ಹ್ಯಾರಿಸ್ ರೌಫ್ & ಸಾಹಿಬ್ಜಾದಾ ಫರ್ಹಾನ್ ಬ್ಯಾನ್ – ಭಾರತ ಕೆಣಕಿದ್ದಕ್ಕೆ ತಕ್ಕ ಶಾಸ್ತಿ
BCCI ದೂರು.. ICC ನಿಲುವೇನು?

ಏಷ್ಯಾಕಪ್ ಟೂರ್ನಿಯಲ್ಲಿ ಅಜೇಯವಾಗಿ ಫೈನಲ್ಗೆ ಲಗ್ಗೆ ಇಟ್ಟಿರೋ ಟೀಂ ಇಂಡಿಯಾ ಚಾಂಪಿಯನ್ ಪಟ್ಟಕ್ಕೇರೋ ಫೇವರೆಟ್ ಟೀಂ ಆಗಿದೆ. ಆದ್ರೆ ಭಾರತದ ವಿರುದ್ಧ ಎರಡು ಸಲ ಸೋತ್ರೂ ಪಾಕಿಸ್ತಾನ ಆಟಗಾರರು ಮಾತ್ರ ತಮ್ಮ ನರಿ ಬುದ್ಧಿ ಬಿಡ್ತಿಲ್ಲ. ಭಾರತದ ವಿರುದ್ಧ ಪದೇ ಪದೇ ಸೋಲ್ತಿದ್ದೇವೆ ಅನ್ನೋ ಪ್ರೆಸ್ಟ್ರೇಷನ್.. ತಮ್ಮದೇ ಫ್ಯಾನ್ಸ್ಗಳಿಂದ ಮಂಗಳಾರತಿ ಮಾಡಿಸ್ಕೊಳ್ಳೋ ಟೆನ್ಷನ್ ಬೇರೆ. ಹೀಗಾಗಿ ಇದನ್ನೆಲ್ಲಾ ಪ್ಯಾಚ್ಅಪ್ ಮಾಡ್ಬೇಕು ಅಂತಾ ಪಾಕಿಸ್ತಾನಿ ಆಟಗಾರರು ಮೈದಾನದಲ್ಲೇ ಹುಚ್ಚಾಟಗಳನ್ನ ಮಾಡಿದ್ರು. ಹ್ಯಾರಿಸ್ ರೌಫ್ ಮತ್ತು ಸಾಹಿಬ್ಜಾದ್ ಫರ್ಹಾನ್ ಬಿಲ್ಡಪ್ ತಗೊಂಡಿದ್ರು. ಈಗ ಇದೇ ಪ್ಲೇಯರ್ಗಳ ಬುಡಕ್ಕೆ ಬೆಂಕಿ ಬಿದ್ದಿದೆ.
ಇದನ್ನೂ ಓದಿ : ಸಿನಿ ರಸಿಕರಿಗೆ ಗುಡ್‌ನ್ಯೂಸ್ – ʼಕಾಂತಾರ: ಚಾಪ್ಟರ್ 1′ ಅಡ್ವಾನ್ಸ್ ಬುಕ್ಕಿಂಗ್ ಡೇಟ್ ಫಿಕ್ಸ್
ರೌಫ್ ಮತ್ತು ಫರ್ಹಾನ್ ವಿರುದ್ಧ ಬಿಸಿಸಿಐ ದೂರು!
ಸೆಪ್ಟೆಂಬರ್ 21ರಂದು ನಡೆದ ಭಾರತ ವರ್ಸಸ್ ಪಾಕಿಸ್ತಾನ ನಡುವಿನ ಸೂಪರ್-4 ಪಂದ್ಯದ ವೇಳೆ ಹಾರಿಸ್ ರೌಫ್ ಹಾಗೂ ಸಾಹಿಬ್ಝಾದ ಫರ್ಹಾನ್ ಅತಿಯಾಗಿ ವರ್ತಿಸಿದ್ರು. ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದ ವೇಳೆ ಹಾರಿಸ್ ರೌಫ್ ಕೈ ಸನ್ನೆಯೊಂದಿಗೆ ಭಾರತೀಯರನ್ನು ಅಣಕಿಸಿದ್ದರು. ಸ್ಟೇಡಿಯಂನಲ್ಲಿದ್ದ ಭಾರತೀಯ ಅಭಿಮಾನಿಗಳು ಕೊಹ್ಲಿ, ಕೊಹ್ಲಿ ಎಂದು ಘೋಷಣೆ ಕೂಗಿದಾಗಲೆಲ್ಲಾ ಹಾರಿಸ್ ರೌಫ್ ಕೈ ಸನ್ನೆ ಮೂಲಕ ಫೈಟರ್ ಜೆಟ್ ಬೀಳುವುದನ್ನು ತೋರಿಸಿ ಹೀಯಾಳಿಸಿದ್ದರು. ಅಲ್ಲದೆ 6-0 ಎಂದು ತೋರಿಸುವ ಮೂಲಕ ಕೆಣಕಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಹಾಗೆಯೇ ಭಾರತದ ವಿರುದ್ಧ ಅರ್ಧಶತಕ ಬಾರಿಸಿದ ಬಳಿಕ ಸಾಹಿಬ್ಝಾದ ಫರ್ಹಾನ್ ಗನ್ ಶಾಟ್ ಸೆಲೆಬ್ರೇಷನ್ ಮಾಡಿದ್ದರು. ಹೀಗಾಗಿ ಈ ಇಬ್ಬರ ವಿರುದ್ಧ ಬಿಸಿಸಿಐ ಐಸಿಸಿಗೆ ದೂರು ನೀಡಿದೆ. ಇಬ್ಬರದ್ದೂ ಕೂಡ ಉದ್ದೇಶಪೂರ್ವಕ ಪ್ರಚೋದನೆಯ ಸೆಲೆಬ್ರೇಷನ್ ಎಂದು ಭಾರತೀಯ ಕ್ರಿಕೆಟ್ ಮಂಡಳಿ ತನ್ನ ಎಂದು ದೂರಿನಲ್ಲಿ ಪ್ರಸ್ತಾಪಿಸಿದೆ. ಇಬ್ಬರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
ದೂರಿನ ವೇಳೆ ಭಾರತೀಯ ಕ್ರಿಕೆಟ್ ಮಂಡಳಿಯು ಇಬ್ಬರ ವಿಡಿಯೋಗಳನ್ನೂ ಸಲ ಸಾಕ್ಷ್ಯವಾಗಿ ಸಲ್ಲಿಸಿದೆ. ಶಿಸ್ತು ಕ್ರಮ ಕೈಗೊಳ್ಳುವಂತೆ ಮ್ಯಾಚ್ ರೆಫರಿ ಆ್ಯಂಡಿ ಪೈಕ್ರಾಫ್ಟ್‌ಗೆ ಆಗ್ರಹಿಸಿದ್ದಾರೆ. ಹೀಗಾಗಿ ಇಬ್ಬರೂ ಕೂಡ ಬ್ಯಾನ್ ಭೀತಿಯಲ್ಲಿದ್ದಾರೆ. ಐಸಿಸಿ ನಿಯಮದ ಪ್ರಕಾರ ಮೈದಾನದಲ್ಲಿ ಅನುಚಿತವಾಗಿ ವರ್ತಿಸಿದ ಆಟಗಾರರನ್ನು ಅಮಾನತುಗೊಳಿಸಬಹುದು ಅಥವಾ ನಿಷೇಧಿಸಬಹುದು. ಕ್ರೀಡಾ ಕ್ಷೇತ್ರದಲ್ಲಿ ಯುದ್ಧದ ಸನ್ನಿವೇಶಗಳನ್ನು ಪ್ರಸ್ತಾಪಿಸಿರುವುದನ್ನು ಮ್ಯಾಚ್ ರೆಫರಿ ಗಂಭೀರವಾಗಿ ಪರಿಗಣಿಸಿದರೆ, ಹಾರಿಸ್ ರೌಫ್ ಹಾಗೂ ಸಾಹಿಬ್ಝಾದ ಫರ್ಹಾನ್ ಒಂದು ಪಂದ್ಯದಿಂದ ನಿಷೇಧಕ್ಕೆ ಒಳಗಾಗಬಹುದು. ಅಥವಾ ಡಿಮೆರಿಟ್ ಪಾಯಿಂಟ್ ನೀಡಬಹುದು. ಆದ್ರೆ ಯಾವಾಗ ಬಿಸಿಸಿಐ ಐಸಿಸಿ ಬಾಗಿಲು ತಟ್ಟಿತೋ ಪಾಕಿಸ್ತಾನ ಕೂಡ ಸೂರ್ಯಕುಮಾರ್ ವಿರುದ್ಧ ದೂರು ದಾಖಲಿಸಿದೆ.
ಸೂರ್ಯಕುಮಾರ್ ಹೇಳಿಕೆ ರಾಜಕೀಯ ಸ್ವರೂಪದ್ದು ಎಂದ ಪಾಕ್!
ಬಿಸಿಸಿಐಗೆ ಕೌಂಟರ್ ಕೊಡಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾರತ ತಂಡದ ನಾಯಕ ಸೂರ್ಯಕುಮಾರ್ ಯಾದವ್ ವಿರುದ್ಧ ಪ್ರತಿದೂರು ನೀಡಿದೆ. ಸೆಪ್ಟೆಂಬರ್ 14 ರಂದು ಭಾರತ ಮತ್ತು ಪಾಕಿಸ್ತಾನ ಗ್ರೂಪ್ ಸ್ಟೇಜ್ ಪಂದ್ಯಗಳಲ್ಲಿ ಮುಖಾಮುಖಿ ಆಗಿದ್ದವು. ಈ ಪಂದ್ಯದ ಬಳಿಕ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಈ ಪಂದ್ಯ ಪಹಲ್ಗಾಮ್ ಸಂತ್ರಸ್ತರು ಮತ್ತು ಆಪರೇಷನ್ ಸಿಂಧೂರ್ ಸೈನಿಕರಿಗೆ ಅರ್ಪಿಸಿದ್ರು. ಈ ಕುರಿತು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಸೂರ್ಯ ವಿರುದ್ಧ ಪ್ರತಿದೂರು ದಾಖಲಿಸಿದೆ. ಸೂರ್ಯ ಅವರ ಹೇಳಿಕೆ ರಾಜಕೀಯ ಸ್ವರೂಪದ್ದಾಗಿವೆ ಎಂದು ಪಿಸಿಬಿ ದೂರಿನಲ್ಲಿ ಆರೋಪಿಸಿದೆ. ಹೀಗೆ ದೂರು ಪ್ರತಿದೂರಿನ ನಡುವೆ ಪಿಸಿಬಿ ಅಧ್ಯಕ್ಷ ಕೂಡ ಚೀಪ್ ಗಿಮಿಕ್ ಮಾಡಿದ್ದಾರೆ.
ಪಿಸಿಬಿ ಅಧ್ಯಕ್ಷ ನಖ್ವಿಯಿಂದಲೂ ಅಧಿಕ ಪ್ರಸಂಗ!
ಪ್ಲೇಯರ್ಗಳೇನೋ ಅಧಿಕ ಪ್ರಸಂಗಿಗಳ ಥರ ಆನ್ ಫೀಲ್ಡ್ನಲ್ಲಿ ಹಿಂಗೆ ಗಾಂಚಾಲಿ ತೋರ್ಸಿದ್ರು. ಹೋಗ್ಲಿ ಪಿಸಿಬಿ ಅಧ್ಯಕ್ಷನಾದ್ರೂ ನೆಟ್ಟಗಿದ್ದಾನಾ ಅಂದ್ರೆ ನೋ ವೇ ಚಾನ್ಸೇ ಇಲ್ಲ. ಆತನೇ ಚೈಲ್ಡಿಶ್ ಥರ ಬಿಹೇವ್ ಮಾಡಿದ್ದಾನೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿರುವ ಮೊಹ್ಸಿನ್ ನಖ್ವಿ ಕೂಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಫುಟ್‌ಬಾಲ್ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ ಪ್ಲೇನ್ ಸೆಲೆಬ್ರೇಷನ್ ಸನ್ನೆಯ ಫೋಟೋವನ್ನು ಪೋಸ್ಟ್ ಮಾಡಿದ್ದಾನೆ. ಅಂದ್ರೆ ಹ್ಯಾರಿಸ್ ರೌಫ್ ಸಹ್ನೆಯಲ್ಲಿ ರೊನಾಲ್ಡೋ ಫೋಟೋ ಹಾಕೋ ಮೂಲಕ ಭಾರತಕ್ಕೆ ಟಾಂಟ್ ಕೊಡೋಕೆ ನೋಡಿದ್ದಾನೆ.
ಭಾರತ ಮತ್ತು ಪಾಕಿಸ್ತಾನ ಮ್ಯಾಚ್ ಅಂದ್ರೆ ಅದೊಂದು ಕ್ರೀಡೆ ಅನ್ನೋದಕ್ಕಿಂತ ಇದು ಎರಡು ದೇಶಗಳ ನಡುವಿನ ಯುದ್ಧ ಎನ್ನುವಂತೆಯೇ ಆಗಿದೆ. ಪ್ಲೇಯರ್ಸ್, ಸ್ಟಾಫ್ಟ್, ಫ್ಯಾನ್ಸ್ ಹೀಗೆ ಎಲ್ರೂ ಕೂಡ ಅದೇ ಮೈಂಡ್ಸೆಟ್ನಲ್ಲೇ ಇರ್ತಾರೆ. ಆದ್ರೆ ಭಾರತೀಯರು ಮಾತ್ರ ಯಾವತ್ತೂ ತಮ್ಮ ಲಿಮಿಟ್ ಕ್ರಾಸ್ ಮಾಡಿ ವರ್ತಿಸಿಲ್ಲ. ಬಟ್ ಪಾಕಿಸ್ತಾನಿಯರು ಮಾತ್ರ ಆಟ ಆಡೋದನ್ನೇ ಮರೆತು ಮಿಕ್ಕಿದ್ದನ್ನೆಲ್ಲಾ ಮಾಡ್ತಿದ್ದಾರೆ. ಸೋ ಇಂಥವ್ರಿಗೆ ಬುದ್ಧಿ ಕಲಿಸ್ಬೇಕು ಅಂದ್ರೆ ಒಂದಿಬ್ರು ಬ್ಯಾನ್ ಆಗ್ಬೇಕು.

ನೋಡಿರಿ

