ದಸರಾ ಆನೆಗಳ ಜೊತೆ ಯುವತಿಯ ರೀಲ್ಸ್ – ಅಧಿಕಾರಿಗಳಿಗೆ ನೋಟಿಸ್, ರೀಲ್ಸ್ ಲೇಡಿಗೆ ದಂಡ!

ಮೈಸೂರು ದಸರಾ ವಿಜೃಂಭಣೆಯಿಂದ ನಡೆಯುತ್ತಿದೆ. ಸಾವಿರಾರು ಮಂದಿ ಮೈಸೂರಿಗೆ ಆಗಮಿಸುತ್ತಿದ್ದಾರೆ ದಸರಾ ಹಬ್ಬವನ್ನ ಕಣ್ತುಂಬಿಕೊಳ್ಳುತ್ತಿದ್ದಾರೆ. ದಸರಾ ಆನೆಗಳನ್ನ ನೋಡಿ ಖುಷಿಪಡುತ್ತಿದ್ದಾರೆ. ಇತ್ತೀಚೆಗೆ ಯುವತಿಯೊಬ್ಬಳು ರಾತ್ರೋರಾತ್ರಿ ಅರಮನೆ ಆವರಣಕ್ಕೆ ಬಂದು ದಸರಾ ಆನೆಗಳನ್ನು ತಬ್ಬಿಕೊಂಡು ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಳು. ಈ ಬೆನ್ನಲ್ಲೇ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು, ದಸರಾ ಆನೆಗಳ ಬಳಿಗೆ ತೆರಳಿ ವೀಡಿಯೊ, ರೀಲ್ಸ್ ಮಾಡುವುದನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಮಹಿಳೆಗೆ ರೀಲ್ಸ್ ಮಾಡಲು ಅವಕಾಶ ನೀಡಿದವರಿಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸುವುದಲ್ಲದೇ ಮಹಿಳೆಗೆ ದಂಡ ವಿಧಿಸಲು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಸೂಚಿಸಿದ್ದಾರೆ.
ಇದನ್ನೂ ಓದಿ: ಗೋಕರ್ಣದ ಗುಹೆಯಲ್ಲಿದ್ದ ರಷ್ಯನ್ ಮಹಿಳೆಗೆ ಸ್ವದೇಶಕ್ಕೆ ಮರಳೋ ಭಾಗ್ಯ! – ರಷ್ಯಾಗೆ ಕಳಿಸಲು ಹೈಕೋರ್ಟ್ ಸಮ್ಮತಿ
ಮೈಸೂರು ದಸರಾದಲ್ಲಿ ಪಾಲ್ಗೊಳ್ಳುವ ಅಭಿಮನ್ಯು, ಭೀಮ ಸೇರಿದಂತೆ ಸಾಕಾನೆಗಳ ಜತೆ ಫೋಟೋ, ವಿಡಿಯೋ, ರೀಲ್ಸ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸೆ. 18ರಂದು ಯುವತಿಯೊಬ್ಬಳು ಅರಮನೆ ಆವರಣದಲ್ಲಿಗಜಪಡೆಯ ಕ್ಯಾಂಪ್ಗೆ ಬಂದು ರೀಲ್ಸ್ ಮಾಡಿ ಸಾಮಾಜಿಕ ಜಾಲತಾಣದಲ್ಲಿಅಪ್ಲೋಡ್ ಮಾಡಿದ್ದಳು. ವಿಡಿಯೋ ವೈರಲ್ ಆಗ್ತಿದ್ದಂತೆ ಯುವತಿಯ ವಿರುದ್ಧ ಅರಣ್ಯ ಇಲಾಖೆಯ ಅಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು, ಆಕೆಯ ಪತ್ತೆಗೆ ಮುಂದಾಗಿದ್ದಾರೆ. ಅಷ್ಟೇ ಅಲ್ಲದೇ ಆಕೆಗೆ ದಂಡ ವಿಧಿಸವಂತೆ ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಆದೇಶ ಹೊರಡಿಸಿದ್ದಾರೆ.
ಅರಣ್ಯ ಸಚಿವ ಆದೇಶದಲ್ಲಿ ಏನಿದೆ?
ಮಹಿಳೆ ಸೆ. 18ರ ರಾತ್ರಿ ಸಿಬ್ಬಂದಿಯ ಕಣ್ಣು ತಪ್ಪಿಸಿ ಆನೆ ಸಮೀಪ ಹೋಗಿದ್ದಾಗಿ ತಿಳಿಸಲಾಗಿದೆ. ಇದು ಸಿಬ್ಬಂದಿ ಮತ್ತು ಆನೆಗಳ ಜವಾಬ್ದಾರಿ ಹೊತ್ತ ಅಕಾರಿಗಳ ಕರ್ತವ್ಯ ಲೋಪ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿ, ಸಿಬ್ಬಂದಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಬೇಕು. ಮಹಿಳೆಯನ್ನು ಪತ್ತೆ ಮಾಡಿ ದಂಡ ವಿಸಬೇಕು. ಮತ್ತೆ ಇಂತಹ ಘಟನೆ ಮರುಕಳಿಸದಂತೆ ಕಟ್ಟೆಚ್ಚರ ವಹಿಸಬೇಕು ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಇನ್ನು ಯುವತಿ ರೀಲ್ಸ್ ಮಾಡಿರುವ ಬಗ್ಗೆ ಡಿಸಿಎಫ್ ಪ್ರಭುಗೌಡ ಮಾತನಾಡಿದ್ದಾರೆ. ಯುವತಿಗೆ ಅರಣ್ಯ ಇಲಾಖೆಯಿಂದ ಆನೆಗಳ ಸಮೀಪ ತೆರಳಲು ಅನುಮತಿ ನೀಡಿರುವುದಿಲ್ಲ. ರಾತ್ರಿಯ ವೇಳೆ ನಮ್ಮ ಸಿಬ್ಬಂದಿ ಕಣ್ಣು ತಪ್ಪಿಸಿ ಆನೆಗಳ ಸಮೀಪ ತೆರಳಿದ್ದು, ಆಕೆಯನ್ನು ಪತ್ತೆಹಚ್ಚಿ ದಂಡ ವಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಆನೆಗಳ ಸಿಬ್ಬಂದಿ, ಅವರ ಕುಟುಂಬ ವರ್ಗದವರು ಮತ್ತು ಮಾಧ್ಯಮದವರನ್ನು ಹೊರತುಪಡಿಸಿ ಸಾರ್ವಜನಿಕರಿಗೆ ದಸರಾ ಆನೆಗಳ ಶಿಬಿರಕ್ಕೆ ತೆರಳಲು, ಛಾಯಾಚಿತ್ರ ಅಥವಾ ವಿಡಿಯೋಗಳನ್ನು ಮಾಡಲು ಅವಕಾಶವಿಲ್ಲ. ಒಂದು ವೇಳೆ ಇದನ್ನು ಉಲ್ಲಂಘಿಸಿ ಆನೆ ಶಿಬಿರಕ್ಕೆ ಪ್ರವೇಶಿಸುವವರಿಗೆ ವನ್ಯಜೀವಿ ಸಂರಕ್ಷಣಾ ಕಾಯಿದೆಯಡಿ ಕಾನೂನಿನ ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಈ ರೀತಿಯಲ್ಲಿಫೋಟೋ ತೆಗೆಯಲು ಮುಂದಾದ ಮೂವರಿಗೆ ಸಾವಿರ ರೂ. ದಂಡ ವಿಸಿ ಎಚ್ಚರಿಕೆ ನೀಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನೋಡಿರಿ

