ಬಸ್ನಲ್ಲೂ ಹೂವಿನ ಬಾಣದ್ದೇ ಹವಾ.. ಮೈಸೂರು ದಸರಾದಲ್ಲೂ ಬಿರುಗಾಳಿ ಸಾಂಗ್ – ಸ್ಟೇಜ್ನಲ್ಲೂ ನಿತ್ಯಾ ಗಾನ.. ಸೆಲೆಬ್ರಿಟಿ ಆದ್ಲಾ?

ಎಲ್ಲೆಲ್ಲೂ ನಾನೇ ಎಲ್ಲೆಲ್ಲೂ ನಾನೇ ಅನ್ನುವಂತೆ ಸದ್ಯ ಬಿರುಗಾಳಿ ಸಿನಿಮಾದ ಹೂವಿನ ಬಾಣದಂತೆ ಯಾರಿಗೂ ಕಾಣದಂತೆ ಸಾಂಗ್ ಎಲ್ಲೆಲ್ಲೂ ಕೇಳಿಬರ್ತಿದೆ. ಇನ್ಸ್ಟಾಗ್ರಾಂ.. ಫೇಸ್ಬುಕ್ ಓಪನ್ ಮಾಡಿದ್ರೂ ಇದೇ ಸಾಂಗ್.. ಇನ್ನು ಮೊಬೈಲ್ ಸೈಡ್ಗೆ ಇಟ್ಟು ದಸರಾಗೆ ಹೋಗೋಣ ಅಂದ್ರೂ ಅಲ್ಲೂ ಇದೇ ಸಾಂಗ್.. ಬಸ್ನಲ್ಲಿ ಹೋದ್ರೂ ಹೂವಿನ ಬಾಣದಂತೆ ಯಾರಿಗೂ ಕಾಣದಂತೆ ಸಾಂಗ್ ಕೇಳಿ ಬರ್ತಿದೆ. ಅಷ್ಟರ ಮಟ್ಟಿಗೆ ನಿತ್ಯಾ ಸಾಂಗ್ ಹವಾ ಇದೆ. ತನ್ನದೇ ಶೈಲಿಯಲ್ಲಿ ಹಾಡಿ ಫೇಮಸ್ ಆದ ನಿತ್ಯಾಶ್ರೀಗ ಈಗ ಸೆಲೆಬ್ರಿಟಿಯೇ ಆಗಿದ್ದಾಳೆ.
ಇದನ್ನೂ ಓದಿ: ಮಂಚದ ಒಳಗೆ ಪ್ರಿಯಕರ.. ಕೋಣೆಯೊಳಗೆ ಯುವತಿ! – ಹೆಂಡತಿ ಗುಟ್ಟು ಗಿಫ್ಟ್ ಸಿಕ್ಕ ಮಂಚದಲ್ಲಿ ರಟ್ಟು!
ಬಿರುಗಾಳಿ ಸಿನಿಮಾದ ಹೂವಿನ ಬಾಣದಂತೆ ಯಾರಿಗೂ ಕಾಣದಂತೆ ಸಾಂಗ್ ಹಾಡಿ ಮಂಡ್ಯದ ಹುಡುಗಿ ನಿತ್ಯಾಶ್ರೀ ರಾತ್ರೋ ರಾತ್ರಿ ಫೇಮಸ್ ಆಗಿದ್ದಾಳೆ. ಸಾಂಗ್ ವೈರಲ್ ಆಗಿ ಹತ್ತು ಹದಿನೈದು ದಿನ ಆಯ್ತು.. ಆದ್ರೂ ಈಕೆಯ ಹವಾ ನಿಂತಿಲ್ಲ.. ಜನ ಇನ್ನೂ ಈ ಹಾಡಿನ ಗುಂಗಲ್ಲೇ ಇದ್ದಾರೆ.. ರೀಲ್ಸ್ ಸ್ಟಾರ್ಗಳು ಈಕೆ ಹಾಡಿರೋ ಸಾಂಗ್ ಗೆ ರೀಲ್ಸ್ ಮಾಡ್ತಿದ್ರೆ, ಮತ್ತೊಂದ್ಕಡೆ ನಿತ್ಯಾಗೆ ಫ್ಯಾನ್ಸ್ ಹುಟ್ಕೊಂಡಿದ್ದಾರೆ.. ಎಲ್ಲಿ ಹೋದ್ರೂ ಫ್ಯಾನ್ಸ್ ಈಕೆ ಬಳಿ ಹೋಗಿ ಹಾಡುವಂತೆ ಹೇಳ್ತಿದ್ದಾರೆ. ಅಷ್ಟರ ಮಟ್ಟಿಗೆ ನಿತ್ಯಾಶ್ರೀ ಟ್ರೆಂಡ್ ಸೆಟ್ ಮಾಡಿದ್ದಾಳೆ. ಇದೀಗ ನಿತ್ಯಾಶ್ರೀ ದಸರಾ ಹಬ್ಬದಲ್ಲೂ ಮಿಂಚುತ್ತಿದ್ದಾಳೆ..
ನಿತ್ಯಾಶ್ರೀ ಹಾಡು ವೈರಲ್ ಆಗ್ತಿದ್ದಂತೆ ಈಗ ಆಕೆ ಯಾವ ಸೆಲೆಬ್ರಿಟಿಗಳಿಗೂ ಕಡಿಮೆ ಇಲ್ಲಾ ಅಂತಾ ಹೇಳ್ಬೋದು. ಯಾಕಂದ್ರೆ ಒಂದ್ಕಡೆ ಆಕೆ ಜೊತೆ ಸೆಲ್ಫಿ ತೆಗೆದುಕೊಳ್ಳಲು ಜನ ಬಂದ್ರೆ ಮತ್ತೊಂದ್ಕಡೆ ಆಕೆಯನ್ನ ಗೆಸ್ಟ್ ಆಗಿ ಪ್ರೋಗ್ರಾಂಗಳಿಗೆ ಕರಿತಾ ಇದ್ದಾರೆ. ಇದೀಗ ನಿತ್ಯಾ ದಸರಾ ಕಾರ್ಯಕ್ರಮದಲ್ಲೂ ಗೆಸ್ಟ್ ಆಗಿದ್ದಾಳೆ. ಆಕೆಯನ್ನ ಸ್ಟೇಜ್ ಗೆ ಕರೆದು ಹಾಡಿಸಿದ್ದಾರೆ. ನಿತ್ಯಾಶ್ರೀ ಸ್ಟೇಜ್ ನಲ್ಲಿ ಹಾಡ್ತಾ ಇದ್ರೆ, ವೀಕ್ಷಕಕರು ಫುಲ್ ಖುಷಿಯಾಗಿದ್ದಾರೆ. ಆಕೆ ಜೊತೆ ಸ್ಟೇಜ್ ಮುಂದೆ ಇದ್ದ ಜನ ಕೂಡ ಹಾಡಿದ್ದಾರೆ..
ನಿತ್ಯಾಶ್ರೀ ಹಾಡಿರೋ ಸಾಂಗ್ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಸದ್ದು ಮಾಡ್ತಿಲ್ಲ.. ಬಸ್ನಲ್ಲಿ ಕೂಡ ಇದೇ ಸಾಂಗ್ ಕೇಳಿ ಬರ್ತಿದೆ. ಕೆಎಸ್ ಆರ್ ಟಿಸಿ ಬಸ್ ಕಂಡಕ್ಟರ್ ಟಿಕೆಟ್ ಕೊಡ್ತಾ ಹೂವಿನ ಬಾಣದಂತೆ ಸಾಂಗ್ ನ ತನ್ನದೇ ಸ್ಟೈಲ್ನಲ್ಲಿ ಹಾಡಿದ್ದಾರೆ. ಟಿಕೆಟ್ ಕೊಡ್ತಾ.. ಹೂವಿನ ಬಾಣದಂತೆ.. ಯಾರಿಗೂ ಕಾಣದಂತೆ ಬಸ್ನಲ್ಲಿ ಕಸ ಹಾಕ್ತೀಯ.. ಸಾರ್ವಜನಿಕರ ಬಸ್ ಇದು.. ನಿಮ್ಮ ಬಸ್ ಅಲ್ಲ.. ಅಂತಾ ಹಾಡಿದ್ದಾರೆ. ಕಂಡಕ್ಟರ್ ಸಾಂಗ್ ಹಾಡ್ತಾ ಮನರಂಜನೆ ಕೊಟ್ಟಿದ್ದಲ್ಲದೇ, ಪ್ರಯಾಣಿಕರಿಗೆ ಕಸ ಹಾಕ್ಬಾರ್ದು ಅನ್ನೋ ಸಂದೇಶ ಕೂಡ ಕೊಟ್ಟಿದ್ದಾರೆ.
ಇನ್ನು ಯಾವುದೇ ಕಾರ್ಯಕ್ರಮ ಇರ್ಲಿ.. ಅಲ್ಲಿ ಪ್ರೆಸೆಂಟ್ ಆಗಿ ಏನು ಟ್ರೆಂಡಿಂಗ್ನಲ್ಲಿ ಇರುತ್ತೇ ಅದನ್ನೇ ಜನ ಕೂಡ ಬಯಸ್ತಾರೆ.. ಹೀಗಾಗೇ ಕಾರ್ಯಕ್ರಮದ ಆಯೋಜಕರು ಕೂಡ ಅದಕ್ಕೆ ಇಂಪಾರ್ಟೆನ್ಸ್ ಕೊಡ್ತಾರೆ. ಇದೀಗ ಮೈಸೂರು ದಸರಾದಲ್ಲೂ ವೈರಲ್ ಸಾಂಗ್ ಸದ್ದು ಮಾಡ್ತಿದೆ. ಯುವ ದಸರಾದಲ್ಲಿ ಜನಪ್ರೀಯ ಗಾಯಕಿ ಐಶ್ವರ್ಯ ರಂಗರಾಜನ್ ತನ್ನ ಟೀಮ್ ಜೊತೆ ಹೂವಿನ ಬಾಣದಂತೆ ಸಾಂಗ್ ನ ಹಾಡಿದ್ದಾರೆ. ಅವರ ವಾಯ್ಸ್ ಕೇಳಿ ಫ್ಯಾನ್ಸ್ ಫಿದಾ ಆಗಿದ್ದಾರೆ..
ನಿತ್ಯಾಶ್ರೀ ಸಾಂಗ್ ವೈರಲ್ ಆಗ್ತಿದ್ದಂತೆ ಎಲ್ಲಾ ಕಡೆ ಫ್ಯಾನ್ಸ್ ಹುಟ್ಟಿಕೊಂಡಿದ್ದಾರೆ. ಆಕೆ ಎಲ್ಲಿ ಹೋದರೂ ಜನ ನಿತ್ಯಾಶ್ರೀಯನ್ನ ಗುರುತು ಹಿಡಿದು ಮಾತಾಡಿಸ್ತಿದ್ದಾರೆ. ಹಾಡು ಹಾಡುವಂತೆ ಕೇಳ್ತಿದ್ದಾರೆ. ಆಕೆ ಕೂಡ ಅವರಿಗೆ ಬೇಜಾರು ಮಾಡದೇ ಹಾಡ್ತಿದ್ದಾರೆ.
ಒಟ್ಟಾರೆ ಒಂದು ಹಾಡಿನಿಂದ ನಿತ್ಯಾಶ್ರೀ ಸೆಲೆಬ್ರಿಟಿಯೇ ಆಗಿದ್ದಾಳೆ. ಇದೀಗ ಕಾರ್ಯಕ್ರಮಗಳಿಗೂ ಆಕೆಯನ್ನ ಗೆಸ್ಟ್ ಆಗಿ ಕರಿತಾ ಇದ್ದಾರೆ. ಈ ಜನಪ್ರೀಯತೆಯಿಂದಲೇ ಆಕೆಗೆ ಹೊಸ ಅವಕಾಶ ಹುಡುಕಿಕೊಂಡು ಬರುತ್ತಾ? ಯಾವುದಾದ್ರೂ ಶೋನಲ್ಲೂ ಚಾನ್ಸ್ ಸಿಗುತ್ತಾ ಅಂತಾ ಕಾದುನೊಡ್ಬೇಕು.

ನೋಡಿರಿ

