ಇಡೀ ದಿನ ಖುಷಿಯಾಗಿರಬೇಕಾ? – ಬೆಳಗ್ಗೆ ಎದ್ದ ತಕ್ಷಣ ಈ ಟಿಪ್ಸ್ ಫಾಲೋ ಮಾಡಿ

ಇಡೀ ದಿನ ಖುಷಿಯಾಗಿರಬೇಕಾ? – ಬೆಳಗ್ಗೆ ಎದ್ದ ತಕ್ಷಣ ಈ ಟಿಪ್ಸ್ ಫಾಲೋ ಮಾಡಿ

ನಾವು ಇಡೀ ಖುಷಿಯಾಗಿರಬೇಕು, ಯಾವಾಗಲೂ ಮನಸ್ಸು ನೆಮ್ಮದಿ ಯಿಂದ ಇರಬೇಕು ಎಂದರೆ ಸಣ್ಣ-ಸಣ್ಣ ವಿಚಾರದಲ್ಲೂ ಕೂಡ ಖುಷಿ ಹುಡುಕಬೇಕು. ಅದ್ದಕ್ಕಾಗಿ ಬೆಳಗ್ಗೆ ಎದ್ದ ಕೂಡಲೇ ಈ ಕೆಲಸಗಳನ್ನ ಮಾಡಬೇಕು.  ನೀವು ಬೆಳಗ್ಗೆ ಹೇಗ್ ಜೀವನ ಶುರು ಮಾಡ್ತಿರೋ ಹಾಗ್ ನಿಮ್ಮ ಜೀವನ ಇರುತ್ತೆ. ಇಡೀ ದಿನ ಖುಷಿಯಾಗಿರಬೇಕು ಎಂದರೆ ಬೆಳಗ್ಗೆ ಎದ್ದ ತಕ್ಷಣ ಏನು ಮಾಡಬೇಕು ಎನ್ನುವುದರ ಬಗ್ಗೆ  ಇಲ್ಲಿದೆ ನೋಡಿ.

ಖಾಲಿಹೊಟ್ಟೆಯಲ್ಲಿ ನೀರು ಕುಡಿಯಿರಿ

ಮೊದಲಿಗೆ ಬೆಳಗ್ಗೆ ಎದ್ದ ಕೂಡಲೇ ಖಾಲಿಹೊಟ್ಟೆಯಲ್ಲಿ ಒಂದೆರಡು ಲೋಟ, ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ. ಇದರಿಂದ ದೇಹ ದಲ್ಲಿರುವ ವಿಷಕಾರಿ ಅಂಶಗಳು, ಮೂತ್ರದ ಮೂಲಕ ಹೊರ ಹೋಗು ತ್ತವೆ, ಜೊತೆಗೆ ಆರೋಗ್ಯ ಕೂಡ ಚೆನ್ನಾಗಿ ಇರುತ್ತದೆ.

ಒಳ್ಳೆಯ ಹಾಡು ಕೇಳಿ

ಬೆಳಗಿನ ಸಮಯದಲ್ಲಿ ಕಿವಿಗೆ ಇಂಪಾದ ಸಂಗೀತ ಕೇಳುವ ಅಭ್ಯಾಸ ಮಾಡಿಕೊಳ್ಳಿ. ಉದಾಹರಣೆಗೆ ದೇವರ ಶ್ಲೋಕ, ದೇವರ ಹಾಡುಗಳು, ಮಂತ್ರ ಪಠಣೆಗಳನ್ನು ಕೇಳಿ…ಇಲ್ಲಾಂದ್ರೆ ಹೊರಗಡೆ ವಾಕಿಂಗ್ ಹೋಗಿ, ಹಕ್ಕಿಗಳ ಚಿಲಿಪಿಲಿ ನಾದ ಆಲಿಸಿ, ಇದರಿಂದ ಮನಸ್ಸಿನಲ್ಲಿ ಸಕಾರಾತ್ಮಕ ಭಾವನೆಗಳು ಕಾಣಿಸಿಕೊಳ್ಳುತ್ತವೆ.

ಧ್ಯಾನ ಮಾಡಿ

ಧ್ಯಾನದ ಮಾನಸಿಕ ಒತ್ತಡ, ಆತಂಕ, ದುಗುಡ ಹಾಗೂ ಮನಸ್ಸಿನ ಎಲ್ಲ ಚಿಂತೆಗಳನ್ನು ದೂರ ಮಾಡುತ್ತದೆ, ಹೀಗಾಗಿ ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಹದಿನೈದು ನಿಮಿ ಷಗಳ ಕಾಲ ಧ್ಯಾನ ಮಾಡಿ.

 ವ್ಯಾಯಾಮ ಮಾಡಿ

ವ್ಯಾಯಾಮ ಮಾಡುವುದರಿಂದ, ಆರೋಗ್ಯಕ್ಕೆ ಒಳ್ಳೆಯದು ಎನ್ನುವುದು ನಮಗೆಲ್ಲಾ ಗೊತ್ತೇ ಇದೆ. ಹೀಗಾಗಿ ಪ್ರತಿದಿನ ಬೆಳಗ್ಗೆ ವ್ಯಾಯಾಮ ಮಾಡು ವುದರಿಂದ, ದೇಹದಲ್ಲಿ ಎಂಡಾರ್ಫಿನ್ ಎಂದು ಕರೆಸಿಕೊಳ್ಳುವ ಹಾರ್ಮೋನ್ ಉತ್ಪತ್ತಿಯಾಗಿ, ನಮ್ಮ ಮಾನಸಿಕ ಖಿನ್ನತೆಯನ್ನು ದೂರ ಮಾಡುತ್ತದೆ.

ಬೆಳಗ್ಗಿನ ಬ್ರೇಕ್‍ಫಾಸ್ಟ್ ಹೀಗಿರಲಿ

ಬೆಳಗ್ಗೆ ಬ್ರೇಕ್‍ಫಾಸ್ಟ್ ಗೆ ಎಣ್ಣೆ ಹಾಗೂ ಕ್ಯಾಲೋರಿ ಅಂಶ ಹೆಚ್ಚಿರುವ ಆಹಾ ರಗಳನ್ನು ಬಿಟ್ಟು, ಪ್ರೋಟೀನ್ ಹಾಗೂ ನಾರಿನಾಂಶ ಹೆಚ್ಚಿರುವ ಆಹಾರ ಗಳನ್ನು ಸೇವನೆ ಮಾಡುವ ಅಭ್ಯಾಸ ಮಾಡಿಕೊಳ್ಳಿ.

Kishor KV