ಇಂಡೋ-ಪಾಕ್ ಫೈನಲ್ FIX – ಹಸರಂಗ ಕೆಣಕಿ ಅಬ್ರಾರ್ ಅತಿರೇಕ

ಪಾಕಿಸ್ತಾನಿ ಪ್ಲೇಯರ್ಗಳಿಗೆ ಆಟಕ್ಕಿಂತ ಹುಚ್ಚಾಟವೇ ಜಾಸ್ತಿ ಆಗ್ತಿದೆ. ಯಾವ್ ಮ್ಯಾಚ್ ಇದ್ರೂ ಎದುರಾಳಿ ಯಾರೇ ಆದ್ರೂ ತಮ್ಮ ಚಾಳಿ ಮಾತ್ರ ಬಿಡೋದಿಲ್ಲ. ನಿನ್ನೆ ಲಂಕಾ ವಿರುದ್ಧದ ಪಂದ್ಯದಲ್ಲೂ ಕೂಡ ಪಾಕ್ ಬೌಲರ್ ಅಬ್ರಾರ್ ಅಹ್ಮದ್ ಲಂಕಾ ಆಟಗಾರ ವನಿಂದು ಹಸರಂಗ ಸ್ಟೈಲ್ ಇಮಿಟೇಟ್ ಮಾಡಿ ಬಿಲ್ಡಪ್ ಕೊಟ್ಟಿದ್ದ. ಆದ್ರೆ ಬೌಲಿಂಗ್ ಟೈಮಲ್ಲಿ ಹೀರೋ ಪೋಸ್ ಕೊಟ್ಟವ್ನು ತಮ್ಮ ತಂಡದ ಬ್ಯಾಟಿಂಗ್ ವೇಳೆಗೆ ಬಿಗ್ ಝೀರೋ ಆಗಿದ್ದ. ಮತ್ತೊಂದೆಡೆ ಲಂಕಾ ವಿರುದ್ಧ ಗೆಲ್ಲೋ ಮೂಲಕ ಫೈನಲ್ ರೇಸ್ನಲ್ಲಿ ಉಳ್ಕೊಂಡಿದ್ದಾರೆ.
ಇದನ್ನೂ ಓದಿ : S. L ಭೈರಪ್ಪ ಬದುಕಿನ ಪರ್ವ ಅಂತ್ಯ – ಬದುಕಿನ ಪುಟದಲ್ಲಿ ನೋವಿದ್ದರೂ ಸಾಹಿತ್ಯ ಪ್ರಿಯರಿಗೆ ಇಷ್ಟವಾದ ಅಕ್ಷರ ಮಾಂತ್ರಿಕ
ಏಷ್ಯಾಕಪ್ ಟೂರ್ನಿಯಲ್ಲಿ ಸದ್ಯ ಸೂಪರ್ 4 ಹಂತದ ಪಂದ್ಯಗಳ ಕಾವು ಜೋರಾಗಿದೆ. ಮಂಗಳವಾರದ ಮ್ಯಾಚಲ್ಲಿ ಲಂಕಾ ತಂಡವನ್ನ ಸೋಲಿಸಿ ಪಾಕಿಸ್ತಾನ ಫೈನರ್ ರೇಸ್ನಲ್ಲಿ ಉಳಿದಿದೆ. ಪಾಕಿಸ್ತಾನ ತಂಡ ಸೆಪ್ಟೆಂಬರ್ 25 ರಂದು ಬಾಂಗ್ಲಾದೇಶದ ವಿರುದ್ಧ ಫೈಟ್ ನಡೆಸಲಿದ್ದು ಈ ಮ್ಯಾಚ್ ನಲ್ಲಿ ಗೆದ್ದವ್ರು ಫೈನಲ್ ತಲುಪ್ತಾರೆ. ಭಾರತ ಆಲ್ರೆಡಿ ಒಂದು ಮ್ಯಾಚ್ ಗೆದ್ದಿದ್ದು ಇನ್ನೆರಡಲ್ಲೂ ಗೆಲ್ಲೋ ಮೂಲಕ ಫೈನಲ್ಗೆ ಅಜೇಯವಾಗಿ ಲಗ್ಗೆ ಇಡೋ ಟಾರ್ಗೆಟ್ನಲ್ಲಿದೆ. ಇನ್ನು ಸೂಪರ್ 4 ಹಂತದಲ್ಲಿ ಆಡಿರುವ 2 ಪಂದ್ಯದಲ್ಲಿ 2ನ್ನೂ ಸೋತಿರೋ ಶ್ರೀಲಂಕಾ ತಂಡ ಟೂರ್ನಿಯಿಂದ ಹೊರ ಬೀಳೋದು ಪಕ್ಕಾ ಆಗಿದೆ.
ಲಂಕಾ ವಿರುದ್ಧ 5 ವಿಕೆಟ್ ಗಳಿಂದ ಪಂದ್ಯ ಗೆದ್ದ ಪಾಕಿಸ್ತಾನ!
ಅಬುಧಾಬಿಯಲ್ಲಿ ನಡೆದ 3ನೇ ಸೂಪರ್ 4 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಪಾಕಿಸ್ತಾನ 5 ವಿಕೆಟ್ಗಳಿಂದ ಗೆದ್ದು ಫೈನಲ್ ಆಸೆಯನ್ನ ಜೀವಂತವಾಗಿರಿಸಿಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ ತಂಡ 134 ರನ್ಗಳ ಟಾರ್ಗೆಟ್ ನೀಡಿತ್ತು. ಈ ಗುರಿಯನ್ನ ಬೆನ್ನಟ್ಟಿದ ಪಾಕಿಸ್ತಾನ ತಂಡ 18 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಹುಸೇನ್ ತಲಾತ್ ಅಜೇಯ 32 ರನ್ ಹಾಗೂ ಮೊಹಮ್ಮದ್ ನವಾಸ್ ಅಜೇಯ 38 ರನ್ಗಳಿಸಿ ಗೆಲುವಿನ ರೂವಾರಿಯಾದರು. ಌಕ್ಚುಲಿ ಈ ಮ್ಯಾಚಲ್ಲಿ ಪಂದ್ಯದ ಗೆಲುವು ಸೋಲಿಗಿಂತ ಮೇನ್ ಹೈಲೆಟ್ ಆಗಿದ್ದೇ ಅಬ್ರಾರ್ ಅಹ್ಮದ್ ಮತ್ತು ವನಿಂದು ಹಸರಂಗ ಅಟ್ಯಾಕ್ ಌಂಡ್ ಕೌಂಟರ್ ಅಟ್ಯಾಕ್.
ಹಸರಂಗ ಸೆಲೆಬ್ರೇಷನ್ ಮಿಮಿಕ್ ಮಾಡಿದ ಅಬ್ರಾರ್!
ಶ್ರೀಲಂಕಾದ ಬ್ಯಾಟಿಂಗ್ ವೇಳೆ 13ನೇ ಓವರ್ ನ ಮೊದಲ ಎಸೆತದಲ್ಲಿ ಪಾಕ್ ಬೌಲರ್ ಅಬ್ರಾರ್ ಅಹ್ಮದ್ ವನಿಂದು ಹಸರಂಗಾರನ್ನು ಕ್ಲೀನ್ ಬೌಲ್ಡ್ ಮಾಡಿದರು. ಈ ವೇಳೆ ಹಸರಂಗ ಮಾದರಿಯಲ್ಲಿ ಅಬ್ರಾರ್ ಸೆಲೆಬ್ರೇಷನ್ ಮಾಡಿದ್ರು. ಎರಡು ಕೈಗಳನ್ನ ಮೇಲೆತ್ತಿ ಬೆರಳುಗಳನ್ನ ಶೇಕ್ ಮಾಡುತ್ತಾ ಸ್ಮೈಲಿಂಗ್ ಫೇಸ್ನಲ್ಲಿ ಕಿಚಾಯಿಸಿದ್ರು. ಅಂದ್ರೆ ಹಸರಂಗ ಅವ್ರ ಸ್ಟೈಲನ್ನೇ ಕಾಪಿ ಮಾಡಿ ಟಾಂಟ್ ಕೊಟ್ರು. ಬಟ್ ಈ ಟೈಮಲ್ಲಿ ಹಸರಂಗಾ ಯಾವ ರಿಯಾಕ್ಷನ್ನೂ ಕೊಡ್ಲಿಲ್ಲ. 15 ರನ್ ಗಳಿಸಿದ್ದ ಹಸರಂಗಾ ಸೈಲೆಂಟ್ ಆಗಿ ಪೆವಿಲಿಯರ್ ಸೇರಿದ್ರು.
ಬಟ್ ಎವರಿ ಆಕ್ಷನ್ ಹ್ಯಾಸ್ ಎ ರಿಯಾಕ್ಷನ್ ಅನ್ನೋ ಹಾಗೇ ವನಿಂದು ಹಸರಂಗಾ ಬ್ಯಾಟಿಂಗ್ ಟೈಮಲ್ಲಿ ಸುಮ್ಮನಿದ್ರೂ ಕೂಡ ಬೌಲಿಂಗ್ನಲ್ಲಿ ತಮ್ಮ ರಿವೇಂಜ್ ತೀರಿಸಿಕೊಂಡ್ರು. ಪಾಕಿಸ್ತಾನಿ ಆಟಗಾರನ ಅಹಂಕಾರಕ್ಕೆ ಹಸರಂಗ ಅವರ ಭಾಷೆಯಲ್ಲೇ ಉತ್ತರ ಕೊಟ್ರು. ಫಖರ್ ಜಮಾನ್ ಅವರ ಅದ್ಭುತ ಕ್ಯಾಚ್ ಹಿಡಿದು ಪೆವಿಲಿಯನ್ಗೆ ಕಳುಹಿಸಿದರು. ಜೊತೆಗೆ ಸೈಮ್ ಅಯೂಬ್ ಮತ್ತು ಸಲ್ಮಾನ್ ಅಲಿ ಅಘಾ ವಿಕೆಟ್ ಪಡೆದರು. ಈ ಮೂರು ಬಾರಿಯೂ ಅಬ್ರಾರ್ ಅಹ್ಮದ್ ವಿಕೆಟ್ ತೆಗೆದು ಸಂಭ್ರಮಿಸೋ ರೀತಿಯಲ್ಲೇ ಇಮಿಟೇಟ್ ಮಾಡಿ ತಿರುಗೇಟು ಕೊಟ್ರು. ಫಸ್ಟ್ ಗಾಂಚಾಲಿ ತೋರಿಸಿದ್ದೇ ಪಾಕ್ ಬೌಲರ್ ಅಬ್ರಾರ್ ಅಹ್ಮದ್. ತಾನು ವಿಕೆಟ್ ತೆಗ್ದಾಗ ಅಣಕಿಸೋ ರೀತಿಯಲ್ಲಿ ಅದನ್ನ ಅನುಕರಣೆ ಮಾಡಿದ್ದ. ಆದ್ರೆ ತಮ್ಮ ಟರ್ಮ್ ಬಂದಾಗ ವನಿಂದು ಹಸರಂಗ ಅದನ್ನ ರಿವೇಂಜ್ ತಗೊಂಡ್ರು ಅಷ್ಟೇ. ಸೋ ಇದೇ ಌಕ್ಷನ್ ಌಂಡ್ ರಿಯಾಕ್ಷನ್ ವಿಡಿಯೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿವೆ. ಫುಲ್ ಟ್ರೆಂಡಿಂಗ್ ನಲ್ಲಿವೆ.
ಗಿಲ್ ಔಟ್ ಮಾಡಿ ಗಾಂಚಾಲಿ ತೋರಿಸಿದ್ದ ಅಬ್ರಾರ್!
ನಿಜ ಹೇಳ್ಬೇಕಂದ್ರೆ ಅಬ್ರಾರ್ ಸ್ಟೈಲ್ ಈ ಮಟ್ಟಿಗೆ ವೈರಲ್ ಆಗೋಕೆ ಕಾರಣನೇ ಭಾರತ ವಿರುದ್ಧದ ಪಂದ್ಯ. ಲಂಕಾ ವಿರುದ್ಧದ ಪಂದ್ಯದಲ್ಲಿ ಹಸರಂಗರನ್ನ ಕೆಣಕಿರೋ ಇದೇ ಅಬ್ರಾರ್ ಅಹ್ಮದ್ ಆವತ್ತು ಶುಭ್ಮನ್ ಗಿಲ್ ರನ್ನೂ ಕೆಣಕಿದ್ದ. ಕಳೆದ ಫೆಬ್ರವರಿಯಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ವರ್ಸಸ್ ಪಾಕಿಸ್ತಾನ ಪಂದ್ಯದಲ್ಲೇ ಇಂತದ್ದೇ ದೌಲತ್ತು ತೋರಿಸಿದ್ದ. ಆವತ್ತಿನ ಪಂದ್ಯದಲ್ಲಿ ಶುಭ್ಮನ್ ಗಿಲ್ ರನ್ನು ಕ್ಲೀನ್ ಬೌಲ್ಡ್ ಮಾಡಿದ್ದ ಅಬ್ರಾರ್ ಕುತ್ತಿಗೆ ಮತ್ತು ಕಣ್ಸನ್ನೆಲ್ಲೇ ಪೆವಿಲಿಯನ್ಗೆ ನಡಿ ನಡಿ ಎನ್ನುವಂತೆ ಅಣಕಿಸಿದ್ದ. ಅಬ್ರಾರ್ ಅಹಂಕಾರಕ್ಕೆ ಗಿಲ್ ಕೂಡ ಗುರಾಯಿಸುತ್ತಲೇ ಹೊರ ನಡೆದಿದ್ರು. ಆ ಬಳಿಕ ಭಾರತ ಮ್ಯಾಚ್ ವಿನ್ ಆಗಿತ್ತು. ಇದಾದ ಮೇಲೆ ಅಬ್ರಾರ್ ಹುಚ್ಚಾಟಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಜೋಕರ್ ಅಂತೆಲ್ಲಾ ರೋಸ್ಟ್ ಮಾಡಲಾಗಿತ್ತು.

ನೋಡಿರಿ

