ಮಗನ ಜೊತೆ ಕಾಣಿಸಿಕೊಂಡ ವಿರುಷ್ಕಾ ಜೋಡಿ! – ಕೊಹ್ಲಿ ನಡೆಗೆ ಫ್ಯಾನ್ಸ್ ಮೆಚ್ಚುಗೆ!

ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಸದ್ಯ ಲಂಡನ್ನಲ್ಲಿದ್ದಾರೆ. ಪತ್ನಿ ಅನುಷ್ಕಾ ಶರ್ಮಾ ಹಾಗೂ ಮಕ್ಕಳ ಜೊತೆ ಸಮಯ ಕಳೆಯುತ್ತಾ ಇದ್ದಾರೆ. ಇದೀಗ ವಿರುಷ್ಕಾ ಜೋಡಿ ಅಕಾಯ್ ಜೊತೆ ಲಂಡನ್ನಲ್ಲಿ ಸುತ್ತಾಡ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗ್ತಿದೆ.
ಇದನ್ನೂ ಓದಿ: ಸಾಕಿದ ಮಾಲೀಕನ ಪ್ರಾಣಕ್ಕೆ ಕುತ್ತು ತಂದ ಹುಲಿರಾಯ! – ಯಜಮಾನನ ಕತ್ತು ಸೀಳಿತಾ ವ್ಯಾಘ್ರ
ಮಕ್ಕಳ ಭವಿಷ್ಯಕ್ಕಾಗಿ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಸದ್ಯ ಲಂಡನ್ನಲ್ಲಿ ನೆಲೆಸಿದ್ದಾರೆ. ಸದ್ಯ ವಿರುಷ್ಕಾ ಜೋಡಿ ವೆಕೇಷನ್ ಮೂಡ್ನಲ್ಲಿದ್ದು ಮಕ್ಕಳ ಜೊತೆಗೆ ಲಂಡನ್ನಲ್ಲಿ ಸುತ್ತಾಡುತ್ತಿದ್ದಾರೆ. ಮಕ್ಕಳ ಜೊತೆ ಜಾಲಿ ಟ್ರಿಪ್ ಕೈಗೊಂಡಿದ್ದಾರೆ. ಇದೀಗ ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ತಮ್ಮ ಮಗ ಅಕಾಯ್ ಜೊತೆ ಲಂಡನ್ನಲ್ಲಿ ವಾಯುವಿಹಾರ ಮಾಡುತ್ತಿರುವ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಫೋಟೋದಲ್ಲಿ ಅನುಷ್ಕಾ ರೆಡ್ ಕಲರ್ ಪ್ಯಾಂಟ್ ಹಾಗೂ ಶರ್ಟ್ ಧರಿಸಿ ಸಿಂಪಲ್ ಆಗಿ ಕಂಡಿದ್ದಾರೆ. ಇನ್ನು ವಿರಾಟ್ ಬ್ರೌನ್ ಬಣ್ಣದ ಟೀ ಶರ್ಟ್ ಮತ್ತು ಜೀನ್ಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಮಾಸ್ಕ್ ಹಾಕಿಕೊಂಡಿದ್ದು, ಮಗ ಅಕಾಯ್ನನ್ನ baby stroller ನಲ್ಲಿ ಕೂರಿಸಿ ಕರ್ಕೊಂಡು ಹೋಗಿದ್ದಾರೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಫ್ಯಾನ್ಸ್ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಇದೀಗ ವಿರುಷ್ಕಾ ಕುಟುಂಬದ ಅದ್ಭುತ ಕ್ಷಣಗಳು ಅಭಿಮಾನಿಗಳ ಹೃದಯ ಗೆದ್ದಿದ್ದು, ಅನೇಕರು ದಂಪತಿಯ ಈ ಸರಳ ಜೀವನ ಶೈಲಿಯನ್ನು ಶ್ಲಾಘಿಸಿದ್ದಾರೆ. ಕ್ರಿಕೆಟ್ ಸ್ಟಾರ್ ಆದರೂ ಸಾಮಾನ್ಯ ಜನರಂತೆ ಬದುಕುವ ಕೊಹ್ಲಿ ಅವರ ಸಿಂಪ್ಲಿಸಿಟಿ ಸೂಪರ್ ಎಂದು ಫ್ಯಾನ್ಸ್ ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇಂತಹ ಸರಳತೆಯನ್ನು ನೋಡಿದರೆ ಇವರು ವಿಶ್ವದ ಅತ್ಯಂತ ಪ್ರಸಿದ್ಧ ಕ್ರಿಕೆಟ್ ತಾರೆ ಎಂದು ಯಾರು ಹೇಳುತ್ತಾರೆ? ಎಂದು ಬರೆದುಕೊಂಡಿದ್ದಾರೆ.

ನೋಡಿರಿ

