ಬಾಂಗ್ಲಾ ಮಣಿಸಿ ಪಾಕ್ ಫೈನಲ್ ಗೆ ಪ್ರವೇಶ – ಭಾರತ V/s ಪಾಕಿಸ್ತಾನ ಫೈನಲ್ ವಾರ್

ಏಷ್ಯಾಕಪ್ ಟೂರ್ನಿ ಅಂತಿಮ ಹಂತಕ್ಕೆ ಬಂದಿದೆ. ಬಾಂಗ್ಲಾದೇಶಕ್ಕೆ ಸೋಲುಣಿಸಿ ಭಾರತ ಈಗಾಗಲೇ ಫೈನಲ್‌ಗೆ ಲಗ್ಗೆಯಿಟ್ಟಿತ್ತು. ಆದರೆ ಭಾರತಕ್ಕೆ ಏಷ್ಯಾಕಪ್ ಫೈನಲ್‌ನಲ್ಲಿ ಬದ್ಧವೈರಿಗಳೇ ಮುಖಾಮುಖಿಯಾಗುತ್ತಿದ್ದಾರೆ. ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಿನ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಬಾಂಗ್ಲಾದ ಪಾಕಿಸ್ತಾನ ಗೆಲುವು ಸಾಧಿಸಿದ್ದು, ಫೈನಲ್ ಪ್ರವೇಶ ಮಾಡಿದೆ.
ಇದನ್ನೂ ಓದಿ: ಪಾಕ್ ಮುಂದೆ ಸೋತ ಬಾಂಗ್ಲಾದೇಶ – ಭಾರತ -ಪಾಕ್ ನಡುವೆ ಏಷ್ಯಾಕಪ್ ಫೈನಲ್!
ಭಾರತ ಮತ್ತು ಪಾಕಿಸ್ತಾನ ನಡುವೆ ಏಷ್ಯಾಕಪ್ ಫೈನಲ್ ನಡೆಯಲಿದೆ. ಇದು ಈ ಟೂರ್ನಿಯಲ್ಲಿ ಇವೆರಡು ತಂಡಗಳ ನಡುವಿನ ಮೂರನೇ ಪಂದ್ಯವಾಗಿದೆ. ಮತ್ತು ಏಷ್ಯಾಕಪ್ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ-ಪಾಕಿಸ್ತಾನ ನಡುವೆ ಫೈನಲ್ ಪಂದ್ಯ ನಡೆಯಲಿದೆ.
ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಿನ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಬಾಂಗ್ಲಾದ ವಿರುದ್ಧ ಪಾಕಿಸ್ತಾನ ಕಣಕ್ಕಿಳಿದಿತ್ತು. ಬಾಂಗ್ಲಾ ತಂಡವನ್ನು 11 ರನ್‌ಗಳಿಂದ ಸೋಲಿಸಿದ ಪಾಕಿಸ್ತಾನ ಫೈನಲ್ ಹಣಾಹಣಿಗೆ ಕಾಲಿಟ್ಟಿದೆ. ಪಾಕಿಸ್ತಾನ 135 ರನ್‌ಗಳ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ ಕೇವಲ 124 ರನ್ ಗಳಿಸುವ ಮೂಲಕ ಒಂದು ವಿಕೆಟ್ ಉಳಿಸಿಕೊಂಡು 11 ರನ್‌ಗಳ ಅಂತರದಲ್ಲಿ ಸೋಲೊಪ್ಪಿಕೊಂಡಿತು.

ನೋಡಿರಿ

