ಬಿಗ್ ಬಾಸ್ ಅರಮನೆ ಪ್ರೋಮೋ ರಿಲೀಸ್ – ಅಸಲಿ ಹಬ್ಬ ಇವಾಗ ಶುರು.. ಕಿಚ್ಚನಿಂದ ದೊಡ್ಡ ಸೀಕ್ರೆಟ್ ರಿವೀಲ್!

ಕನ್ನಡದ ಜನಪ್ರಿಯ ಶೋ ಬಿಗ್ಬಾಸ್ ಕನ್ನಡ ಸೀಸನ್ 12 ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದೆ. ಸೀಸನ್ 12ಕ್ಕೆ ಯಾರೆಲ್ಲಾ ಸ್ವರ್ಧಿಗಳಾಗಿ ಬರಬಹುದು ಎಂಬ ಪ್ರಶ್ನೆ ಒಂದ್ಕಡೆ ಇದ್ರೆ, ಮತ್ತೊಂದ್ಕಡೆ ಹೊಸ ಮನೆ ಹೇಗಿರಲಿದೆ ಎಂಬ ಕ್ಯೂರಿಯಾಸಿಟಿ ಬಿಗ್ ಬಾಸ್ ವೀಕ್ಷಕರಲ್ಲಿದೆ. ಇದೀಗ ಕಿಚ್ಚ ಸುದೀಪ್ ವೀಕ್ಷಕರಿಗೆ ದೊಡ್ಮನೆ ದರ್ಶನ ಮಾಡಿಸಿದ್ದಾರೆ. ಕಲರ್ಸ್ ಕನ್ನಡ ವಾಹಿನಿ ಬಿಗ್ಬಾಸ್ ಸೀಸನ್ 12ರ ಪ್ರೋಮೋ ರಿಲೀಸ್ ಮಾಡಿದೆ.
ಇದನ್ನೂ ಓದಿ: ದಸರಾ ಆನೆಗಳ ಜೊತೆ ಯುವತಿಯ ರೀಲ್ಸ್ – ಅಧಿಕಾರಿಗಳಿಗೆ ನೋಟಿಸ್, ರೀಲ್ಸ್ ಲೇಡಿಗೆ ದಂಡ!
ಈ ಬಾರಿ ದೊಡ್ಮನೆಗೆ ಯಾರ್ಯಾರು ಹೋಗಲಿದ್ದಾರೆ ಎಂಬ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ನಿನ್ನೆಯಷ್ಟೇ ಮಾಸ್ಕ್ ಧರಿಸಿದ ವ್ಯಕ್ತಿಯೊಬ್ಬ ನಾನು ಬಿಗ್ಬಾಸ್ ಮನೆಗೆ ಹೋಗುತ್ತಿದ್ದೇನೆ ಎಂದು ಸಾರ್ವಜನಿಕರ ಬಳಿ ಹೇಳುತ್ತಿರುವ ವಿಡಿಯೋವನ್ನ ಚಾನೆಲ್ ಹಂಚಿಕೊಂಡಿತ್ತು. ಈ ಬೆನ್ನಲ್ಲೇ ಬಿಗ್ ಬಾಸ್ ಮನೆ ಹೇಗಿದೆ ಅನ್ನೋದನ್ನ ರಿವೀಲ್ ಮಾಡಲಾಗಿದೆ. ಕಿಚ್ಚ ಸುದೀಪ್ ಬಿಗ್ಬಾಸ್ ಮನೆಯ ಝಲಕ್ ಒಂದನ್ನು ತೋರಿಸಿದ್ದಾರೆ.
ಬಿಗ್ ಬಾಸ್ ಪ್ರೋಮೋದಲ್ಲಿ ಪ್ರತಿ ಬಾರಿಯಂತೆ ಈ ಬಾರಿಯೂ ಸಹ ಮನೆಯನ್ನು ಭಿನ್ನವಾಗಿ, ಅದ್ಧೂರಿಯಾಗಿ, ಐಶಾರಾಮಿಯಾಗಿ ನಿರ್ಮಾಣ ಮಾಡಲಾಗಿದೆ. ಕಿಚ್ಚ ಸುದೀಪ್ ಅವರು ಬಿಗ್ಬಾಸ್ ಮನೆಯನ್ನು ಪ್ರೇಕ್ಷಕರಿಗೆ ತೋರಿಸಿಕೊಟ್ಟಿದ್ದಾರೆ. ರಿಚ್ ಆಗಿರುವ ಕರ್ನಾಟಕದವನ್ನು ಒಂದೇ ಕಡೆ ಸ್ಕೆಚ್ ಮಾಡಿದರೆ ಹೇಗಿರುತ್ತದೆಯೋ ಅದೇ ರೀತಿ ಬಿಗ್ಬಾಸ್ ಮನೆಯನ್ನ ನಿರ್ಮಾಣ ಮಾಡಲಾಗಿದೆ. ದೊಡ್ಮನೆ ಇಡೀ ಕರ್ನಾಟಕವನ್ನು ಪ್ರತಿಬಿಂಬಿಸುತ್ತಿದೆ.
ಮೈಸೂರು ಅರಮನೆ, ದಸರಾ, ಹೊಯ್ಸಳ, ಬೇಲೂರು-ಹಳೆಬೀಡಿನ ಶಿಲ್ಪಗಳು, ಯಕ್ಷಗಾನ, ಭರತ ನಾಟ್ಯ, ಡೊಳ್ಳು ಕುಣಿತ ಹೀಗೆ ಕರ್ನಾಟಕದ ಅನೇಕ ಸಂಸ್ಕೃತಿಯ ಪ್ರತಿರೂಪಗಳು ಈ ಬಾರಿಯ ಬಿಗ್ಬಾಸ್ ಮನೆಯಲ್ಲಿವೆ. ಬಿಗ್ಬಾಸ್ ಮನೆಯ ಪ್ರತಿ ಗೋಡೆಯ ಮೇಲೂ ಕರ್ನಾಟಕದ ಸಂಸ್ಕೃತಿಕ ವೈಭವವನ್ನು ನೆನಪಿಸುವ ಚಿತ್ರಗಳನ್ನು ರಚಿಸಲಾಗಿದೆ. ಇವುಗಳ ಜೊತೆಗೆ ಬೇಲೂರು, ಹಳೆಬೀಡು, ಹಂಪಿಯ ಕೆಲವು ವಿಗ್ರಹಗಳನ್ನು ಆಧುನಿಕ ವಸ್ತುಗಳನ್ನು ಬಳಸಿ ನಿರ್ಮಿಸಲಾಗಿದೆ. ಒಟ್ಟಾರೆಯಾಗಿ ಬಿಗ್ಬಾಸ್ ಮನೆ ಇಡೀ ಕರ್ನಾಟಕವನ್ನು ಪ್ರತಿಬಿಂಬಿಸುತ್ತಿದೆ.
ಪ್ರೋಮೊನಲ್ಲಿ ಮಾತನಾಡಿರುವ ಸುದೀಪ್, ‘ಅರಮನೆಯನ್ನು ಉಳಿಸಿಕೊಳ್ಳಲು ಎಷ್ಟೋ ಯುದ್ಧಗಳು ನಡೆದು ಹೋಗಿವೆ. ಆದರೆ ಈ ಅರಮನೆಯಲ್ಲಿ ಉಳಿದುಕೊಳ್ಳಲು ಯುದ್ಧಗಳೇ ನಡೆಯಲಿವೆ’ ಎಂದಿದ್ದಾರೆ. ಅದು ನಿಜವೂ ಹೌದು. ಅರಮನೆಯಂಥಹಾ ಬಿಗ್ಬಾಸ್ ಮನೆಯಲ್ಲಿ ಉಳಿದುಕೊಳ್ಳಲು ಸ್ಪರ್ಧಿಗಳು ಪ್ರತಿ ದಿನ, ಪ್ರತಿ ಕ್ಷಣ ಇತರೆ ಸ್ಪರ್ಧಿಗಳೊಂದಿಗೆ ಸ್ಪರ್ಧೆ ನಡೆಸುತ್ತಾರೆ, ಕಿತ್ತಾಡುತ್ತಾರೆ, ರಾಜಕೀಯ ಮಾಡುತ್ತಾರೆ. ಕೈ-ಕೈ ಮಿಲಾಯಿಸುವ ಹಂತಕ್ಕೂ ಹೋಗುತ್ತಾರೆ. ಈ ಬಾರಿಯೂ ಇವೆಲ್ಲ ಮತ್ತೆ ಪುನರಾವರ್ತನೆ ಆಗಲಿವೆ. ಅಂದಹಾಗೆ ಬಿಗ್ಬಾಸ್ ಕನ್ನಡ ಸೀಸನ್ 12 ನಾಳೆ ಅಂದರೆ ಭಾನುವಾರ ಸಂಜೆ ಪ್ರಾರಂಭ ಆಗಲಿದೆ.

ನೋಡಿರಿ

