ICC ವಾರ್ನ್ ಮಾಡಿದ್ರೂ ಶೇಕ್ ಹ್ಯಾಂಡ್ ಇಲ್ಲ? – ಪಾಕಿಗಳ ಮೇಲೆ ಕ್ರಮ ಇಲ್ವಾ?

ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಮ್ಯಾಚ್ ಮುಗಿದ್ರೂ ಕಿರಿಕ್ಗಳು ಮಾತ್ರ ಮುಗಿಯೋದೇ ಇಲ್ಲ. ಉಭಯ ತಂಡಗಳು ಏಷ್ಯಾಕಪ್ನ ಫೈನಲ್ಗೇರಿದ್ರೂ ಲೀಗ್ ಹಂತ ಮತ್ತು ಸೂಪರ್ ಫೋರ್ ಸ್ಟೇಜ್ನಲ್ಲಾದ ಕಾಂಟ್ರವರ್ಸಿಗಳಿಗೆ ದಿನಕ್ಕೊಂದು ಟ್ವಿಸ್ಟ್ ಸಿಗ್ತಿದೆ. ಐಸಿಸಿಗೆ ದೂರು ಪ್ರತಿದೂರು ಸಲ್ಲಿಸಿದ್ದು ಈಗ ವಿಚಾರಣೆ ಎದುರಿಸುತ್ತಿದ್ದಾರೆ. ಸೂರ್ಯಕುಮಾರ್ ಯಾದವ್ಗೆ ನೋ ಹ್ಯಾಂಡ್ ಶೇಕ್ ವಿವಾದದ ಬಿಸಿ ತಟ್ಟಿದ್ರೆ ಪಾಕ್ ಆಟಗಾರರು ಕೂಡ ಭೀತಿಯಲ್ಲಿದ್ದಾರೆ.
ಇದನ್ನೂ ಓದಿ : ಬಿಜೆಪಿ ಶಾಸಕ ಸುರೇಶ್ ಕುಮಾರ್ ತಾಯಿಯ ನೇತ್ರ, ದೇಹದಾನ – ಸಾವಿನಲ್ಲೂ ಸುಶೀಲಮ್ಮ ಪಾಠ
ಭಾರತ ವರ್ಸಸ್ ಪಾಕಿಸ್ತಾನ್ ಮ್ಯಾಚ್ ಅಂದ್ರೇನೇ ಹಾಗೆ. ಅಲ್ಲಿ ಯಾರ್ ಗೆದ್ರು ಯಾರ್ ಸೋತ್ರೂ ಅನ್ನೋದಕ್ಕಿಂತ ಆನ್ ಫೀಲ್ಡ್ನಲ್ಲಿ ಹಾಗೇ ಆಫ್ ದಿ ಫೀಲ್ಡ್ನಲ್ಲಿ ಏನೆಲ್ಲಾ ಕಿರಿಕ್ ಆಯ್ತು ಅನ್ನೋದೇ ಹೈಲೆಟ್ ಆಗುತ್ತೆ. ಪ್ರಸ್ತುತ ಏಷ್ಯಾಕಪ್ ಟೂರ್ನಿಯಲ್ಲೂ ಅದೇ ಆಗ್ತಿದೆ. ಫಸ್ಟ್ ಮ್ಯಾಚಲ್ಲಿ ನೋ ಶೇಕ್ ಹ್ಯಾಂಡ್ ವಿವಾದ ಹಲ್ಚಲ್ ಎಬ್ಬಿಸಿತ್ತು. ಸೆಕೆಂಡ್ ಮ್ಯಾಚಲ್ಲಿ ಗನ್ ಫೈರ್ ಸೆಲೆಬ್ರೇಷನ್ ಹಾಗೇ ಪ್ಲೇನ್ ಕ್ರಾಶ್ ಸಿಂಬಲ್ ಕಿಚ್ಚು ಹಚ್ಚಿತ್ತು. ಅಭಿಷೇಕ್ ಶರ್ಮಾ ಮತ್ತು ಹ್ಯಾರಿಸ್ ರೌಫ್ ನಡುವೆ ವಾಗ್ವಾದ ನಡೆದಿತ್ತು. ಇದೀಗ ಎಲ್ಲವೂ ಕೂಡ ಐಸಿಸಿ ಅಂಗಳದಲ್ಲಿದ್ದು ಒಬ್ಬೊಬ್ರಿವೇ ವಿಚಾರಣೆ ಬಿಸಿ ಮುಟ್ಟುತ್ತಿದೆ.
ಸೂರ್ಯನಿಗೆ ವಾರ್ನ್ ಕೊಟ್ಟ ಐಸಿಸಿ!
ಸೆಪ್ಟೆಂಬರ್ 14ರಂದು ಲೀಗ್ ಹಂತದ ಪಂದ್ಯದ ವೇಳೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ವು. ಈ ಮ್ಯಾಚಲ್ಲಿ ಗೆಲುವು ಸಾಧಿಸಿದ ನಂತರ ಟೀಂ ಇಂಡಿಯಾ ಆಟಗಾರರು ಪಾಕ್ ಆಟಗಾರರಿಗೆ ಶೇಕ್ ಹ್ಯಾಂಡ್ ನೀಡಲು ನಿರಾಕರಿಸಿದ್ರು. ಹಾಗೇ ಪಂದ್ಯದ ಬಳಿಕ ಮಾತನಾಡಿದ್ದ ನಾಯಕ ಸೂರ್ಯಕುಮಾರ್, ಈ ಗೆಲುವನ್ನು ಪಹಲ್ಗಾಮ್ ದಾಳಿಯ ಸಂತ್ರಸ್ತರಿಗೆ ಮತ್ತು ಸಶಸ್ತ್ರ ಪಡೆಗಳಿಗೆ ಅರ್ಪಿಸಿದ್ರು. ಇದು ಕ್ರಿಕೆಟ್ ಲೋಕದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.ಈ ಬಗ್ಗೆ ಪಿಸಿಬಿಯು ಐಸಿಸಿಗೆ ದೂರು ನೀಡಿತ್ತು. ದೂರಿನ ನಂತರ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಐಸಿಸಿ ಸಮನ್ಸ್ ಜಾರಿ ಮಾಡಿತ್ತು. ಇದೀಗ ಸೂರ್ಯ ವಿಚಾರಣೆಗೆ ಹಾಜರಾಗಿದ್ದಾರೆ. ಬಿಸಿಸಿಐ ಸಿಒಒ ಹೇಮಾಂಗ್ ಅಮೀನ್ ಮತ್ತು ಕ್ರಿಕೆಟ್ ಕಾರ್ಯಾಚರಣೆ ವ್ಯವಸ್ಥಾಪಕ ಸಮ್ಮರ್ ಮಲ್ಲಾಪುರ್ಕರ್ ಅವರ ಜೊತೆ ಮ್ಯಾಚ್ ರೆಫರಿ ರಿಚಿ ರಿಚರ್ಡ್ಸನ್ ಮುಂದೆ ಹಾಜರಾಗಿದ್ರು. ಈ ವೇಳೆ ಸೂರ್ಯ, ತಾವು ತಪ್ಪಿತಸ್ಥರಲ್ಲ, ನನ್ನ ಮಾತುಗಳು ರಾಜಕೀಯ ಸಂದೇಶಕ್ಕಿಂತ ಹೆಚ್ಚಾಗಿ ತಮ್ಮ ದೇಶವಾಸಿಗಳೊಂದಿಗೆ ಒಗ್ಗಟ್ಟನ್ನು ವ್ಯಕ್ತಪಡಿಸುವುದಾಗಿತ್ತು ಎಂದಿದ್ದಾರೆ. ಐಸಿಸಿ ನೀತಿ ಸಂಹಿತೆಯ ಅಡಿಯಲ್ಲಿ ಲೆವೆಲ್ 1 ಅಪರಾಧಕ್ಕೆ ಸಾಮಾನ್ಯವಾಗಿ ಎಚ್ಚರಿಕೆ ಅಥವಾ ಪಂದ್ಯ ಶುಲ್ಕದ ಶೇ 15 ರಷ್ಟು ದಂಡ ವಿಧಿಸಲಾಗುತ್ತದೆ. ಅದ್ರಂತೆ ಸೂರ್ಯನಿಗೂ ಕೂಡ ಎಚ್ಚರಿಕೆ ನೀಡಲಾಗಿದೆ.
ಹ್ಯಾರಿಸ್ ರೌಫ್ ಮತ್ತು ಫರ್ಹಾನ್ ಗೂ ಬಿಸಿ ತಟ್ಟುತ್ತಾ?
ಇನ್ನು ಸೂಪರ್ 4 ಹಂತದ ಪಂದ್ಯದ ವೇಳೆ ಪಾಕಿಸ್ತಾನದ ಆಟಗಾರರು ಹುಚ್ಚಾಟ ಮೆರೆದಿದ್ರು. ಅಭಿಷೇಕ್ ಶರ್ಮಾ ಬ್ಯಾಟಿಂಗ್ ಟೈಮಲ್ಲಿ ಬೌಲರ್ ಹ್ಯಾರಿಸ್ ರೌಫ್ ಕಾಲು ಕೆರೆದು ಜಗಳಜಕ್ಕೆ ಬಂದಿಲ್ಲ. ಸದ್ಯ ಐಸಿಸಿ ಪಾಕ್ ಆಟಗಾರರಿಗೂ ಸಮನ್ಸ್ ನೀಡಿದ್ದು, ಹ್ಯಾರಿಸ್ ರೌಫ್ ಮತ್ತು ಸಾಹಿಬ್ಜಾದಾ ಫರ್ಹಾನ್ ಈಗ ತಮ್ಮ ನಡೆಗಳನ್ನು ಸಮರ್ಥಿಸಿಕೊಳ್ಳಬೇಕಾಗಿದೆ. ಸೆಪ್ಟೆಂಬರ್ 21ರ ಭಾರತ ಮತ್ತು ಪಾಕಿಸ್ತಾನ ನಡುವಿನ ಸೂಪರ್ 4 ಪಂದ್ಯದ ಸಮಯದಲ್ಲಿ ಪ್ರಚೋದನಕಾರಿ ಸನ್ನೆಗಳನ್ನು ಉಲ್ಲೇಖಿಸಿ ಐಸಿಸಿಗೆ ಬಿಸಿಸಿಐ ಪ್ರತ್ಯೇಕ ದೂರು ದಾಖಲಿಸಿದೆ. ರೌಫ್ ವಿಮಾನವನ್ನು ಹೊಡೆದುರುಳಿಸುವ ಸನ್ನೆಯನ್ನು ಮಾಡಿದ್ರು. ಫರ್ಹಾನ್ ತನ್ನ ಅರ್ಧಶತಕ ಗಳಿಸಿದ ನಂತರ, ಗನ್ ಫೈರ್ ಸಂಭ್ರಮಾಚರಣೆ ಮಾಡಿದರು. ಉಭಯ ದೇಶಗಳು ಕೆಲವು ತಿಂಗಳುಗಳ ಹಿಂದೆ ಯುದ್ಧಕ್ಕೆ ಇಳಿದಿದ್ದನ್ನು ಪರಿಗಣಿಸಿ ಇದು ಭಾರತೀಯರಿಗೆ ಅಪಹಾಸ್ಯ ಮಾಡಿದಂತಿತ್ತು. ಇದೀಗ ಈ ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದ್ದು ಯಾವ ಕ್ರಮ ಕೈಗೊಳ್ತಾರೆ ನೋಡ್ಬೇಕು.
ಭಾರತ ಮತ್ತು ಪಾಕಿಸ್ತಾನ ತಂಡಗಳು 41 ವರ್ಷಗಳ ಏಷ್ಯಾಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಫೈನಲ್ನಲ್ಲಿ ಮುಖಾಮುಖಿಯಾಗ್ತಿವೆ. ಫೀಲ್ಡ್ನಲ್ಲಿ ಮಾಡಿದ ಕಿರಿಕ್ಗಳು ಐಸಿಸಿ ಅಂಗಳ ತಲುಪಿದ್ದು ಯಾವ ಕ್ರಮ ಕೈಗೊಳ್ತಾರೆ ಅನ್ನೋ ಪ್ರಶ್ನೆ ಮೂಡಿದೆ. ಅದೂ ಅಲ್ದೇ ಫೈನಲ್ ಮ್ಯಾಚಲ್ಲಿ ಯಾರು ಇನ್ಯಾವ ಕಿರಿಕ್ ತೆಗೀತಾರೋ ಅನ್ನೋದೇ ಈಗಿರೋ ಪ್ರಶ್ನೆ.

ನೋಡಿರಿ

