ಏಷ್ಯಾಕಪ್ ಫೈನಲ್ ಪ್ರವೇಶಿಸಿದ ಭಾರತ – ಬಾಂಗ್ಲಾ ಬೌಲರ್‌ಗಳ ಬೆವರಿಳಿಸಿದ ಅಭಿಷೇಕ್ ಶರ್ಮಾ
ಬಾಂಗ್ಲಾ ಬ್ಯಾಟಿಂಗ್ ಬೆನ್ನೆಲೆಬು ಮುರಿದ ಕುಲ್ದೀಪ್ ಯಾದವ್

ಏಷ್ಯಾಕಪ್ ಫೈನಲ್ ಪ್ರವೇಶಿಸಿದ ಭಾರತ – ಬಾಂಗ್ಲಾ ಬೌಲರ್‌ಗಳ ಬೆವರಿಳಿಸಿದ ಅಭಿಷೇಕ್ ಶರ್ಮಾಬಾಂಗ್ಲಾ ಬ್ಯಾಟಿಂಗ್ ಬೆನ್ನೆಲೆಬು ಮುರಿದ ಕುಲ್ದೀಪ್ ಯಾದವ್

ಟೀಮ್ ಇಂಡಿಯಾ ಏಷ್ಯಾಕಪ್​ನಲ್ಲಿ ಫೈನಲ್‌ಗೆ ಎಂಟ್ರಿ ಕೊಟ್ಟಿದೆ. ಬುಧವಾರ ನಡೆದ ತನ್ನ 2ನೇ ಸೂಪರ್ 4 ಪಂದ್ಯದಲ್ಲಿ ಭರ್ಜರಿ ಆಲ್​ರೌಂಡರ್ ಪ್ರದರ್ಶನ ತೋರಿದ ಟೀಮ್ ಇಂಡಿಯಾ, ಬಾಂಗ್ಲಾದೇಶದ ವಿರುದ್ಧ 41 ರನ್​ಗಳ ಗೆಲುವು ಸಾಧಿಸಿದೆ.

ಇದನ್ನೂ ಓದಿ:ಇಂಡೋ-ಪಾಕ್ ಫೈನಲ್ FIX – ಹಸರಂಗ ಕೆಣಕಿ ಅಬ್ರಾರ್ ಅತಿರೇಕ

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ತಂಡ ಅಭಿಷೇಕ್ ಶರ್ಮಾರ 75 ರನ್​ಗಳ ನೆರವಿನಿಂದ 168 ರನ್​ಗಳಿಸಿತ್ತು., 10 ಓವರ್‌ ಗಳಲ್ಲಿ 98 ರನ್​ಗಳಿಸಿದ್ದ ಟೀಮ್  ಇಂಡಿಯಾ,  ಅಭಿಷೇಕ್ ಶರ್ಮಾ ವಿಕೆಟ್ ಕಳೆದುಕೊಂಡ ಬಳಿಕ ದಿಢೀರ್ ಕುಸಿತಕಂಡಿತು. ಇದರಿಂದಾಗಿಯೇ 200 ರನ್​ಗಳಿಸುವ ಅವಕಾಶ ಕೈ ತಪ್ಪಿತು. ಅಭಿಷೇಕ್ ಶರ್ಮಾ 37 ಎಸೆತಗಳಲ್ಲಿ 6 ಬೌಂಡರಿ 5 ಸಿಕ್ಸರ್​ಗಳ ನೆರವಿನಿಂದ 75 ರನ್​ಗಳಿಸಿದರು. ಹಾರ್ದಿಕ್ ಪಾಂಡ್ಯ 29 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್​ ಸಹಿತ 38 ರನ್ ಗಳಿಸಿದರು. ಶುಭ್​ಮನ್ ಗಿಲ್ 19 ಎಸೆತಗಳಲ್ಲಿ 29 ರನ್​ಗಳಿಸಿದರು. ಅಕ್ಷರ್ ಪಟೇಲ್ 15 ಎಸೆತಗಳಲ್ಲಿ 10 ರನ್​ಗಳಿಸಿ ನಿರಾಶೆ ಮೂಡಿಸಿದರೆ, ದುಬೆ (2), ಸೂರ್ಯಕುಮಾರ್ ಯಾದವ್ (5) ಹಾಗೂ ತಿಲಕ್ ವರ್ಮಾ (5) ಒಂದಂಕಿ ಮೊತ್ತಕ್ಕೆ ಸೀಮಿತವಾಗಿ ಬೇಸರ ಮೂಡಿಸಿದರು

169 ರನ್​ಗಳ ಸವಾಲಿನ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ ಸೈಫ್​ ಹಸನ್​ (69) ಅರ್ಧಶತಕದ ಹೊರತಾಗಿಯೂ 19.3 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 127ಕ್ಕೆ ಸೀಮಿತವಾಯಿತು. 169 ರನ್​ಗಳ ಗುರಿಯನ್ನ ಬೆನ್ನಟ್ಟಿ ಬಾಂಗ್ಲಾದೇಶ 2ನೇ ಓವರ್​ನಲ್ಲೇ ಆರಂಭಿಕ ಬ್ಯಾಟರ್ ತಾಂಜಿದ್ ಹಸನ್ (1) ವಿಕೆಟ್ ಕಳೆದುಕೊಂಡಿತು. ಬುಮ್ರಾ ಬೌಲಿಂಗ್​ನಲ್ಲಿ ಹಸನ್ ದುಬೆ ಕ್ಯಾಚ್ ನೀಡಿ ನಿರ್ಗಮಿಸಿದರು. ಆದರೆ 2ನೇ ವಿಕೆಟ್​ಗೆ ಪರ್ವೇಜ್ ಹೊಸೈನ್ ಹಾಗೂ ಸೈಫ್ ಹಸನ್ 45 ರನ್​ಗಳಿಸಿ ಚೇತರಿಕೆ ನೀಡಿದರು. 19 ಎಸೆತಗಲ್ಲಿ 21 ರನ್​ಗಳಿಸಿ ಪರ್ವೇಜ್ ಕುಲ್ದೀಪ್ ಯಾದವ್ ಬೌಲಿಂಗ್​​ನಲ್ಲಿ ಅಭಿಷೇಕ್ ಶರ್ಮಾಗೆ ಕ್ಯಾಚ್ ನೀಡಿ ಔಟ್ ಆದರು. ಕಳೆದ ಪಂದ್ಯದ ಹೀರೋ ತೌಹಿದ್ ಹೃದೋಯ್ ಕೇವಲ 6 ರನ್​ಗಳಿಸಿ ಅಕ್ಷರ್ ಪಟೇಲ್ ಬೌಲಿಂಗ್​ನಲ್ಲಿ ಅಭಿಷೇಕ್ ಶರ್ಮಾಗೆ ಕ್ಯಾಚ್ ನೀಡಿ ಪೆವೆಲಿಯನ್ ಸೇರಿಕೊಂಡರು 5ನೇ ಕ್ರಮಾಂಕದಲ್ಲು ಬಂದ ಶಮೀಮ್ ಹೊಸೈನ್ ಶೂನ್ಯಕ್ಕೆ ವರುಣ್ ಚಕ್ರವರ್ತಿ ಬೌಲಿಂಗ್​​ನಲ್ಲಿ ಡಕ್ ಔಟ್ ಆದರೆ, ನಾಯಕ ಜಾಕರ್ ಅಲಿ 4 ರನ್​ಗಳಿಸಿ ರನ್​ ಔಟ್ ಆದರು. ಮೊಹಮ್ಮದ್ ಸೈಫುದ್ದೀನ್ 4,  ರಶೀದ್ ಹೊಸೈನ್ 2, ತಾಂಜಿದ್ ಹಸನ್ ಸಕಿಬ್ 0, ಮುಸ್ತಫಿಜುರ್ 6 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ಆರಂಭಿಕರಾಗಿ ಕಣಕ್ಕಿಳಿದಿದ್ದ ಸೈಫ್ ಹಸನ್ 51 ಎಸೆತಗಳಲ್ಲಿ 3 ಬೌಂಡರಿ, 5 ಸಿಕ್ಸರ್​ಗಳ ಸಹಿತ 69 ರನ್​ಗಳಿಸಿ 9ನೇ ಆಟಗಾರನಾಗಿ ವಿಕೆಟ್ ಒಪ್ಪಿಸಿದರು. ಹಸನ್​ಗೆ ಭಾರತ ನೀಡಿದ 4 ಕ್ಯಾಚ್ ಡ್ರಾಫ್ ಅವಕಾಶ ಕೇವಲ ಅರ್ಧಶತಕ ಪೂರ್ಣಗೊಳಿಸಲು ಮಾತ್ರ ಸಾಧ್ಯವಾಯಿತು. ಭಾರತದ ಪರ ಮಿಂಚಿದ ಕುಲ್ದೀಪ್ ಯಾದವ್ 4 ಓವರ್​ಗಳಲ್ಲಿ 18 ರನ್ ನೀಡಿ 3 ವಿಕೆಟ್ ಪಡೆದು ಗೆಲುವಿನ ರೂವಾರಿಯಾದರು. ಗುರುವಾರ ನಡೆಯುವ ಬಾಂಗ್ಲಾದೇಶ-ಪಾಕಿಸ್ತಾನ ನಡುವಿನ ಪಂದ್ಯ ನಾಕೌಟ್ ಪಂದ್ಯವಾಗಲಿದೆ. ಆದರೆ ಭಾರತ-ಶ್ರೀಲಂಕಾ ನಡುವಿನ ಪಂದ್ಯ ಕೇವಲ ಔಪಚಾರಿಕ ಪಂದ್ಯವಾಗಲಿದೆ. ಆ ಪಂದ್ಯದಲ್ಲಿ ಭಾರತ ಗೆದ್ದರೂ, ಸೋತರೂ ತನ್ನ ಫೈನಲ್ ಸ್ಥಾನಕ್ಕೆ ಯಾವುದೇ ಸಮಸ್ಯೆ ಇಲ್ಲ.

Sulekha