ಮ್ಯಾಕ್ಸ್ ನಿರ್ದೇಶಕರಿಗೆ ಕಿಚ್ಚನ ಗಿಫ್ಟ್! – ದುಬಾರಿ ಉಡುಗೊರೆ ಕೊಟ್ಟ ಸುದೀಪ್!

ಕಿಚ್ಚ ಸುದೀಪ್ ಅವರ ಮುಂಬರುವ ಚಿತ್ರ ಮಾರ್ಕ್ ಸಿನಿಪ್ರಿಯರಲ್ಲಿ ಸಾಕಷ್ಟು ಕತೂಹಲ ಮೂಡಿಸಿದೆ. ಮಾರ್ಕ್ ಒಂದು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡ್ತಿದ್ದಾರೆ. ಡಿಸೆಂಬರ್ 25 ರಂದು ಈ ಸಿನಿಮಾ ಬಿಡುಗಡೆ ಆಗಲಿದೆ. ಇದೀಗ ಕಿಚ್ಚ ಸುದೀಪ್ ನಿರ್ದೇಶಕ ವಿಜಯ್ ಕಾರ್ತಿಕೇಯ ಅವರಿಗೆ ಬಿಗ್ ಸರ್‌ಪ್ರೈಸ್ ನೀಡಿದ್ದಾರೆ. ಸುದೀಪ್ ನಿರ್ದೇಶಕರಿಗೆ ದುಬಾರಿ ಗಿಫ್ಟ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಎಚ್ಚರ.. ದೇಶದಾದ್ಯಂತ ವೇಗವಾಗಿ ಹರಡ್ತಿದೆ H3N2 ಫ್ಲೂ – ಕರ್ನಾಟಕದಲ್ಲೂ ವೈರಸ್ ಹಾವಳಿ
ಮ್ಯಾಕ್ಸ್ ಸಿನಿಮಾ ಕಿಚ್ಚ ಸುದೀಪ್ಗೆ ದೊಡ್ಡ ಗೆಲುವು ತಂದು ಕೊಟ್ಟ ಸಿನಿಮಾವಾಗಿದೆ. ನಿರ್ದೇಶಕ ವಿಜಯ್ ಕಾರ್ತಿಕೇಯಗೆ ಚೊಚ್ಚಲ ಸಿನಿಮಾವಾದ್ರೂ ಅಚ್ಚುಕಟ್ಟಾಗಿ ಸಿನಿಮಾ ಮಾಡಿಕೊಟ್ಟಿದ್ರು. ಇದೀಗ ಮಾರ್ಕ್ ಅನ್ನೋ ಮತ್ತೊಂದು ಸಿನಿಮಾ ನಿರ್ಮಾಣ ಆಗ್ತಿದೆ. ಕಿಚ್ಚ ಸುದೀಪ್ ಸದ್ಯ ಇದೇ ಸಿನಿಮಾದ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದಾರೆ. ಇದ್ರ ಮಧ್ಯೆ ಸಿನಿಮಾ ನಿರ್ದೇಶಕ ವಿಜಯ್ ಕಾರ್ತಿಕೇಯರನ್ನ ಮನೆಗೆ ಕರೆದು ಸರ್ಪ್ರೈಸ್ ಕೊಟ್ಟಿದ್ದಾರೆ, ಐಷಾರಾಮಿ ಸ್ಕೋಡಾ ಕಾರು ಗಿಫ್ಟ್ ಆಗಿ ಕೊಟ್ಟಿದ್ದಾರೆ.
ಸ್ಕೋಡಾ ಕಂಪನಿಯ Kylaqನ ‘ಕಾರ್ಬನ್ ಸ್ಟೀಲ್’ ಕಪ್ಪು ಬಣ್ಣದ ಕಾರೊಂದನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ. ಬೆಂಗಳೂರಿನಲ್ಲಿ ಬೆಸಿಕ್ ವರ್ಷನ್ಗೆ 9.10 ಲಕ್ಷ ಇದೆ ಎನ್ನಲಾಗ್ತಿದೆ. ಅಭಿಮಾನಿಗಳು ಕಿಚ್ಚನ ಪ್ರೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕಿಚ್ಚ ಸುದೀಪ್ಗೆ ಯಾರಾದರೂ ಇಷ್ಟ ಆದರೆ ಅವರನ್ನು ಆತ್ಮೀಯವಾಗಿ ನಡೆಸಿಕೊಳ್ಳುತ್ತಾರೆ. ಸುದೀಪ್ ಬಿಗ್ ಬಾಸ್ ನಡೆಸಿಕೊಡುವಾಗ ಸ್ಪರ್ಧಿಗಳಿಗೆ ಗಿಫ್ಟ್ ಆಗಿ ಕೊಟ್ಟ ಸಾಕಷ್ಟು ಉದಾಹರಣೆಗಳಿವೆ. ಈಗ ಅದರಂತೆ ಮ್ಯಾಕ್ಸ್ ನಿರ್ದೇಶಕನಿಗೆ ಬೆಲೆ ಬಾಳುವ ಕಾರನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.

ನೋಡಿರಿ

