಮಾಡಿದ್ರು. ಬಟ್ ನಾಲ್ಕನೇ ಬಾಲ್​ನಲ್ಲೇ ಕುಸಾಲ್ ಮೆಂಡಿಸ್​ರನ್ನ ಡಕ್ ಔಟ್ ಮಾಡುವಲ್ಲಿ ಸಕ್ಸಸ್ ಆದ್ರು. ಆದ್ರೆ ನೆಕ್ಸ್​ಟ್ ನಿಸ್ಸಾಂಕಾ ಮತ್ತು ಕುಸಾಲ್ ಪೆರೇರಾ ಜೋಡಿ ಅಕ್ಷರಃ ಭಾರತೀಯ ಬೌಲರ್​ಗಳನ್ನ ಬೆಂಡೆತ್ತಿದ್ರು. ಇಬ್ಬರು 70 ಎಸೆತಗಳಲ್ಲಿ 127 ರನ್​ಗಳ ಜೊತೆಯಾಟ ನೀಡಿ ತಂಡವನ್ನ ಗೆಲುವಿನತ್ತ ಕೊಂಡೊಯ್ಯತ್ತಿದ್ದರು. ನಿಸ್ಸಾಂಕಾ 58 ಎಸೆತಗಳಲ್ಲಿ 107 ರನ್ ಗಳಿಸಿದ್ರೆ ಪೆರೆರಾ 58 ರನ್ ಬಾರಿಸಿದ್ರು. ಬಟ್ ಚರಿತ್ ಅಸಲಂಕಾ ಮತ್ತು ಕಮಿಂಡು ಮೆಂಡೀಸ್ ಸ್ಲೋರನ್ಸ್ ಟರ್ನಿಂಗ್ ಪಾಯಿಂಟ್ ಆಯ್ತು. ಬಟ್ ದಸುನ್ ಶನಕ 200 ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿ ಮ್ಯಾಚ್ ಟೈ ಮಾಡುವಲ್ಲಿ ಯಶಸ್ವಿಯಾದ್ರು.

ಸೂಪರ್ ಓವರ್ ನಲ್ಲಿ ಲಂಕಾದಹನ ಮಾಡಿದ ಅರ್ಷದೀಪ್!

ಥ್ರಿಲ್ಲರ್ ಮೂವಿ ಥರ ಮ್ಯಾಚ್ ಸೂಪರ್ ಓವರ್ ಗೆ ಸಜ್ಜಾಗಿತ್ತು. ಸೂಪರ್ ಓವರ್​ ಆರಂಭಿಸಿದ ಲಂಕಾ ಪರ ಕುಸಾಲ್ ಪೆರೆರಾ ಅರ್ಷದೀಪ್ ಸಿಂಗ್ ಎಸೆದ ಮೊದಲ ಎಸೆತದಲ್ಲೇ ಬಿಗ್ ಹಿಟ್​ಗೆ ಕೈ ಹಾಕಿ ರಿಂಕು ಸಿಂಗ್​ಗೆ ಕ್ಯಾಚ್ ನೀಡಿದರು. 2ನೇ ಎಸೆತದಲ್ಲಿ ಕಮಿಂಡು ಮೆಂಡಿಸ್ ಸಿಂಗಲ್ ತೆಗೆದುಕೊಂಡರೆ, 3ನೇ ಎಸೆತದಲ್ಲಿ ಡಾಟ್ ಮಾಡಿ ನಂತರ ವೈಡ್ ಎಸೆದರು. ಮೊದಲ ಮೂರು ಎಸೆತಗಳಲ್ಲಿ 2 ರನ್​ ಬಿಟ್ಟುಕೊಟ್ಟ ಅರ್ಷದೀಪ್ 4ನೇ ಎಸೆತದಲ್ಲಿ ಡಾಟ್ ಮಾಡಿದರು. ಶನಕ ಸ್ಟ್ರೈಕ್​ನಲ್ಲಿದ್ದು ಬಾಲ್ ನೇರವಾಗಿ ಸಂಜು ಸ್ಯಾಮ್ಸನ್ ಕೈ ಸೇರಿತು. ಬೈ ರನ್​ಗಾಗಿ ಓಡುವಾಗ ಸಂಜು ಸ್ಟಂಪ್​ ಎಗರಿಸಿದ್ರು. ರನ್​ ಔಟ್ ಆಗಿದ್ರೂ ಕೂಡ ಅರ್ಷದೀಪ್​ ಕ್ಯಾಚ್​ಗಾಗಿ ಅಪೀಲ್ ಮಾಡಿದ್ರು. ಅಂಪೈರ್ ಕ್ಯಾಚ್ ಔಟ್ ಕೊಟ್ಟಿದ್ದು ಶನಕ ರಿವ್ಯೂ ತಗೊಂಡ್ರು. ಬಟ್ ಬಾಲ್ ಬ್ಯಾಟ್​ಗೆ ತಾಗಿರಲಿಲ್ಲ. ಹೀಗಾಗಿ ಬಾಲ್ ಡೆಡ್ ಎಂದು ಘೋಷಿಸಿಲಾಯಿತು. ಮತ್ತೆ ಶನಕ ಬ್ಯಾಟ್ ಬೀಸಿದ್ದು ಜಿತೇಶ್ ಶರ್ಮಾಗೆ ಕ್ಯಾಚ್ ನೀಡಿ ಔಟಾದ್ರು. ಇನ್ನೂ 1 ಎಸೆತ ಇರುವಂತೆ ಶ್ರೀಲಂಕಾ ಸೂಪರ್ ಓವರ್​ನಲ್ಲಿ ಆಲ್​ಔಟ್ ಆಗಿ ಕೇವಲ 3 ರನ್​ ಗುರಿ ನೀಡಿತು. ಕೊನೆಗೆ ಹಸರಂಗ ಎಸೆದ ಸೂಪರ್ ಓವರ್​ನ ಮೊದಲ ಎಸೆತದಲ್ಲೇ ನಾಯಕ ಸೂರ್ಯಕುಮಾರ್ ಯಾದವ್ 3 ರನ್​ ತೆಗೆದು ಭಾರತಕ್ಕೆ ಗೆಲುವು ತಂದುಕೊಟ್ಟರು. ಕೊನೆಗೂ ಸೂಪರ್ ಓವರ್​ನಲ್ಲಿ ಭಾರತ ವಿನ್ ಆಯ್ತು. ಬಟ್ ಇಲ್ಲಿ ಮ್ಯಾಚ್ ವಿನ್ ಆದ್ರೂ ಹರ್ಷಿತ್ ರಾಣಾಗೇ ಪ್ರಶ್ನೆಯಾಗಿದೆ.

ಗಂಭೀರ್ ಶಿಷ್ಯನಿಂದಾಗೇ ಸೂಪರ್ ಓವರ್.. ಪ್ರಯೋಗ ಬೇಕಿತ್ತಾ?

ನಿನ್ನೆ ಮ್ಯಾಚಲ್ಲಿ ಬ್ಯಾಟಿಂಗ್ ಆರ್ಡರ್​ನಲ್ಲಿ ಯಾವುದೇ ಚೇಂಜಸ್ ಇಲ್ಲದೇ ಇದ್ರೂ ಬೌಲಿಂಗ್​ನಲ್ಲಿ ಮಾಡಿದ ಪ್ರಯೋಗವೇ ಭಾರತಕ್ಕೆ ಸೂಪರ್ ಓವರ್​ವರೆಗೂ ಕೊಂಡೊಯ್ದಿದೆ. ಲಂಕಾ ವಿರುದ್ಧದ ಮ್ಯಾಚಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಶಿವಂ ದುಬೆಗೆ ರೆಸ್ಟ್ ನೀಡಿ ಅರ್ಷದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾನ ಕಣಕ್ಕಿಳಿಸಲಾಗಿತ್ತು. ಬೌಲಿಂಗ್​ನಲ್ಲಿ ಇವ್ರಿಬ್ಬರೂ ಕೂಡ ಎಕ್ಸ್​ಪೆನ್ಸಿವ್ ಆದ್ರು. ಅರ್ಶದೀಪ್ ಓಕೆ ಅನುಭವಿ. ಯಾವಾಗ ಬೇಕಿದ್ರೂ ಮ್ಯಾಚ್ ಟರ್ನ್ ಮಾಡೋ ಕೆಪಾಸಿಟಿ ಇದೆ. ಬುಮ್ರಾ ಬದಲಿಗೆ ಕಣಕ್ಕಿಳಿಸಲಿ. ಬಟ್ ಗೌತಮ್ ಗಂಭೀರ್ ತಮ್ಮ ಪಟ್ಟಾ ಶಿಷ್ಯನಾಗಿರೋ ಹರ್ಷಿತ್ ರಾಣಾಗೆ ಚಾನ್ಸ್ ಕೊಡೋಕೋಸ್ಕರನೇ ಶಿವಂ ದುಬೆನಾ ಯಾಕೆ ಡ್ರಾಪ್ ಮಾಡ್ಬೇಕಿತ್ತು. ಇನ್ನು ರಾಣಾ ಬೌಲಿಂಗ್​ನಲ್ಲಿ ದಾರಾಳವಾಗಿ ರನ್ಸ್ ಕೊಟ್ರು. 4 ಓವರ್ ಬೌಲ್ ಮಾಡಿ 13.50 ಎಕಾನಮಿಯಲ್ಲಿ 54 ರನ್ಸ್ ಬಿಟ್ಟುಕೊಟ್ರು. ಒಂದು ರೀತಿಯಲ್ಲಿ ರಾಣಾನೇ ಸೂಪರ್ ಓವರ್​ಗೆ ಕಾರಣ ಆದ್ರು. ಅದೂ ಅಲ್ದೇ ಫೈನಲ್ ಹೊಸ್ತಿಲಲ್ಲಿ ಪ್ಲೇಯಿಂಗ್ 11 ಪ್ರಯೋಗ ಮತ್ತೆ ಯಾಕೆ ಬೇಕಿತ್ತು ಅನ್ನೋದು ಮಾಜಿ ಕ್ರಿಕೆಟಿಗರ ವಾದವೂ ಆಗಿದೆ. ಆಲ್ರೆಡಿ ಸೆಟ್ ಆಗಿರೋ ಪ್ಲೇಯರ್​ಗಳನ್ನ ಕೂರಿಸಿ ಟ್ರಯಲ್ ರನ್​ ಥರ ತಂಡದಲ್ಲಿ ಇರೋರಿಗೆಲ್ಲಾ ಚಾನ್ಸ್ ಯಾಕೆ ಕೊಡ್ಬೇಕಿತ್ತು ಅಂತಾ ಪ್ರಶ್ನೆ ಮಾಡಿದ್ದಾರೆ.

Shantha Kumari