ನವರಾತ್ರಿ ಹಬ್ಬದ ಸಂಭ್ರಮದಲ್ಲಿರುವಾಗಲೇ ಭೀಕರ ದುರಂತ – ಸಿಲಿಂಡರ್‌ ಸ್ಪೋಟಕ್ಕೆ ಮನೆ ಛಿದ್ರ!

ನವರಾತ್ರಿ ಹಬ್ಬದ ಸಂಭ್ರಮದಲ್ಲಿರುವಾಗಲೇ ಭೀಕರ ದುರಂತ – ಸಿಲಿಂಡರ್‌ ಸ್ಪೋಟಕ್ಕೆ ಮನೆ ಛಿದ್ರ!

ನವರಾತ್ರಿ ಹಬ್ಬದ ಸಂಭ್ರಮದಲ್ಲಿರುವಾಗಲೇ ಭೀಕರ ಅವಘಡವೊಂದು ಹೊಸಪೇಟೆ ತಾಲೂಕಿನ ಗಾದಿಗನೂರು ಗ್ರಾಮದಲ್ಲಿ ಸಂಭವಿಸಿದೆ. ಇಂದು ಬೆಳ್ಳಂಬೆಳಗ್ಗೆ ಸಿಲಿಂಡರ್ ಸ್ಫೋಟಗೊಂಡು ಮನೆಯೊಂದು ಛಿದ್ರಗೊಂಡಿದೆ. ಪರಿಣಾಮ ಒಂದೇ ಕುಟುಂಬದ ಎಂಟು ಮಂದಿ ಗಂಭೀರ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್‌ಗೆ ದಂಡ – ಪಾಕಿಸ್ತಾನದ ವೇಗಿ ಹ್ಯಾರಿಸ್ ರೌಫ್‌ಗೆ ಶಾಕ್ ಕೊಟ್ಟ ಐಸಿಸಿ!

ಗಾದಿ ಗನೂರು ಗ್ರಾಮದ ಹಾಲಪ್ಪ ವಕೀಲರ ಮನೆಯಲ್ಲಿ ಇಂದು ಭೀಕರ ಸಿಲಿಂಡರ್ ಸ್ಫೋಟ ಸಂಭವಿಸಿದೆ. ಸ್ಫೋಟದ ರಭಸಕ್ಕೆ ಮನೆಯ ಗೋಡೆಯೇ ಕುಸಿದು ಬಿದ್ದಿದೆ. ಈ ದುರ್ಘಟನೆಯಲ್ಲಿ ಕುಟುಂಬದ ಎಲ್ಲ ಸದಸ್ಯರೂ ಗಾಯಗೊಂಡಿದ್ದಾರೆ, ಕೆಲವರ ಸ್ಥಿತಿ ಗಂಭೀರವಾಗಿದೆ. ಹಾಲಪ್ಪ (42), ಕವಿತಾ (32), ಗಂಗಮ್ಮ (63), ಮೈಲಾರಪ್ಪ (48), ಮಲ್ಲಮ್ಮ (40), ಕಾವೇರಿ (18), ಕಾವ್ಯ (15), ಮತ್ತು ನಿಖಿಲ್ (13) ಗಾಯಗೊಂಡಿದ್ದಾರೆ. ಇವರಲ್ಲಿ ಕವಿತಾ (32) ಅವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಸಿಲಿಂಡರ್ ಸ್ಫೋಟವಾಗಿದ್ದು ಹೇಗೆ?

ನವರಾತ್ರಿ ಪೂಜೆಗೆ ತೆರಳುವ ಆತುರದಲ್ಲಿ ಕವಿತಾ ಅವರು ಸಿಲಿಂಡರ್ ಆನ್ ಮಾಡಿದ್ದು, ಬಹಳ ಹೊತ್ತಿನ ನಂತರ ಒಲೆಯನ್ನು ಹಚ್ಚಲು ಬೆಂಕಿಕಡ್ಡಿಯನ್ನು ಉರಿಸಿದಾಗ, ಅಷ್ಟೊತ್ತಿಗಾಗಲೇ ಸಿಲಿಂಡರ್ ಅನಿಲ ಮನೆ ತುಂಬಾ ವ್ಯಾಪಿಸಿದೆ. ಆದರೆ ವಾಸನೆಯನ್ನು ಗ್ರಹಿಸಿ ಅಪಾಯ ತಿಳಿಯದೇ ಗ್ಯಾಸ್ ಹಚ್ಚಲು ಬೆಂಕಿಕಡ್ಡಿ ಗೀರಿದ್ದಾರೆ. ಇದರಿಂದಾಗಿ ಭೀಕರ ಸ್ಫೋಟ ಸಂಭವಿಸಿದೆ. ಇದರ ಪರಿಣಾಮ ಮನೆ ಸಂಪೂರ್ಣ ಛಿದ್ರಗೊಂಡಿದೆ. ಸದ್ಯ ಗಾಯಗೊಂಡವರನ್ನು ತಕ್ಷಣ ತೋರಣಗಲ್ಲು ಗ್ರಾಮದ ಸಂಜೀವಿನಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಪೊಲೀಸರು ಘಟನೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ.

Shwetha M